ವರ್ಷದಲ್ಲಿ ಒಂದು ಸಲ ಬರುವ ಪಿತೃಪಕ್ಷ ಎಂತಹ ಒಂದು ಅವಧಿಯೆಂದರೆ, ಹಿಂದೂ ಧರ್ಮದವರು ತಮ್ಮ ಪೂರ್ವಜರ ಗೌರವದ ಪ್ರಯುಕ್ತ ಒಂದು ಪದ್ಧತಿ ಅನುಸರಿಸುತ್ತಾರೆ. ಅದನ್ನೇ `ಶ್ರಾದ್ಧ' ಎಂದು ಕರೆಯಲಾಗುತ್ತದೆ. ಅಂದಹಾಗೆ ಇದು ನಮ್ಮ ಪೂರ್ವಿಕರನ್ನು ನೆನಪಿಸಿಕೊಳ್ಳುವ ಒಂದು ಸಂದರ್ಭವಾಗಿರುತ್ತದೆ. ಆದರೆ, ಧರ್ಮದ ಗುತ್ತಿಗೆದಾರರು, ಪುರೋಹಿತರು ಪ್ರಾಚೀನ ಕಾಲದಿಂದಲೇ ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಪಿತೃಪಕ್ಷದ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಹಲವು ಬಗೆಯ ರುಚಿಕರ ಆಹಾರ ಪದಾರ್ಥಗಳು ತಯಾರಾಗುತ್ತಿದ್ದುದನ್ನು ನಾನು ಕಂಡಿದ್ದೇನೆ. ನಾವು ಆ ಆಹಾರ ಪದಾರ್ಥಗಳ ಒಂದಿಷ್ಟು ಭಾಗವನ್ನು ಹೊಲದಲ್ಲಿರುವ ಮರದ ಹತ್ತಿರ ಇಡುತ್ತಿದ್ದೆವು. ಆ ಆಹಾರವನ್ನು ಹಲವು ಕಾಗೆಗಳು ತಿಂದು ಮುಗಿಸುತ್ತಿದ್ದವು. ಆಗ ಅಪ್ಪ ನಮಗೆ ಹೇಳುತ್ತಿದ್ದುದು, ``ಇವು ನಮ್ಮ ಹಿರಿಯರ ಆತ್ಮಶಾಂತಿಗೆ ಮಾಡಿದ ಪದಾರ್ಥಗಳು.''

ಅದೇ ರೀತಿ ಪಕ್ಕದ ಮನೆಯ ಶಶಿಧರ್‌ ಪಿತೃಪಕ್ಷದ ಸಂದರ್ಭದಲ್ಲಿ ತಮ್ಮ ಕಟ್ಟಡದ ಮೇಲ್ಭಾಗದಲ್ಲಿ ಒಂದು ಕಡೆ ವಿವಿಧ ತಿಂಡಿಗಳನ್ನು ಹಾಗೂ ನೀರಿನ ಪಾತ್ರೆಯೊಂದನ್ನು ಇಡುತ್ತಾರೆ. ಅವರ ಪ್ರಕಾರ, ``ಈ ಅವಧಿಯಲ್ಲಿ ನಮ್ಮ ಪೂರ್ವಿಕರು ಭೂಮಿಗೆ ಬಂದು ಆಹಾರ ಸೇವಿಸಿ ಹೋಗುತ್ತಾರೆ. ಆಗಲೇ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ. ಹಾಗೊಮ್ಮೆ ನಾವು ಈ ಪದ್ಧತಿ ಅನುಸರಿಸದೇ ಇದ್ದರೆ, ಇಡೀ ವರ್ಷ ತೊಂದರೆಯಲ್ಲಿ ಕಳೆಯಬೇಕಾಗುತ್ತದೆ,'' ಎಂದು ಹೇಳುತ್ತಾರೆ.

ಏನಿದು ಶ್ರಾದ್ಧ?

ನಮ್ಮ ಕುಟುಂಬ, ದೇವರು ಹಾಗೂ ವಂಶಪರಂಪರೆಗಳ ಬಗ್ಗೆ ಶ್ರದ್ಧೆ ವ್ಯಕ್ತಪಡಿಸುವುದನ್ನು `ಶ್ರಾದ್ಧ' ಎಂದು ಕರೆಯುತ್ತೇವೆ. ಇದೊಂದು ರೀತಿಯಲ್ಲಿ ಪೂಜೆಯಾಗಿದೆ. ಇದರಲ್ಲಿ ಪಿತೃಗಳ ಆತ್ಮಶಾಂತಿಗೆ ಆಹಾರ ಮತ್ತು ಜಲವನ್ನು ಅರ್ಪಿಸಲಾಗುತ್ತದೆ. ಇದರ ಜೊತೆಗೆ ಬ್ರಾಹ್ಮಣರಿಗೆ ಭೋಜನ, ದಾನ ನೀಡುವುದು ಮತ್ತು ಪೂಜೆ ಪುನಸ್ಕಾರ ಮುಂತಾದವನ್ನು ಮಾಡಲಾಗುತ್ತದೆ.

ಬ್ರಹ್ಮ ಪುರಾಣದ ಪ್ರಕಾರ, ಒಂದು ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿ ನಮ್ಮ ಪೂರ್ವಿಕರಿಗೆ ವಿಧಿಪೂರ್ವಕವಾಗಿ ಯಾವ ಕರ್ಮ ಕೈಗೊಳ್ಳಲಾಗುತ್ತದೊ ಅದನ್ನು `ಶ್ರಾದ್ಧ' ಎಂದು ಕರೆಯಲಾಗುತ್ತದೆ. ಸಾವಿನ ಬಳಿಕ ಮನುಷ್ಯನ ಆತ್ಮ ಸಾಯುವುದಿಲ್ಲ. ಕರ್ಮದ ಆಧಾರದ ಮೇಲೆ ಆತ್ಮಕ್ಕೆ ದೇವಯೋಗ ಇಲ್ಲವೇ ಮನುಷ್ಯ ಯೋಗ ಪ್ರಾಪ್ತವಾಗುತ್ತದೆ. ಒಳ್ಳೆಯ ಕರ್ಮ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಆತ್ಮ ಸ್ವರ್ಗ ಸೇರುತ್ತದೆ. ಆದರೆ ಕೆಲವು ಆತ್ಮಗಳು ತಮ್ಮದೇ ಇಚ್ಛೆಗಳ ಅಧೀನದಲ್ಲಿ ಸಿಲುಕಿಬಿಡುತ್ತವೆ. ಅದರಿಂದ ಹೊರಬರಲು ಅವುಗಳಿಗೆ ಸಾಕಷ್ಟು ಸಮಯ ತಗುಲುತ್ತದೆ. ಇದು ಎಂತಹ ಒಂದು ಸಮಯವಾಗಿರುತ್ತದೆ ಎಂದರೆ ಆ ಆತ್ಮ ವಾಯುರೂಪದಲ್ಲಿ ಭೂಮಿಯ ಮೇಲೆ ಅಲೆದಾಡುತ್ತಿರುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಶ್ರಾದ್ಧ ಮಾಡಲು ಆಗದೇ ಹೋದರೆ ಅವನಿಗೆ ಮುಕ್ತಿ ದೊರಕುವುದಿಲ್ಲ. ಹಿಂದೂ ಪುರಾಣದಲ್ಲಿ ಪಿತೃ ಋಣವನ್ನು ಅತಿ ದೊಡ್ಡ ಋಣವೆಂದು ಬಣ್ಣಿಸಲಾಗಿದೆ. ಅದರಿಂದ ಮುಕ್ತಿ ಕಂಡುಕೊಳ್ಳಲು `ಶ್ರಾದ್ಧ' ಮಾಡಲಾಗುತ್ತದೆ.

ಧರ್ಮದ ಗುತ್ತಿಗೆದಾರರ ತರ್ಕ

ಪೂಜಾರಿ ಪುರೋಹಿತರು ಶತ ಶತಮಾನಗಳಿಂದ ತಮ್ಮ ಕುಟಿಲ ಬುದ್ಧಿ ತೋರಿಸಿಕೊಳ್ಳುತ್ತ ತಮ್ಮನ್ನು ದೇವತೆಗಳ ಅವತಾರವೆಂದು ಹೇಳಿಕೊಂಡು ಜನರಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆ. ಅವರು ಹೇಳುವುದೇನೆಂದರೆ, ಪಿತೃಪಕ್ಷದ ಸಂದರ್ಭದಲ್ಲಿ ಯಮರಾಜ ಪಿತೃಗಳನ್ನು ಸ್ವತಂತ್ರಗೊಳಿಸುತ್ತಾನೆ. ಏಕೆಂದರೆ ಅವರು ತಮ್ಮರಿಂದ ಶ್ರಾದ್ಧವನ್ನು ಸ್ವೀಕರಿಸಲಿ ಎಂದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ