ಪ್ರಜಾಪ್ರಭುತ್ವಕ್ಕೆ ಜಯವಾಗಲಿ : ಈ ಸಲ ನಮ್ಮ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ 1 ವರ್ಷದ ಸದಸ್ಯತ್ವ ಸಿಕ್ಕಿದೆ. ನೆಪ ಮಾತ್ರಕ್ಕೆ ಸದಸ್ಯರ ಆಯ್ಕೆಯ ಚುನಾವಣೆ ನಡೆಯಿತು, ಇದೆಲ್ಲ ಮೊದಲೇ ಪೂರ್ವ ನಿರ್ಧಾರಿತ. ಅಶಾಶ್ವತ ಸದಸ್ಯತ್ವದ ಸ್ಥಾನಕ್ಕಾಗಿ ಸಾಮಾನ್ಯವಾಗಿ ಎಲ್ಲಾ ರಾಷ್ಟ್ರಗಳಿಗೂ ಒಂದು ಅವಕಾಶ ಸಿಕ್ಕೇ ಸಿಗತ್ತದೆ. ವಿಶ್ವಸಂಸ್ಥೆಯ ಉಳಿದ ಪದಾಧಿಕಾರಿಗಳ ಸ್ಥಾನಕ್ಕಾಗಿಯೂ ಚುನಾವಣೆ ನಡೆಯಿತು, ಅದು ಕೊರೋನಾ ಭೀತಿ ಮಧ್ಯೆ, ಮೇಲಿನ ಚಿತ್ರ ನೋಡಿ. ಅಮೆರಿಕಾ ನಿವಾಸಿ ಭಾರತೀಯ ಮಹಿಳೆ ತನ್ನ ತವರಿಗಾಗಿ ಮತ ಚಲಾಯಿಸುತ್ತಿದ್ದಾರೆ.

IMG_9094

 

ಇನ್ನಾದರೂ ಭೇದಭಾವ ಬಿಡಿ : ಅಮೆರಿಕಾದಲ್ಲೀಗ ಕೊರೋನಾಗಿಂತಲೂ ಕ್ರೂರವಾಗಿ ಅಟ್ಟಹಾಸ ಮೆರೆಯುತ್ತಿರುವುದು ಅಲ್ಲಿನ ಕರಿಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳು. ಮಿನಿಯಾ ಪೊಲಿಸ್‌ ನಗರದಲ್ಲಿ ಜಾರ್ಜ್‌ ಎಂಬ ಕರಿಯನ ಕುತ್ತಿಗೆಯನ್ನು ಬಿಳಿಯ ಪೊಲೀಸನೊಬ್ಬ ಸತತ 9 ನಿಮಿಷ ಹಿಸುಕಿ ಸಾಯಿಸಿಬಿಟ್ಟ. ಅದಾರೋ ಇದನ್ನು ವಿಡಿಯೋ ಮಾಡಿ ವೈರಲ್ ಮಾಡಿಯೇ ಬಿಟ್ಟರು. ಇದರ ವಿರುದ್ಧ ಈಗ ಇಡೀ ಅಮೆರಿಕಾ ಸಿಡಿದು ನಿಂತಿದೆ. ಅಕ್ಕಪಕ್ಕದ ದೇಶಗಳಿಗೂ ಈ ಬೆಂಕಿಯ ಉರಿ ತಗುಲಿದೆ. ಎಲ್ಲಾ ಕಡೆ ಸಮಾನತೆ ಬೇಕೇಬೇಕೆಂದು ಘೋಷಣೆ ಮೊಳಗುತ್ತಿದೆ. ಕರಿಯ ಬಿಳಿಯರ ಕದನ ದೇಶವಿಡೀ ದಟ್ಟ ವ್ಯಾಪಿಸಿದೆ. ಕೊರೋನಾದಿಂದಲ್ಲ, ಈ ಆಂದೋಲನದ ಕಾರಣ ಎಲ್ಲೆಲ್ಲೂ ಲಾಕ್‌ ಡೌನ್‌ ಆಗಿದೆ. ನಮ್ಮಲ್ಲಿ ಅಸ್ಪೃಶ್ಯರ ಕುರಿತಾಗಿ ಇಂದೂ ಈ ಭೇದಭಾವ ತಪ್ಪಿಲ್ಲ. ಈ ಮಕ್ಕಳ ಮುಗ್ಧ ನಗು ಗಮನಿಸಿ, ಇಲ್ಲಿ ಭೇದಭಾವ ಇದೆಯೇ?

image1170x530cropped

 

 

ಮುಂದೆ ಸಾಗುವುದೇ ಜೀವನ : ಕೊರೋನಾ ಕಾಟ ಪೂರ್ತಿ ತಪ್ಪಿಲ್ಲದಿದ್ದರೂ ಈಗ ವಿಶ್ವವಿಡೀ ಲಾಕ್‌ ಡೌನ್‌ ಸಡಿಲಗೊಂಡು ವ್ಯಾವಹಾರಿಕ ಚಟುವಟಿಕೆ ಕಂಡುಬರುತ್ತಿದೆ. ಇದೇ ಸರಿ, ಇಲ್ಲದಿದ್ದರೆ ಪ್ರವಾಸಿಗರು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನೋಡುವುದಾದರೂ ಹೇಗೆ? ಈ ಸುಂದರ ಸೊಬಗಿನ ನಗರ ತನ್ನ ಪ್ರವಾಸಿ ತಾಣ, ನಿತ್ಯೋಪಯೋಗಿ ವಸ್ತು, ಆಹಾರದಿಂದಾಗಿ ಖ್ಯಾತಿವೆತ್ತಿದೆ. ಇಂಥ ನಗರ ನೋಡಿ ಬರಲು ನೀವು ಏಕೆ ಸಜ್ಜಾಗಬಾರದು?

Sasha-Lee-Olivier1

ಗೆಲುವಿನ ಕಿರೀಟದ ಬೆಲೆ : ಮಿಸ್‌ ಕಾಂಟೆಸ್ಟ್ ಗೆಲ್ಲುವುದೆಂದರೆ ಒಂದು ದೊಡ್ಡ ವಿಜಯ ಸಾಧಿಸಿದಂತೆ! ಇದು ಸುಮ್ಮನಲ್ಲ, ಸ್ಪರ್ಧಿ ತನ್ನ ದೇಹವನ್ನು ಪ್ರಾಯೋಜಕರಿಗೆ ಅಡವಿಟ್ಟಂತೆಯೇ ಸರಿ. ದ. ಆಫ್ರಿಕಾದ ಮಿಸ್‌ ಶಾಶಾಲಿ ಪ್ರೆಗ್ನೆಂಟ್‌ ಅಲ್ಲ ತಾನೇ ಎಂದೆಲ್ಲ ದಿನಪತ್ರಿಕೆಗಳಲ್ಲಿ ವ್ಯಂಗ್ಯ ಪ್ರಕಟಗೊಳ್ಳುತ್ತಿದೆ. ತನ್ನ ಅತಿ ವೈಯಕ್ತಿಕ ವಿಚಾರದಲ್ಲಿಯೂ ಹೆಣ್ಣು ಈ ಕಾರಣ ಪಬ್ಲಿಕ್‌ ಚರ್ಚೆಗೆ ಒಳಗಾಗಬೇಕಿದೆ. ಪ್ರಾಯೋಜಕರು ಕುಣಿಸಿದಂತೆ ಅವಳು ಕುಣಿಯುತ್ತಿರಬೇಕು, ಸದಾ ಸರ್ವದಾ ಅಲ್ಟ್ರಾ ಮೇಕಪ್‌ನಲ್ಲಿ ಪೋಸ್ ನೀಡುತ್ತಿರಬೇಕು. ಒಳಗೆ ಏನೇ ನೋವಿದ್ದರೂ ಮೇಲೆ ನಗು ತೋರಿಸಬೇಕು. 1 ವರ್ಷದ ನಂತರ ಕಸ ಸರಿಸುಯುವಂತೆ ಇವಳನ್ನು ಬಿಸಾಡಿ, ಮತ್ತೊಬ್ಬಳನ್ನು ಆರಿಸುತ್ತಾರೆ.

fiji_basketball-tournament-for-16-days-credit-caitlin-clifford_675x450-1

 

ಸಾಧನೆ ತಂದ ಸಂತೃಪ್ತಿ : ಈ ಮುಖ ನೋಡಿ ದೇಶೀ ಎನಿಸಿದರೆ ತಪ್ಪಿಲ್ಲ, ಏಕೆಂದರೆ ಫಿಝಿ ದೇಶದ ಬಾಸ್ಕೆಟ್‌ ಬಾಲ್ ತಂಡದಲ್ಲಿ ಅನಾದಿ ಕಾಲದಿಂದಲೂ ಭಾರತೀಯರು ಅಲ್ಲೆ ನೆಲೆಸಿದ್ದು, ಆ ದೇಶದ ಪರವಾಗಿ ಆಡುತ್ತಾರೆ. ಭಾರತದ ಯಾವ ಮೂಲೆಯಿಂದ ತಮ್ಮ ಹಿಂದಿನ ತಲೆಮಾರು ಬಂತೋ ಇವರಿಗೆ ಗೊತ್ತೇ ಇಲ್ಲ. ಕೂಲಿ ಕೆಲಸ ಹುಡುಕಿ ಅಂದಿನ ಆ ಪೀಳಿಗೆ ಹೊರಟಿತ್ತು. ಇಂದು 8-10 ಪೀಳಿಗೆ ನಂತರ ಇವರುಗಳು ಅಲ್ಲಿ ಭದ್ರ ಬೇರೂರಿ ತಮ್ಮದೇ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ