ವಾಸ್ತುವಿನಲ್ಲಿ ಒಂದೊಂದು ಕಟ್ಟಡ ಭಿನ್ನ ಭಿನ್ನ. ನಾವು ಒಬ್ಬರಿದ್ದಂತೆ ಇನ್ನೊಬ್ಬರಿರುವುದು ಬೇಡ ಅಂತ ಅವು ಮಾತನಾಡಿಕೊಂಡಿವೆಯೋ ಏನೋ? ಆಗಸಕ್ಕೆ ಚಿಮ್ಮಿದಂತೆ ಭಾಸವಾಗುವ ಅವುಗಳ ಉಪ್ಪರಿಗೆಗಳನ್ನು ಎಣಿಸುವಾಗ ಕ್ರಮಸಂಖ್ಯೆ ತಪ್ಪುವುದು ಖಾತರಿ. ಬೃಹತ್‌ ಚಕ್ರದಂತೆ, ಕೊಯ್ದಿಟ್ಟ ಪೈನಾಪಲ್, ಸೇಬು, ಪತಂಗಗಳಂತೆ, ಬೆಳಕಿನಲ್ಲಿ ಕಟ್ಟಿದಂತೆ ತೋರುವ ವೈವಿಧ್ಯಮಯ ನಿರ್ಮಿತಿಗಳು. ಎಲ್ಲ ಸೀಳು ತರಚುಮುಕ್ತ. ನಿಜವಾಗಿ ಬೆರಗುಗೊಳಿಸುವುದು ಭವ್ಯ ನಿರ್ಮಾಣಗಳಲ್ಲ.  ಬದಲಿಗೆ ಹೇಳಿಕೇಳಿ ಮರುಭೂಮಿಯಲ್ಲಿ ಇಂತಹ ಅದ್ಭುತ ರಚನೆಗಳು ಸಾಧ್ಯವಾಗಿದ್ದು ಹೇಗೆಂದು?! ನಿಮ್ಮ ಅಂದಾಜು ಸರಿ... ನಾನು ಬಣ್ಣಿಸುತ್ತಿರುವುದು ಅಬುಧಾಬಿಯನ್ನು. ಕಳೆದ ಫೆಬ್ರುವರಿ 22-23ರಂದು ಅಲ್ಲಿ ನೆರವೇರಿದ ಕನ್ನಡ ಸಮಾವೇಶವೊಂದರಲ್ಲಿ ಭಾಗಿಯಾದ ನನಗೆ ಊರು ಕಣ್ತುಂಬಿಕೊಳ್ಳುವ ಅವಕಾಶ ಒದಗಿತ್ತು.

ಮಂಗಳೂರಿನ `ಹೃದಯವಾಹಿನಿ' ಮಾಸಪತ್ರಿಕೆ ಕರ್ನಾಟಕ ರಾಜ್ಯದ ಸಂಸ್ಕೃತಿ ಇಲಾಖೆಯ ಸಹಯೋಗದೊಡನೆ ನಿಯೋಜಿಸಿದ `15ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ' ಅದು. ಅಬುಧಾಬಿಗೆ ಯು.ಎ.ಇ.ನಲ್ಲೇ ಅತ್ಯಂತ ಸುರಕ್ಷಿತ ಪ್ರಾಂತ್ಯವೆಂಬ ಹೆಗ್ಗಳಿಕೆ. ಅಲ್ಲಿ ಮರೆತ ವಸ್ತು ಹಾಗೆಯೇ ಇದ್ದ ಸ್ಥಳದಲ್ಲೇ ಇರುತ್ತದೆ. ಬಸ್ಸಿನಲ್ಲಿ ನಿಂತು ಪ್ರಯಾಣಿಸಿದರೆ ದಂಡ ತೆರಬೇಕಾಗುತ್ತದೆ.  ಪೊಲೀಸ್‌ ವಾಹನವನ್ನು ಹಿಂದಿಕ್ಕುವ ವಾಹನಗಳಿಗೆ ದಂಡ ವಿಧಿಸುತ್ತಾರೆ. ಎಮಿರೇಟ್ಸ್ ಎಂಬ ಪದದ ಮೂಲ ಅಮೀರ್‌.

ಅಮೀರ್‌ ಎಂದರೆ ಆಳು ಅರಸ. ಅರಸ ಅದೆಷ್ಟು ಸರಳ ಎಂದರೆ ಜನರೊಂದಿಗೆ ಬೆರೆತು ಲೋಕಾಭಿರಾಮ ನಡೆಸುವುದಿದೆ. ಶಾಲೆ ಶುಲ್ಕ ದುಬಾರಿಯಾದರೂ ಶಾಲೆಯ ಆವರಣದಲ್ಲೇ ವಿಸ್ತಾರ ಉದ್ಯಾನ, ಕ್ರೀಡಾಂಗಣ, ಭವ್ಯ ಗ್ರಂಥಾಲಯ ಮುಂತಾದವು ಸೌಲಭ್ಯವಿರುತ್ತದೆ. ಶಾಲೆಯ ತರಗತಿ ಕೊಠಡಿಗಳು ವಿಶಾಲವಾಗಿವೆ. ಕರೆನ್ಸಿ ದಿರಾನ್‌. ಒಂದು ದಿರಾನ್‌ 20 ರೂಪಾಯಿಗಳಿಗೆ ಸಮ. ಏನಾದರೂ ಕೊಳ್ಳಿ, ಹತ್ತು ದಿರಾನ್‌ ನೀಡಿ ಎನ್ನುವ  ಫಲಕ ಕೆಲವು ಮಾಲ್‌ಗಳಲ್ಲಿ ಕಾಣಿಸುತ್ತದೆ.

ಎರಡು ವಿಮಾನಗಳಲ್ಲಿ ಹೊರಟ ನಮ್ಮ ತಂಡದ್ದು `ಕನ್ನಡ ಕಂ ಪ್ರವಾಸ' ಆಗಿತ್ತು. ಹಿರಿಯ ಪತ್ರಕರ್ತ ಮಂಜುನಾಥ ಸಾಗರ್‌ ಇಡೀ ಯಾತ್ರೆಯ ನೇತೃತ್ವ ವಹಿಸಿದ್ದರು. ಬೆಂಗಳೂರಿನಿಂದ ಹೊರಟು ದುಬೈ ತಲುಪಿ ಅಲ್ಲೊಂದು ದಿನ ತಂಗಿ ಸುತ್ತಾಡಿದ್ದಾಯಿತು. `ಮರಳು ಸಫಾರಿ'ಯ ರೋಚಕ ಅನುಭವ. `ಬೆಲ್ಲಿ ನೃತ್ಯ' ವೀಕ್ಷಣೆ ಪ್ರಮುಖ ಮಜಲುಗಳು. ಮರುದಿನ ಬೆಳಗ್ಗೆ ಬಸ್ಸಿನಲ್ಲಿ ಅಬುದಾಭಿಯತ್ತ ಪಯಣ.

ಅಬುಧಾಬಿ ಸಪ್ತ ಅರಬ್‌ ಪ್ರಾಂತ್ಯಗಳ ಪೈಕಿ (ಯು.ಎ.ಇ) ಒಂದು. ಅದೇ ಯು.ಎ.ಇ.ಯ ರಾಜಧಾನಿ. ಉಳಿದ ಪ್ರಾಂತ್ಯಗಳಂತೆ ವರ್ಷದಲ್ಲಿ ಒಂದೆರಡು ದಿನಗಳು ಮಳೆಯಾದರೆ ಅದೇ ಹೆಚ್ಚು. ಅಕ್ಷರಶಃ ಅಲ್ಲಿ `ತೆಗೆ ಜಡಿಂಬುದೇ ಬರಿಯ ಸುಳ್ಳು' ಉಕ್ತಿ ಕಾರ್ಯರೂಪ ತಳೆದಿವೆ. ಸಮುದ್ರದ ನೀರಿನಲ್ಲಿ ಉಪ್ಪನ್ನು ಕಿತ್ತೊಗೆದು ತಾಜಾವಾಗಿಸಿಕೊಳ್ಳುತ್ತಾರೆ! ಸಾರ್ವಸತ್ಯವೆಂದರೆ ಕುಡಿಯಲು ಬಳಸುವ ಶುದ್ಧ ನೀರನ್ನೇ, ಶೌಚಕ್ಕೂ ಬಳಸುತ್ತಾರೆ. ಹೊರಗಿನಿಂದ ಮಣ್ಣು ತಂದು ಬೇಸಾಯ ಮಾಡುವಷ್ಟು ಕರ್ತೃತ್ವ ಶಕ್ತಿ ಅಲ್ಲಿನ ಮಂದಿಗೆ, ಪಾಮ್ ಮತ್ತು ಇತರ ಗಿಡಗಳು ದಟ್ಟವಾಗಿಯೇ ಬೆಳೆದಿರುವುದನ್ನು ನೋಡಿದರೆ `ಇಲ್ಲಾಗುವುದೆಂದರೆ ಎಲ್ಲಾಗುವುದು' ಶರಣರ ನುಡಿ ನೆನಪಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ