ಪ್ರವಾಸ ಎಂದಾಗ ಅದಕ್ಕೊಂದಷ್ಟು ಟ್ರಾವೆಲ್ಸ್ ‌ಏಜೆನ್ಸಿಗಳು, ಅವರಿಗೆ ಇಂತಿಷ್ಟು ಹಣ ಕೊಟ್ಟರಾಯಿತು, ಪ್ರವಾಸಿ ತಾಣಗಳನ್ನು ತೋರಿಸುವುದರಿಂದ ಹಿಡಿದು, ಊಟ, ಉಪಚಾರ ಎಲ್ಲದರ ಜವಾಬ್ದಾರಿಯೂ ಅವರದೇ. ನಿರಾಳವಾಗಿ ಅವರ ಜೊತೆ ಹೋಗಿ ಬಂದರಾಯಿತು. ಅಲ್ಲಿ ಅವರು ಏನು ತೋರಿಸುತ್ತಾರೋ ಅಥವಾ ಎಷ್ಟು ತೋರಿಸುತ್ತಾರೋ ಅಷ್ಟು ಮಾತ್ರವೇ ನೋಡಲು ಸಾಧ್ಯ. ನಮಗೆ ಇಷ್ಟ ಇವರು ಯಾವುದೇ ಸ್ಥಳವನ್ನು ವಿವರವಾಗಿ ನೋಡಲಾಗುವುದಿಲ್ಲ. ಆದ್ದರಿಂದ ಈಗಿನ ಯುವ ಜನತೆ ತಾವೇ ಪ್ರವಾಸ ಯೋಜಿಸುತ್ತಾರೆ. ತಮಗಿಷ್ಟ ಬಂದ ರೀತಿಯಲ್ಲಿ ಪ್ರವಾಸದ ಸ್ಥಳಗಳ ಪಟ್ಟಿ, ಐಟಿನರಿಯನ್ನು ಸಿದ್ಧಪಡಿಸುತ್ತಾರೆ. ಇದಕ್ಕಿಂತ ವಿಭಿನ್ನವಾದ ಮತ್ತೊಂದು ರೀತಿಯ ಪ್ರವಾಸವೆಂದರೆ ತಾವೇ ವಾಹನವನ್ನು ಡ್ರೈವ್ ‌ಮಾಡಿಕೊಂಡು ಒಂದಷ್ಟು ಊರುಗಳನ್ನು ನೋಡಿಕೊಂಡು ಬರುತ್ತಾರೆ. ಅನೇಕ ಬಾರಿ ಇಲ್ಲಿ ಪ್ರವಾಸದ ರಂಜನೆಯೇ ಮುಖ್ಯವಾಗಿರುತ್ತದೆ. ಇದನ್ನು ರೋಡ್‌ ಟ್ರಿಪ್‌ ಎಂದು ಹೆಸರಿಸುತ್ತಾರೆ. ಇದಕ್ಕಿಂತ ಭಿನ್ನವಾದದ್ದು, ಒಂದು ಗುರಿಯನ್ನಿಟ್ಟುಕೊಂಡು, ಈ ಪ್ರವಾಸದಲ್ಲಿ ಹಾದು ಹೋಗುವ ಊರುಗಳಲ್ಲಿ ತಾವು ಅಂದುಕೊಂಡ ಗುರಿಯನ್ನು ಸಾಧಿಸುವ ವಿಷಯ ಅಲ್ಲಿ ಮುಖ್ಯವಾಗಿರುತ್ತದೆ. ಬೆಂಗಳೂರಿನ ನಾಲ್ವರೂ ಮಹಿಳೆಯರು ಒಂದು ಗುರಿಯನ್ನಿಟ್ಟುಕೊಂಡು ಬೆಂಗಳೂರಿನಿಂದ ಧನುಷ್ಕೋಡಿಯವರೆಗೆ ಇಂತಹ ಒಂದು ರೋಡ್‌ ಟ್ರಿಪ್‌ ನ್ನು ಆಯೋಜಿಸಿದರು. ಬೆಂಗಳೂರಿನ ಎಚ್‌.ಎಸ್‌.ಆರ್‌. ಲೇಔಟ್‌ ಬಿ.ಡಿ.ಎ. ಕಾಂಪ್ಲೆಕ್ಸ್ ನಿಂದ ಫೆಬ್ರವರಿ 12 ರಂದು ಇವರು ಪ್ರಯಾಣವನ್ನು ಆರಂಭಿಸಿದರು. ಬೆಂಗಳೂರಿನಿಂದ ಶ್ರೀರಂಗಂ, ಚೆಟ್ಟಿನಾಡು, ರಾಮೇಶ್ವರಂ, ಮಧುರೈ ಮತ್ತು ಧನುಷ್ಕೋಡಿಯವರೆಗೆ ಅವರ ಪಯಣ. ಅವರ ಉದ್ದೇಶ ಪ್ರತಿಯೊಂದು ಊರಿನಲ್ಲೂ, ಹಳ್ಳಿಯಲ್ಲೂ ಇಳಿದು ಅಲ್ಲಿನವರಿಗೆ ಪುಸ್ತಕಗಳನ್ನು ವಿತರಿಸುವುದು, ಓದು ಹವ್ಯಾಸವನ್ನು ಬೆಳೆಸುವುದು, ಪ್ರೋತ್ಸಾಹಿಸುವುದು. ಒಟ್ಟಾರೆ `ಪಡೆ ಭಾರತ ಅಭಿಯಾನ' ಇವರ ಮೂಲ ಉದ್ದೇಶ. ಈ ನಾಲ್ವರೂ ವಿಭಿನ್ನ ರಂಗಗಳಿಂದ ಬಂದರು.

ಸಿ.ವಿ. ಮೀರಾ ರಮಣ್

ಈಕೆ ಆಶಾ ಇನ್ಛಿನೈಟ್‌ ಸಂಸ್ಥೆಯ ಮುಖ್ಯಸ್ಥೆ. ಬಡ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಅಂದರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್‌ ಕಲಿಸುವುದು. ಮುಂದೆ ಅವರು ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಅನುಕೂಲವಾಗುವ ಹಾಗೆ ಮಾಡುವುದು ಇವರ ಸಂಸ್ಥೆಯ ಉದ್ದೇಶ. ಮೊದಲು ಒಂದಿಷ್ಟು ಜನ ವಾಲೆಂಟಿಯರ್ಸ್‌ ಶಾಲೆಗಳಿಗೆ ಹೋಗಿ ಪಾಠ ಹೇಳಿ ಕೊಡುತ್ತಿದ್ದರು. ಈಗ ಕೊರೋನಾದ ಕಾರಣ ಮೊಬೈಲ್ ‌ಮೂಲಕವೇ ಅವರಿಗೆ ಪೋನಿಕ್ಸ್ ನ ರೀತಿಯಲ್ಲಿ ಇಂಗ್ಲಿಷ್‌ ಕಲಿಸುವ ಕಾಯಕ ನಡೆಸುತ್ತಿದ್ದಾರೆ. ಜೊತೆಗೆ ಕಥೆಗಳ ಮೂಲಕ ಭಾಷೆಯನ್ನು ಕಲಿಸುತ್ತಿದ್ದಾರೆ.

ಇದಲ್ಲದೆ, ಅಗತ್ಯವಿರುವ ಕನ್ನಡೇತರರಿಗೆ ಮತ್ತು ಅವರ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸದ ಅಂಗವಾಗಿ `ಕೌನ್‌ ಬನೇಗಾ ಕನ್ನಡಿಗ' ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಅನೇಕರಿಗೆ ಕನ್ನಡ ಕಲಿಸಿದರು. ಚೆನ್ನಾಗಿ ಕಲಿಯುವ ಮಕ್ಕಳಿಗೆ ಪುಸ್ತಕಗಳನ್ನು ಬಹುಮಾನವನ್ನಾಗಿ ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ತನ್ಮೂಲಕ ಪುಸ್ತಕ ಓದುವುದನ್ನು ಪ್ರೋತ್ಸಾಹಿಸುವ ಉದ್ದೇಶ ಇವರದು. ಈಗ ಈ ರೋಡ್‌ ಟ್ರಿಪ್‌ ನಲ್ಲೂ ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಪುಸ್ತಕ ವಿತರಿಸುವ ಅಭಿಪ್ರಾಯವನ್ನು ಹೊಂದಿದ್ದು, ಅಂತೆಯೇ ಮಾಡಿದರು ಕೂಡಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ