ಯೂರೋಪ್‌ನ ವಿನೂತನ ನಗರ ವಿಯೆನ್ನಾ ಅಷ್ಟೇನೂ ಬದಲಾವಣೆ ಕಾಣದ ನಗರ ಎಂಬ ಖ್ಯಾತಿಗೆ ಪ್ರಾಪ್ತವಾಗಿದೆ. ಆದರೆ ಈ ನಗರ ಈಗ ಯೂರೋಪ್‌ನ ಅತ್ಯಂತ ಆಕರ್ಷಕ ಹಾಗೂ ಜೀವಿಸಬಲ್ಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಂತ ವಾತಾವರಣ, ಟ್ರಾಫಿಕ್‌ ಜಾಮ್ ನಿಂದ ಮುಕ್ತ ಟ್ರಾಮ್ ಗಳು, ರೈಲುಗಳು, ಬಸ್‌ಗಳಿಂದ ತುಂಬಿದ ಈ ನಗರ ಯಾವಾಗ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಇದು ದೆಹಲಿ, ಮುಂಬೈನ ಹಾಗೆ ಅತ್ಯಂತ ಜನದಟ್ಟಣೆ ಹೊಂದಿದ ನಗರವಲ್ಲವಾದರೂ, ಪ್ರತಿ ಕಿ.ಮೀ.ಗೆ 415 ಜನರು ವಾಸಿಸುವ ಈ ನಗರದಲ್ಲಿ ಒಟ್ಟು 17 ಲಕ್ಷ ಜನರು ವಾಸಿಸುತ್ತಾರೆ. ಇದು ಯೂರೋಪ್‌ನ ಮಾನದಂಡದ ಪ್ರಕಾರ ಹೆಚ್ಚೇ ಆಗಿದೆ. ಆದಾಗ್ಯೂ ವ್ಯವಸ್ಥಿತ ಹಾಗೂ ತೃಪ್ತಿದಾಯಕವಾಗಿದೆ.

ಬೇಸಿಗೆಯ ದಿನಗಳಲ್ಲಿ ಈ ನಗರದಲ್ಲಿ ಹತ್ತಿ ಬಟ್ಟೆ ಧರಿಸಿ ನೆಮ್ಮದಿಯಿಂದ ಸುತ್ತಾಡಬಹುದಾಗಿದೆ. ಹಳೆಯ ಹಾಗೂ ಹೊಸ ತಾಣಗಳ ಭರಪೂರ ಆನಂದ ಪಡೆದುಕೊಳ್ಳಬಹುದಾಗಿದೆ.

ಡೆನ್ಯೂಬ್‌ ನದಿಯ ದಂಡೆಯ ಮೇಲೆ ಇರುವ ಈ ನಗರ ಪರ್ತದ ತಪ್ಪಲಿನಲ್ಲಿ ಇದೆ. ಇದು ಯೂರೋಪ್‌ ಖಂಡದ ಅತ್ಯಂತ ಆಕರ್ಷಣೀಯ ಕೇಂದ್ರವಾಗಿದೆ. ಹಲವು ದಶಕಗಳ ಕಾಲ ಇದು ರೋಮನ್‌ ಕ್ಯಾಥೋಲಿಕ್‌ ಪೋಪ್‌ಗಳ ಮುಖ್ಯ ನಗರವಾಗಿತ್ತು. ಆದರೆ 1918ರ ಬಳಿಕ ಇಲ್ಲಿ ಬಂದ ಸಮಾಜವಾದಿ ಯೋಚನೆಯಿಂದಾಗಿ ನಗರದ ದಿಕ್ಕು ದಿಸೆಯೇ ಬದಲಾಗಿ ಹೋಯಿತು.

ಒಬ್ಬ ಸಾಮಾನ್ಯ ಪ್ರವಾಸಿಗನಿಗೆ ವಿಯೆನ್ನಾದ ಸೋಶಿಯಲ್ ಹೌಸಿಂಗ್‌ನ ಬಗ್ಗೆ ಅರಿವು ಇಲ್ಲ. ಆದರೆ ಇಲ್ಲಿ ಕ್ಯಾಪಿಟಲಿಸಂ ಹಾಗೂ ಸೋಶಿಯಲಿಸಂನ ವಿಶಿಷ್ಟ ಮಿಶ್ರಣ ಕಂಡುಬರುತ್ತದೆ. ಈ ಕಾರಣದಿಂದಾಗಿ ಈ ನಗರದಲ್ಲಿ ಶೇ.10ರಷ್ಟು ಮನೆಗಳು ಅತ್ಯಂತ ಸೌಲಭ್ಯದಾಯಕವಾಗಿವೆ.

1918ರ ಆಸುಪಾಸು ವಿಯೆನ್ನಾದ ಆಡಳಿತ ಸೂತ್ರ ಡೆಮಾಕ್ರೆಟಿಕ್‌ರ ಕೈಗೆ ಬಂದಾಗ ಅವರು ಮುಖ್ಯ ರಸ್ತೆಗುಂಟ ತುಂಬಾ ಒಳ್ಳೊಳ್ಳೆ ಮನೆಗಳನ್ನು ನಿರ್ಮಿಸಿದರು. ಅಂತಹ ಮನೆಗಳಲ್ಲಿಯೇ ನಗರದ ಶೇ.62ರಷ್ಟು ಜನರು ವಾಸಿಸುತ್ತಾರೆ. ಇವು ಯಾವುದೇ ಕಾರಣಕ್ಕೂ ದೆಹಲಿಯ ಡಿಡಿಎ ಫ್ಲ್ಯಾಟ್‌ನರಂತೆ ಅನಿಸುವುದಿಲ್ಲ. ಮುಂಬೈನ ಚಾಳ್‌ನವರಂತೆಯೂ ಅನಿಸುವುದಿಲ್ಲ ಅಥವಾ ಅಹಮದಾಬಾದ್‌ನಲ್ಲಿ ವಾಸಿಸುವ ಬೀದಿಗಳಂತೆ ಅಂದರೆ ಟ್ರಂಪ್‌ ಇಲ್ಲಿಗೆ ಭೇಟಿ ಕೊಟ್ಟಾಗ ಅವರ ಕಣ್ಣಿಂದ ರಕ್ಷಿಸಿಕೊಳ್ಳಲು ನರೇಂದ್ರ ಮೋದಿ ಗೋಡೆ ಕಟ್ಟಿದ ಸ್ಥಿತಿಯೂ ಇಲ್ಲಿಲ್ಲ.

 

ಆಧುನಿಕ ನಗರ

vienna

ಅಮೆರಿಕಾದಲ್ಲಿ ದೇಶಾದ್ಯಂತ ಅತ್ಯಂತ ಹೆಚ್ಚಾದರೆ ಶೇ.1ರಷ್ಟು ಜನರು `ಸೋಶಿಯಲ್ ಹೌಸಿಂಗ್‌’ ಮನೆಗಳಲ್ಲಿ ವಾಸಿಸುತ್ತಿರಬಹುದು. ಭಾರತದಲ್ಲಿ ಈ ಪರಂಪರೆ ಜನ್ಮ ತಳೆದೇ ಇಲ್ಲ. ಯೂರೋಪ್‌ನ ಅನೇಕ ನಗರಗಳಲ್ಲಿ ಈ ವಿಧಾನ ಅನುಸರಿಸಲಾಗುತ್ತದೆ. ಆದರೆ ಇಷ್ಟೊಂದು ಅಗ್ಗ ಬೇರೆಲ್ಲೂ ಇಲ್ಲ. ಇದು ಪ್ರವಾಸಿಗರಿಗೆ ಇಷ್ಟವಾಗದಿರಬಹುದು. ಆದರೆ ವಿಯೆನ್ನಾದ ಸೌಂದರ್ಯ ಮತ್ತು ಶಾಂತಿಯ ನಿಜವಾದ ರಹಸ್ಯ ಈ ಸೋಶಿಯಲ್ ಹೌಸಿಂಗ್‌ನಲ್ಲಿಯೇ ಇದೆ.

ಸೋಶಿಯಲ್ ಹೌಸಿಂಗ್

ಯೂರೋಪಿಯನ್‌ ಮಾನದಂಡದ ಬಡವರು ಹಾಗೂ ಮಧ್ಯಮ ವರ್ಗ ಇಬ್ಬರಿಗೂ ಇದೆ. ಇದರ ಸಾಕಷ್ಟು ಖರ್ಚು ಬಾಡಿಗೆಯಿಂದಲೇ ಲಭಿಸುತ್ತದೆ. ಆದರೆ ಸಾಕಷ್ಟು ಹಣ ಇನ್‌ ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್‌ ಟ್ಯಾಕ್ಸ್ ನಿಂದ ಬರುತ್ತದೆ. ಆದರೆ ಅದರ ಲಾಭ ತೆರಿಗೆ ಕೊಡುವವರಿಗೆ ತಕ್ಷಣವೇ ದೊರಕುತ್ತದೆ. ಏಕೆಂದರೆ ಕಡಿಮೆ ಬಾಡಿಗೆ ದರದ ಕಾರಣದಿಂದ ಜಗತ್ತಿನಾದ್ಯಂತದ ಪ್ರತಿಭಾವಂತರನ್ನು ಆಕರ್ಷಿಸುತ್ತದೆ. ಈಗಲೂ ಈ ನಗರದ ಜನಸಂಖ್ಯೆ ಹೆಚ್ಚುವುದು ನಿಂತಿದೆ. ಪ್ರತಿವರ್ಷ 13 ಸಾವಿರ ಹೊಸ ಮನೆಗಳನ್ನು ನಿರ್ಮಿಸಲಾಗುತ್ತಿವೆ. ಅದರ ಜೊತೆಗೆ ಹಳೆಯ ಮನೆಯನ್ನು ಕೂಡ ದುರಸ್ತಿಗೊಳಿಸಲಾಗುತ್ತದೆ.

ವಿಯೆನ್ನಾದ ಸೋಶಿಯಲ್ ಹೌಸಿಂಗ್

Europ-ka-viana

ಬೇರೆ ನಗರಗಳ ಹಾಗೆ ಕೊಳಚೆ ಪ್ರದೇಶಗಳಲ್ಲಿ ನಿರ್ಮಿಸಲಾಗಿಲ್ಲ. ಇವು ನಗರದಾದ್ಯಂತ ಪಸರಿಸಲ್ಪಟ್ಟಿವೆ. ಪ್ರತಿೂಂದು ಬಿಲ್ಡಿಂಗ್ ಕಾಂಪ್ಲೆಕ್ಸ್ ಮೇಲೆ ಒಂದು ಹೆಸರು ಇರುತ್ತದೆ. ಅದು ಸೋಶಿಯಲ್ ಹೌಸಿಂಗ್‌ ಬಗ್ಗೆ ತೋರಿಸುತ್ತದೆ. ಈ ಮನೆಗಳ ಬಣ್ಣ ಮಾಸಿರುವುದಿಲ್ಲ. ಕೊಳಕು ಬಟ್ಟೆಗಳಿಂದ ಅವುಗಳ ಕಿಟಕಿಯನ್ನು ಮುಚ್ಚಲಾಗಿರುವುದಿಲ್ಲ. ಈ ಮನೆಗಳಿರುವ ಕಡೆ ಒಳ್ಳೆಯ ರಸ್ತೆಗಳಿವೆ. ಒಳ್ಳೆಯ ಪಾರ್ಕ್‌ಗಳಿವೆ. ಮರಗಳೇ, ಈ ಮನೆಗಳಿಗೆ ಸೊಬಗು ನೀಡುತ್ತವೆ. ಈಗಂತೂ ಹೊಸ ಆರ್ಕಿಟೆಕ್ಚರ್‌ನ ಪ್ರಯೋಗ ಆಗುತ್ತಲಿದೆ. ಬಣ್ಣಬಣ್ಣದ ಮನೆಗಳು ಸಂಪೂರ್ಣ ಮಾಡರ್ನ್‌ ಆರ್ಟ್‌ನ್ನು ಸಾಕಾರಗೊಳಿಸುತ್ತಿದೆ.

1918ರಿಂದ 1934ರ ಅವಧಿಯಲ್ಲಿ ನಿರ್ಮಾಣವಾದ ಮನೆಗಳೆದುರು ಒಂದು ದೊಡ್ಡ ಗೇಟ್‌ ಇರುತ್ತಿತ್ತು. ಒಳಗೆ ಹೋಗಲು ಮೆಟ್ಟಿಲುಗಳಿರುತ್ತವೆ ಹಾಗೂ ಮಕ್ಕಳಿಗಾಗಿ ಪಾರ್ಕ್‌ಗಳಿರುತ್ತವೆ. ಕಾರ್ಲ್ ‌ಮಾರ್ಕ್‌ ಹೌಸ್‌ ಈ ಎಲ್ಲ ಕಾಂಪ್ಲೆಕ್ಸ್ಗಳಲ್ಲಿ ಅತ್ಯಂತ ದೊಡ್ಡದು. ಇದರಲ್ಲಿ 1300 ಅಪಾರ್ಟ್‌ಮೆಂಟ್‌ಗಳಿವೆ.ಕರ್ಟ್‌ ಪುರ್ಚಿಗರ್‌ ಈ ಸೋಶಿಯಲಿ ಹೌಸಿಂಗ್‌ ಬೋರ್ಡ್‌ನ ಚೇರ್‌ಮನ್ ಆಗಿದ್ದಾರೆ. ಅಲರು ಇಳಿ ವಯಸ್ಸಿನವರಾಗಿದ್ದರೂ ಅತ್ಯಂತ ಚುರುಕಿನಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಅವರೇ ಯೂರೋಪ್‌ನ ಅತಿ ದೊಡ್ಡ ಹೌಸಿಂಗ್‌ ನಿರ್ಮಾಣದ `ವಿಯೆನ್ನಾ ಹೌಸಿಂಗ್‌ ಬೋರ್ಡ್‌ ಕಂಪನಿ’ಯ ಸಂಚಾಲಕರಾಗಿದ್ದಾರೆ. ಅವರು ಮುಂದಿನ ಕೆಲವು ವರ್ಷಗಳಿಗೆ ಈಗಲೂ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಬಹುದೊಡ್ಡ ಆಕರ್ಷಣೆ

ABD0010-20190609-16-9-013840962304-640x360

1840 ಮತ್ತು 1918ರ ನಡುವೆ ವಿಯೆನ್ನಾದ ಜನಸಂಖ್ಯೆ 5 ಪಟ್ಟು ಹೆಚ್ಚಾಯಿತು. ಹಾಗಾಗಿ ಬಡವರ ಸ್ಥಿತಿ ದಯನೀಯವಾಗಿತ್ತು. ಅವರು ಅಡ್ಡಾದಿಡ್ಡಿ ಬೇಕಾಬಿಟ್ಟಿಯಾಗಿ ನಿರ್ಮಿಸಿದ ಮನೆಗಳಲ್ಲಿ ವಾಸಿಸುವುದು ಅನಿವಾರ್ಯವಾಗಿತ್ತು. ಅವರ ಸ್ಥಿತಿ ನಮ್ಮ ದೇಶದ ಮುಂಬೈನ ಧಾರಾವಿ ಹಾಗೂ ದೆಹಲಿಯ ಗಾಜಿಪುರದಲ್ಲಿ ಇರುವ ಹಾಗೆ ಇತ್ತು. ಆದರೆ ಅಲ್ಲಿ ಸೋಶಿಯಲಿಸಂ ಪ್ರವೇಶಿಸಿ ಹೊಸ ಕ್ರಾಂತಿಯನ್ನೇ ತಂದಿತು. 1934ರ ತನಕ 348 ಕಡೆ 6500 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಯಿತು. ಈಗಲೂ ಅಲ್ಲಿ ಜನರು ನೆಮ್ಮದಿಯಿಂದ ವಾಸ ಮಾಡುತ್ತಿದ್ದಾರೆ.

ಈಗ ಹೌಸಿಂಗ್‌ನಲ್ಲಿ ಹೊಸ ಡಿಸೈನ್‌ಗಳು, ಚಿಕ್ಕ ಕುಟುಂಬಗಳು ಕಂಡುಬರುತ್ತಿವೆ. ಅಂತಹ ಮನೆಗಳು ಬಾಡಿಗೆಗೆ ಸಿಗುತ್ತವೆ. ಆದರೆ ನಮ್ಮಲ್ಲಿನ ಹೌಸಿಂಗ್‌ ಬೋರ್ಡಿಂಗ್‌ಗಳ ಹಾಗೆ ಮನೆಗಳ ನಿರ್ಮಾಣ ದುರ್ಬಲವಾಗಿರುವುದಿಲ್ಲ. ಇವುಗಳ ಬಾಡಿಗೆ ಅತ್ಯಂತ ಕಡಿಮೆ. ಪ್ಯಾರಿಸ್‌ನಲ್ಲಿ ಸಾಮಾನ್ಯ ಜನರು ತಮ್ಮ ಆದಾಯದ ಶೇ.46ರಷ್ಟು ಮ್ಯೂನಿಕ್‌ನಲ್ಲಿ ಶೇ.36ರಷ್ಟು ಅದೇ ಆಸ್ಟ್ರಿಯಾದ ಈ ನಗರ ವಿಯೆನ್ನಾದಲ್ಲಿ ಶೇ.21ರಷ್ಟು ಮಾತ್ರ ಖರ್ಚು ಮಾಡುತ್ತಾರೆ.

ಈ ಸೋಶಿಯಲ್ ಹೌಸಿಂಗ್‌ಗಾಗಿ ಶೇ.1ರಷ್ಟು ಮಾತ್ರ ತೆರಿಗೆ ಪಡೆಯಲಾಗುತ್ತದೆ. ಇದೇ ಫಾರ್ಮುಲಾದನ್ವಯ ಖಾಸಗಿ ಕಂಪನಿಗಳಿಗೆ ಮನೆ ನಿರ್ಮಾಣ ಮಾಡಲು ಅನುಮತಿ ನೀಡಲಾಗಿದೆ.

ಸೋಶಿಯಲ್ ಹೌಸಿಂಗ್‌ ಬಗ್ಗೆ ವಿಯೆನ್ನಾದ ಮ್ಯೂಸಿಯಂನಲ್ಲಿ ಒಂದು ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿ 1918ರಲ್ಲಿ ಯಾವ ರೀತಿಯ ತಂತ್ರಜ್ಞಾನ ಬಳಸಲಾಗುತ್ತಿತ್ತೋ, ಅಂತಹ ತಂತ್ರಜ್ಞಾನವನ್ನು ಭಾರತದಲ್ಲಿ ಚಿಕ್ಕ ಮನೆಗಳ ನಿರ್ಮಾಣ ಕುರಿತಂತೆ ಕೂಡ ಬಳಸಲಾಗುವುದಿಲ್ಲ.

ವಿಯೆನ್ನಾ ಪ್ರತಿಯೊಂದು ಬಗೆಯ ಪ್ರಯಾಣಿಕರಿಗೂ ದೊಡ್ಡ ಆಕರ್ಷಣೆಯಾಗಿದೆ. ಇಲ್ಲಿನ ಏರ್‌ ಪೋರ್ಟ್‌ ಅತ್ಯಂತ ಚಿಕ್ಕದು ಎನಿಸಬಹುದು. ಆದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇಲ್ಲಿ ಬರುತ್ತಲೇ ಇರುತ್ತಾರೆ. ಕೇವಲ 30 ನಿಮಿಷಗಳ ಅಂತರದಲ್ಲಿಯೇ ನಗರದ ಮುಖ್ಯ ದಾರಿಗಳು ಸಿಗುತ್ತವೆ.

ಹ್ಯಾಪ್‌ ಬರ್ಗ್‌ ಪ್ಯಾಲೆಸ್‌

 

ಎಕರೆ ಪ್ರದೇಶದಲ್ಲಿ 18 ಕಟ್ಟಡಗಳಲ್ಲಿರುವ ಈ ಮಹಲು 1275ರಿಂದಲೇ ವಿಯೆನ್ನಾದ ರಾಜರ ಆಸ್ಥಾನವಾಗಿದೆ. ಇಲ್ಲಿನ ಇಂಪೀರಿಯಲ್ ಅಪಾರ್ಟ್‌ಮೆಂಟ್‌ ಹಾಗೂ ಸಿಸಿ ಮ್ಯೂಸಿಯಂ ನೋಡಲೇಬೇಕಾದ ಸ್ಥಳವಾಗಿದೆ.

ಮಾಲ್ಡೀವ್ ಪ್ಯಾಲೆಸ್

ಇದು ಪ್ರತಿಯೊಬ್ಬ ಪ್ರಯಾಣಿಕರು ನೋಡಲೇಬೇಕಾದ ಸ್ಥಳ. ಇಲ್ಲಿನ ಪೇಂಟಿಂಗ್‌ಗಳು, ಭವ್ಯ ಹಾಲ್‌, ಮೂರ್ತಿಗಳು, ಹಸಿರಿನಿಂದ ಕಂಗೊಳಿಸುವ ಲಾನ್‌ಗಳು, ಜಲಪಾತಗಳು ಬಹಳ ಆಕರ್ಷಕ ಎನಿಸುತ್ತವೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಭಾರತೀಯ ಉದ್ಯಮಿ ಪಾರ್ಥ್‌ ಜಿಂದಾಲ್ ‌ಹಾಗೂ ಅನುಶ್ರೀ ವಿವಾಹ ನಡೆದಿತ್ತು.

ಜಾಯಿಂಟ್‌ ವೀಲ್

Gient-wheel

ವಿಯೆನ್ನಾದ ಜಾಯಿಂಟ್‌ ವೀಲ್ ‌ರಿಂದಲೇ ಪ್ರಮುಖ ಆಕರ್ಷಣೆಯಾಗಿದೆ.

ಓಪೆರಾ ಹೌಸ್

Opera-House

ಹಾಗೆ ನೋಡಿದರೆ ಯೂರೋಪಿನ ಪ್ರತಿಯೊಂದು ನಗರದಲ್ಲಿ ಓಪೆರಾ ಹೌಸ್‌ ಇದೆ. ಆದರೆ ವಿಯೆನ್ನಾದ ಸ್ಟೇಟ್‌ ಓಪೆರಾ ಹೌಸ್‌ನ ವಿಶೇಷವೇ ಬೇರೆ. ಇದರಲ್ಲಿ 2210 ಆಸನಗಳ ವ್ಯವಸ್ಥೆ ಇದೆ. ವೇದಿಕೆಯ ಮೇಲೆ 100ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲೆ ಪ್ರದರ್ಶಿಸಬಹುದು.

ವಿಯೆನ್ನಾ ಸಿಟಿ ಹಾಲ್

ಈ ಹಾಲ್ ‌ಈಗಲೂ ಆಫೀಸುಗಳಿಂದ ತುಂಬಿಹೋಗಿದೆ. ಆದರೆ ನಮ್ಮಲ್ಲಿನ ಹಾಗೆ ಅಸ್ತವ್ಯಸ್ತತೆ ಅಲ್ಲಿ ಕಂಡುಬರುವುದಿಲ್ಲ. ಸ್ವಚ್ಛ ಕಾರಿಡಾರ್‌ಗಳ ಮುಖಾಂತರ ಈಗ ಆಧುನಿಕ ಆಫೀಸುಗಳಿಗೆ ತೆರಳಬಹುದಾಗಿದೆ. ಒಂದು ಅಚ್ಚರಿದಾಯಕ ಲಿಫ್ಟ್ ಅತ್ಯಂತ ಹಳೆಯದಾಗಿದ್ದರೂ ಅದು ಈಗಲೂ ಚಾಲ್ತಿಯಲ್ಲಿದೆ. ಅದಕ್ಕೆ ಬಾಗಿಲುಗಳಿಲ್ಲ, ಅದು ಒಂದು ಕಡೆಯಿಂದ ಹೊರಟು ಇನ್ನೊಂದು ಕಡೆ ಬರುತ್ತದೆ.

ವಿಯೆನ್ನಾದಲ್ಲಿ ಸುತ್ತಾಡುವುದು ಬಹಳ ಸುಲಭ. ಬಸ್‌ಗಳು ಅತ್ಯಂತ ಆರಾಮದಾಯಕಾಗಿದ್ದು, ಮೆಟ್ರೊ ಹಾಗೂ ಬಸ್‌ಗಳಲ್ಲಿ ಒಂದೇ ಸಿಟಿ ಕಾರ್ಡ್‌, ಟೂರಿಸ್ಟ್ ಟಿಕೆಟ್‌ ಪಡೆದು ಸುತ್ತಾಡಬಹುದು.

ಭಾರತೀಯ ಪ್ರವಾಸಿಗರಿಗೆ ಭಾರತೀಯ ಊಟದ ಅಭಿಲಾಷೆ ತೀರಿಸಿಕೊಳ್ಳಲು ಕರೀ ಇನ್‌ ಸೇಲ್ ‌ಡೆಮಿಟಾಸ್‌, ಜೈಪುರ್‌ ಪ್ಯಾಲೆಸ್, ಕೊಹಿನೂರ್‌ ಮಹಲ್, ಇಂಡಿಪ್‌ ಚಮ್ ಚಮ್ ನಂತಹ ಹೋಟೆಲ್ ಗಳಿಗೆ ಹೋಗಬಹುದು.

ವಿಯೆನ್ನಾದ ಹೋಟೆಲ್ ಗಳಲ್ಲಿ ಫೈವ್ ‌ಸ್ಟಾರ್‌ ಹೋಟೆಲ್ ‌`ಇಂಪೀರಿಯಲ್’ನ ಇತಿಹಾಸ ಬಹಳ ಹಳೆಯದು. 1863ರಲ್ಲಿ ರಾಜ ಮನೆತನಕ್ಕಾಗಿ ನಿರ್ಮಿಸಿದ ಈ ಕಟ್ಟಡವನ್ನು 1873ರಲ್ಲಿ ನಡೆದ ವಿಶ್ವ ಪ್ರದರ್ಶನದ ಸಂದರ್ಭದಲ್ಲಿ ಅದನ್ನು ಹೋಟೆಲ್ ‌ಆಗಿ ಪರಿವರ್ತಿಸಲಾಯಿತು. ಅದನ್ನು ಒಳಭಾಗದಿಂದ ನೋಡಿದರೆ ಭಾರತೀಯ ಅರಮನೆಗಳ ಹಾಗೆಯೇ ಕಂಡು ಬರುತ್ತದೆ. ಇಲ್ಲಿನ ಬ್ರೇಕ್‌ ಫಾಸ್ಟ್ ಮೆನು ಅತ್ಯಂತ ಚಿಕ್ಕದಾದದ್ದು. ಭಾರತೀಯ ಹೋಟೆಲ್ ‌ಗಳು ಅದಕ್ಕೂ ಒಳ್ಳೆಯ ಬ್ರೇಕ್‌ ಫಾಸ್ಟ್ ನೀಡುತ್ತವೆ.

4 ಸ್ಟಾರ್‌ನೊ ಕೊಟ್‌, 2 ಸ್ಟಾರ್‌ ವಿಯೆನ್ನಾ ಎಡ್‌ ಹಾಫ್‌ ಅಪಾಟ್‌ಮೆಂಟ್ಸ್, 4 ಸ್ಟಾರ್‌ ಹಾಲಿಡೇ ಇನ್‌,  4 ಸ್ಟಾರ್‌ ವೆಸ್ಟರ್ನ್‌ ಪ್ಲಸ್ ಅಮೆಡಿಯಾ, 5 ಸ್ಟಾರ್‌ ರೆಡಿಸನ್‌ ಬ್ಲ್ಯೂ ಇಂಡಿಯನ್‌ ರೆಸ್ಟೋರೆಂಟ್‌ಗಳ ದೊಡ್ಡ ಪಟ್ಟಿಯೇ ಇದೆ. ಅತ್ಯಂತ ಕಡಿಮೆ ಅಂದರೆ 3000 ರೂ.ಗಳಿಂದ ಶುರುವಾಗಿ ಅತ್ಯಂತ ದುಬಾರಿ ಅಂದರೆ 10,000 ರೂ.ಗಳಿಂದ 15,000 ರೂ.ಗಳವರೆಗೆ ಪ್ರತಿದಿನದ ದರಗಳಿವೆ.

ವಿಯೆನ್ನಾದ ಸೇಲ್ಸ್ ಬರ್ಗ್‌, ಡೆನ್ಯೂ ಬೂಕಾಪೆಸ್ಟ್, ಪ್ರಾಗ್‌ ಮುಂತಾದ ನಗರಗಳ ಪ್ರವಾಸ ಕೂಡ ಮಾಡಬಹುದು.

ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ವಿಯೆನ್ನಾ ಹತ್ತು ಹಲವು ಪ್ರಯತ್ನ ನಡೆಸುತ್ತಿದೆ. ಕೊರೋನಾ ಲಾಕ್‌ ಡೌನ್‌ ಬಳಿಕ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕರೆ ಅದರಲ್ಲಿ ನಿಮ್ಮ ಪ್ರಥಮ ಆಯ್ಕೆ ವಿಯೆನ್ನಾ ಆಗಿರಲಿ. ಈಝಬೆಲ್ ‌ರೈಟರ್‌, ವಿಯೆನ್ನಾ ಟೂರಿಸ್ಟ್ ಬೋರ್ಡಿನ ಮುಖ್ಯಸ್ಥರ ಪ್ರಕಾರ, ಪ್ರತಿವರ್ಷ 65,000 ದಿಂದ 70,000ದಷ್ಟು ಪ್ರವಾಸಿಗರು ವಿಯೆನ್ನಾಕ್ಕೆ ಭೇಟಿ ಕೊಡುತ್ತಾರೆ. ಅದರಲ್ಲಿ ಹನಿಮೂನ್‌ಗೆ ಬರುವವರೇ ಹೆಚ್ಚು. ಅಜ್ಜಿ ತಾತಾ ಸೇರಿದಂತೆ ಮಕ್ಕಳು ಕೂಡ ಬರುತ್ತಾರೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ