ಗಾಳಿಯಲ್ಲಿ ತೇಲಾಡುತ್ತಿರುವ ಸರ್ಕಾರಕ್ಕೆ ಮೂಗುದಾರ
ಸಾಮಾನ್ಯವಾಗಿ ಸರ್ಕಾರದ ರಚನೆ ಮತ್ತು ಬದಲಾವಣೆಯ ಬಗ್ಗೆ ಮನೆ ಮಹಿಳೆಯರಿಗೆ ಅಷ್ಟೇನೂ ವ್ಯತ್ಯಾಸ ಅನಿಸದು. ಆದರೆ ಸರ್ಕಾರ ಅಡುಗೆಮನೆಗೆ ನುಗ್ಗಿ ಜೀವನವನ್ನು ದುಸ್ತರಗೊಳಿಸುತ್ತಿದ್ದಲ್ಲಿ, ಅಂತಹ ಸರ್ಕಾರ ಕುಸಿಯತ್ತಿದೆ ಎಂದೆನಿಸಿದಾಗ ಒಂದಿಷ್ಟು ಸಮಾಧಾನ ಅನಿಸುತ್ತದೆ. ಕರ್ನಾಟಕದಲ್ಲಿ ಸರ್ಕಾರ ರಚಿಸಲು ಆಗದೇ ಇರುವುದು, ಆ ಬಳಿಕ ನಡೆದ ಉಪಚುನಾವಣೆಯ 15 ಸೀಟುಗಳಲ್ಲಿ 12ರಲ್ಲಿ ಸೋತು ನರೇಂದ್ರ ಮೋದಿ ಹೇಳುವುದು ಹೀಗೆ, ಚಹಾ ತಡವಾಗಿ ಸಿಕ್ಕಾಗ ಪತಿ ಜಗಳವಾಡುವ ಹಕ್ಕು ನೈತಿಕ ಹಾಗೂ ನೈಸರ್ಗಿಕವಾಗಿದೆ ಎಂದು.
ಶ್ರೀಮಾನ್ ನರೇಂದ್ರ ಮೋದಿಯವರು ಮನೆಯೊಳಗೆ ನುಗ್ಗಿ ಅಗ್ಗದ ಗ್ಯಾಸ್ ಸಿಲಿಂಡರ್‌ಗಳನ್ನು ಕೊಟ್ಟು ಶಭಾಷ್ ಗಿರಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಒಬ್ಬ ಮಹಿಳೆಯಿಂದ ಹೇಳಿಸಿಯೂ ಬಿಟ್ಟರು. ಈಗ ಸಿಲಿಂಡರ್ ಇರುವ ಕಾರಣದಿಂದ ಚಹಾ ತಡವಾಗುವ ಪ್ರಶ್ನೆ ಇಲ್ಲ. ಅದಕ್ಕಾಗಿ ಗಂಡ ಬೈಯುವುದೂ ಇಲ್ಲ. ಇದರರ್ಥ ಚಹಾ ತಡವಾಗಿ ಸಿಕ್ಕರೆ ಬೈಯುವುದು ತಪ್ಪಲ್ಲ. ಅದೇ ಪಕ್ಷದ ಕೆಲವರು, ``ಮಹಿಳೊಬ್ಬಳ ಬಲಾತ್ಕಾರವಾದರೆ ಅದಕ್ಕೆ ಆಕೆಯೇ ಹೊಣೆ,'' ಎಂದು ಹೇಳುತ್ತಾರೆ. ಆ ಪಕ್ಷದ ಸಮರ್ಥಕರು ಜನರ ಮನೆಗೆ ನುಗ್ಗಿ ರೆಫ್ರಿಜರೇಟರ್‌ನಲ್ಲಿರುವ ಮಾಂಸ ಹಸುವಿನದ್ದಲ್ಲ ತಾನೇ ಎಂದು ಇಣುಕಿ ನೋಡುವ ಹಕ್ಕನ್ನು ಹೊಂದಿರುವುದಾಗಿ ಭಾವಿಸುತ್ತಾರೆ.
ಬಿಂದಿ ಬೊಟ್ಟಿಗೆ ಭಾರಿ ಜಿಎಸ್‌ಟಿ ಹಾಕಿರುವುದನ್ನು ಅದೇ ಪಾರ್ಟಿಯ ಜನರು ಸರಿ ಎಂದು ಹೇಳುತ್ತಾರೆ. ಆ ಪಾರ್ಟಿಗೆ ದೇವಸ್ಥಾನಗಳು, ಯೋಗಾಸನ ಹಾಗೂ ಬ್ರಾಹ್ಮಣರ ಬಗ್ಗೆ ಕಾಳಜಿ ಇದೆ. ಆದರೆ ಕಳೆದ 4 ವರ್ಷಗಳಲ್ಲಿ ಅದು ಮಹಿಳೆಯರ ಹಿತಾಸಕ್ತಿಗೆ ಸಂಬಂಧಿಸಿದ ಒಂದೇ ಒಂದು ಕಾನೂನನ್ನು ಪಾಸ್ ಮಾಡಲಿಲ್ಲ. ತ್ರಿವಳಿ ತಲಾಕ್ ಕಾನೂನೇನೊ ಪಾಸ್ ಆಗಿದೆ. ಇದಕ್ಕೆ ಕಾರಣ ಮುಸ್ಲಿಂ ಕಾನೂನಿನಲ್ಲಿ ತಾನು ಹಸ್ತಕ್ಷೇಪ ಮಾಡಬಹುದು ಎಂಬುದನ್ನು ಹಿಂದೂ ಸಮಾಜಕ್ಕೆ ತೋರಿಸಿಕೊಡಲು.
ವಾಸ್ತವದಲ್ಲಿ ಸರ್ಕಾರದ ನಿರ್ಧಾಗಳು ಉದ್ಯಮಗಳು, ಕಾರ್ಖಾನೆಗಳ ಮೇಲೆ ಪ್ರಭಾವ ಬೀರುವ ಹಾಗೆಯೇ ಕುಟುಂಬಗಳ ಮೇಲೂ ಪ್ರಭಾವ ಬೀರುತ್ತದೆ ಎಂದು ಅದಕ್ಕೆ ಗೊತ್ತಾಗದಿದ್ದರೆ ಆ ಸರ್ಕಾರ ನಿಷ್ಪ್ರಯೋಜಕವೇ ಸರಿ.
ನೋಟು ರದ್ದು ಲಕ್ಷಾಂತರ ಮಹಿಳೆಯರ ಗುಪ್ತ ನಿಧಿಯನ್ನು ಹೊರ ತೆಗೆಯಿಸಿತು. ಈಗಲೂ ಕೆಲವು ಮಹಿಳೆಯರ ಮನೆಗಳಲ್ಲಿ ಅಂತಹ ನೋಟುಗಳಿವೆ. ಅವು ಬೆವರು ಸುರಿಸಿ ಗಳಿಸಿ, ಉಳಿಸಿದ ಹಣ. ಸರ್ಕಾರದ ಮೂರ್ಖತನದ ನಿರ್ಧಾರದಿಂದಾಗಿ ಆ ನೋಟು ಗಳೀಗ ಬಣ್ಣದ ತುಂಡುಗಳಾಗಿವೆ ಅಷ್ಟೇ. ಅಂತಹ ಸರ್ಕಾರಕ್ಕೆ ಆಘಾತ ಉಂಟಾದರೆ ಅದು ಸರಿ. ಅದು ಹೇಗೆಂದರೆ, ಮನೆಯಲ್ಲಿ ಮಗಳು ತುಂಬಾ ಗಲಾಟೆ ಮಾಡುತ್ತಿದ್ದರೆ, ಅಮ್ಮ ಅವಳನ್ನು ಗದರಿಸುವುದು ತಪ್ಪಲ್ಲ. ಹಾಗೆಯೇ ಮತದಾರರು ಆಗಾಗ ಕೊಡುವ ಇಂತಹ ಏಟು ಸರಿಯಾಗಿಯೇ ಇರುತ್ತದೆ.
ಈಗ ಸರ್ಕಾರದ ಸ್ಥಿತಿ ಹೇಗಿದೆ ಎಂದರೆ, ಗಂಡನ ತಪ್ಪಿನಿಂದ ದುಬಾರಿ ಬೆಲೆಯ ಮಗ್ ಕೈ ಜಾರಿ ಹೋದ ನಂತರ ಹೆಂಡತಿಯ ಸ್ಥಿತಿ ಹೇಗಿರುತ್ತೋ ಹಾಗೆ ತನ್ನ ಬಳಿ ಯಾವ ಹಕ್ಕು ಇದೆಯೋ, ಅದನ್ನು ಕೊಟ್ಟಿದ್ದು ಜನತೆ ಎಂಬುದು ಸರ್ಕಾರಕ್ಕೆ ಅರಿವಾಗಬೇಕು. ಹುಟ್ಟಿನಿಂದಲೇ ಪೂಜಾರಿಗಳಿಗೇ ದೊರೆತ ರೀತಿಯಲ್ಲಿ ಅಲ್ಲ.