ತಮ್ಮ ಸ್ವಪ್ರತಿಭೆಯಿಂದ ಕಲೆಯ ಮೂಲಕ ಬದುಕನ್ನು ಅದ್ಭುತವಾಗಿ ವ್ಯಾಖ್ಯಾನಿಸುವ ರಾಧಿಕಾ ಪ್ರಭು ಅವರ ಸಂಪೂರ್ಣ ಸಾಧನೆಗಳ ವಿವರ ಪಡೆಯೋಣವೇ ?

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ದುಡಿದು ಉತ್ತಮ ಸಾಧನೆ ಮಾಡಿ ಹೆಸರಾಗುವುದು ಸಾಮಾನ್ಯ. ಅದು ಸಾಹಿತ್ಯವಿರಬಹುದು, ಸಂಗೀತ, ನೃತ್ಯವಿರಬಹುದು ಕೃಷಿಯಾಗಿರಬಹುದು. ಆದರೆ ಒಬ್ಬರೇ ವ್ಯಕ್ತಿ  ಇನ್ನೂ ತಾರುಣ್ಯದಲ್ಲಿಯೇ ಒಂದೆರಡಲ್ಲ ಮೂರು ಕ್ಷೇತ್ರಗಳಲ್ಲಿ ಹೆಸರು ಗಳಿಸುವುದು ಸಾಮಾನ್ಯವಲ್ಲ. ಇಂತಹ ಅಪೂರ್ವ ಅವಕಾಶ ಹಾಗೂ ಪ್ರತಿಭೆ ಎಲ್ಲರಿಗೂ ಒಲಿಯಲಾರದು. ಆದರೆ ಇಲ್ಲೊಬ್ಬ ಸಾಧಕಿ ತನ್ನ ಬದುಕಿನಲ್ಲಿ ಅದನ್ನು ಸಾಧಿಸಿ ತೋರಿಸಿದ್ದಾರೆ.

ರಾಧಿಕಾ ಪ್ರಭು ಕನ್ನಡ ರಂಗಭೂಮಿ ಹಾಗೂ ದೃಶ್ಯ ಮಾಧ್ಯಮದ ಹಿನ್ನೆಲೆ ಇರುವ ಕಲಾವಿದರ ಕುಟುಂಬದ ಕುಡಿ. ರಾಧಿಕಾ ಮೂಲತಃ ಬೆಂಗಳೂರಿನವರು. ಇವರ ತಂದೆ ಶ್ರೀನಿವಾಸ ಪ್ರಭು ಕನ್ನಡ ರಂಗಭೂಮಿ, ಕಿರುತೆರೆ, ಚಲನಚಿತ್ರ ರಂಗದಲ್ಲಿ ಹೆಸರಾದ ನಟ ಹಾಗೂ ನಿರ್ದೇಶಕರು. ತಾಯಿ ರಂಜನಿ ಪ್ರಭು ಸಹ ಕನ್ನಡದ ಪ್ರತಿಭಾವಂತ ಕವಿಯಿತ್ರಿಯರಲ್ಲಿ  ಒಬ್ಬರಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಭರತನಾಟ್ಯ, ಕ್ಲಾಸಿಕ್‌ ಬ್ಯಾಲೆ ನೃತ್ಯಗಳಲ್ಲಿ ಪ್ರಾವೀಣ್ಯತೆ ಸಾಧಿಸಿರುವ ರಾಧಿಕಾ, ಲಂಡನ್‌ನ ಪ್ರತಿಷ್ಠಿತ ಚೆಲ್ಸಿಯಾ ಕಾಲೇಜ್‌ ಆಫ್‌ ಆರ್ಟ್‌  ಡಿಸೈನ್‌ನಿಂದ ಫೈನ್‌ ಆರ್ಟ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಜೊತೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬ್ಯಾಚ್ಯುಲರ್‌ ಆಫ್‌ ವಿಷುವಲ್‌ ಆರ್ಟ್ಸ್ ಪದವಿ ವ್ಯಾಸಂಗ ಮಾಡಿದ್ದಾರೆ. ತಾಯಿಯಿಂದ ಪ್ರೇರಿತರಾಗಿ ಇದುವರೆಗೆ ಎರಡು ಆಂಗ್ಲ ಕವನ ಸಂಕಲನಗಳ್ನೂ ಹೊರತಂದಿದ್ದಾರೆ.

radhikaa-prabhu-1

ಅಮೆರಿಕಾದ ಓಕ್ಲಹಾಮಾನಲ್ಲಿರುವ ಸಾರ್ತ್‌ ವೆಸ್ಟರ್ನ್‌ ಓಕ್ಲಹಾಮಾ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಕಲಾವಿದೆ ಹಾಗೂ ನೃತ್ಯಗಾತಿಯಾಗಿ ಸೇವೆ ಸಲ್ಲಿಸಿರುವ ರಾಧಿಕಾ ಬ್ರಿಟನ್‌ನಲ್ಲಿ ನಡೆದ ಪ್ರಥಮ ಭಾರತೀಯ ಸಂಗೀತೋತ್ಸವದಲ್ಲಿ ತಮ್ಮ ವಿಶೇಷ ಪ್ರದರ್ಶನ ನೀಡುವ ಅವಕಾಶ ಗಳಿಸಿದ್ದರು. ಜೊತೆಗೆ ಭೂತಾನಿನ ಥಿಂಪೂವಿನ ನೆಹರೂ ವಾಂಗ್‌ ಚೌಕ್‌ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಹಿಸುವುದಕ್ಕೆ ವಿಶೇಷ ಆಹ್ವಾನಿತರಾಗಿ ಆಯ್ಕೆ ಆಗಿದ್ದರು.

ಹೀಗೆ ನೃತ್ಯ, ಚಿತ್ರಕಲೆ, ಸಾಹಿತ್ಯ ಮೂರು ರಂಗಗಳಲ್ಲಿಯೂ ಏಕಕಾಲಕ್ಕೆ ತೊಡಗಿಸಿಕೊಂಡು ಅದ್ಭುತ ಸಾಧನೆ ಮಾಡಿರುವ ಪ್ರತಿಭಾವಂತೆ ರಾಧಿಕಾರೊಡನೆ ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ.

ನೀವು ನೃತ್ಯ, ಚಿತ್ರಕಲೆ, ಬರವಣಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದೀರಿ. ಏಕಕಾಲದಲ್ಲಿ ಈ ಮೂರು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಹೇಗೆ ಸಾಧ್ಯವಾಯಿತು?

ನಾನು ಯಾವುದನ್ನೂ ಸಾಧನೆ ಮಾಡಬೇಕೆಂದು ಕಲಿಯತೊಡಗಿಲ್ಲ. ನಾನು ಭರತನಾಟ್ಯ ಕಲಿಯಲು ಪ್ರಾರಂಭಿಸಿದ್ದು ನನ್ನ ಸ್ವಇಚ್ಛೆಯಿಂದ. ವಿಷುವಲ್‌ ಆರ್ಟ್ಸ್ ಸಹ ನನ್ನ ಆಸಕ್ತಿಯಿಂದಲೇ ಕಲಿಯಲು ಪ್ರಾರಂಭಿಸಿದ್ದು. ನಾನು ಅದನ್ನೇ ನನ್ನ ಕೆರಿಯರ್‌ ಆಗಿಸಿಕೊಳ್ಳಬೇಕೆಂದು ಯಾವುದನ್ನೂ ಕಲಿಯತೊಡಗಿದ್ದಲ್ಲ. ಹಾಗೆಯೇ ನಾನು ಈ ವಿಚಾರದಲ್ಲಿ ಅದೃಷ್ಟವಂತಳೆನ್ನಬೇಕು. ನನ್ನ ಕುಟುಂಬ, ಗುರುಗಳು ಎಲ್ಲ ಕಡೆಯಿಂದ ನನಗೆ ಬೇಕಾಗಿದ್ದ ಸಹಾಯ, ಸಹಕಾರ ಅದು ಅವಶ್ಯವಿದ್ದ ಸಮಯದಲ್ಲಿ ದೊರಕಿತು. ಹೀಗಾಗಿ ಇದೆಲ್ಲ ಸಾಧ್ಯವಾಯಿತು.

ನಾನು ಮೊದಲು ನೃತ್ಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಏಳು ವರ್ಷದವಳಿದ್ದಾಗ ನೃತ್ಯಾಭ್ಯಾಸಕ್ಕೆ ತೊಡಗಿದೆ. ಶಾಲಾ ವಿದ್ಯಾಭ್ಯಾಸದ ತರುವಾಯ ಮತ್ತೆ ಅಕಾಡೆಮಿಕ್‌ ವಿಷಯಗಳತ್ತ ವಾಲದೆ ಇನ್ನೊಂದು ಆರ್ಟ್ಸ್ ವಿಷಯವನ್ನೇ ಆಯ್ಕೆ ಮಾಡಿಕೊಳ್ಳುವ ಉದ್ದೇಶದೊಂದಿಗೆ ಚಿತ್ರಕಲಾ ಪರಿಷತ್ತಿಗೆ ಸೇರಿ ವಿಷುವಲ್‌ ಆರ್ಟ್ಸ್ ಪದವಿ ಪಡೆದೆ. ಅಲ್ಲಿ ಕಲಿಯುತ್ತಿರುವಾಗ ನನಗೆ ಚಿತ್ರಕಲೆ ಬಗೆಗಿದ್ದ ಆಸಕ್ತಿ ಹೆಚ್ಚಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ