ರಾಗಿಣಿ ತನ್ನ ಪತಿಗೆ SMS ಕಳುಹಿಸಿದಳು, ``ಎಷ್ಟು ಹೊತ್ತಿಗೆ ಬರ್ತೀರ?''
ಅವಳ ಗಂಡ ರಾಜೇಶ್ ತಕ್ಷಣ SMS ಮೂಲಕ ಹೀಗೆ ಉತ್ತರಿಸಿದ, ``20-25 ನಿಮಿಷಗಳಲ್ಲಿ ಬಂದುಬಿಡ್ತೀನಿ, ಹ್ಞಾಂ, ಒಂದು ಪಕ್ಷ ಇನ್ನೂ ತಡವಾದರೆ ಇದೇ SMS ಸಂದೇಶವನ್ನು ಮತ್ತೊಮ್ಮೆ ಓದಿಕೊ.''
ಪತಿ ಪತ್ನಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು.
ಪತ್ನಿ : ಡಿಯರ್, ಈಗ ನೀವೇನು ಮಾಡ್ತಿದ್ದೀರಿ?
ಪತಿ : ಡಾರ್ಲಿಂಗ್, ಇವತ್ತು ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಕೆಲಸ ಜಾಸ್ತಿ.... ಸಾಕಾಗಿಹೋಗಿದೆ. ಅಂದಹಾಗೆ ನೀನೇನು ಮಾಡ್ತಿದ್ದಿ ಸ್ವೀಟ್ ಹಾರ್ಟ್?
ಪತ್ನಿ : ನಾನು ಕ್ಲಬ್ ನಲ್ಲಿದ್ದೀನಿ ಡಿಯರ್, ಜಸ್ಟ್ ನಿಮ್ಮ ಹಿಂದುಗಡೆ!
ಕಿರಣ್ : ಇದಕ್ಕೆ ಉದಾಹರಣೆ ಕೊಡು ನೋಡೋಣ.... ದುಃಖ ಎಂಬುದು ನಮ್ಮ ಶಾಶ್ವತ ಸಂಗಾತಿ, ಸುಖ ಎಂಬುದು ಯಾವಾಗಲೋ ಒಮ್ಮೊಮ್ಮೆ ಬಂದುಹೋಗುತ್ತದೆ.
ಅರುಣ್ : ಮದುವೆ ಆದಾಗಿನಿಂದ ನನ್ನ ಹೆಂಡತಿ ಸದಾ ನನ್ನ ಜೊತೆಗಿರುತ್ತಾಳೆ, ಆದರೆ ಅವಳ ತಂಗಿ ಯಾವಾಗಲೋ ಒಮ್ಮೊಮ್ಮೆ ಬಂದು ಹೋಗುತ್ತಾಳೆ.
ಒಂದು ಕಂಪನಿ ಹೀಗೆ ಜಾಹೀರಾತು ಕೊಟ್ಟಿತು. ಮದುವೆಯಾದ ಗಂಡಸರು ಮಾತ್ರ ಅರ್ಜಿ ಸಲ್ಲಿಸಿ. ಈ ಜಾಹೀರಾತು ಓದಿ ಒಬ್ಬ ಮಹಿಳೆ ಕೋಪದಿಂದ ಕಂಪನಿಯ ಮಾಲೀಕರ ಬಳಿ ಬಂದು ಕೇಳಿದಳು. ನೀವು ಮದುವೆಯಾದ ಪುರುಷರೇ ಅರ್ಜಿ ಸಲ್ಲಿಸಿ ಅಂತ ಏಕೆ ಹಾಕಿದ್ರಿ? ಮಹಿಳೆಯರು ಕೆಲಸ ಮಾಡೋಕೆ ಆಗಲ್ವಾ?
ಮಾಲೀಕರು : ಹಾಗಲ್ಲಮ್ಮ , ನಮ್ಮ ನೌಕರರು ನಮ್ಮ ಎಲ್ಲಾ ಆದೇಶಗಳನ್ನೂ ಪಾಲಿಸಬೇಕೂಂತ ಬಯಸ್ತೀವಿ. ಮದುವೆಯಾದ ಗಂಡಸರಿಗೆ ಅದು ಚೆನ್ನಾಗಿ ಅಭ್ಯಾಸ ಆಗಿರುತ್ತದೆ. ಅದಲ್ಲದೆ, ಎದುರಿಗೆ ಇರೋರು ಎಷ್ಟು ಕಿರುಚಾಡುತ್ತಿದ್ದರೂ ತಾವು ಹೇಗೆ ತೆಪ್ಪಗೆ ಇರಬೇಕೂಂತ ಕೂಡ ಅವರಿಗೆ ಗೊತ್ತಿರುತ್ತದೆ.
ಉಮಾಶಂಕರ್ : ಅದೆಲ್ಲ ಸರಿ, ಉತ್ತರ ಭಾರತದಲ್ಲಿ ಮದುವೆಗೆ ಮುಂಚೆ ವರನನ್ನು ಕುದುರೆಯ ಮೇಲೆ ಕೂರಿಸಿ ಕರೆತರುತ್ತಾರಂತಲ್ಲ.... ಯಾಕೆ?
ಶಿವಶಂಕರ್ : ....................
ಪ್ರಭುಶಂಕರ್ : ...................
ಗಿರಿಜಾ ಶಂಕರ್ : ....................
ಮಣಿ ಶಂಕರ್ : .......................
ಹರಿ ಶಂಕರ್ : ಅವನಿಗೆ ತಪ್ಪಿಸಿಕೊಳ್ಳಲು ಕಟ್ಟ ಕಡೆಯ ಅವಕಾಶ ಕೊಟ್ಟು ನೋಡ್ತಾರೆ ಅನ್ಸುತ್ತೆ..........
ಕಾಲೋನಿಯ ಮಹಿಳಾ ಅಧ್ಯಕ್ಷರಾಗಿ ಮಿಸೆಸ್ ವರ್ಮಾ ಆಯ್ಕೆಗೊಂಡರು. ಅವರ ಸಂದರ್ಶನ ಪಡೆಯಲೆಂದು ಅಲ್ಲಿನ ಸ್ಥಳೀಯ ಪತ್ರಿಕಾ ವರದಿಗಾರರು ಆಕೆಯನ್ನು ಸುತ್ತುವರಿದರು.
``ನಿಮ್ಮ ದೃಷ್ಟಿಯಲ್ಲಿ ಪತಿ ಅಂದ್ರೆ.....?''
``ಪತಿ! ಬಿಡಿ, ಪತಿ ಅಂದ್ರೆ ಒಂದು ತರಹ ಗೂಬೆ ಅಂದ್ಕೊಳ್ಳಿ,'' ಮಿಸೆಸ್ ವರ್ಮಾ ನಿರ್ವಭಾವುಕರಾಗಿ ಉತ್ತರಿಸಿದರು.
``ವಾಟ್?!'' ಒಮ್ಮೆಲೇ 2-3 ಧ್ವನಿಗಳು ಮೊಳಗಿದವು.
``ಏ ಅಷ್ಟೂ ತಿಳಿಯಲ್ವೇ....? ಪತಿರಾಯನಿಗೆ ಪತ್ನಿಯ ಸುಗುಣಗಳು ರಾತ್ರಿ ಮಾತ್ರ ತಾನೇ ಕಂಡುಬರುವುದು?'' ಮಿಸೆಸ್ ವರ್ಮಾ ಹೀಗೆ ಬೋಲ್ಡಾಗಿ ಉತ್ತರಿಸುವುದೇ.....?
ಉಮೇಶ್ : ಯಾವ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತಾನೋ ಅವನನ್ನು ಏನಂತಾರೇ?
ಸುರೇಶ್ : ಪ್ರಾಮಾಣಿಕ.
ಉಮೇಶ್ : ತನ್ನ ತಪ್ಪು ಇರಬಹುದು ಅಥವಾ ಬೇರೆಯವರದೇ ಆಗಿರಬಹುದು, ಆದರೂ ಕ್ಷಮೆ ಕೇಳುವಂಥ ವ್ಯಕ್ತಿಯನ್ನು ಏನಂತಾರೆ?