ಫ್ಯಾಷನ್‌ ಕ್ಷೇತ್ರದಲ್ಲಿ ವೇಗನ್‌ ಎಂದರೆ ನೀವು ಸ್ಟೈಲ್‌ ಗ್ಲಾಮರ್‌ನ್ನು ಸಂಪೂರ್ಣ ತ್ಯಾಗ ಮಾಡಬೇಕು ಎಂದೇನಲ್ಲ. ಇತ್ತೀಚೆಗೆ ಬಹಳಷ್ಟು ಹೈ ಫ್ಯಾಷನ್‌ ಸಾಮಗ್ರಿ ರೀಸೈಕಲ್ ಪಾಲಿಯೆಸ್ಕರ್‌ನಿಂದ ತಯಾರಾಗುತ್ತಿದೆ. ಪ್ರಾಣಿಗಳನ್ನು ಕೊಂದು ಅವುಗಳ ಚರ್ಮದಿಂದ ಸ್ಯಾಂಡಲ್ಸ್, ಬೆಲ್ಟ್, ಪರ್ಸ್‌ ಇತ್ಯಾದಿ ಸಾವಿರಾರು ಉತ್ಪನ್ನಗಳನ್ನು ತಯಾರಿಸುವ ಕಾಲ ಹೋಗಿ, ಅದಿಲ್ಲದೆಯೇ ಇವೆಲ್ಲ ಆನ್‌/ಆಫ್‌ ಲೈನ್‌ ಅಂಗಡಿಗಳಲ್ಲಿ ಇದೀಗ ಸುಲಭ ಲಭ್ಯ. ಚಪ್ಪಲಿಗೆ ಬಳಸುವ ಗೋಂದು ಸಹ ಈಗ ಪ್ರಾಣಿ ಮೂಲದ್ದಲ್ಲ, ಅಥವಾ ಪ್ರಾಣಿಗಳ ಮೇಲೆ ಪ್ರಯೋಗಿಸಿದ್ದಲ್ಲ.

ವೇಗನ್ಬಜಾರ್

ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲಲು ನವದೆಹಲಿಯಲ್ಲಿ 3 ವಾರಗಳ ಆರ್ಗ್ಯಾನಿಕ್‌ ಮಾರ್ಕೆಟ್‌ ಮೂಡುತ್ತದೆ. ಅಲ್ಲಿ ಬಗೆಬಗೆಯ ಬೀಜ, ಗಿಡ, ಸಸ್ಯ, ತರಕಾರಿ, ಹೂ, ಹಣ್ಣು, ಎಣ್ಣೆ, ಚೀಸ್‌ (ಹಾಲಿನ ಮೂಲದ್ದಲ್ಲ), ವಿನಿಗರ್‌, ಟೀ, ಕಾಫಿಪುಡಿ, ಸೋಪ್‌ (ಪ್ರಾಣಿ ಮೂಲ ಸೋಂಕಿಲ್ಲದ), ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಸಹ ಅತ್ಯಧಿಕ ಮಾರಾಟವಾಗುತ್ತದೆ. ಅಲ್ಲೇ ಕುಳಿತು ತಿಂಡಿ, ಊಟ ಮಾಡಬಹುದಾದಂಥ ಸ್ಟಾಲ್‌ಗಳೂ ಇರುತ್ತವೆ. ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಂತೂ ಪ್ರತ್ಯೇಕವಾಗಿ ವೇಗನ್‌ಸಂತೆ ಹೆಚ್ಚುಕಡಿಮೆ ವರ್ಷವಿಡೀ ನಡೆಯುತ್ತದಂತೆ!

ಇತ್ತೀಚೆಗೆ ವೇಗನ್‌ ಬೇಕರಿಗಳಿಗೇನೂ ಕೊರತೆಯಿಲ್ಲ, ಗ್ರಾಹಕರಿಗೂ ಬರವಿಲ್ಲ. ಇಲ್ಲಿ ನಿಮಗೆ ಎಲ್ಲಾ ಬಗೆಯ ಆರ್ಗ್ಯಾನಿಕ್‌ಮಿಠಾಯಿಗಳು ಲಭ್ಯ. ಚಾಕಲೇಟ್‌, ಕ್ಯಾರೆಮಲ್, ಮಾರ್ಶ್‌ಮೆಲೋ, ಮಫಿನ್‌, ಡೋನಟ್‌..... ಇತ್ಯಾದಿ ನೀವು ಏನೇ ಹೆಸರಿಸಿ, ಅದು ಲಭ್ಯ. ಧಾರಾಳ ಒಂದು ಗಿಫ್ಟ್ ಬ್ಯಾಸ್ಕೆಟ್‌ನ್ನೇ ಕೊಳ್ಳಬಹುದು. ಆದರೆ ಈ ತರಹದ ವೇಗನ್‌ ಉದ್ಯಮ ಆರಂಭಿಸುವ ಮುನ್ನ ನಿಮ್ಮ ಸಪ್ಲೈರ್ಸ್‌ ಯಾರು ಎಂಬುದನ್ನು ಎಚ್ಚರಿಕೆಯಿಂದ ಆರಿಸಬೇಕು. ಪಾಮ್ ಆಯಿಲ್ ‌ಬದಲಿಗೆ ಕೊಬ್ಬರಿ ಎಣ್ಣೆ ಬಳಸಿ, ಸಿಹಿಗಾಗಿ ಕಬ್ಬಿನ ರಸ ಅಥವಾ ತೆಂಗಿನಹಾಲು ಬಳಸಿರಿ. ತೆಂಗಿನ ಸಕ್ಕರೆಯೂ ಲಭ್ಯ. ಇವೆಲ್ಲ ಜೆನೆಟಿಕ್‌ ಮಾಡಿ ಫೈಡ್‌ ಅಲ್ಲದೆಯೂ ದೊರಕುತ್ತವೆ, ಅದು ಪರಿಸರದ ಮೇಲೆ ಯಾವುದೇ ಹಾನಿ ಮಾಡದು.

menka-gandhi

ಜನರ ಆಯ್ಕೆ

ಈ ಉದ್ಯಮ ನಡೆಸಲು ಒಂದು ಬೊಟಿಕ್‌ ಟೈಪ್‌ನ ಶಾಪ್‌ ತೆರೆಯಬಹುದು. ಇದರಲ್ಲಿ ಕೇವಲ ಎಣ್ಣೆ, ತುಪ್ಪ, ಬೆಣ್ಣೆ ಮಾರುವಂತಿರಬೇಕು. ಇದರ ಜೊತೆ ಆಲಿವ್ ‌ಎಣ್ಣೆ, ಚಿಯಾ ಸೀಡ್ಸ್, ಗೋಡಂಬಿ, ಬಾದಾಮಿ, ಹಾಲು, ಮೇಪಲ್ ಸಿರಪ್‌, ಸೂರ್ಯಕಾಂತಿ ಎಣ್ಣೆ, ಸಾಂಪ್ರದಾಯಿಕ ಉಡುಗೆಗಳನ್ನೂ ಮಾರಾಟ ಮಾಡಬಹುದು.

ಜನ ಈಗ ಎಂಥ ಆಹಾರ ಬಯಸುತ್ತಿದ್ದಾರೆಂದರೆ, ಆ ಆಹಾರ ನೋಡಲು ಮೀಟ್‌ ತರಹ ಇರಬೇಕು, ಆದರೆ ಸವಿದಾಗ ಮಾತ್ರ ವೇಗನ್‌ ಆಗಿರಬೇಕು. ನೀವು ಕೆಫೆ ಶುರು ಮಾಡುವ ಹಾಗಿದ್ದರೆ, ಪ್ಲಾಸ್ಟಿಕ್‌ ಮಾತ್ರ ಬಳಸಲೇಬೇಡಿ. ಕೋರಾ ಬಟ್ಟೆ ತರಹದ ದಪ್ಪ ನ್ಯಾಪ್‌ಕಿನ್ಸ್ ಸಹ ಈಗ ಜನಪ್ರಿಯ, ಅದನ್ನೂ ಮಾರಬಹುದು. ಇವು ಸಾಫ್ಟ್, ಸ್ಟೈಲಿಶ್‌ ಆಗಿದ್ದು ಹಾನಿಕಾರಕ ಕೆಮಿಕಲ್ಸ್ ನಿಂದ ಮುಕ್ತವಾಗಿರುತ್ತದೆ.

ರೀಸೈಕಲ್

ಪೇಪರ್‌ ಬಳಸಿದ ಬುಕ್ಸ್, ಪಠ್ಯಪುಸ್ತಕಗಳಿಗೂ ಈಗ ಬೇಡಿಕೆ ಹೆಚ್ಚು. ಇತ್ತೀಚೆಗಂತೂ ವಾಹನಗಳಿಗೆ ಕೆಟ್ಟು ಹೋದ ಸಸ್ಯಮೂಲದ ಎಣ್ಣೆಯನ್ನು ಬಳಸುವ ಟೆಕ್ನಿಕ್ಸ್ ಸಹ ಬಂದಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ