ಇದೀಗ ಹಿಂಜರಿಯುವ ಸಂದರ್ಭವಲ್ಲ : ಈಗ ಯೂರೋಪ್‌ ಕಾಂಟಿನೆಂಟ್‌ ಫ್ಯಾಷನ್‌ ಶೋ ಯಾವಾಗ ನಡೆಯುತ್ತದೋ ಏನೋ..... ಮತ್ತೆ ಹೈ ಫ್ಯಾಷನ್‌ ಯಾವಾಗ ಮರಳಲಿದೆಯೋ ಹೇಳಲಾಗದು. ಅದಕ್ಕೆ ಈಗಲೂ ಫ್ಯಾಷನ್‌ ಡಿಸೈನರ್ಸ್‌ ಜನರಿಗೆ ಪರ್ಫೆಕ್ಟ್ ಫ್ಯಾಷನ್‌ ತೋರಿಸಿಕೊಳ್ಳಲು ಟ್ರೇನಿಂಗ್‌ ನೀಡುತ್ತಿದ್ದಾರೆ. ಬ್ರಾಂಡ್‌ ಹೆಸರನ್ನು ನೋಡಿ ಡ್ರೆಸ್‌ ಎಷ್ಟು ಬಾಳಿಕೆ ಬಂದೀತು ನೋಡಿ, ಹಳೆಯ ಫ್ಯಾಷನೆಬಲ್ ಡ್ರೆಸೆಸ್‌ ಜೊತೆ ಬೆರೆಸಬಹುದೋ ಇಲ್ಲವೋ..... ಎಲ್ಲಾ ಪರೀಕ್ಷಿಸಿ ಎನ್ನುತ್ತಾರೆ. ಹೊಸ ಹೊಸ ಫ್ಯಾಷನ್‌ಗಳು ಹೀಗೆ ಡಿಸೈನ್‌ಗೊಳ್ಳುತ್ತಿವೆ, ಕೇವಲ ಕೆಲವೇ ದಿನಗಳಲ್ಲಿ ಚಾಲ್ತಿಗೆ ಬರಲಿವೆ. ಇದೀಗ ಖಂಡಿತಾ ಹೆದರುವ, ಹಿಮ್ಮೆಟ್ಟುವ ಸಂದರ್ಭವಲ್ಲ.... ಕೊರೋನಾ ಕೆಲವು ತಿಂಗಳಿಗೆ ಮುಗಿಯು ಮಾತಲ್ಲ! ಮುಂದೊಂದು ದಿನ ಕೊರೋನಾಮುಕ್ತ ವಾತಾವರಣ ಬರದೇ ಹೋಗದು, ಆಗ ಈ ಫ್ಯಾಷನ್‌ಗಳೆಲ್ಲ ಮತ್ತೆ ಮೆರವಣಿಗೆಗೆ ಬರಲಿವೆ.

pattaya

ಮಾಡುವುದಾದರೂ ಏನೀಗ? : ಥೈಲೆಂಡ್‌ನ ಪ್ರಸಿದ್ಧ ನಗರ ಪಟ್ಟಾಯಾ ಇದೀಗ ಅಂತಾರಾಷ್ಟ್ರೀಯ ಪ್ರವಾಸಿಗರಿಂದ ರಾಶಿ ರಾಶಿ ಡಾಲರ್‌, ಪೌಂಡ್‌, ಯೂರೋ ಕಕ್ಕಿಸುವುದು ಹೇಗೆಂದು ತಲೆ ಮೇಲೆ ಕೈಹೊತ್ತಿದೆ. ಈಗಿನ ಕೊರೋನಾ ಮಹಾಮಾರಿಯ ಕಾರಣದಿಂದಾಗಿ ಖಂಡಿತಾ ಪ್ರವಾಸ ದೂರದ ಕನಸು, ಮುಂದಿನ 6 ತಿಂಗಳಲ್ಲಿ ವಿಶ್ವದ ಯಾವ ನಗರ ತಂತಾನೇ ಮುಚ್ಚಿ ಹೋಗಲಿದೆಯೋ ಹೇಳಲಾಗದು. ಪ್ರವಾಸಕ್ಕೆಂದು 2 ದಿನಗಳಿಗಾಗಿ ಬಂದರು 2 ತಿಂಗಳು ಒಂದೇ ಕಡೆ ಬಂಧಿಗಳಾದರೆ ಮುಂದೆ ಮಾಡುವುದೇನು? ಈ ಕುರಿತಾಗಿ ಅಂತಾರಾಷ್ಟ್ರೀಯ ಮೀಟಿಂಗ್‌ ನಡೆಸಿ ಸ್ಟಾರ್‌ ಹೋಟೆಲ್‌ಗಳ ಮಾಲೀಕರು, ಪ್ರವಾಸಕ್ಕಾಗಿ ನಗರ ತೆರೆದುಕೊಂಡರೆ, ಸುರಕ್ಷತಾ ಕ್ರಮಗಳೇನಿರಬಹುದು ಎಂದು ಚಿಂತಿಸಿದರು. ಇದರಲ್ಲಿ ಮಹಿಳಾ ಮಾಲೀಕರನ್ನು ನೋಡಿ, ಪ್ರವಾಸಿಗರನ್ನು ಸೆಳೆಯಲು ಇವರುಗಳು ದೇಹದಂಧೆ ನಡೆಸಿ ಹೋಟೆಲ್ ವ್ಯಾಪಾರ ಮುನ್ನಡೆಸುವಂತಾಗಿದೆ.

ಮಕ್ಕಳು ಎಂದಿದ್ದರೂ ಮಕ್ಕಳೇ! : ಇಂದಿನ ಕೊರೋನಾ ಯುಗದಲ್ಲೂ ಮಕ್ಕಳನ್ನು ಶಾಲೆಗೆ ರೆಡಿ ಮಾಡಿಸುವುದಿದೆಯಲ್ಲ.... ಅದೂ ನಿಜಕ್ಕೂ ದೊಡ್ಡ ಸವಾಲು! ಮಕ್ಕಳಂತೂ ಮಕ್ಕಳೇ! ಕೊರೋನಾ ನಿಯಮವನ್ನು ಅವರು ಎಲ್ಲಿಂದ ಫಾಲೋ ಮಾಡಿಯಾರು? ಅಮ್ಮಂದಿರು ಮಕ್ಕಳಿಗೆ ಎಷ್ಟೇ ಪಾಠ, ಬುದ್ಧಿಮಾತು ಹೇಳಿರಲಿ, ಶಾಲೆ ತಲುಪಿದ ತಕ್ಷಣ ಇವರುಗಳ ಮಾಸ್ಕ್ ಎಲ್ಲೋ..... ವಾಟರ್ ಬಾಟಲ್ ಎಲ್ಲೋ! ಪರಸ್ಪರ ತಲೆ ಡಿಕ್ಕಿ ಕೊಟ್ಟುಕೊಂಡು ಮಾತುಕಥೆಯಲ್ಲಿ ಮೈ ಮರೆಯುತ್ತಾರೆ. ಆಟ, ಓಟ, ಜಗಳ ಎಲ್ಲಾ ಮಾಮೂಲಿಯಾಗುತ್ತದೆ. ಹೀಗಾಗಿಯೇ ವಿಶ್ವದೆಲ್ಲೆಡೆ ಶಾಲೆ ತೆರೆಯುವುದೇ ಬೇಡ ಎನ್ನುತ್ತಿದ್ದಾರೆ. ಯಾವ ಮನೆಗಳಲ್ಲಿ ಮೊಮ್ಮಕ್ಕಳನ್ನು ನಿಯಂತ್ರಿಸಲು ಅಜ್ಜಿಯರಿಲ್ಲವೋ ಅವರ ಗತಿ ಏನಪ್ಪ ಎಂದು ಉದ್ಯೋಗಸ್ಥ ವನಿತೆಯರು ಚಿಂತಿಸುತ್ತಿದ್ದಾರೆ.

ಬನ್ನಿ ಆನ್ಲೈನ್ಸುತ್ತಾಟಕ್ಕೆ : ಆಸ್ಟ್ರೇಲಿಯಾದ ಪೆರ್ಥ್‌ ನಗರದಲ್ಲಿ ಇಂದಿಗೂ ಅಲ್ಲಿನ ಮೇಯರ್‌ ನಾಗರಿಕರೆಲ್ಲರೂ ಪರಸ್ಪರ ಒಗ್ಗಟ್ಟಾಗಿರಬೇಕೆಂದು ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ನೀವು ನಗರದಲ್ಲಿ ಸಂಚರಿಸದಿದ್ದರೆ ಏನಂತೆ, ಆನ್‌ಲೈನ್‌ ಸುತ್ತಾಡಿ ಅಂತಿದ್ದಾರೆ. ಲೈವ್ ‌ವಿಝಿಟ್‌, ಬ್ರಾಡ್‌ ಕಾಸ್ಟ್, 3 ಡೈಮೆನ್ಶನ್‌ ಶೋ, ಇಂಟರ್ವ್ಯೂ.... ಎಲ್ಲವೂ ನಿಮಗೆ ಮನೆಯಲ್ಲಿ ಕುಳಿತೆಡೆಯಲ್ಲೇ ಲಭ್ಯ, ಇಡೀ ನಗರದ ಮಜಾ ಪಡೆಯಬಹುದು. ನಮ್ಮಲ್ಲಿ ಪೊಲೀಸರ ಕಾಟದಂತೆ ಅಲ್ಲಿಲ್ಲ. ನಮ್ಮಲ್ಲಿ ಎಷ್ಟು ಲಾಠಿ ಚಾರ್ಜ್‌ ನಡೆದರೂ ಜನ ಹೆಂಡದಂಗಡಿ ಮುಂದೆ ಕ್ಯೂ ನಿಲ್ಲಿಸೋಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ