ರಾಜ್ಯದ ರೈತರು ಸಿರಿಧಾನ್ಯಗಳನ್ನು ಬೆಳೆಯುವುದರ ಜತೆಗೆ ಆ ಬೆಳೆಯನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧನೆಯೊಂದಿಗೆ ಬ್ರ್ಯಾಂಡಿಂಗ್​ ಮಾಡಿಕೊಂಡು ತಾವೇ ಉದ್ಯಮಿಗಳಾಗಬೇಕು. ಇದಕ್ಕಾಗಿ ಕೃಷಿ ಇಲಾಖೆಯು ಸಂಸ್ಕರಿತ ಹಾಗೂ ಮೌಲ್ಯವರ್ಧಿತ ಪರಿಕಲ್ಪನೆಯೊಂದಿಗೆ ರಾಜ್ಯದ ರೈತರನ್ನು ಉದ್ಯಮಿಗಳನ್ನಾಗಿ ರೂಪಿಸಲು ಫೆಬ್ರವರಿಯಲ್ಲಿ ಮೊದಲ ಹಂತದ ವಿಶಿಷ್ಟ ಹಾಗೂ ಭಿನ್ನವಾದ “ಅಂತರಾಷ್ಟ್ರೀಯ ವಾಣಿಜ್ಯ ಮೇಳ-2026” ಆಯೋಜಿಸುತ್ತಿದೆ.

ಫೆ. 6ರಿಂದ 8ರವರೆಗೆ ನಗರದ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ನಡೆಯಲಿದೆ. ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಸೆಕಂಡರಿ ಕೃಷಿ ನಿರ್ದೇಶನಾಲಯ, ಕೆಪೆಕ್​, ಕೆಎಸ್​ಎಸ್​ಸಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಜಲಾನಯನ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗುತ್ತಿದೆ.

ಹೊಸ ಪರಿಕಲ್ಪನೆಯಡಿ ಮೇಳ: ಸಿರಿಧಾನ್ಯಗಳ ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2017ರಿಂದ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ವಿಭಿನ್ನವಾಗಿ “ಅಗ್ರಿಕಲ್ಚರ್​ ಬಿಯಾಂಡ್​ ಪ್ರೊಡಕ್ಷನ್​- ಎಂಪವರಿಂಗ್​ ಫಾರ್ಮರ್ಸ್​” (ಉತ್ಪಾದನೆಯನ್ನು ಮೀರಿದ ಕೃಷಿ-ರೈತರನ್ನು ಸಬಲೀಕರಣಗೊಳಿಸುವುದು) ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತಿದೆ.

ಉದ್ಯಮಿಗಳನ್ನಾಗಿಸಲು ಸಹಕಾರಿ: ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ, ಬ್ರ್ಯಾಂಡಿಂಗ್​ ಮತ್ತು ಕ್ರೆಡಿಟ್​ ಸೇವೆ ಕುರಿತು ರೈತರಿಗೆ ಉತ್ತೇಜನ ನೀಡಲಾಗುವುದು. ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್​ಪಿಒ) ತಮ್ಮ ಉತ್ಪನ್ನಗಳ ಮಾರಾಟ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ಅನುವಾಗುವಂತೆ ಬ್ರ್ಯಾಂಡಿಂಗ್ ಮತ್ತು ಔಟ್​ಪುಟ್​ ಕ್ರೆಡಿಟ್​ನ ಮೌಲ್ಯದ ಬಗ್ಗೆ ಅರಿವು ಮೂಡಿಸುವುದು. ಹಾಗೆಯೇ, ಪ್ರತಿಷ್ಠಿತ ಕ್ರೆಡಿಟ್​ ಸಂಸ್ಥೆಗಳೊಂದಿಗೆ ವಾಸ್ತವಿಕವಾಗಿ ಸಂಪರ್ಕ ಕಲ್ಪಿಸಿಕೊಡುವುದು.

ಮೇಳದ ಪೂರ್ವಭಾವಿ ಕಾರ್ಯಕ್ರಮವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೇಳದ ಪರಿಕಲ್ಪನೆಯನ್ವಯ ಕಾರ್ಯಾಗಾರ, ಮೇಳ, ಪಾಕ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಕೃಷಿ ಇಲಾಖೆ ನಿರ್ದೇಶಕ ಡಾ ಜಿ.ಟಿ.ಪುತ್ರ ಮಾತನಾಡಿ, ಸಿರಿಧಾನ್ಯಗಳ ಸಂಸ್ಕರಿತ ಹಾಗೂ ಮೌಲ್ಯವರ್ಧಿತ ಪರಿಕಲ್ಪನೆಯೊಂದಿಗೆ ರಾಜ್ಯದ ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸೂಕ್ತ ವೇದಿಕೆ ಕಲ್ಪಿಸುವುದು ಈ ಬಾರಿಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಮುಖ್ಯ ಉದ್ದೇಶ ಎಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ