ವಿದ್ಯುಚಕ್ತಿ ಇಲ್ಲದೆ ಇರುವ ಗ್ಯಾಸ್‌ ಲೈಟ್‌ ಇದ್ದ ಕಾಲದ ಕಥೆಯಿದು. ಆಗ ಒಬ್ಬ ವ್ಯಕ್ತಿ ದಿನ ಸಂಜೆ ಗ್ಯಾಸ್‌ ಲೈಟ್‌ನ್ನು  ಮಂದಗೊಳಿಸುತ್ತಿದ್ದ. ಅದರಿಂದ ಅವನ ಪತ್ನಿಗೆ ನೋಡಲು ಕಷ್ಟ ಆಗುತ್ತಿತ್ತು. ಅದರಿಂದಾಗಿ ನನ್ನ ಮನಸ್ಸು ಕೆಟ್ಟು ಹೋಗುತ್ತಿದೆ. ನಾನು ಗೊಂದಲಕ್ಕೊಳಗಾಗುತ್ತಿದ್ದೇನೆ. ನನಗೆ ಮಾನಸಿಕ ಒತ್ತಡ ಕೂಡ ಉಂಟಾಗುತ್ತಿದೆ ಎಂದು ಆಕೆ ಒತ್ತಿ ಒತ್ತಿ ಹೇಳುತ್ತಿದ್ದಳು. ಆದರೆ ಅವಳ ಗಂಡ ಅವಳನ್ನೇ ತಮಾಷೆ ಮಾಡುತ್ತ ದೋಷ ಇರುವುದು ನಿನ್ನಲ್ಲಿಯೇ ಹೊರತು ಹೊರಗೆ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದ. ಇದರಿಂದಾಗಿ ಅವಳು ಮಾನಸಿಕ ಸಮತೋಲನ ಕಳೆದುಕೊಳ್ಳತೊಡಗಿದಳು. ಆದರೂ ಅವಳ ಪತಿ ಅವಳ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಲಿಲ್ಲ.

ಅಂದಹಾಗೆ `ಗ್ಯಾಸ್‌ ಲೈಟಿಂಗ್‌' ಶಬ್ದ ಪ್ಯಾಟ್ರಿಕ್‌ ಹ್ಯಾಮಿಲ್ಟನ್‌ ಅವರ ಗ್ಯಾಸ್‌ ಲೈಟ್‌ ನಾಟಕದಿಂದ ತೆಗೆದುಕೊಳ್ಳಲಾಗಿದೆ. ಅದೇ ವಿಷಯದ ಮೇಲೆ ಚಲನಚಿತ್ರ ಕೂಡ ತಯಾರಾಗಿತ್ತು.

ನೀವು ಇದಕ್ಕೆ ತುತ್ತಾಗಿಲ್ಲ ತಾನೇ?

ಸೀಮಾಳಿಗೆ ತನ್ನ ಗಂಡ ರಮೇಶ್‌ಗೆ ಯಾವುದೊ ಮಹಿಳೆಯ ಜೊತೆ ಸಂಬಂಧ ಇದೆ ಎನಿಸುತ್ತಿತ್ತು. ಇತ್ತೀಚೆಗೆ ಗಂಡ ತನ್ನ ಬಗ್ಗೆ ಆಸಕ್ತಿ ಕಡಿಮೆ ಮಾಡಿದ್ದ. ಆದರೆ ಮೊದಲಿಗಿಂತ ಹೆಚ್ಚು ಸಂತೋಷದಿಂದಿರುತ್ತಿದ್ದ. ತನ್ನ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದ. ಜಿಮ್ ಗೆ ಕೂಡ ಹೋಗುತ್ತಿದ್ದ. ಮನೆಗೆ ತಡವಾಗಿ ಬರುತ್ತಿದ್ದ ಹಾಗೂ ಮೊಬೈಲ್‌ಗೆ ಅಂಟಿಕೊಂಡು ಕುಳಿತಿರುತ್ತಿದ್ದ.

ಅದೊಂದು ದಿನ ಸೀಮಾ ಅವನ ಅನಾಸಕ್ತಿಯ ಬಗ್ಗೆ ಕೇಳಿದಳು. ಅದಕ್ಕೆ ತದ್ವಿರುದ್ಧ ಎಂಬಂತೆ ಅವನು ಅವಳ ಮೇಲೆಯೇ ಕೆಂಡ ಕಾರಿದ, ``ಯಾಕೆ ನೀನು ಒಂದು ವಿಷಯ ಹಿಡಿದುಕೊಂಡು ನನ್ನ ಮೂಡ್‌ ಆಫ್‌ ಮಾಡುತ್ತಿರುವೆ? ನನಗೆ ಉಸಿರುಗಟ್ಟಿದಂತಾಗಿದೆ,'' ರಮೇಶನ ಈ ತೆರನಾದ ಮಾತುಗಳನ್ನು ಕೇಳಿ ಅವಳು ತನ್ನನ್ನೇ ತಾನು ದೂಷಿಸಿಕೊಳ್ಳತೊಡಗಿದಳು.  ತನ್ನದೇ ತಪ್ಪು ಎಂದು ಭಾವಿಸಿದಳು. ರಮೇಶನದು ಏನೂ ತಪ್ಪಿಲ್ಲ, ಆಕೆಗೆ ತನ್ನದೇ ತಪ್ಪು ಎನಿಸತೊಡಗಿತು. ನಾನು ಹೆಚ್ಚು ಯೋಚಿಸುತ್ತಿದ್ದೇನೆ. ಈ ರೀತಿ ಅವಳಿಗೆ ಅಪರಾಧಪ್ರಜ್ಞೆ ಕಾಡತೊಡಗಿತು.

ಮಾನಸಿಕ ರೋಗ

ಮನೋರೋಗ ತಜ್ಞೆ ಡಾ. ಅನಾಮಿಕಾ ಹೀಗೆ ಹೇಳುತ್ತಾರೆ, ``ವಾಸ್ತವದಲ್ಲಿ ರಮೇಶನ ಈ ವರ್ತನೆಗೆ ಮನೋವೈಜ್ಞಾನಿಕ ಭಾಷೆಯಲ್ಲಿ `ಗ್ಯಾಸ್‌ ಲೈಟಿಂಗ್‌' ಎಂದು ಹೇಳಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮನೋರೋಗಿ ವ್ಯಕ್ತಿ ಮಾತು ಮಾತಿನಲ್ಲಿ ಇನ್ನೊಬ್ಬರನ್ನು ಹಿಂಸೆ ಮಾಡುತ್ತಿರುತ್ತಾನೆ. ಇದು ರಿಲೇಶನ್‌ ಶಿಪ್‌ ಅಥವಾ ಯಾವುದೇ ಸಂಬಂಧದಲ್ಲೂ ಆಗಬಹುದು. ಹಿಂಸೆ ಕೊಡು ವ್ಯಕ್ತಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಂತ್ರಸ್ತೆಯ ಮೇಲೆ ಒತ್ತಡ ಹೇರುತ್ತಾನೆ. ಎದುರಿಗಿನ ವ್ಯಕ್ತಿಗೆ ಮಾತನಾಡಲು ಅವಕಾಶವನ್ನೇ ಕೊಡುವುದಿಲ್ಲ. ಅವನು ಸಂತ್ರಸ್ತೆಯ ವಿರುದ್ಧ ಇತರರನ್ನು ರೊಚ್ಚಿಗೆಬ್ಬಿಸಲು ಪ್ರಯತ್ನಿಸುತ್ತಾನೆ. ಇದೆಲ್ಲದಕ್ಕಾಗಿ ಅವನು ಸುಳ್ಳು ಹೇಳುತ್ತಾನೆ.''

ಅನಾಮಿಕ ಮುಂದುವರಿದು ಹೀಗೆ ಹೇಳುತ್ತಾರೆ, ``ಇದು ಒಂದು ತೆರನಾದ ಮಾನಸಿಕ ರೋಗ. ಹಿಂಸೆ ಮಾಡುವ ವ್ಯಕ್ತಿ ತನ್ನದೇ ಸರಿ ಎಂದು ಪ್ರತಿಪಾದಿಸುತ್ತಾನೆ. ಯಾವ ವ್ಯಕ್ತಿ ಗ್ಯಾಸ್‌ ಲೈಟಿಂಗ್‌ನಿಂದ ಪೀಡಿತನಾಗಿರುತ್ತಾನೋ, ಆ ವಿಷಯ ಸ್ವತಃ ಆ ವ್ಯಕ್ತಿಗೆ ಗೊತ್ತಿರುವುದಿಲ್ಲ. ಇದು ಒಂದು ತೆರನಾದ ಮಾನಸಿಕ ಹಿಂಸೆಯೇ ಆಗಿದೆ. ಇದರಲ್ಲಿ ಹಿಂಸೆ ಮಾಡುವ ವ್ಯಕ್ತಿ ತನ್ನ ತಪ್ಪುಗಳ ಮೇಲೆ ಪರದೆ ಎಳೆಯಲು ಸಂತ್ರಸ್ತೆಯ ಮೇಲೆಯೇ ತಪ್ಪು ಹೊರಿಸುತ್ತಾನೆ. ಹೀಗಾಗಿ ಸಂತ್ರಸ್ತೆಗೆ ತನ್ನ ಮೇಲೆಯೇ ಸಂದೇಹಪಡುವಂತಾಗುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ