ಭಾರತೀಯ ಮಹಿಳಾ ಕುಸ್ತಿ ರಂಗಕ್ಕೆ ಇತ್ತೀಚಿನ ಕೆಲವು ವರ್ಷಗಳು ಬಹಳ ಆಶಾದಾಯಕವಾಗಿದ್ದವು. ಸಾಕ್ಷಿ ಮಲಿಕ್‌, ವಿನೇಶ್‌ ಪೆಗಟ್‌, ದಿವ್ಯಾ ಕಾಕರಾನ್‌, ಪೂಜಾ ಢಾಂಡಾ ಮುಂತಾದವರು ಈ ಕ್ರೀಡೆಯನ್ನು ಹೊಸದೊಂದು ಎತ್ತರಕ್ಕೆ ಕೊಂಡೊಯ್ದರು. ಪೂಜಾ ಬಗ್ಗೆ ಹೇಳಬೇಕೆಂದರೆ, ಇತ್ತೀಚೆಗಷ್ಟೇ ಸ್ಪೇನ್‌ನ ರಾಜಧಾನಿ ಮ್ಯಾಂಡ್ರಿಡ್‌ನಲ್ಲಿ ನಡೆದ ಗ್ರ್ಯಾಂಡ್‌ ಪ್ರಿ ಇಂಟರ್‌ ನ್ಯಾಷನಲ್ ಕುಸ್ತಿ ಟೂರ್ನಮೆಂಟ್‌ನಲ್ಲಿ 57 ಕಿಲೋ ವರ್ಗದಲ್ಲಿ ಬೆಳ್ಳಿಪದಕ ಗೆದ್ದು ದೇಶದ ಹೆಸರು ರಾರಾಜಿಸುವಂತೆ ಮಾಡಿದರು.

ಅದಕ್ಕೂ ಮುಂಚೆ 2018ರ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಬುಡಾಪೆಸ್ಟ್ ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು. ಈ ಪದಕ ಪಡೆದ 4ನೇ ಆಟಗಾರ್ತಿ ಎನಿಸಿಕೊಂಡರು. ಅದಕ್ಕೂ ಮುಂಚೆ ಅಲಕಾ ತೋಮರ್‌, ಗೀತಾ ಪೋಗಟ್‌ ಹಾಗೂ ಬಬಿತಾ ಪೋಗಟ್‌ ಈ ಸಾಧನೆಗೈದಿದ್ದರು.

ಇದೇ ಕಾರಣದಿಂದ ಪೂಜಾ ಮ್ಯಾಟ್‌ ಮೇಲೆ ಸೆಣಸಾಟಕ್ಕೆ ಇಳಿದುಬಿಟ್ಟರೆ ಪ್ರೇಕ್ಷಕರ ಕುತೂಹಲ ದುಪ್ಪಟ್ಟಾಗುತ್ತದೆ. ಅವರು ಈ ಹಂತಕ್ಕೆ ತಲುಪಲು ಪೈಲ್ವಾನ್‌ ಹುಡುಗರ ಜೊತೆ ಪ್ರ್ಯಾಕ್ಟೀಸ್‌ ಮಾಡಲು ಕೂಡ ಹಿಂದೇಟು ಹಾಕಲಿಲ್ಲ. ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, ``ನನಗೆ ಹುಡುಗರ ಜೊತೆ ಪ್ರ್ಯಾಕ್ಟೀಸ್‌ ಮಾಡಲು ಬಹಳ ಇಷ್ಟವಾಗುತ್ತದೆ. ಏಕೆಂದರೆ ಅವರಲ್ಲಿ ಶಕ್ತಿ ಚಾತುರ್ಯ ಹಾಗೂ ವೇಗ ಇರುತ್ತದೆ. ಅದು ನನ್ನ ಆಟವನ್ನು ಸುಧಾರಿಸಲು ನೆರವಾಗುತ್ತದೆ.''

ತಂದೆಯಿಂದ ಪ್ರೇರಣೆ

ಜನವರಿ 1, 1994ರಂದು ಹರಿಯಾಣಾದ ಹಿಸ್ಸಾರ್‌ ಜಿಲ್ಲೆಯಲ್ಲಿ ಹುಟ್ಟಿದ ಪೂಜಾ ತಮ್ಮ ಅಥ್ಲೀಟ್‌ ತಂದೆ ಅಜ್ಮೇರ್‌ ಸಿಂಗ್‌ರವರ ಆಟದ ಚಾತುರ್ಯ ನೋಡಿ ಕ್ರೀಡೆಗೆ ದಾಪುಗಾಲು ಇಟ್ಟರು. ಈ ಕುರಿತಂತೆ ಅವರು ಹೀಗೆ ಹೇಳುತ್ತಾರೆ, ``ಅಪ್ಪ ಪ್ರ್ಯಾಕ್ಟೀಸ್‌ಗೆಂದು ದಿನ ಮುಂಜಾನೆ ಓಡಲು ಹೋಗುತ್ತಿದ್ದರು. ಆಗ ನಾನು ತುಂಬ ಚಿಕ್ಕವಳು. ನಾನೂ ಅವರೊಂದಿಗೆ ಓಡುತ್ತಿದ್ದೆ. ಹೀಗಾಗಿ ಅನೇಕ ಕ್ರೀಡೆಗಳನ್ನು ಕಲಿತೆ. ದೊಡ್ಡವಳಾದ ಬಳಿಕ ನಾನು ಕುಸ್ತಿಯನ್ನು ಆಯ್ಕೆ ಮಾಡಿಕೊಂಡೆ. ಆದರೆ ನಮ್ಮ ಹಳ್ಳಿಯವರು ಹುಡುಗಿಯಾಗಿ ಈ ಆಟ ಆಡೋದು ಸರಿಯಲ್ಲ. ಒಂದು ವೇಳೆ ಇವಳಿಗೆ ಗಾಯಗಳಾದರೆ ಇವಳನ್ನು ಯಾರು ಮದುವೆಯಾಗುತ್ತಾರೆ ಎಂದು ನನ್ನ ತಂದೆಯ ಮುಂದೆಯೇ ಕೇಳುತ್ತಿದ್ದರಂತೆ!

``ಆದರೆ ಪರಿಸ್ಥಿತಿ ಈಗಲೂ ಬದಲಾಗಿಲ್ಲ. ಹುಡುಗಿಯರು ನಿರ್ಧಾರ ಕೈಗೊಳ್ಳಲು ಅವರಿಗೆ ಪರಿಪೂರ್ಣ ಸ್ವಾತಂತ್ರ್ಯ ದೊರೆತಿಲ್ಲ. ಯಾವುದಾದರೂ ಹುಡುಗಿ ಹೊಸದಾಗಿ ಏನನ್ನಾದರೂ ಮಾಡಲು ಯೋಚಿಸಿದರೆ ಅವಳಿಗೆ ಜನರ ಸಹಕಾರ ದೊರಕಬೇಕು. ಆದರೆ ಅದು ಸಿಗ್ತಾ ಇಲ್ಲ. ಕ್ರೀಡಾಪಟುಗಳು ತಮ್ಮ ಪ್ರದರ್ಶನದ ಮುಖಾಂತರ ಜನರ ನಕಾರಾತ್ಮಕ ಯೋಚನೆಯನ್ನು ಸಕಾರತ್ಮಕ ಯೋಚನೆಯಾಗಿ ಬದಲಿಸಬೇಕು.

``ನಾನು ಮತ್ತೊಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಯಾರಾದರೂ ಆಟಗಾರ ದೇಶದ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದರೆ, ಅದೇ ಜನರು `ನಮಗೆ ಮೊದಲೇ ಗೊತ್ತಿತ್ತು. ಈ ಹುಡುಗಿ ಬಹಳ ಪರಿಶ್ರಮ ಪಟ್ಟಿದ್ದಾಳೆ,' ಎಂದು ಹೇಳಲು ಹಿಂದೇಟು ಹಾಕುವುದಿಲ್ಲ!

``ನನ್ನ ಕುಟುಂಬದವರು ನನಗೆ ಸಂಪೂರ್ಣ ಸಹಕಾರ ನೀಡಿದರು. ಹಾಗೆಂದೇ ನಾನು ಈ ಹಂತಕ್ಕೆ ತಲುಪುವುದು ಸಾಧ್ಯವಾಯಿತು. ಜಗತ್ತಿನ ವಿರೋಧ ಲೆಕ್ಕಿಸದೆ ನಮ್ಮ ಹುಡುಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾಳೆಂದರೆ, ನಾವು ಅವಳಿಗೆ ಸಂಪೂರ್ಣ ಬೆಂಬಲ ನೀಡ್ತೀವಿ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ