ಯಾವ ದೇಶದಲ್ಲಿ ಮಹಿಳೆಯರಿಗೆ ಕಾರು ಚಲಾಯಿಸಲು ದೀರ್ಘ ಸಂಘರ್ಷ ನಡೆಸಬೇಕಾಯಿತೊ, ಆ ದೇಶದಲ್ಲಿ ಒಂದು ರೋಬೋಗೆ ಮಹಿಳೆಯ ಹೆಸರನ್ನು ಇಡಲಾಯಿತು. ಈಗ ಅದೇ ರೋಬೋ ಮಾನವನಿಗೆ ದೇಶದ ನಾಗರಿಕತೆಯ ಗೌರವ ಸಿಕ್ಕಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.

ಸೌದಿ ಅರೇಬಿಯಾ ಸರ್ಕಾರ `ಸೋಫಿಯಾ’ ಹೆಸರಿನ ಮಹಿಳಾ ರೋಬೋಗೆ `ದೇಶದ ನಾಗರಿಕ’ ಎಂಬ ಮನ್ನಣೆಯನ್ನು ಕೊಟ್ಟಿದೆ.

ಯಾವುದೇ ಒಂದು ದೇಶದಲ್ಲಿ ರೋಬೋಗೆ ಆ ದೇಶದ ನಾಗರಿಕತೆಯ ಮಾನ್ಯತೆ ದೊರಕಿರುವುದು ಇದೇ ಮೊದಲು. `ಸೋಫಿಯಾ’ ರಿಯಾದ್‌ನಲ್ಲಿ ನಡೆದ `ಪ್ಯೂಚರ್‌ ಇನ್ವೆಸ್ಟ್ ಮೆಂಟ್‌’ ಸಮ್ಮೇಳನದಲ್ಲಿ `ಸ್ಪೀಕರ್‌’ನಂತೆ ಕೆಲಸ ಮಾಡಿತು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ. ಆ ದೇಶದ ಯುವ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌, ದೇಶದ ಪ್ರಗತಿಯಲ್ಲಿ ಧರ್ಮ ಎಂದೂ ಅಡ್ಡಗಾಲಾಗದು ಎಂದು ಹೇಳಿದರು. ರೋಬೋ ಒಂದಕ್ಕೆ ಮಹಿಳೆಯ ಹೆಸರು ಇಟ್ಟಿದ್ದು ಹಾಗೂ ಅದಕ್ಕೆ ದೇಶದ ನಾಗರಿಕ ಮಾನ್ಯತೆ ದೊರಕಿಸಿಕೊಟ್ಟಿರುವುದು, ಇದು ಪ್ರಗತಿಪರ ಹೆಜ್ಜೆಯಾಗಿದೆ ಎಂದರು.

`ಸೋಫಿಯಾ’ ರೋಬೋವನ್ನು ನಿರ್ಮಿಸಿರುವುದು ಹಾಂಕಾಂಗ್‌ನ ಹೆನ್ಸನ್‌ ರೋಬೊಟಿಕ್ಸ್ ಎಂಬ ಕಂಪನಿ. ಒಬ್ಬ ಸಾಮಾನ್ಯ ಮಾನವನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಸೋಫಿಯಾ ರೋಬೋಗೆ ಇದೆ. ಅದು ಹಲವು ಸ್ಪರ್ಧೆ, ಕ್ವಿಜ್‌ಗಳಲ್ಲಿ ಗೆಲುವು ಸಾಧಿಸಿದೆ. ಅದು ಎಂಥದೇ ಪ್ರಶ್ನೆಗೂ ಉತ್ತರ ಕೊಡುವ ಸಾಮರ್ಥ್ಯ ಹೊಂದಿದೆ.

– ದೀಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ