ಉಳಿತಾಯದ ಅಡಿಪಾಯದ ಮೇಲೆ ನಿಂತ ಮನೆ

ಈಗ ಮಹಿಳೆಯರಿಗೆ ಲಾಕ್‌ ಡೌನ್‌ ಸಮಯದಲ್ಲಿ ಮನೆ ಖರ್ಚು ನಿಭಾಯಿಸುವುದರ ಜೊತೆ ಜೊತೆಗೆ ಮತ್ತೊಂದು ಸವಾಲನ್ನು ಎದುರಿಸಬೇಕಾಗಿ ಬರುತ್ತದೆ. ದೇಶದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ವ್ಯಾಪಾರ ಹಾಗೂ ಉದ್ಯಮಗಳು ಬಂದ್‌ ಆಗಿರುವುದರಿಂದ, ಮನೆಗಳಲ್ಲಿ ನಿರುದ್ಯೋಗ ಭಾರಿ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ಮನೆಯಲ್ಲಿ ದುಡಿಯುವ ವ್ಯಕ್ತಿ ಗಂಡನೇ ಆಗಿದ್ದರೆ, ಹೆಂಡತಿಯಾದವಳು ಹೇಗಾದರೂ ಮಾಡಿ ಕುಟುಂಬ ನಡೆಸಲೇಬೇಕಾಗುತ್ತದೆ.

ಕೋವಿಡ್‌ ಜೀವನಶೈಲಿ ಮೇಲೆ ಗಾಢ ಪರಿಣಾಮ ಬೀರಿದೆ. ಅದಕ್ಕೂ ಹೆಚ್ಚಾಗಿ ಅದು ಕೆಲಸ ಕಾರ್ಯಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಜನರು ಮೊದಲು ದುಂದುವೆಚ್ಚಕ್ಕೆ ಕಟ್ಟುಬಿದ್ದಿದ್ದರು. ಈಗ ಅದರ ಅರ್ಧದಷ್ಟು ಅಲ್ಲ, ಕೇವಲ ಕಾಲು ಭಾಗ ಮಾತ್ರ ಖರ್ಚು ಮಾಡಬಹುದು. ಗಂಡನ ನೌಕರಿ ಏನಾದರೂ ಹೋಗಿದ್ದರೆ, ಹೊಸ ನೌಕರಿ ದೊರೆಯುತನಕ ಆಕೆ ಧೈರ್ಯ ಕಾಪಾಡಿಕೊಂಡು ಮನೆ ನಡೆಸಬೇಕು.

ಸರ್ಕಾರವನ್ನು, ದೇರವನ್ನು, ನಮ್ಮ ಹಣೆಬರಹವನ್ನು ಹಳಿಯುವುದರಿಂದ ಏನೂ ಆಗದು. ಪೂಜೆ ಪುನಸ್ಕಾರಗಳಿಂದಲೂ ಏನೂ ಆಗುವುದಿಲ್ಲ. ಸಂಕಟ ಬಂದಾಗ ವೆಂಕಟರಮಣ ಎಂದು ನಾವೆಲ್ಲ ಹೇಳಿಕೊಂಡು ಬಂದಿದ್ದೇವೆ. ಇದರಿಂದ ಧರ್ಮದ ವ್ಯಾಪಾರಿಗಳಿಗೆ ಮಾತ್ರ ಲಾಭವಾಗುತ್ತದೆ. ಅವರು ದುರ್ಬಲರನ್ನು ಸುಲಿಗೆ ಮಾಡುತ್ತಾರೆ. ಜನರು ಸಂಕಟಕ್ಕೆ ಸಿಲುಕಬೇಕು, ಆಗ ಜನ ನಮ್ಮ ಬಳಿ ಬರುತ್ತಾರೆ, ಆಗ ನಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂದವರು ಭಾವಿಸುತ್ತಾರೆ.

ನೂರಾರು ಸಿನಿಮಾಗಳು, ಕಥೆಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಇದೇ ಪಾಠವನ್ನು ಮೇಲಿಂದ ಮೇಲೆ ಒತ್ತಿ ಒತ್ತಿ ಹೇಳಲಾಗುತ್ತದೆ. ಅದು ಜನರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ. ಸಂಕಷ್ಟದಿಂದ ಹೊರ ಬರಲು ಪೂಜೆ ಪುನಸ್ಕಾರ, ದಾನದಕ್ಷಿಣೆಯಲ್ಲಿ ತೊಡಗುವಂತೆ  ಮಾಡುತ್ತದೆ. ಮನೆಯಲ್ಲಿ ಅಳಿದುಳಿದ ಉಳಿತಾಯವನ್ನು ಪುರೋಹಿತರು ಮೌಲ್ವಿಗಳಿಗೆ, ಪಾದ್ರಿಗಳಿಗೆ ಕೊಡುವಂತೆ ಮಾಡುತ್ತದೆ.

ಕೊರೋನಾದ ಇಂದಿನ ದಿನಗಳಲ್ಲಿ ನಿರುದ್ಯೋಗವನ್ನು ಸಮರ್ಥವಾಗಿ ಎದುರಿಸಲು ಖರ್ಚನ್ನು ಅತ್ಯಂತ ಕಡಿಮೆ ಮಾಡಬೇಕು. ಅಡುಗೆ ಖರ್ಚುಗಳನ್ನು ಹೊರತುಪಡಿಸಿ ಬೇರಾವುದೇ ಖರ್ಚು ಆಗದಂತೆ ನೋಡಿಕೊಳ್ಳಬೇಕು. ಅದ್ಧೂರಿ ಊಟ, ಕುಡಿತ, ಪೂಜೆ ಪುನಸ್ಕಾರದ ಖರ್ಚನ್ನು ನಿಲ್ಲಿಸಿಬಿಡಬೇಕು. ಮಕ್ಕಳ ಫೀಸ್‌ ಅಂತೂ ಕಟ್ಟಲೇಬೇಕು. ಖಾಸಗಿ ಶಾಲೆಗಳು ದುಬಾರಿ ಎನಿಸಿದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬಹುದು.

ಈಗ ವಾಸಿಸುವ ಮನೆ ದುಬಾರಿ ಎನಿಸಿದರೆ ಅದನ್ನು ಬದಲಿಸಿ ಚಿಕ್ಕ ಮನೆಗೆ ಹೋಗಬಹುದು. ಅವರಿವರಿಗೆ ಆಹ್ವಾನ ಕೊಡುವುದನ್ನು ನಿಲ್ಲಿಸಬೇಕು. ಯಾವುದೇ ಹೊಸ ಸಾಮಗ್ರಿ ಖರೀದಿಸಬಾರದು.

ಹಣದ ಕೊರತೆ ಮನಸ್ಸಿಗೆ ಬಾಧಿಸಬಾರದು. ಅದಕ್ಕಾಗಿ ನೀವೇ ಸುಣ್ಣಬಣ್ಣ  ಮಾಡಿಕೊಳ್ಳಿ. ಹಳೆಯ ಸಾಮಾನುಗಳನ್ನೊಳಗೊಂಡ ಮನೆ ಸ್ವಚ್ಛವಾಗಿದ್ದರೆ ಚೆಂದ ಕಾಣುತ್ತದೆ. ವಿದ್ಯುತ್‌ ಬಿಲ್ ‌ಉಳಿಸಲು ಕಿಟಕಿಗಳನ್ನು ತೆರೆದಿಡಿ. ಹೊರಗಿನವರಿಗೆ ಮನೆ ಗಲೀಜು ಹಾಗೂ ದುರ್ವಾಸನೆಯುಳ್ಳದ್ದಾಗಿ ಕಾಣಿಸಬಾರದು. ಇದು ವ್ಯಾಪಾರಿಗಳ ಮನೆಯೋ ವೇತನ ಕಡಿತದಾರರ ಮನೆಯೋ ಎಂಬಂತೆ ಗೋಚರವಾಗಬಹುದು.

ಉಳಿತಾಯದಿಂದ ಕನಿಷ್ಠ ಮೊತ್ತ ಮಾತ್ರ ತೆಗೆಯಿರಿ. ಇದು ಭವಿಷ್ಯದ ಬಗ್ಗೆ ಆಶಾಕಿರಣದ ಭಾವನೆಯನ್ನುಂಟು ಮಾಡುತ್ತದೆ. ಉಳಿತಾಯ ಎನ್ನುವುದು ಮನೆಯ ಅಡಿಪಾಯ. ಅದನ್ನು ಅತ್ಯಂತ ಕೊನೆಯಲ್ಲಿ ವಿನಿಯೋಗ ಮಾಡಬೇಕು. ನೌಕರಿ ಕೈ ಬಿಟ್ಟುಹೋದ ಮೇಲೆ ಅಥವಾ ವೇತನ ಕಡಿತದ ಬಗ್ಗೆ ಮನೆಯಲ್ಲಿ ಹೌಹಾರುವುದು ಸಹಜ. `ಮೊದಲು ಹೇಗಿದ್ದೆ' ಇದು ಸಹಜವಾಗಿ ಕೇಳಿಬರುವ ಮಾತು. ನಮ್ಮ ಅದೃಷ್ಟ ಸರಿ ಇರಲಿಲ್ಲ. ಹಾಗಾಗಿ ಹೀಗಾಯ್ತು ಎನ್ನುವ ಮಾತುಗಳು ಕೇಳಿಸುವಂತಾಗಬಾರದು. ಇಬ್ಬರೂ ಸೇರಿ ಸಾಲವನ್ನು ಎದುರಿಸುವ ಧೈರ್ಯ ಬಂದರೆ ಸಮತೋಲನ ಕಾಯ್ದುಕೊಂಡು ಹೋಗಬಹುದು. ಅರ್ಥವ್ಯವಸ್ಥೆ ಹದಗೆಟ್ಟಿರುವುದರಲ್ಲಿ ಸರ್ಕಾರದ ಪಾಲು ಕೂಡ ಇದೆ. ಏಕೆಂದರೆ ಕಳೆದ 4 ವರ್ಷಗಳಲ್ಲಿ ಸರ್ಕಾರ (ಅರ್ಥವ್ಯವಸ್ಥೆಯ ಮೇಲೆ) ಬಹಳಷ್ಟು ಹೊಸ ಅಡೆತಡೆಗಳನ್ನು ಉಂಟು ಮಾಡಿತು. ಸರ್ಕಾರದ ಮುಖ್ಯ ಕೆಲಸ ಹಿಂದೂ ಮುಸ್ಲಿಂ, ಮೇಲು ಕೀಳು ಜಾತಿಗಳನ್ನು ಎಣಿಕೆ ಮಾಡುವುದರಲ್ಲಿ ಕಳೆದುಹೋಯಿತು. ಸರ್ಕಾರ ದೇಗುಲಗಳನ್ನು ನಿರ್ಮಿಸುವುದರಲ್ಲಿ ತೊಡಗಿತ್ತು. ಪುಸ್ತಕಗಳನ್ನು ಬದಲಿಸುವುದರಲ್ಲಿ ಮಗ್ನವಾಗಿತ್ತು. ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ನಿರತವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ