ಕನಸು ಕಾಣುವುದು ಎಲ್ಲರ ಹಕ್ಕು. ಕಪ್ಪಾದರೇನು, ಬೆಳ್ಳಗಿದ್ದರೇನು, ಸಣ್ಣ ಊರಾದರೇನು, ಅಥವಾ ದೊಡ್ಡ ನಗರವಾದರೇನು, ಹೆಣ್ಣಾದರೇನು, ಗಂಡಾದರೇನು......? ಎಲ್ಲರಿಗೂ ಕನಸು ಕಾಣುವ ಮನಸ್ಸಿದೆ. ಆದರೆ ಕನಸನ್ನು ನನಸು ಮಾಡಿಕೊಳ್ಳುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಬಹಳ ಅಪರೂಪಕ್ಕೆ ಎಲ್ಲೋ ಒಬ್ಬರು ಸಿಗಬಹುದು. ಅಂತಹ ಅಪರೂಪದ ವ್ಯಕ್ತಿ ನೋರಾ ರಶ್ಮಿ ಸರಾಲೆ.

ಮಲೆನಾಡಿನ ಸಣ್ಣ ಊರು ಸಾಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ. ತಂದೆಯದು ಸರ್ಕಾರಿ ಕೆಲಸ. ತಾಯಿ ಗೃಹಿಣಿ. ತಂದೆ ಕಛೇರಿಗೆ ಹೋದರೆ ತಾಯಿ ಅಡುಗೆಮನೆಯಲ್ಲಿ. ಅವಳಿಗೆ ರಜವಿಲ್ಲ, ಸಂಬಳವಿಲ್ಲ. ಆದರೂ ಸದಾ ದುಡಿಮೆ. ತಂದೆ ವೃತ್ತಿಯಲ್ಲಿದ್ದಾಗಲೂ, ನಂತರ ನಿವೃತ್ತಿಯಾದ ಮೇಲೂ ತಾಯಿಯ ದಿನಚರಿಯಲ್ಲಿ ಬದಲಾವಣೆ ಇಲ್ಲ. ರಶ್ಮಿಯ ಮನಸ್ಸಿನಲ್ಲಿ ಸದಾ ಮೂಡುತ್ತಿದ್ದ ಪ್ರಶ್ನೆ, ಹೆಣ್ಣು ಯಾವಾಗಲೂ ಅಡುಗೆಮನೆಗೆ ಮೀಸಲೇ? ಅವಳು ಮತ್ತೇನೂ ಮಾಡಬಾರದೆ? ಈ ವ್ಯವಸ್ಥೆಯ ಬಗ್ಗೆ ಬೇಸರ ಮೂಡುತ್ತಿತ್ತು. ರಶ್ಮಿ ಓದಿನಲ್ಲಿ ಮುಂದು. ವೃತ್ತಿಪರ ಕೋರ್ಸ್‌ ಮಾಡಿಕೊಂಡು ಒಳ್ಳೆಯ ಉದ್ಯೋಗ ಪಡೆದು ಬೆಂಗಳೂರಿಗೆ ಬಂದರು. ಬಾಲ್ಯದ ಗೆಳೆಯ ನವೀನ್‌ರವರೊಂದಿಗೆ ಪ್ರೇಮ ವಿವಾಹ ಆಯಿತು.

ಮಾಡೆಲಿಂಗ್‌ ರಶ್ಮಿಯ ಕನಸು. ಆದರೆ ಬೆಳ್ಳಗೆ, ಸಪೂರಾಗಿರುವ, ಶ್ವೇತ ವರ್ಣದ ಸುಂದರಿಯರು ಮಾತ್ರ ಮಾಡೆಲಿಂಗ್‌ ಮಾಡಲು ಸಾಧ್ಯ ಎನ್ನುವ ವನೋಭಾವವಿರುವ ಪರಿಸರ. ಆದರೂ ರಶ್ಮಿಯ ಕನಸು ಬೆಚ್ಚಗೆ ಮನದಲ್ಲಿ ಹುದುಗಿ ಕುಳಿತ್ತಿತ್ತು. ಇವರುದು 5.2 ಅಡಿ ಎತ್ತರ, ಬಣ್ಣ ಮಂಕು. ಹೀಗಾಗಿ ಅವರ ಕನಸು ಒಂದು ಪ್ರಶ್ನೆಯಾಗಿಯೇ ಉಳಿದಿತ್ತು. ಮದುವೆಯೂ ಆಯಿತು. ಆದರೆ ಕನಸು ಮಾತ್ರ ಆಗಾಗ ರಶ್ಮಿಯನ್ನು ಎಚ್ಚರಿಸುತ್ತಲೇ ಇತ್ತು.

ಒಮ್ಮಿಂದೊಮ್ಮೆಲೇ ಒಂದು ಸುಂದರ ದಿನ ರಶ್ಮಿಯ ಕಣ್ಣು ತೆರೆಯಿತು. ಹುಟ್ಟು ನಮ್ಮ ಕೈನಲ್ಲಿ ಇಲ್ಲ, ನಮ್ಮ ರೂಪ ನಮ್ಮ ನಿಯಂತ್ರಣದಲ್ಲಿ ಇಲ್ಲ. ಆದರೆ ಇರುವ ರೂಪವನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡುವುದು ನಮ್ಮ ಕೈನಲ್ಲೇ ಇದೆ. ಕೇಶ ವಿನ್ಯಾಸ, ಧರಿಸುವ ಬಟ್ಟೆ, ಜೊತೆಗೆ ಸರಿಯಾದ ಆಹಾರ ಸೇವನೆ ಮತ್ತು ವ್ಯಾಯಾಮದಿಂದ ಕಂಬಳಿ ಹುಳು ಸುಂದರ ಚಿಟ್ಟೆಯಾಗಿ ಮಾರ್ಪಡುವಂತೆ ನಮ್ಮ ರೂಪವನ್ನೂ ಸಹ ಬದಲಾಯಿಸಬಹುದೆಂಬ ಜ್ಞಾನೋದಯಾಯಿತು.

ತಮ್ಮನ್ನು ತಾವು ಪೂರ್ಣವಾಗಿ ಬದಲಾಯಿಸಿಕೊಂಡರು. ಕ್ಯಾಪ್‌ ಜೆಮಿನಿಯಂತಹ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ, ಅದರ ಜೊತೆ ಪ್ರವೃತ್ತಿ ಮಾಡೆಲಿಂಗ್‌ ಮತ್ತು ಗ್ರೂಮಿಂಗ್‌ ಆಯಿತು. 15 ವರ್ಷದಿಂದ ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಲರ್ನಿಂಗ್‌ ಬಿಸ್‌ನೆಸ್‌ ಪಾರ್ಟ್‌ನರ್‌ ಸಹ ಹೌದು.

``2018ರಲ್ಲಿ ನಾನು ಫ್ಯಾಷನ್‌ ಇಂಡಸ್ಟ್ರಿಗೆ ಪ್ರವೇಶಿಸಿದೆ. ಆಗ ನನ್ನನ್ನು ನಾನು ಮಿಕ್ಕವರ ಮುಂದೆ ನಿರೂಪಿಸುವ ಆಸೆ ಇತ್ತು. ಆದರೆ ನಂತರ ನಾನು ಮನಗಂಡಿದ್ದು, ಯಾರನ್ನೋ ನಾನು ಮೆಚ್ಚಿಸುವ ಅಗತ್ಯವೇನಿದೆ? ನಾನು ಯಶಸ್ಸಿನ ಬೆನ್ನು ಹತ್ತಬಾರದು. ಅದು ನನ್ನನ್ನು ಹುಡುಕಿ ಬರಬೇಕು ಎಂದು ನಿರ್ಧರಿಸಿದೆ. ಅಂತೆಯೇ ಯಶಸ್ಸನ್ನೂ ಪಡೆದೆ!

``2018ರಲ್ಲಿ  ಶ್ರೀಮತಿ ಕರ್ನಾಟಕ ಸ್ಪರ್ಧೆಯಲ್ಲಿ ಎರಡನೇ ರನ್ನರ್‌ ಅಪ್‌ ಆದೆ ಮತ್ತು ಫಿಟ್ನೆಸ್‌ ಕ್ವೀನ್‌ ಎನ್ನುವ ಬಿರುದನ್ನೂ ಪಡೆದೆ. ನಂತರ ಅದೇ ವರ್ಷದಲ್ಲಿ ಒಂದು ಸ್ಪರ್ಧೆಯಲ್ಲಿ ಮೊದಲನೇ ರನ್ನರ್‌ ಅಪ್‌ ಆದೆ. ಇದು ಹಾಗೆಯೇ ಮುಂದವರಿಯುತ್ತಾ ಸಿಂಗಾಪೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದೆ,'' ಎಂದು ಸಂತಸದಿಂದ ಉದ್ಗರಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ