ನಮ್ಮ ದೇಶದ 3 ಮಹಾನಗರಗಳು ಪ್ರತಿ ವರ್ಷ, 2 ವರ್ಷಗಳಿಗೊಮ್ಮೆ ಭಾರಿ ಮಳೆಯ ನಂತರ ಎಲ್ಲೆಲ್ಲೂ ಜಲಸಾಗರಗಳಲ್ಲಿ ಮುಳುಗಿಹೋಗುತ್ತವೆ. ಇತ್ತೀಚೆಗಂತೂ ಬೆಂಗಳೂರು ಈ ನಿಟ್ಟಿನಲ್ಲಿ ಮುಂದಿದೆ. ಇದಕ್ಕೆ ಮೊದಲು ಚೆನ್ನೈ, ಮುಂಬೈ ಇದಕ್ಕೆ ಬಲಿಯಾಗುತ್ತಿತ್ತು. ಟಿವಿ ವೀಕ್ಷಕರಿಗಂತೂ ಈ ದೃಶ್ಯ ರೋಚಕ ಎನಿಸಬಹುದು..... ಅದರಲ್ಲಿ ಆಧುನಿಕ ಯುವತಿಯರು ಎಂದೂ ಫ್ಯಾಷನೆಬಲ್ ಡ್ರೆಸ್, ಮೇಕಪ್ ಇಲ್ಲದೆ ಹೊರಗೆ ಹೊರಡದವರು ಮಳೆರಾಯನ ಆರ್ಭಟಕ್ಕೆ ಸಿಲುಕಿ ಸಾಧಾರಣ ಉಡುಗೆಗಳಲ್ಲಿ, ಗಲೀಜು ನೀರಿಗಿಳಿದು ಕಾಲ್ನಡಿಗೆ, ಟ್ರಾಕ್ಟರ್, ವ್ಯಾನ್, ಟ್ರಕ್ಕುಗಳಲ್ಲಿ ಮನೆಯ ಸಾಮಗ್ರಿ ಹೊತ್ತು ಅಂತೂ ಹೇಗೋ ಓಡಾಡುತ್ತಿದ್ದರು.
ಇದು ಮೊದಲೇ ಗೊತ್ತಿದ್ದರೆ ಬಹುಶಃ ನ್ಯೂಸ್ ಚಾನೆಲ್ಸ್, FB, ಟ್ವಿಟರ್ ಇತ್ತೀಚೆಗೆ ಬೆಂಗಳೂರಿನ ಜನ ಗೋಳಾಡುತ್ತಿದ್ದರೆ, ತಮ್ಮ ಜೀವಮಾನದ ಸಂಪಾದನೆ ಹಾಳಾಗುತ್ತಿರುವುದನ್ನು ಕಂಡು ಕಂಬನಿ ಮಿಡಿಯುತ್ತಿದ್ದರೆ, ಇವು ಐಬಾಲ್ಸ್ ಗಾಗಿ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನಂಥ ಜಾಹೀರಾತುಗಳನ್ನು ತೆಗೆದುಕೊಳ್ಳುವುದರಲ್ಲಿ ಬಿಝಿ.
ಈ ನಗರಗಳ ಸೈಟ್ ಬೆಲೆ ಗಗನದಲ್ಲಿದೆ. ಆದರೆ ಅವೆಂಥ ದುರ್ಬಲ ಎಂದೀಗ ಸ್ಪಷ್ಟವಾಗಿದೆ. ಬಿಲ್ಡರ್ಸ್ ಏನೋ ಮಹಡಿ ಮೇಲೆ ಮಹಡಿ ಕಟ್ಟಿ ಅಪಾರ್ಟ್ ಮೆಂಟ್ ಎಬ್ಬಿಸುತ್ತಾರೆ, ರಾಜ್ಯ ಸರ್ಕಾರ ನಗರಪಾಲಿಕೆಗಳು ಟ್ಯಾಕ್ಸ್ ಮತ್ತು ಲಂಚ ಗುಳುಂ ಮಾಡುತ್ತಾರೆ. ಆದರೆ ನಗರಗಳ ಮ್ಯಾನೇಜ್ ಮೆಂಟ್ ಮಾತ್ರ ಗೊತ್ತಿಲ್ಲ.
ಈ ಮಾತು ಗೊತ್ತಿರದ ಮನೆ ಮಂದಿ, ತಮ್ಮ ಜೀವನವಿಡಿಯ ಸಂಪಾದನೆಯನ್ನು ಇಲ್ಲಿನ ಫ್ಲಾಟ್ ಕೊಳ್ಳುವುದಕ್ಕೆ ಸುರಿಯುತ್ತಾರೆ. ಅದು ಯಾವಾಗ ನೀರಿನಲ್ಲಿ ಮುಳುಗಿಹೋಗುವುದೋ ಹೇಳಲಾಗದು. ಈ ನಗರಗಳ ಜನತೆಗಂತೂ ಈ ವಿಷಯದಲ್ಲಿ ಅಂಥ ವ್ಯತ್ಯಾಸಗಳೂ ಗೊತ್ತಾಗುವುದಿಲ್ಲ. ಏಕೆಂದರೆ ಇದರಲ್ಲಿ 50%ಗೂ ಅಧಿಕ ಜನತೆ, ಸಾಮನ್ಯವಾಗಿ ಮೊದಲಿನಿಂದಲೂ ಇಂಥ ಮನೆಗಳಲ್ಲೇ ಇದ್ದುಬಿಟ್ಟಿದ್ದಾರೆ. ಮಳೆಯಲ್ಲಿ ಹೀಗೆ ಮನೆ ಮನೆಯೇ ಮುಳುಗೇಳುವುದೂ ಮಾಮೂಲಿ. ಮಳೆ ಬರಲಿ, ಬಿಡಲಿ, ಬರ ಇರಲಿ..... ಎಲ್ಲಕ್ಕೂ ಇವರು ಹೊಂದಿಕೊಂಡು ಬಿಟ್ಟಿದ್ದಾರೆ.
ಈ ನಗರಗಳಲ್ಲಿ ಚಿಂತೆಗೊಳಗಾಗುವವರು ಎಂದರೆ, ತಮ್ಮ ಕೈಯಲ್ಲೇ ನಿರ್ಧಾರ ತಳೆಯಬಲ್ಲಂಥವರು. ಇವರು ರಾಜಕಾರಣಿಗಳ ಅಧಿಕಾರ ಅಲುಗಿಸಬಲ್ಲರು, ಇಂಥವರು ಬಯಸಿದರೆ ಈ ನಗರಗಳನ್ನು ನೀರಿನ ಮುಳುಗಡೆ ಹಾಗೂ ಬರಗಳಿಂದ ಕಾಪಾಡಬಲ್ಲರು. ಈಗಂತೂ ಎಲ್ಲಾ ಬಗೆಯ ಟೆಕ್ನಿಕ್ಸ್ ಲಭ್ಯ. ತೊಂದರೆ ಎಂದರೆ ಎತ್ತರೆತ್ತರದ ಮಿರಿಮಿರಿ ಮಿಂಚುವ ಫ್ಲಾಟ್ ಗಳ ಈ ಜನ, ಎಷ್ಟು ಇಂಟ್ರೊವರ್ಟ್ ಆಗಿರುತ್ತಾರೆಂದರೆ, ಇವರೆಲ್ಲ ಒಗ್ಗಟ್ಟಾಗಿ ನಗರಕ್ಕೆ ಒಳ್ಳೆಯದಾಗುವುದರತ್ತ ಕಿಂಚಿತ್ತು ಚಿಂತಿಸುವುದಿಲ್ಲ.
ತಮ್ಮದೇ ಯಶಸ್ಸಿನ ಸ್ವಾರ್ಥದಲ್ಲಿ ಟೆಕ್ ಕ್ಯಾಪಿಟಲ್ ಬೆಂಗಳೂರು ಫೈನಾನ್ಸ್ ಕ್ಯಾಪಿಟಲ್ ಮುಂಬೈನ ಈ ರಿಚ್ ಸೆಕ್ಷನ್ ಸ್ವಲ್ಪ ನಗರಕ್ಕಾಗಿ ಹೋರಾಡಲು, ಏನಾದರೂ ಮಾಡಲು ಖಂಡಿತಾ ತಯಾರಿಲ್ಲ. ಇಂಥವರ ಬಳಿ ಸದಾ ಸಮಯದ ಅಭಾವ, ಅದಕ್ಕಿಂತ ದೊಡ್ಡ ಕಾರಣ, ಅವರ ಒಳಮನಸ್ಸಿನಲ್ಲಿ, ಅವರೇನೇ ಮಾಡಿದರೂ ಅದರ ದೊಡ್ಡ ಲಾಭ ಮಾಮೂಲಿ ಜನತೆಗೇ ಆಗುತ್ತದೆ. ಅಂಥ ಸಾಧಾರಣ ಮಂದಿಯ ಏಳಿಗೆ ಇವರಿಗೆ ಕಿಂಚಿತ್ತೂ ಬೇಕಿಲ್ಲ.