2021ರ ಕೆಲವು ತಿಂಗಳುಗಳನ್ನು ನಾವು ಕೊರೋನಾದ ಆತಂಕದ ಮಧ್ಯೆಯೇ ಕಳೆದೆವು. ಆಗ ನಮ್ಮ ಜೀವನದ ವೇಗ ಅಷ್ಟಿಷ್ಟು ಕಡಿಮೆಯಾಗಿತ್ತು. ಭಯ, ಯೋಚನೆ, ಭವಿಷ್ಯಕ್ಕಿಂತ ವರ್ತಮಾನದ ಚಿಂತೆ ಆವರಿಸಿಕೊಂಡಿತ್ತು. ಓದು, ಉದ್ಯೋಗ, ಸುತ್ತಾಟ, ಶಾಪಿಂಗ್‌ ಅಥವಾ ಹೋಟೆಲ್ ‌ಗೆ ಹೋಗಿ ಏನಾದರೂ ವಿಶೇಷವಾದದ್ದನ್ನೇ ತಿನ್ನಬೇಕೆಂದರೂ ತಿನ್ನಲಾಗುತ್ತಿರಲಿಲ್ಲ. ಪಾರ್ಟಿ, ಮೋಜುಮಜ, ಸಂಬಂಧಿಕರ ಮನೆಗೆ ಹೋಗುವುದು ಹೆಚ್ಚು ಕಡಿಮೆ ನಿಂತೇಹೋಗಿತ್ತು.

ಕೊರೋನಾದ ಆತಂಕದಿಂದ ಒಂದಿಷ್ಟು ದೂರವಾಗಿ ನಾವೀಗ 2022ರಲ್ಲಿ ಬಂದು ನಿಂತಿದ್ದೇವೆ. ಈಗಲೂ ಕೂಡ ಹೊರಗೆ ಹೋಗುವಾಗ ಒಂಚೂರು ಅಳುಕು ಆಗಿಯೇ ಆಗುತ್ತದೆ. ಹಾಗಂತ ಮನೆಯಲ್ಲಿಯೇ ಇರುವುದು ಜೀವನವಲ್ಲ. ಹೊರಗೆ ಬಂದು ವಾಸ್ತವ ಬದುಕಿನ ಆನಂದ ಪಡೆಯಬೇಕು. ಅದಕ್ಕಾಗಿ ಒಂದಷ್ಟು ಎಚ್ಚರಿಕೆ ವಹಿಸುತ್ತಾ, ಸಾಮಾಜಿಕ ಹೊಂದಾಣಿಕೆ ಮಾಡಿಕೊಳ್ಳುತ್ತಾ ಮುಂದೆ ಮುಂದೆ ಸಾಗಬೇಕಿದೆ.

ಜನರನ್ನು ಭೇಟಿಯಾಗಿ

ಕೊರೋನಾದ ಅವಧಿಯಲ್ಲಿ ಬಹಳಷ್ಟು ಜನರು ಮಾನಸಿಕವಾಗಿ ಜರ್ಝರಿತರಾಗಿದ್ದರು. ನಾವು ದೈಹಿಕ ಆರೋಗ್ಯದ ಬಗ್ಗೆ ಎಷ್ಟು ಗಮನ ಕೊಡುತ್ತೇವೋ, ಮಾನಸಿಕ ಆರೋಗ್ಯದ ಬಗೆಗೂ ಅಷ್ಟೇ ಕಾಳಜಿ ತೋರಬೇಕಿದೆ. ಇದರಿಂದ ಮನುಷ್ಯ ಯೋಚಿಸುವ, ಅನುಭವ ಹಾಗೂ ಕಾರ್ಯ ನಿರ್ವಹಣಾ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಒತ್ತಡ ಹಾಗೂ ಖಿನ್ನತೆ ಒಮ್ಮೆ ಒಬ್ಬ ವ್ಯಕ್ತಿಯನ್ನು ಆವರಿಸಿಕೊಂಡುಬಿಟ್ಟರೆ ಅದರ ನೇರ ಪರಿಣಾಮ ಸಂಬಂಧ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೂ ಉಂಟಾಗುತ್ತದೆ. ಯಾರು ಮಾನಸಿಕವಾಗಿ ವೀಕ್‌ ಆಗಿರುತ್ತಾರೊ, ಅವರಿಗೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಕೆಲವರು ಹೇಗಿರುತ್ತಾರೆಂದರೆ, ಅವರು ಮಾನಸಿಕವಾಗಿ ಬಹಳ ಗಟ್ಟಿಗರಾಗಿರುತ್ತಾರೆ.

ಆದರೆ ಅವರು ತಮ್ಮ ದೈಹಿಕ ಆರೋಗ್ಯ ಕಳೆದುಕೊಳ್ಳುತ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವುದು ಹಾಗೂ ಜನರ ಸಂಪರ್ಕದಿಂದ ವಂಚಿತರಾಗಿರುವುದು.

ನೀವು ಕಳೆದ ಅನೇಕ ತಿಂಗಳುಗಳಿಂದ ನಿಮ್ಮ ಆಪ್ತರೊಬ್ಬರ ಸಂಪರ್ಕದಿಂದ ದೂರ ಇದ್ದಿದ್ದರೆ, ಈಗ ಹೊಸ ವರ್ಷದ ಆರಂಭದಲ್ಲಿ ಅವರನ್ನು ಭೇಟಿಯಾಗಿ ಮಾತನಾಡಿ, ಅವರ ಮಾನಸಿಕ ಆರೋಗ್ಯ ಸುಧಾರಣೆಯ ಬಗ್ಗೆ ಧೈರ್ಯ ತುಂಬಿ. ಇದು ಅವರಲ್ಲಿ ಬಹಳಷ್ಟು ಬದಲಾವಣೆಗೆ ಕಾರಣವಾಗುತ್ತದೆ.

ಎಚ್ಚರದಿಂದಿರಿ ಸುರಕ್ಷಿತರಾಗಿರಿ

ಮನುಷ್ಯ ಸಮಾಜ ಜೀವಿ. ಮಾನಸಿಕವಾಗಿ ಆರೋಗ್ಯದಿಂದಿರಲು ಜನರನ್ನು ಭೇಟಿಯಾಗಿ ಮಾತನಾಡಿಸುವುದು ಅತ್ಯವಶ್ಯಕ.

ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ಪಾಲ್ಗೊಂಡು ನಾವು ಅದೆಷ್ಟು ಖುಷಿ ಅನುಭವಿಸುತ್ತಿದ್ದೆವು. ಕೌಟುಂಬಿಕ ಅಥವಾ ಸ್ನೇಹದ ವಾತಾವರಣ ನಿರ್ಮಾಣವಾಗುವುದರಿಂದ ಅದೆಷ್ಟು ಖುಷಿಯ ಕ್ಷಣಗಳು ನಮ್ಮದಾಗುತ್ತಿದ್ದವು. ಭೇಟಿಯ ಬಳಿಕ ಅದೆಷ್ಟೋ ದಿನಗಳ ಕಾಲ ನಾವು ಆ ನೆನಪಿನ ಬುತ್ತಿಯ ಸಿಹಿಯಲ್ಲಿರುತ್ತಿದ್ದೆವು. ಯಾವುದೇ ಸಮಾರಂಭ ನಡೆಸಿದರೂ, ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಸಮಾರಂಭಗಳನ್ನು ನಡೆಸಬೇಕಾದ ಅನಿವಾರ್ಯತೆ ಇತ್ತು. ಇದೀಗ ನಾವು ಆ ಸ್ಥಿತಿಯಿಂದ ಹೊರಬಂದರೂ, ಒಂದಿಷ್ಟು ಅಳುಕಿನ ನಡುವೆಯೇ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಈಗಲೂ ಮಾಸ್ಕ್, ಸ್ಯಾನಿಟೈಸರ್‌ ಮತ್ತು ಸೋಶಿಯಲ್ ಡಿಸ್ಟೆನ್ಸಿಂಗ್‌ ಅನಿವಾರ್ಯವೇ ಆಗಿದೆ.

ದೂರ ದೂರ ಕುಳಿತು, ಕೈ ಅಲ್ಲಾಡಿಸುತ್ತ ಏನನ್ನಾದರೂ ಹೇಳುವುದು, ಕೇಳುವುದು ಮಾಡಬೇಕಾದ ಸ್ಥಿತಿಯಿಂದ ನಾವೀಗ ದೂರ ಬಂದಿದ್ದೇವೆ. ಈಗ ಹತ್ತಿರ ಕುಳಿತು ಆತ್ಮೀಯ ಕುಶಲ ಸಂಭಾಷಣೆ ನಡೆಸುವ ಸ್ಥಿತಿಗೆ ಬಂದಿದ್ದೆವೆ. ಹೊಸ ವರ್ಷದಲ್ಲಿ ಪರಸ್ಪರ ಭೇಟಿಯಾಗಿ ಮಾತನಾಡುವ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ