ಇತ್ತೀಚಿನ ದಿನಗಳಲ್ಲಿ ಬೃಹತ್‌ ಕಾರ್ಯಕ್ರಮಗಳನ್ನು ನಡೆಸೋದು ಸರ್ವೇ ಸಾಮಾನ್ಯವಾಗಿದೆ. ಇಂಥ ಕಾರ್ಯಕ್ರಮಗಳ ಆಯೋಜಕರಾದವರು ಬಹಳ ವ್ಯವಸ್ಥಿತವಾಗಿ ಅದನ್ನು ನಡೆಸುವುದೊಂದು ಕಲೆಯಾಗಿದೆ. ವೇದಿಕೆಯ ಅಲಂಕಾರ, ಮೈಕ್‌ ವ್ಯವಸ್ಥೆ, ಮುಖ್ಯ ಅತಿಥಿಗಳನ್ನು ಆಹ್ವಾನಿಸೋದು, ಸನ್ಮಾನ, ಹೀಗೆ ಹತ್ತು  ಹಲವಾರು. ಇವೆಲ್ಲ ಸರಿಯಾಗಿ ನಡೆಯಬೇಕೆಂದರೆ ನಿರೂಪಣೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ಸರಿಯಾಗಿದ್ದು ಅಜೆಂಡಾದಲ್ಲೊಂದು ಮಾತನಾಡುವ ಪರಿವೆಯಲ್ಲೋ ಎಡವಿದರೆಂದರೆ ಇಡೀ ಕಾರ್ಯಕ್ರಮ ಫೇಲ್ಯೂರ್‌. ಹಾಗಾಗಿ ನಿರೂಪಣೆ ಹೇಗಿರುತ್ತೋ ಹಾಗೆ ಕಾರ್ಯಕ್ರಮ ಮೂಡಿಬರೋದು ದಿಟ! ನಿರೂಪಣೆಗೆ ಬೇಕಾದ ಗುಣಗಳೆಂದರೆ ಸ್ವಚ್ಛ ಪದ ಉಚಾರಣೆ, ಪ್ರಚಲಿತ ವಿದ್ಯಮಾನಗಳ ವಿಷಯ ಜ್ಞಾನ, ಮಾತಲ್ಲಿ ಘನತೆ, ಅವುಗಳ ಮೇಲಿನ ಹಿಡಿತವಿದ್ದರೆ ಎಂಥ ಕಾರ್ಯಕ್ರಮವನ್ನೂ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರೂಪಿಸಲು ಸಾಧ್ಯ.

ಇತ್ತೀಚೆಗೆ ಟ್ರೆಂಡ್‌ ಹೇಗಾಗಿದೆಯೆಂದರೆ, ಸಂಘ ಸಂಸ್ಥೆ, ಸಾರ್ವನಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಕುಟುಂಬದ, ತೀರಾ ವೈಯಕ್ತಿಕ ಸಭೆ ಸಮಾರಂಭಗಳಲ್ಲೂ ಸಹ ಈ ನಿರೂಪಣಾ ವಿಧಾನ ಬೆಳವಣಿಗೆ ಕಾಣುತ್ತಿರುವುದು ಸ್ವಾಗತಾರ್ಹ.

ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಹೆಸರು ಮಾಡಿರುವವರು ಹಲವರು! ಆ ಸಾಲಿಗೆ ಸೇರುವ ಅಪ್ಪಟ ದೇಸೀ ಪ್ರತಿಭೆ, ಮಲೆನಾಡಿನ ಬೆಡಗಿ, ನಿರೂಪಕಿ, ಕಂಠದಾನ ಕಲಾವಿದೆ, ಲೇಖಕಿ, ಛಾಯಾಗ್ರಾಹಕಿ ಸಂಧ್ಯಾ ಭಟ್‌.

ಪದಗಳೊಟ್ಟಿಗೆ ಆಟವಾಡೋದೂ ಒಂದು ಕಲೆಯೇ. ಇದಕ್ಕೆ ಭಾಷಾ ಜ್ಞಾನವಿರಬೇಕಷ್ಟೆ! ಅಂತಹ ಭದ್ರ ಬುನಾದಿ ಹಾಕಿ ಕೊಡೋದು ನಮ್ಮ ಶಾಲಾ ದಿನಗಳಲ್ಲಿನ ಗುರುಗಳು ಎಂದರೆ ತಪ್ಪಾಗಲಾರದು! ಶಾಲಾ ದಿನಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸುದ್ದಿ ವಾಚನವೊಂದು ಅಜೆಂಡಾ. ಅಲ್ಲಿಂದಲೇ ಇದರ ಪ್ರಾರಂಭ ಆಯಿತೇನೋ. ಗಂಗಮ್ಮ ಹಾಗೂ ಸರೋಜಮ್ಮ ಮೇಡಂರವರುಗಳ ಅಂದಿನ ಆ ಪ್ರೋತ್ಸಾಹವೇ ಇವರ ಇಂದಿನ ಈ ಅಕ್ಷರ ಲೋಕಕ್ಕೆ ನಾಂದಿ ಹಾಡಿತು.

ತೀರ್ಥಹಳ್ಳಿಯ ಹೊರಣೆಬೈಲಿನಲ್ಲಿ ಒಂದು ಬಡ ಕುಟುಂಬ, ಬೇಸಾಯೀ ಆದಾಯ. ತಂದೆ ಶಂಕರ್‌ ಭಟ್‌, ತಾಯಿ ಸುಶೀಲಾ ಭಟ್‌. ಸುಸಂಸ್ಕೃತ ಸಂಪ್ರದಾಯಸ್ಥ ಕೂಡು ಕುಟುಂಬ. ದೊಡ್ಡಪ್ಪನ ಯಜಮಾನಿಕೆ. ಅಕ್ಕ ತಮ್ಮ ಇವರೊಟ್ಟಿಗೆ ಹುಟ್ಟಿದರು. ಆಸೆ ಕನಸುಗಳಿದ್ದರೂ ಸಾಕಾರಗೊಳ್ಳೋದು ವಿರಳವೇ ಆಗಿತ್ತು. ಸಜ್ಜನಿಕೆ ಸೌಹಾರ್ದತೆಗಳಿಗೆ ಕುಟುಂಬದ ಗುರುತಿದ್ದರೂ ಕುಟುಂಬ ಬೇರೆಯಾದ ನಂತರ ಕಷ್ಟಗಳೇ ಜೀವನವಾದವು! ಆದರೂ ಬಾಲ್ಯ ಸುಂದರವಾಗಿತ್ತು. ಆಟೋಟ ನೋಟಗಳು ಖುಷಿಕೊಡುತ್ತಿತ್ತು.

ಮನೆಯಿಂದ ಶಾಲೆಗೆ ದಿನ 4 ಕಿಲೋಮೀಟರ್‌ ನಡೆದೇ ಹೋಗಬೇಕಿತ್ತು.  ಸರ್ಕಾರಿ ಶಾಲೆಯಲ್ಲಿ ಕಲಿಕೆ ಆರಂಭ. ತೀರ್ಥಹಳ್ಳಿಯ  ಸೇವಾಭಾರತಿಯಲ್ಲಿ ನಾಲ್ಕರಿಂದ ಏಳನೇ ತರಗತಿಯವರೆವಿಗೂ ಅಭ್ಯಾಸ. ತುಂಗಾ ಮಹಾವಿದ್ಯಾಲಯದಿಂದ ಪದವಿ! ಕನ್ನಡ ಮಾಧ್ಯಮದ ಕುರಿತಾದ ಭಾಷಾಭಿಮಾನ ಹೆಚ್ಚು! ಸಮಾಜ ಶಾಸ್ತ್ರ ಫೇವರೇಟ್‌, ಗಣಿತ ಕಷ್ಟಕಷ್ಟ! ಎಸ್‌.ಎಸ್‌.ಎಲ್.ಸಿವರೆಗೂ ಚಿಮಣಿ ದೀಪದಲ್ಲೇ ಓದು. ಸೌಲಭ್ಯ ಸವಲತ್ತುಗಳು ಬಹಳವೇ ಕಡಿಮೆ.

ಹೊಸ ಬಟ್ಟೆ, ಶಾಲಾ ಶುಲ್ಕಕ್ಕೂ ಪರದಾಡಿದ ಕ್ಷಣಗಳು ಹಲವು! ಇವೆಲ್ಲ ಆಗ ಏನೂ ಅನಿಸುತ್ತಿರಲಿಲ್ಲ. ಈಗ ನೆನೆಸಿಕೊಂಡರೆ ಒಂಥರಾ ಎನಿಸುತ್ತದೆ ಎನ್ನುತ್ತಾರೆ. ಮತ್ತೊಂದೆಡೆಗೆ ಚುರುಕಾದ ಹುಡುಗಿ ಗುರುಗಳ ನೆಚ್ಚಿನ ಶಿಷ್ಯೆ, ಸ್ನೇಹ ವೃಂದ ಅಷ್ಟಾಗಿರಲಿಲ್ಲ. ಅಪಾರ ಗುರುಭಕ್ತಿ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದು. ರಾಜ್ಯ ಮಟ್ಟದ ವಾಲಿಬಾಲ್ ‌ಆಟಗಾರ್ತಿ, ಶಾಲಾ ಮಟ್ಟದ ಶಾರ್ಟ್‌ಪುಟ್‌ ಬಹುಮಾನಿತೆ. ಡಿಸ್ಕ್ ಥ್ರೋ, ಆಶುಭಾಷಣ ಸ್ಪರ್ಧೆ, ಪ್ರಬಂಧ ಲೇಖನ ಹೀಗೆ ಸಕ್ರಿಯರಾಗಿದ್ದರೂ ಕೂಡಾ ಪದವಿಯೊಂದಿಗೆ ಶಿಕ್ಷಣ ಮುಕ್ತವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ