ಮನುಷ್ಯನಿಗೆ ಮೊದಲಿನಿಂದಲೂ ಪ್ರಾಣಿಗಳ ಶಕ್ತಿಯ ಬಗ್ಗೆ ಅಸೂಯೆ ಇದೆ. ಅವನ ಇಚ್ಛೆ ಯಾವಾಗಲೂ ಪೌರಾಣಿಕ ಯುಗದ ಪ್ರಾಣಿಗಳಂತಹ ಗುಣವುಳ್ಳ ಮಾನವ ಹಾಗೆ ಪರಿಪೂರ್ಣತೆ ಪಡೆಯುವುದಾಗಿದೆ. ಪ್ರತಿಯೊಂದು ನಾಗರಿಕತೆಯಲ್ಲೂ ಏಂಜೆಲ್‌ಗಳು, ರಾಕ್ಷಸರು ಹಾಗೂ ಹಾರುವ ದೇವತೆಗಳ ಕಲ್ಪನೆಯಿಂದ ತುಂಬಿಹೋಗಿವೆ. ಅದು ಗ್ರೀಕ್‌ ಇತಿಹಾಸ ಆಗಿರಬಹುದು, ರೋಮನ್‌ ಇತಿಹಾಸವಾಗಿರಬಹುದು. ಇಲ್ಲವೇ ಬೌದ್ಧ ಸಂಸ್ಕೃತಿ ಆಗಿರಬಹುದು ಇಲ್ಲವೇ, ಭಾರತೀಯ ಸಂಸ್ಕೃತಿ ಇರಬಹುದು.

ಪೌರಾಣಿಕ ಹಾಗೂ ಜನಪದ ಕಥೆಗಳು ಮಾನವ ಹಾಗೂ ಪ್ರಾಣಿಪಕ್ಷಿಗಳಿಂದ ಮಿಳಿತಗೊಂಡಿವೆ. ಇವುಗಳಲ್ಲಿ ಬಹಳಷ್ಟು ಪಾತ್ರಗಳಿಗೆ ದೈವತ್ವದ ದರ್ಜೆ ಕೊಡಲಾಗಿದೆ. ಅದು ದೇವರ ರೂಪ ಆಗಿರಬಹುದು ಇಲ್ಲ  ದೆವ್ವದ ಅವತಾರ ಆಗಿರಬಹುದು. ಕ್ರೈಸ್ತ ಧರ್ಮದ ಕಲ್ಪನೆಯ ಪ್ರಕಾರ, ಸೈತಾನನನ್ನು ಮಾನವ ದೇಹ, ಮೇಕೆಯ ಕೋಡುಳ್ಳ, ತೋಳದ ಚರ್ಮ ಹಾಗೂ ಮೂಗು, ಕಿವಿಯುಳ್ಳ ಮತ್ತು ಕಾಡು ಹಂದಿಯ ಹಲ್ಲುಗಳ ಪಾತ್ರದ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.

ಇದೆಂಥ ಮೂಢನಂಬಿಕೆ?

ಮಾನವ ಪ್ರಾಣಿ ಮಿಶ್ರಿತ ಪಾತ್ರಗಳು ಸಾವಿರಾರು ವರ್ಷಗಳ ಹಿಂದೆ ಗುಹೆಗಳಲ್ಲಿ ರಚಿಸಿದ ಚಿತ್ರಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಪೂಜಾರಿಗಳಿಗೆ ಪ್ರಾಣಿಗಳ ಹಾಗೆ ಶಕ್ತಿ ಪಡೆದಿರುವುದನ್ನು ತೋರಿಸಲಾಗಿದೆ. ಭಾರತದಲ್ಲಿ ಮಾನವ ಹಾಗೂ ಪ್ರಾಣಿ ಮಿಶ್ರಿತ ಪಾತ್ರಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ಎಂದರೆ ಗಣೇಶ. ಭಾರತೀಯ ಪೌರಾಣಿಕ ಕಥೆಗಳ ಈ ಮಿಶ್ರ ಪಾತ್ರಗಳನ್ನಷ್ಟೇ ಪೂಜಿಸಲಾಗುವುದಿಲ್ಲ. ಇಲ್ಲಿ ಕೂರ್ಮ ಆಮೆ, ಮತ್ಸ್ಯಮೀನು, ಗರುಡ, ಜಾಂಬವಂತ ಕರಡಿ, ಕಾಮಧೇನು ಹಸು, ಸರ್ಪವನ್ನು ಕೂಡ ಪೂಜಿಸಲಾಗುತ್ತದೆ.

ಗ್ರೀಕ್‌ ಪೌರಾಣಿಕತೆಯಲ್ಲಿ `ಪೇನ್‌' ಎನ್ನುವುದು ದೇವತೆಯ ಹೆಸರು. ಆ ದೇವತೆಯ ದೇಹದ ಮೇಲ್ಭಾಗ ಮಾನವನದಾಗಿದ್ದು, ಕೆಳಗಿನ ಭಾಗ ಮೇಕೆಯದ್ದಾಗಿದೆ. ಕಾಡುಗಳಲ್ಲಿ ಹೊಲಗಳಲ್ಲಿ  ಕುರಿ ಹಿಂಡುಗಳಲ್ಲಿ ನಿಸರ್ಗದಲ್ಲಿ ಮಿಳಿತಗೊಂಡ ಸಂಗೀತದ ದೇವತೆ. ಆ ದೇವರು ತನ್ನ ಧ್ವನಿಯಿಂದ ಹೆದರಿಸುತ್ತದೆ. ಆಂಗ್ಲ ಶಬ್ದ `ಪ್ಯಾನಿಕ್‌' ಈ ದೇವತೆಯ ಹೆಸರಿನಿಂದಲೇ ಉತ್ಪತ್ತಿಯಾಗಿದೆ ಎಂದು  ಹೇಳಲಾಗುತ್ತದೆ.

ಚಿತ್ರವಿಚಿತ್ರ ಜನಪದ ಕಥೆಗಳು

`ಮರ್ಮೇಡ್‌' ಅಂದರೆ ಮತ್ಸ್ಯ ಕನ್ಯೆ. ಅರ್ಧ ಮಾನವ, ಅರ್ಧ ಮೀನಿನ ದೇಹ ಪ್ರತಿಯೊಂದು ನಾಗರಿಕತೆಯ ಪೌರಾಣಿಕತೆಯ ಭಾಗವಾಗಿದೆ. `ಜೆಂಗು' ಆಫ್ರಿಕಾ ದೇಶದ ಕ್ಯಾಮರೂನ್‌ನ ಒಂದು ನಂಬಿಕೆಯ ಪ್ರಕಾರ, ಮರ್ಮೇಡ್‌ ಜಲದೇವತೆ. ಆಕೆಯ ಪೂಜೆ ಮಾಡುವುದರಿಂದ ಸುಖಶಾಂತಿ ಲಭಿಸುತ್ತದೆ.

`ಸಿರೆನಾ' ಮತ್ತು `ಸಿರೇನಿ' ಮತ್ಸ್ಯ ಕನ್ಯೆ ಮತ್ತು ಮತ್ಸ್ಯ ದೇವತೆ. ಫಿಲಿಪ್ಪಿನ್ಸ್ ನ ಜನಪದ ಕಥೆಗಳ ಪ್ರಕಾರ, ಅವರು ಜಲರಕ್ಷಣೆ ಮಾಡುತ್ತಾರೆ. ಸಿರೆನಾಳ ಮಧುರ ಧ್ವನಿಯಿಂದ ನಾವಿಕರಲ್ಲಿ ಒಂದು ಬಗೆಯ ಉನ್ಮತ್ತ ಸ್ಥಿತಿ ಉಂಟಾಗಿ ನಾವೆಗಳು ಪರಸ್ಪರ ಡಿಕ್ಕಿ ಹೊಡೆದು ಮುಳುಗುತ್ತವೆ.

`ಡ್ಯಾಗೊನ್‌' ಒಂದು ಜಲಚರ ಆಗಿದ್ದು, ಅದನ್ನು ಮೆಸೆಪೊಟೋಮಿಯಾದಲ್ಲಿ ಪೂಜಿಸಲಾಗುತ್ತದೆ. ಜಪಾನ್‌ನಲ್ಲಿ ಸಮುದ್ರ ಮಾಟಗಾತಿಯರ ಕಥೆಗಳು ಹೆಚ್ಚು ಪ್ರಚಲಿತವಾಗಿವೆ.

ಕೊನೆಗೊಳ್ಳುತ್ತಿರುವ ಪರಂಪರೆ

ಗ್ರೀಕ್‌-ರೋಮನ್‌ ಪೌರಾಣಿಕ ಕಥೆಯ ಪ್ರಕಾರ `ಹಾರ್ಪಿ' ಎನ್ನುವುದು ಎಂತಹ ಒಂದು ಪ್ರಾಣಿಯೆಂದರೆ, ಅದರ ಕೆಳಭಾಗದ ರೆಕ್ಕೆ ಹಾಗೂ ಉಗುರು ಪಕ್ಷಿಯ ರೀತಿಯಲ್ಲಿದ್ದು, ಎದೆ ಹಾಗೂ ತಲೆ ಮಹಿಳೆಯ ಹಾಗಿದೆ. ಹಾರ್ಪಿ ಕೋಪಿಷ್ಟ ಹಾಗೂ ದಾಳಿಕೋರ ಆಗಿರುತ್ತವೆ. ಅವು ಕೊಳಕು ವಾತಾರಣದಲ್ಲಿರುತ್ತವೆ. ಯಾರು ಸಾಯಲು ಸಿದ್ಧರಿರುವುದಿಲ್ಲವೋ, ಅವರನ್ನು ಕರೆತರಲು `ಹಾರ್ಪಿ'ಗಳನ್ನು ಕಳುಹಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಅವು ಬೇರೆ ದೇವತೆಗಳ ಚಿಕ್ಕಪುಟ್ಟ ಕೆಲಸಗಳನ್ನು ಕೂಡ ಮಾಡಿಕೊಡುತ್ತಿದ್ದವು ಎಂದು ಉಲ್ಲೇಖ ದೊರೆಯುತ್ತದೆ. `ಲಿಲಿಟಸ್‌' ಎಂಬುದು ಗ್ರೀಕ್‌ ನಂಬಿಕೆಯ ಪ್ರಕಾರ, ಪಕ್ಷಿಯ ಕಾಲುಗಳುಳ್ಳ, ರೆಕ್ಕೆಗಳುಳ್ಳ ರಾಕ್ಷಸ. ಅದು ಜನರಿಗೆ ಪಾಪಗೈಯಲು ಪ್ರೇರಣೆ ನೀಡುತ್ತದೆ. ಸಮಾಜವನ್ನು ನಾಶಗೊಳಿಸುವುದು ಅದರ ಗುರಿಯಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ