ಮೊದಲನೆಯದು : ಎಲ್ಲಕ್ಕೂ ಮುಂಚೆ ಅಪರಾಧಿ ಗಮನಿಸುವುದೇನೆಂದರೆ, ಯಾವುದೇ ಮಹಿಳೆ ತನ್ನ ಸಾಫ್ಟ್ ಟಾರ್ಗೆಟ್‌ ಹೌದೊ ಅಲ್ಲವೊ ಎಂದು. ಅದು ಖಚಿತಾದಾಗಲೇ ಅವನು ಮುಂದಿನ ಹೆಜ್ಜೆ ಹಾಕುತ್ತಾನೆ. ಒಂದು ವೇಳೆ ಅವನ ಮನಸ್ಸಿನಲ್ಲಿ ಟಾರ್ಗೆಟ್ ಕುರಿತಂತೆ ಸಂದೇಹ ಉಂಟಾದರೆ ಅವನು ಮುಂದಿನ ಹೆಜ್ಜೆ ಇಡಲಾರ. ಸಾಫ್ಟ್ ಟಾರ್ಗೆಟ್‌ನ ಆಯ್ಕೆ ಕೆಲವೇ ನಿಮಿಷಗಳಲ್ಲಿ ಆಗಬಹುದು. ಇಲ್ಲಿ ಕೆಲವು ತಿಂಗಳುಗಳೇ ಹಿಡಿಯಬಹುದು.

ಎರಡನೆಯದು : ಟಾರ್ಗೆಟ್‌ ನಿಶ್ಚಿತವಾದ ಬಳಿಕ ಅಪರಾಧಿ ಅವಳನ್ನು ಸೋಲಿಸಲು (ದೈಹಿಕವಾಗಿ ಇಲ್ಲಿ ಆಮಿಷಗಳ ಮುಖಾಂತರ) ಪ್ರಯತ್ನಿಸುತ್ತಾನೆ. ತನ್ನ ಟಾರ್ಗೆಟ್‌ನ್ನು ಒಂದು ಸ್ಥಳದಿಂದ ಮತ್ತೊಂದು ಕಡೆ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ.

ಮೂರನೆಯದು : ತನ್ನ ಟಾರ್ಗೆಟ್‌ನ್ನು ಹತೋಟಿಯಲ್ಲಿಡಲು ಆಕೆಯನ್ನು ಗಾಯಗೊಳಿಸುತ್ತಾನೆ.

ನಾಲ್ಕನೆಯದು : ತನ್ನ ಆಸೆ ಈಡೇರಿಸಿಕೊಳ್ಳುವುದು. ಯಾವುದೇ ಜಗಳವಿಲ್ಲದೆ ಆತ್ಮರಕ್ಷಣೆಯ ಮಾತು ಬಂದರೆ, ಅದು ಮೊದಲ ಹಂತಕ್ಕೆ ಸಂಬಂಧಿಸಿದೆ. ಅಂದರೆ ಒಬ್ಬ ಮಹಿಳೆಯ ಕಡೆ ಇಂತಹ ಹೆಜ್ಜೆ ಹಾಕುವುದು ಅದರಿಂದ ಯಾವುದೇ ದುಷ್ಟ ವ್ಯಕ್ತಿಯೊಬ್ಬನ ಜೊತೆ ಸೆಣಸಾಡಿದಂತಲ್ಲ. ಒಂದು ವೇಳೆ ಮುಖಾಮುಖಿಯಾದಾಗಲೂ ಅವನಿಗೆ ಸಾಫ್ಟ್ ಟಾರ್ಗೆಟ್‌ ಅನಿಸದೇ ಇರಬೇಕು. ಅದರಿಂದ ಅವನು ಈ ಮಹಿಳೆ ಸಾಫ್ಟ್ ಟಾರ್ಗೆಟ್‌ ಅಲ್ಲವೋ ಹೌದು ಎಂದು ಗೊಂದಲಕ್ಕೆ ಬೀಳಬಹುದು. ಯಾವುದೇ ಮಹಿಳೆ ಸಾಫ್ಟ್ ಟಾರ್ಗೆಟ್‌ ಆಗದೇ ಇರಲು ಕೆಳಕಂಡ ಉಪಾಯಗಳನ್ನು ಅನುಸರಿಸಬೇಕು.

ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿ.

ನೀವು ಮನೆಯಲ್ಲಿ ಒಬ್ಬರೇ ಇದ್ದರೆ ಹೊರಗಿನ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ.

ನಾವು ಸಾಮಾನ್ಯವಾಗಿ ಹಿಂಬಾಗಿಲು ಅಥವಾ ಮೆಟ್ಟಿಲಿನ ಬಾಗಿಲನ್ನು ಹಾಕಲು ಮರೆತುಬಿಡುತ್ತೇವೆ. ಅಂತಹ ತಪ್ಪು ಮಾಡಬೇಡಿ.

ಗೇಟ್‌ ಬಳಿ, ಫೋನ್‌ನಲ್ಲಿ ಅಥವಾ ಯಾರೊಂದಿಗಾದರೂ ಮಾತುಕತೆಯ ಸಂದರ್ಭದಲ್ಲಿ ನಾನು ಏಕಾಂಗಿಯಾಗಿದ್ದೇನೆ ಎಂಬ ಮಾತನ್ನು ಯಾವುದೇ ಕಾರಣಕ್ಕೂ ಹೊರಬೀಳದಂತೆ ನೋಡಿಕೊಳ್ಳಿ. ಮನೆಯಲ್ಲಿ ಅಲಾರ್ಮ್ ವ್ಯವಸ್ಥೆ ಅಳವಡಿಸಿ. ಅಲಾರ್ಮ್ ಇರದೇ ಇದ್ದರೆ ಕಾರಿನ ರಿಮೋಟ್‌ನ್ನೇ ಹಾಸಿಗೆಯ ಬಳಿ ಇಟ್ಟುಕೊಳ್ಳಿ. ಯಾವಾಗಲಾದರೂ ಅಪರಿಚಿತ ಧ್ವನಿ ಕೇಳಿ ಬಂದರೆ ರಿಮೋಟ್‌ ಒತ್ತಿ.ಅಂದಹಾಗೆ ಅಪರಾಧಿಗಳಿಗೆ ಧ್ವನಿ ಅಥವಾ ಗದ್ದಲದಿಂದ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಅಲಾರ್ಮ್ ನಿಂದ ಅವರು ಅಲ್ಲಿಗೆ ಸುಲಭವಾಗಿ ಪ್ರವೇಶಿಸಲಾರರು.

- ಮೋನಿಕಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ