ವಿಶ್ವದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಶುದ್ಧವಾದ ಕುಡಿಯುವ ನೀರಿನ ಬೇಡಿಕೆ ಮತ್ತು ದೊರೆಯುವಿಕೆಯಲ್ಲಿನ ಅಂತರ ನಿರಂತರವಾಗಿ ಹೆಚ್ಚುತ್ತಲಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ನಮ್ಮ ಜೀವನಶೈಲಿಯು ಹೇಗೆ ರೂಪಿತವಾಗಿದೆ ಎಂದರೆ, ಪ್ರತಿದಿನ ಕೋಟ್ಯಾಂತರ ಲೀಟರ್‌ ನೀರು ನಷ್ಟವಾಗಿ ಹರಿದುಹೋಗುತ್ತಿದೆ. ಹೀಗೆ ನೀರು ವ್ಯರ್ಥವಾಗಿ ಪೋಲಾಗುತ್ತಿರುವ ಒಂದು ಉದ್ಯಮವೆಂದರೆ ಮೀಟ್‌ ಇಂಡಸ್ಟ್ರಿ.

ಬೀಫ್‌ ಮತ್ತು ಫೌಲ್ಟ್ರಿಗಿಂತ ಅತಿ ಹೆಚ್ಚು ನೀರು ಪೋರ್ಕ್‌ಗಾಗಿ ಪೋಲಾಗುತ್ತಿದೆ. ಹಂದಿಯನ್ನು ಪೋಷಿಸಿ ಊಟದ ಮೇಜಿನ ತನಕ ತರಲು, 1 ಕಿಲೋಗ್ರಾಮ್ ಪೋರ್ಕ್‌ಗೆ 59-88 ಲೀಟರ್‌ ನೀರಿನ ಅಶ್ಯಕತೆ ಇರುತ್ತದೆ. ಇದಕ್ಕೆ ಹೋಲಿಸಿದರೆ ಗೋಧಿ ಮತ್ತು ಇತರೆ ಧಾನ್ಯಗಳಿಗೆ 1 ಕಿಲೋಗ್ರಾಮಿಗೆ 1500-2000 ಲೀಟರ್‌, ಆಲೂಗಡ್ಡೆಗೆ 387 ಲೀಟರ್‌ ಮತ್ತು ಟೊಮೇಟೊಗೆ 214 ಲೀಟರ್‌ ನೀರು ಬೇಕಾಗುತ್ತದೆ. ಹೀಗಿದ್ದರೂ ಸಹ ಭಾರತದಲ್ಲಿ ಪೋರ್ಕ್‌ನ ಬಳಕೆ ಹೆಚ್ಚುತ್ತಿದೆ.

ಹೆಚ್ಚು ನೀರಿನ ಬಳಕೆ : 2016-17ರಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚು ಪೋರ್ಕ್‌ ಬಳಸಲ್ಪಟ್ಟಿತ್ತು. 11% ಹೆಚ್ಚು ಪೋರ್ಕ್‌ ಆಮದು ಮಾಡಲಾಗಿತ್ತು.

ಭಾರತದ ಉತ್ಪಾದಕರು ಈಗ ಪಾಶ್ಚಿಮಾತ್ಯ ತಂತ್ರಜ್ಞಾನದ ಬಳಕೆ ಮಾಡುತ್ತಿರುವುದರಿಂದಲೂ ಹೆಚ್ಚು ನೀರು ಹಿಡಿಯುತ್ತಿದೆ. ಹಂದಿಗಳ ಪೋಷಣೆಗೆ ಹೆಚ್ಚು ನೀರು ಬೇಕಾಗುತ್ತದೆ. ಹಂದಿಗಳನ್ನು ಇಂದು ಬೇಲಿಯ ಆವರಣದಲ್ಲಿ ಅಥವಾ ಫ್ಯಾಕ್ಟರಿಗಳ ಜಾಗಗಳಲ್ಲಿ ಬಿಟ್ಟು ಪೋಷಿಸುವುದರಿಂದಲೂ ಹೆಚ್ಚು ನೀರು ಬಳಕೆಯಾಗುತ್ತಿದೆ. ವಿದೇಶೀ ಹಂದಿಗಳು ಬೇಗನೆ ಬೆಳೆಯುವುದೆಂದು ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಂದರೆ ಒಂದು ಪ್ರಾಣಿಗೆ ದಿನವೊಂದಕ್ಕೆ ಹೆಚ್ಚು ನೀರು ಹಿಡಿಯುತ್ತಿದೆ. ಹಂದಿಗಳ ಪೋಷಣೆಗೆ ಹೆಚ್ಚು ನೀರು ಬೇಕಾಗುತ್ತದೆ. ಅಂದರೆ ಒಂದು ಪ್ರಾಣಿಗೆ ದಿನವೊಂದಕ್ಕೆ 75 ಲೀಟರ್‌ ನೀರು ಖರ್ಚಾಗುತ್ತದೆ. ಅದಕ್ಕೆ ಕಾಯಿಲೆಯಾದರೆ, ಅದು ಗರ್ಭವತಿಯಾದರೆ ಅಥವಾ ಬಿಸಿಲು ಹೆಚ್ಚಿದರೆ, ನೀರಿನ ಅವಶ್ಯಕತೆಯೂ ಹೆಚ್ಚುತ್ತದೆ. ಹಂದಿಯನ್ನು ಕತ್ತರಿಸುವ ಮೊದಲು ಮತ್ತು ನಂತರ ಅದನ್ನು ಇರಿಸುವ ಜಾಗವನ್ನು ಸ್ವಚ್ಛವಾಗಿ ಮತ್ತು ತಂಪಾಗಿ ಇರಿಸಲೂ ಹೆಚ್ಚು ನೀರಿನ ಅಗತ್ಯವಿರುತ್ತದೆ.

ಪೋರ್ಕ್‌ನ್ನು ಕತ್ತರಿಸಲು, ಕೆಡದಂತೆ ಇರಿಸಲು ಮತ್ತು ಪ್ಯಾಕಿಂಗ್‌ ಮಾಡಲು ಹೆಚ್ಚು ನೀರು ಬೇಕಾಗುತ್ತದೆ. ಇದಕ್ಕೆ ಬಳಕೆಯಾದ ನೀರು ಹಾಗೇ ಹರಿದು ಹೋಗಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಮಾಲಿನ್ಯದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳು, ತಮ್ಮ ಊಟದ ಮೇಜಿನ ಮೇಲಿರುವ ಆಹಾರ ಜಲ ಮಾಲಿನ್ಯಕ್ಕೆ ಎಷ್ಟು ಕಾರಣೀಭೂತವಾಗಿದೆಯೆಂದು ಯೋಚಿಸಲೇಬೇಕು.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಂತೆ ನಾವು ನೀರಿಗಾಗಿ ಪರದಾಡಬೇಕಾದೀತು!

ಕೇಪ್‌ಟೌನ್‌ ಒಂದು ಅತ್ಯಂತ ಸುಂದರವಾದ ನಗರ. ಇಲ್ಲಿ ನೀರಿಗೆ ಅತ್ಯಂತ ಹೆಚ್ಚಿನ ಕೊರತೆಯಿದೆ. ಫೆಬ್ರವರಿ 2018ರಿಂದ ಇಲ್ಲಿ ಪ್ರತಿ ವ್ಯಕ್ತಿಗೆ 50 ಲೀಟರ್‌ ನೀರು ಮಾತ್ರ ದೊರೆಯುತ್ತಿದೆ. ಅವರು ಅದರಲ್ಲಿ ತಮ್ಮ ಊಟ, ಸ್ನಾನ, ಸ್ವಚ್ಛತೆಯ ಕೆಲಸ ಕಾರ್ಯಗಳನ್ನು ನಡೆಸಬೇಕಾಗುತ್ತದೆ. ಈ ನೀರನ್ನು ಪೈಪ್‌ ಮೂಲಕ ಒದಗಿಸುತ್ತಿಲ್ಲ. ನಿಗದಿಯಾದ 149 ಪಾಯಿಂಟ್‌ಗಳಲ್ಲಿ ಉದ್ದದ ಸರತಿ ಸಾಲಿನಲ್ಲಿ ನಿಂತು 25 ಲೀಟರ್‌ ನೀರನ್ನು ಪಡೆಯಬೇಕಾದ ಪರಿಸ್ಥಿತಿ ಒದಗಿದೆ.

ಕೇಪ್‌ಟೌನ್‌ ಹೈವೇಸ್‌, ಮಾಲ್ಸ್, ರೆಸ್ಟೋರೆಂಟ್‌ ಮತ್ತು ಸ್ಕೈ ಸ್ಕ್ರೇಪರ್‌ಗಳಿಂದ ಕೂಡಿದ ನಗರ. ಆದರೆ ನೀರಿನ ಕೊರತೆ ಇದ್ದಾಗ್ಯೂ ಅತಿ ನೀರು ಬಳಕೆಯ ಉದ್ಯಮಗಳಾದ ಮೀಟ್‌ ಪ್ರೊಡಕ್ಷನ್‌, ಕೋಕ್‌, ಪೆಪ್ಸಿಯಂತಹ ಉತ್ಪಾದನೆಗಳನ್ನು ತಡೆಯಲಾಗಿಲ್ಲ.

ಯುದ್ಧದ ಭಯ : ಕೇಪ್‌ಟೌನ್‌ನಲ್ಲಿ 6 ದೊಡ್ಡ ಅಣೆಕಟ್ಟುಗಳಿವೆ. ಆದರೆ ಗ್ಲೋಬಲ್ ವಾರ್ಮಿಂಗ್‌ನಿಂದಾಗಿ ನದಿ ನೀರು ಒಣಗಿದೆ.

ನದಿ ನೀರಿನ ಸರಬರಾಜು ಇಲ್ಲದೆ ವ್ಯವಸಾಯ ಸ್ಥಗಿತವಾಗಿದೆ, ತೋಟಗಳಿಗೆ ನೀರು ಉಣಿಸಲಾಗುತ್ತಿಲ್ಲ. ಗಿಡ ಮರಗಳು ಒಣಗಿ ಬೀಳುತ್ತಿವೆ. ಉದ್ಯೋಗವಿಲ್ಲದೆ ಜನರು ಪಲಾಯನ ಮಾಡುತ್ತಿದ್ದಾರೆ. ಬಡವರು ಸಿರಿವಂತರ ನಡುವೆ ಹೆಚ್ಚಿನ ತಾರತಮ್ಯ ಏರ್ಪಟ್ಟಿದೆ. ಪೊಲೀಸ್‌ ಮತ್ತು ಸೇನೆಗೆ ಎಚ್ಚರವಾಗಿರಲು ಸೂಚಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಈ 21ನೇ ಶತಮಾನದಲ್ಲಿ ಜನರು ತೈಲಕ್ಕಾಗಿ ಅಲ್ಲ, ನೀರಿಗಾಗಿ ಯುದ್ಧ ನಡೆಯುವ ಭಯ ಹೊಂದಿದ್ದಾರೆ. ವಿಶ್ವದ ಎಲ್ಲ ದೇಶಗಳಲ್ಲೂ ಕೇಪ್‌ಟೌನ್‌ನ ಪರಿಸ್ಥಿತಿ ಉಂಟಾಗಬಹುದು. ಭಾರತದಲ್ಲಿ ಕೇಪ್‌ಟೌನ್‌ನ ಪರಿಸ್ಥಿತಿ ತಲೆದೋರುವ ಮೊದಲ ನಗರ, ಬಹುಶಃ ಹೈದರಾಬಾದ್‌ ಆಗಬಹುದು. ನೀವು ಸಿದ್ಧರಾಗಿದ್ದೀರಾ?

– ಮೇನಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ