ಪ್ರತ್ಯೇಕ ಜೀವನ ನಡೆಸುತ್ತಿರುವ ಅಥವಾ ವಿಚ್ಛೇದಿತ ಪತ್ನಿಗೆ ಕೋರ್ಟು ನಿರ್ಧರಿಸಿದಂತೆ ಪರಿಹಾರ ಧನ ಅಥವಾ ಜೀವನಾಂಶವನ್ನು ಪತಿ ಬೇಕೆಂದೇ ನೀಡದಿದ್ದರೆ ಅವನನ್ನು ಜೈಲಿಗೆ ಕಳಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ. ಒಂದು ಬಾರಿ ಜೈಲಿಗೆ ಕಳಿಸಿದ ನಂತರ ಅವನು ನೌಕರಿ ಕಳೆದುಕೊಂಡರೆ ಅಥವಾ ಅವನ ವ್ಯಾಪಾರ ನಿಂತುಹೋದರೆ ಅವನು ಜೀವನಾಂಶ ಕೊಡಲು ಸಂಪಾದಿಸಲಾಗುವುದಿಲ್ಲ. ಆದ್ದರಿಂದ ಇದೇ ಕೊನೆಯ ಉಪಾಯ ಎಂದು ಸುಪ್ರೀಂ ಕೋರ್ಟ್‌ ಭಾವಿಸಿದೆ.

ಪತಿಪತ್ನಿಯರ ವಿವಾದಗಳಲ್ಲಿ ಕೆಲವೊಮ್ಮೆ ಕೋರ್ಟ್‌ ಎಂತಹ ವ್ಯಾಖ್ಯಾನಗಳನ್ನು ನೀಡುತ್ತದೆ ಎಂದರೆ, ಪತಿ ಪತ್ನಿಯರ ಸಂಬಂಧವನ್ನು ಕಾನೂನು ಮತ್ತು ಲಾಠಿ ಅಂದರೆ ಬಲಪ್ರಯೋಗದಿಂದ ನಡೆಸಬಹುದು. ಪುರುಷ ಬಲಪ್ರಯೋಗದಿಂದ ಒಬ್ಬ ಮಹಿಳೆಯನ್ನು ಕರೆದುಕೊಂಡು ಬಂದು ಅವಳ ಇಚ್ಛೆಗೆ ವಿರುದ್ಧವಾಗಿ ಅವಳೊಂದಿಗೆ ಮದುವೆಯಾಗುತ್ತಿದ್ದ ಕಾಲ ಈಗಿಲ್ಲ. ಈಗ ಮಹಿಳೆಯರನ್ನು ಒತ್ತಾಯವಾಗಿ ನಿರ್ಬಂಧಪಡಿಸಿ ಮದುವೆಯ ಬಂಧನದಲ್ಲಿ ಸಿಲುಕಿಸಲು ಆಗುವುದಿಲ್ಲ. ಹೀಗಿರುವಾಗ ಪುರುಷರ ಮೇಲೆ ಕಾನೂನು ಈ ಒತ್ತಾಯವನ್ನೇಕೆ ಹೇರುತ್ತಿದೆ?

ಪತಿ ಪತ್ನಿಯರ ವಿವಾದಗಳಲ್ಲಿ ಮಕ್ಕಳಿರುವ ಅಥವಾ ಮಕ್ಕಳಿರದ ಮಹಿಳೆಯ ಭವಿಷ್ಯದಲ್ಲಿ ಇದ್ದಕ್ಕಿದ್ದಂತೆ ಅಂಧಕಾರ ಕವಿಯುತ್ತದೆ ಎಂಬುದು ನಿಜ. ಪುರುಷನಾದರೋ ಏಕಾಂಗಿಯಾಗಿ ಹೇಗೋ ತನ್ನ ಜೀವನ ನಡೆಸಿಕೊಂಡುಹೋಗುತ್ತಾನೆ. ಆದರೆ ಮಹಿಳೆಗೆ ಏಕಾಂಗಿಯಾಗಿ ಜೀವಿಸಲು ಸಾಧ್ಯವಿಲ್ಲ ಮತ್ತು ಯಾರ ಜೊತೆಗೂ ಇರಲು ಸಾಧ್ಯವಿಲ್ಲ. ಕೊನೆಗೆ ಅಣ್ಣ, ತಂಗಿ, ಅಕ್ಕ ಹಾಗೂ ತಾಯಿತಂದೆಯರ ಜೊತೆಗೂ ಇರಲು ಸಾಧ್ಯವಿಲ್ಲ. ಆದರೆ ವಿವಾದ ಸೃಷ್ಟಿ ಮಾಡಿದ ಪತಿಪತ್ನಿಯರು ಪರಸ್ಪರ ಬೇರೆಯಾಗುವ ದಾರಿ ಹಿಡಿಯುವುದು ಎಷ್ಟು ಸುಲಭವೇ, ಅದೇ ದಾರಿಯಲ್ಲಿ ಮುಂದೆ ಸಾಗಿ ತಮ್ಮ ಗುರಿ ಮುಟ್ಟುವುದು ಅಷ್ಟೇ ಕಠಿಣ ಎಂಬ ಕಟು ಸತ್ಯವನ್ನು ಮರೆತುಬಿಡುತ್ತಾರೆ.

ಪತಿ ಪತ್ನಿಯರ ಸಂಬಂಧ ಯಾವುದೇ ಕಾಲ್ಪನಿಕ ಭಗವಂತನ ಸೃಷ್ಟಿಯಲ್ಲದಿದ್ದರೂ ಅದನ್ನು ಮುರಿಯುವುದು ಸುಲಭ ಅಲ್ಲ, ವ್ಯಾವಹಾರಿಕ ಅಲ್ಲ ಎಂದು ಪತಿಪತ್ನಿಯರು ಮೊದಲ ದಿನವೇ ಅರ್ಥ ಮಾಡಿಕೊಳ್ಳಬೇಕು. ಇದು ಒಂದು ರೀತಿಯಲ್ಲಿ ತಾಯಿ ಹಾಗೂ ಮಗುವಿನ ಸಂಬಂಧದಂತಿದ್ದು, ಅದನ್ನು ಯಾವುದೇ ರೀತಿಯಲ್ಲಿ ಮುರಿಯಲಾಗುವುದಿಲ್ಲ. ಇಬ್ಬರಲ್ಲೂ ಎಷ್ಟೇ ಜಗಳಗಳಾದರೂ ಸಂಬಂಧಗಳನ್ನು ನಿಭಾಯಿಸಲೇಬೇಕು.

ಯಾ ಸಮಾಜಗಳಲ್ಲಿ ಬಹಳಷ್ಟು ವಿಚ್ಛೇದನಗಳು ಹಾಗೂ ಬಹಳಷ್ಟು ಪುನರ್ವಿವಾಹಗಳು ನಡೆಯುತ್ತವೋ ಅಲ್ಲಿಯೂ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ಇಬ್ಬರಿಗೂ ಬಹಳ ಒತ್ತಡ ಹಾಗೂ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಬ್ರೇಕ್‌ ಅಪ್‌ ವಿಷಯ ಸುಲಭವಾಗಿ ಹೇಳಿಬಿಡಬಹುದಾದರೂ ಅದನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ. ಇದು ದೀರ್ಘ ಸಮಯದವರೆಗೆ ನೋವು ಕೊಡುವಂತಹ ಒಂದು ಆಪರೇಶನ್‌ ಆಗಿದ್ದು ಇಡೀ ಜೀವನ ತನ್ನ ಗುರುತು ಉಳಿಸುತ್ತದೆ.

ಜಗಳವಾಡುವ ಪತಿಪತ್ನಿಯರಿಗೆ ಅವರು ಜೀವನದಲ್ಲಿ ಸುಖ ಪಡೆಯುವ ಬಯಕೆಯಲ್ಲಿ ಕೇವಲ ಕೆಸರನ್ನು ಪಡೆಯುವ ಹಾಗೆ ಮಾಡಿಕೊಳ್ಳದಿರಲಿ ಎಂದು ಸುಪ್ರೀಂ ಕೋರ್ಟ್‌ನ ತೀರ್ಮಾನ ಒಂದು ಎಚ್ಚರಿಕೆಯಾಗಿದೆ.

ಅಸಹ್ಯ ಆಟದ ಕರಾಳ ಮುಖ

ಹೆಂಡತಿಯರನ್ನು ಅದಲು ಬದಲು (ವೈಫ್‌ ಸ್ವ್ಯಾಪಿಂಗ್‌) ಮಾಡಿಕೊಳ್ಳುವ ಆಟ ನಡೆಯುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿತ್ತು. ಆದರೆ ಇದರ ಬಗೆಗಿನ ವಿವರಗಳು ಮಾತ್ರ ಎಲ್ಲೂ ಬಹಿರಂಗಗೊಳ್ಳುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ