ಮದುವೆಯ ಕುರಿತು ನವವಧುವಿಗೆ ಬಹಳಷ್ಟು ಬಯಕೆಗಳಿರುತ್ತವೆ. ಆದರೂ ಒಮ್ಮೊಮ್ಮೆ ಮದುವೆಯ ಸಿದ್ಧತೆಗಳಲ್ಲಿ ಯಾವುದಾದರೂ ಕೊರತೆ ಉಳಿದುಬಿಡುತ್ತದೆ. ಹೀಗಾಗಿ ಜೀವನವಿಡೀ ಅದರ ನೋವು ಕಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಸಣ್ಣ ಪುಟ್ಟ ಕೊರತೆಗಳನ್ನು ನೀಗಿಸಿಕೊಂಡು ನಿಮ್ಮ ಮದುವೆ ನಿಮ್ಮ ನಿರೀಕ್ಷೆಗಳಿಗಿಂತಲೂ ಹೆಚ್ಚು ಸುಂದರವಾಗಿರುವಂತೆ ಮಾಡಿಕೊಳ್ಳಿ.

ಮದುವೆಯ ನಂತರ ನೀವು ಬಹಳ ದಿನಗಳ ಕಾಲ ಕಾಂತಿಯಿಂದ ನಳನಳಿಸುತ್ತಿರಲು ಮದುವೆಗೆ ಎಷ್ಟು ದಿನಗಳ ಮುಂಚಿನಿಂದ ಯಾವ ರೀತಿ ಸಿದ್ಧತೆ ನಡೆಸಬೇಕೆಂದು ನಿಮಗೆ ತಿಳಿಸುತ್ತಿದ್ದೇವೆ.

ವಧುವನ್ನು ಹೀಗೆ ಸಿಂಗರಿಸಿ

3 ತಿಂಗಳ ಮೊದಲಿಂದಲೇ ಬಟ್ಟೆಗಳನ್ನೂ ಸಿದ್ಧಪಡಿಸಿ. ಈಗ ವಧುಗಳಿಗೆ ವಿಭಿನ್ನ ಡಿಸೈನರ್‌ಗಳು ತಮ್ಮ ಕಲೆಕ್ಷನ್‌ನಲ್ಲಿ ಬ್ರೈಡಲ್ ಡ್ರೆಸ್‌ಗಳಿಗೆ ವಿಶೇಷ ಗಮನ ನೀಡುತ್ತಿದ್ದಾರೆ. ಮೆಹೆಂದಿ, ಸಂಗೀತ, ಮದುವೆ, ರಿಸೆಪ್ಶನ್‌ವರೆಗೆ ಡಿಸೈನರ್‌ ಬಟ್ಟೆಗಳನ್ನು ಸಿದ್ಧಪಡಿಸಬಹುದು.

ಫ್ಯಾಬ್ರಿಕ್‌ನ ಆಯ್ಕೆ ಎಲ್ಲಕ್ಕೂ ಮೊದಲು, ಈಗ ಯಾವ ರೀತಿಯ ಫ್ಯಾಬ್ರಿಕ್‌ ಫ್ಯಾಷನ್‌ನಲ್ಲಿದೆ ಎಂದು ತಿಳಿದುಕೊಳ್ಳುವುದು ಮುಖ್ಯ. ನಿಮ್ಮ ಫ್ಯಾಬ್ರಿಕ್‌ ಹಾವಾಮಾನಕ್ಕೆ ಅನುಗುಣವಾಗಿರಲಿ. ಏಕೆಂದರೆ ಆ ಬಟ್ಟೆಗಳನ್ನು ಧರಿಸಿ ನಿಮಗೆ ತೊಂದರೆಯಾಗಬಾರದು. ಈಗೀಗ ಡಿಸೈನರ್‌ ಶಿಫಾನ್‌, ಆರ್ಗೆಂಜಾ ಮತ್ತು ಸಿಲ್ಕ್ ನ್ನು ಇಷ್ಟಪಡಲಾಗುತ್ತದೆ. ಜೊತೆಗೆ ಕಾಟನ್‌ ಮತ್ತು ಕಾಟನ್‌ ಮಿಕ್ಸ್ ಡ್ರೆಸ್ ಮೆಟೀರಿಯಲ್ ಕೂಡ ಫ್ಯಾಷನ್‌ನಲ್ಲಿದೆ.

ಬಣ್ಣದ ಬಗ್ಗೆ ಹೇಳುವುದಾದರೆ ವಧುವಿಗೆ ಆಲ್ ಟೈಮ್ ಫೇವರಿಟ್‌ ಡಾರ್ಕ್‌ ಕಲರ್‌ ಅಂತೂ ಫ್ಯಾಷನ್‌ನಲ್ಲಿದೆ. ಜೊತೆಗೆ ಅನೇಕ ಡಿಸೈನರ್‌ಗಳು ಈಗೀಗ ಡಾರ್ಕ್‌ ಪಿಂಕ್‌, ವೈನ್‌, ಕಾಕ್‌ಟೇಲ್‌, ಗ್ರೀನ್‌, ಪೀಚ್‌, ರೆಡ್‌ ಇತ್ಯಾದಿ ಉಪಯೋಗಿಸಿ ವಧುವಿಗೆ ಡ್ರೆಸ್ ಗಳನ್ನು ತಯಾರಿಸುತ್ತಿದ್ದಾರೆ.

ಬಣ್ಣ ಬಣ್ಣದ ಸೀರೆಗಳು

ಒಂದು ವೇಳೆ ನಿಮ್ಮ ಬ್ರೈಡಲ್ ಡ್ರೆಸ್‌ ಕಲೆಕ್ಷನ್‌ನ್ನು ಕೊಂಚ ಭಿನ್ನವಾಗಿರಿಸುವ ಮೂಡ್‌ನಲ್ಲಿದ್ದರೆ ಬೇರೆ ಬೇರೆ ಪ್ರದೇಶಗಳ ಸೀರೆಗಳನ್ನು ಟ್ರೈ ಮಾಡಬಹುದು. ಕಾಶ್ಮೀರ್‌ ಸಿಲ್ಕ್ ನ ಪ್ರಿಂಟೆಡ್‌ ಮತ್ತು ಎಂಬ್ರಾಯಿಡರಿ ಇರುವ ಸೀರೆಗಳು, ರಾಜಾಸ್ಥಾನದ ಕುಂದಣ ವರ್ಕ್‌, ಚಂದೇರಿ, ಕೋಟಾ ಮತ್ತು ಟೈ ಅಂಡ್‌ ಡೈ ಸೀರೆಗಳು, ಉತ್ತರಪ್ರದೇಶದ ಬನಾರಸ್‌ ಸಿಲ್ಕ್, ಬ್ರೋಕೆಡ್‌ ಮತ್ತು ಟಿಶ್ಶೂ ಸೀರೆಗಳನ್ನು ಯಾವುದಾದರೂ ಕಾರ್ಯಕ್ರಮದಲ್ಲಿ ಧರಿಸಿದರೆ ನೀವು ವಿಭಿನ್ನವಾಗಿ ಕಾಣುತ್ತೀರಿ.

ಪಶ್ಚಿಮ ಬಂಗಾಳದ ಕಾಟನ್‌, ಕಾಥಾ, ಇಕ್ಕತ್‌ ಸಿಲ್ಕ್, ಬಾಲುಚರಿ ಸೀರೆಗಳು, ಒರಿಸ್ಸಾದ ಸಾಂಭಲಪುರಿ, ಬಹರಾಮಪುರಿ ಮತ್ತು ಬಾಷ್ಟಾ ಸೀರೆಗಳು ಮತ್ತು ಮಯೂರ್‌ ಭಂಜ್‌, ಕಟ್ಟಾಕೀ ಪಟ್ಟಾ, ಬಾಸ್ಕಾಯಿ, ಅಸ್ಸಾಂನ ಟಸರ್‌ ಇತ್ಯಾದಿ ಸೀರೆಗಳು ಕೈಮಗ್ಗದ ಅತ್ಯುತ್ತಮ ನಮೂನೆಯಾಗಿದ್ದು, ಅವು ನಿಮ್ಮನ್ನು ಗುಂಪಿನಲ್ಲಿಯೂ ಪ್ರತ್ಯೇಕವಾಗಿ ತೋರಿಸುತ್ತವೆ. ದಕ್ಷಿಣ ಭಾರತದ ಪೋಚಂಪಲ್ಲಿ, ಗುಂಟೂರು, ತಮಿಳುನಾಡಿನ ಕಾಂಜೀವರಂ, ಮೈಸೂರಿನ ಸಿಲ್ಕ್ ಮತ್ತು ಶಿಫಾನ್‌ ಇತ್ಯಾದಿಗಳೂ ಮದುವೆಯ ವಿಭಿನ್ನ ಕಾರ್ಯಕ್ರಮಗಳಲ್ಲಿ ಶೋಭಿಸುತ್ತವೆ.

- ಶ್ರಾವಣಿ ಭೂಪತಿ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ