ಇತ್ತೀಚೆಗೆ ಕೇರಳದಲ್ಲಿ ನಡೆದ 2 ಆನೆಗಳ ದಾರುಣ ಹತ್ಯೆ ಇಡೀ ಮಾಧ್ಯಮಗಳಲ್ಲಿ ದೊಡ್ಡ ಅಲ್ಲೋಕಲ್ಲೋಲ ಉಂಟು ಮಾಡಿತು. ಎರಡೂ ಘಟನೆಗಳಲ್ಲಿ ಹೆಣ್ಣಾನೆ ಮಾನವರ ಕಿಡಿಗೇಡಿತನದಿಂದಾಗಿ ಭಯಂಕರ ವಿಷಭರಿತ ರಾಸಾಯನಿಕಗಳು ತುಂಬಿದ್ದ ಆಹಾರ ಸೇವಿಸಿ ಅನ್ಯಾಯವಾಗಿ ಕೊರಗಿ ಕೊರಗಿ ಪ್ರಾಣಬಿಟ್ಟ. ಪಾಲಕ್ಕಾಡ್‌ನಲ್ಲಿ ನಡೆದ ಮೊದಲ ಘಟನೆ ಅಲ್ಲಿನ ಸ್ಥಳೀಯ ರಾಜಕೀಯ ಧುರೀಣರ ಸಿಟ್ಟು ಕೆರಳಿಸಿ ವಿಷಯ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿಯವರನ್ನೂ ತಲುಪಿ ಸಂಚಲನ ಉಂಟುಮಾಡಿತು. ಕ್ರಮೇಣ ಈ ಆನೆಗಳ ಸಾವು ವೈರಲ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿಪ್ರಿಯರು ಕೆಂಡ ಕಾರಿದರು. ಅದರಲ್ಲೂ ಒಂದು ಹೆಣ್ಣಾನೆ ಗರ್ಭ ಧರಿಸಿತ್ತು. ಮಾನವರ ಅಟ್ಟಹಾಸದಿಂದಾಗಿ ಮರಿ ಸಮೇತ ತುಂಬು ಗರ್ಭಿಣಿ ಆನೆ ಅಸುನೀಗಿತು. ಈ ದಾರುಣ ಘಟನೆ ನಡೆದಿದ್ದು ಹೀಗೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ, ಹಲವು ವಾರಗಳ ಹಿಂದೆ, ಕೆಲವು ಕಿಡಿಗೇಡಿಗಳು ಬೇಕೆಂದೇ ಅನಾನಸ್‌ ಹಣ್ಣು ಕೊರೆದು ಅದರಲ್ಲಿ ಭಯಂಕರವಾಗಿ ಸಿಡಿಯುವ ವಿಷಭರಿತ ರಾಸಾಯನಿಕಗಳ ಪಟಾಕಿ ಇರಿಸಿ, ಆಹಾರ ಅರಸುತ್ತಾ ಬಂದ ಮೂಕ ಬಸುರಿ ಹೆಣ್ಣಾನೆಗೆ ತಿನ್ನಿಸಿ ಮಜಾ ನೋಡುತ್ತಾ ನಿಂತರು. ಅದಾದ ಸ್ವಲ್ಪ ಹೊತ್ತಿಗೆ ಆನೆ ವಿಷಪ್ರಾಶನದಿಂದ ಅಸುನೀಗಿತ್ತು. ಹಳ್ಳಿಗೆ ಆಹಾರ ಅರಸುತ್ತಾ ಬಂದ ಆನೆ,  ಅನಾನಸ್‌ ಕಂಡು ಆಸೆಪಟ್ಟಿದ್ದೇ ಮುಳುವಾಯ್ತು. ಅದು ಬೇಕೆಂದೇ ಹಾಗೆ ಮಾಡಿದ್ದಲ್ಲ, ಕಾಡು ಹಂದಿಗಳ ಕಾಟ ತಪ್ಪಿಸಲೆಂದು ಇರಿಸಿದ್ದು ಎಂದು ಕಿಡಿಗೇಡಿಗಳು ಸಮರ್ಥಿಸಿಕೊಂಡರು, ಆದರೆ ಅದರ ದುಷ್ಪರಿಣಾಮ ಅನುಭವಿಸಿದ್ದು ಮಾತ್ರ ಮೂಕ ಹೆಣ್ಣಾನೆ.

ಈ ದಾರುಣ ಘಟನೆ ನಡೆದು, ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಸತ್ತ ಆನೆಯನ್ನು ಗುರುತಿಸಿದ್ದು ಮೇ 24ರಂದು.  ಅವರೇನೋ ಅದನ್ನು ಕಾಡಿಗೆ ಬಿಟ್ಟು ಬರುವ ಪ್ರಯತ್ನ ನಡೆಸಿದರು, ಆದರೆ ಹೆಣ್ಣಾನೆ ಮತ್ತೆ ಅಲ್ಲಿಗೇ ಮರಳಿತು. ಮರಳಿದ ಆನೆಗೆ ಒಂದಿಷ್ಟು ಬಾಳೆಹಣ್ಣು ತಿನ್ನಿಸುವ ಪ್ರಯತ್ನ ನಡೆಸಿದರು. ಆದರೆ ಅವಳ ಗಂಟಲಲ್ಲಿ ಪ್ರಾಣಾಂತಿಕ ಗಾಯಗಳಾಗಿ, ಅದನ್ನು ನುಂಗಲಿಕ್ಕೂ ಅವಳಿಂದಾಗಲಿಲ್ಲ..... ಮಾರನೇ ದಿನ ಪಶು ವೈದ್ಯರು ಬಂದು ಅದನ್ನು ಪರೀಕ್ಷಿಸಿ, ಚಿಕಿತ್ಸೆ ಆರಂಭಿಸುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು.

ಅತ್ಯಧಿಕ ನೋವು, ಸಂಕಟಗಳನ್ನು ತಡೆಯಲಾರದೆ ಮರ್ಮಘಾತಕವಾಗಿ ಘೀಳಿಡುತ್ತಾ, ಕಣ್ಣೀರು ಸುರಿಸುತ್ತಾ, ತನ್ನ ದೇಹದ ಉರಿ ಶಮನ ಮಾಡಿಕೊಳ್ಳಲು ಆ ಹೆಣ್ಣಾನೆ ಹತ್ತಿರದ ವೆಳ್ಳಿಯಾರ್‌ ನದಿಗೆ ಇಳಿದು ಬಹಳ ಹೊತ್ತು  ಹೊರಳಾಡಿ, ಹಲವು ಘಂಟೆ ಕಾಲ ನರಳಿ ಸಾವನ್ನಪ್ಪಿತು. ಅಲ್ಲಿನ ಸ್ಥಳೀಯರು, ಅರಣ್ಯ ಅಧಿಕಾರಿಗಳು, ಪಳಗಿದ ಆನೆಗಳನ್ನು ಬಳಸಿ ಇವಳನ್ನು ಹೊರಕ್ಕೆಳೆಯಲು ನಡೆಸಿದ ಉಪಾಯವೆಲ್ಲ ವ್ಯರ್ಥವಾಯಿತು. ಅದಾದ ಮೇಲೆ ಪಶು ವೈದ್ಯರು ನಡೆಸಿದ ಪೋಸ್ಟ್ ಮಾರ್ಟಂನಿಂದಾಗಿ ಈ ಆನೆ 2 ವಾರಗಳಿಂದ ತೀವ್ರ ಹಸಿವು, ಗಂಟಲು ಜೀರ್ಣಾಂಗ ವ್ಯೂಹದಲ್ಲಿ ಅಪಾರ ಹುಣ್ಣುಗಳ ಉರಿನೋವಿನಿಂದ, ನರಳಿ ನರಳಿ ಪ್ರಾಣ ಬಿಟ್ಟಿತೆಂದು ಖಾತ್ರಿಯಾಯಿತು. ಅವಳ ಮೇಲ್ಭಾಗ ಕೆಳಭಾಗದ ದವಡೆಗಳೆರಡೂ ತೀವ್ರ ಹಾನಿಗೊಳಗಾಗಿದ್ದವು. ಆನೆಯ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದೇ ಅವಳ ಪತನಕ್ಕೆ ಹಠಾತ್‌ ಕಾರಣ. ಇದನ್ನು ತಮ್ಮ ಅಟಾಪ್ಸಿಯಿಂದ ಖಾತ್ರಿಪಡಿಸಿದ ಸರ್ಜನ್ ಡೇವಿಡ್‌ ಅಬ್ರಹಾಂ, ಅನಾನಸ್‌ನಲ್ಲಿ ಸಿಡಿಮದ್ದಿನ ಪಟಾಕಿ ಸೇವನೆ ಆನೆಯ ಸಾವಿಗೆ ಮೂಲ ಕಾರಣವಾದರೆ, ಅವಳು ಉರಿ ತಡೆಯಲಾರದೆ ನೀರಿಗಿಳಿದು ಗಂಟೆಗಟ್ಟಲೆ ಹೊರಳಾಡಿದ್ದು, ಶ್ವಾಸಕೋಶಕ್ಕೆ ನೀರು ನುಗ್ಗಲು ದಾರಿಯಾಯ್ತು. ಗಂಟಲಿನ ಹುಣ್ಣು ತೀವ್ರ ಉಲ್ಬಣಗೊಂಡಿದ್ದರಿಂದ, ಅದು ಸತತ 2 ವಾರ ಏನನ್ನೂ ಸೇವಿಸಲು ಆಗಿರಲೇ ಇಲ್ಲ. ಮೂಕಪ್ರಾಣಿ ಬೇರೆ ದಾರಿ ಇಲ್ಲದೆ ತನ್ನ ಉರಿ ಶಮನ ಮಾಡಿಕೊಳ್ಳಲು ನೀರಿಗಿಳಿದು, ಮಾನವರ ಕುಕೃತ್ಯದಿಂದ ಮಾಡದ ತಪ್ಪಿಗೆ ಸಾವಿಗೆ ಶರಣಾಯ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ