ಉಳಿತಾಯದ ಮಹತ್ವವನ್ನು ತಿಳಿದುಕೊಂಡ ಬಳಿಕ ಸರಿಯಾದ ದಿಸೆಯಲ್ಲಿ ಸಾಗುವುದರ ಮೂಲಕ ಆ ಕೆಲಸವನ್ನು ಮಾಡುತ್ತಾ ಇರಬೇಕು. ಒಂದು ವೇಳೆ ನಿಮ್ಮ ಮಗು ಬಾಲ್ಯದಿಂದಲೇ ಉಳಿತಾಯದ ಮಹತ್ವವನ್ನು ತಿಳಿದುಕೊಂಡರೆ, ಅದು ತನ್ನ ಜೀವನದಲ್ಲಿ ಬರುವ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಲ್ಲದು. ಯಾವ ತಾಯಿ ತಂದೆಯರು ತಮ್ಮ ಮಕ್ಕಳಿಗೆ ಉಳಿತಾಯದ ಅಭ್ಯಾಸ ರೂಢಿಸುತ್ತಾರೊ, ಅವರು ತಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತಾರೆ. ಉಳಿತಾಯದ ಮಹತ್ವವನ್ನು ತಿಳಿದುಕೊಂಡ ಬಳಿಕ ಅವರಿಗೆ ಹಣದ ಮಹತ್ವ ಅರಿವಿಗೆ ಬರುತ್ತದೆ. ಆಗ ಅವರಲ್ಲಿ ಖರ್ಚಿನ ಬಗ್ಗೆ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ನೀವು ಕೂಡ ಈಗಿನಿಂದಲೇ ನಿಮ್ಮ ಮಕ್ಕಳಿಗೆ ಅದರ ಬಗ್ಗೆ ಶಿಕ್ಷಣ ನೀಡುತ್ತಾ ಹೋಗಿ.

ಹಣದ ಮೌಲ್ಯ ತಿಳಿಸಿ : ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗ್ಗೆ ತಿಳಿಸಿ ಹೇಳಿ, ಹಣ ಗಳಿಸಲು ನೀವು ದಿನವಿಡೀ ಅದೆಷ್ಟು ಕಷ್ಟಪಡುತ್ತೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿ ಕೊಡಿ. ನೀವು ಯಾವುದಕ್ಕೆ ಬೇಡಿಕೆ ಸಲ್ಲಿಸುತ್ತೀರೊ, ಅದಕ್ಕಾಗಿ ಎಷ್ಟು ಗಂಟೆ ಶ್ರಮಿಸಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿಸಿ.

ಪ್ರತಿಯೊಂದು ಬೇಡಿಕೆ ಪೂರೈಸಬೇಡಿ : ಪ್ರತಿಯೊಬ್ಬ ತಾಯಿ ತಂದೆ ತಮ್ಮ ಮಕ್ಕಳನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾರೆ. ಅವರ ಪ್ರತಿಯೊಂದು ಬೇಡಿಕೆಯನ್ನೂ ಈಡೇರಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಮಗು ಶಿಸ್ತುಪಾಲನೆ ಮಾಡಬೇಕು, ಕಷ್ಟಪಟ್ಟು ದುಡಿದ ಹಣದ ಮೌಲ್ಯ ಮಕ್ಕಳಿಗೆ ಗೊತ್ತಾಗಬೇಕು ಎಂದರೆ, ಅವರ ದೊಡ್ಡ ಬೇಡಿಕೆ ಅಥವಾ ಚಿಕ್ಕಪುಟ್ಟ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವುದು ಅವರ ಭವಿಷ್ಯಕ್ಕೆ ಒಳ್ಳೆಯದಲ್ಲ. ನೀವು ಹಾಗೆ ಮಾಡುವವರಾಗಿದ್ದರೆ, ನಿಮ್ಮ ಈ ಅಭ್ಯಾಸವನ್ನು ಬದಲಿಸಿಕೊಳ್ಳುವ ಅಗತ್ಯ ಇದೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಹಠಮಾರಿ ಸ್ವಭಾವದವರು, ಶಿಸ್ತು ಪಾಲಿಸದವರು ಆಗಬಹುದು. ನೀವು ಮೊದಲಿನಿಂದಲೇ ಮಕ್ಕಳಿಗೆ ಅಗತ್ಯ ಹಾಗೂ ವೈಭವೀ ಜೀವನದ ವ್ಯತ್ಯಾಸವನ್ನು ತಿಳಿಸಿಕೊಡಿ. ಯಾವುದನ್ನು ಖರೀದಿಸಬಹುದು, ಖರೀದಿಸದೇ ಇರಬಹುದು, ಏನನ್ನು ತಿನ್ನುವುದು ಅವಶ್ಯಕ ಈ ಎಲ್ಲ ಸಂಗತಿಗಳನ್ನು ಮಕ್ಕಳಿಗೆ ತಿಳಿಸುವುದು ಅತ್ಯವಶ್ಯಕ.

ಮಕ್ಕಳಿಗೆ ಪಿಗ್ಗಿ ಬ್ಯಾಂಕ್‌ : ನಿಮ್ಮ ಮನೆಗೆ ಬರುವ ಅತಿಥಿಗಳು ನಿಮ್ಮ ಮಗುವಿನ ಕೈಗೆ ಒಂದಿಷ್ಟು ಹಣ ಕೊಟ್ಟು ಹೋಗುತ್ತಾರೆ. ಅಜ್ಜಿ, ತಾತಾ, ಚಿಕ್ಕಪ್ಪ, ಮಾಮ ಇವರಿಂದಲೂ ಕೂಡ ಮಕ್ಕಳಿಗೆ ಹಣ ಸಿಗುತ್ತಲೇ ಇರುತ್ತದೆ. ನೀವು ಅವರಿಗೆ ಪಾಕೆಟ್‌ ಮನಿ ಎಂದು ಒಂದಿಷ್ಟು ಮೊತ್ತ ಕೊಡುತ್ತೀರಿ. ನಿಮ್ಮ ಮಗು ಈ ಹಣವನ್ನು ಉಳಿತಾಯ ಮಾಡುತ್ತದೊ ಅಥವಾ ಖರ್ಚು ಮಾಡುತ್ತದೋ? ಒಂದು ವೇಳೆ ನಿಮ್ಮ ಮಗು ಆ ಹಣವನ್ನು ಉಳಿಸುತ್ತಿದ್ದರೆ ನಿಶ್ಚಿಂತರಾಗಿರಿ. ಒಂದು ವೇಳೆ ನಿಮ್ಮ ಮಗು ಆ ಎಲ್ಲ ಹಣವನ್ನು ತನ್ನ ಮೆಚ್ಚಿನ ವಸ್ತುಗಳ ಖರೀದಿಗೆ, ಬಾಹ್ಯ ತಿಂಡಿಗಳ ರುಚಿಗೆ ಖರ್ಚು ಮಾಡುತ್ತಿದ್ದರೆ, ಇದು ಮುಂಬರುವ ದಿನಗಳಲ್ಲಿ ಆ ಮಗುವಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಮಗು ಹಣ ಉಳಿತಾಯ ಮಾಡಬೇಕೆಂದು ನೀವು ಬಯಸುವಿರಾದರೆ, ಹಣದ ಸದ್ಬಳಕೆಯ ಬಗ್ಗೆ ಕಲಿಸಿಕೊಡಿ. ಒಂದಿಷ್ಟು ಖರ್ಚು ಮಾಡು, ಒಂದಿಷ್ಟು ಉಳಿಸುವ ಎಂದು ತಿಳಿಸಿ. ಮಗುವನ್ನು ಉಳಿತಾಯದತ್ತ ಆಕರ್ಷಿಸಲು ಅದಕ್ಕೆ ಕಾರ್ಟೂನ್‌ ಕ್ಯಾರೆಕ್ಟರ್‌ ಇವರು ಪಿಗ್ಗಿ ಬ್ಯಾಂಕ್‌ ತಂದುಕೊಡಿ. ಅದರಲ್ಲಿ ಹಣ ಹಾಕುವುದರಿಂದ ಮಗುವಿಗೆ ಉಳಿತಾಯದ ಅಭ್ಯಾಸ ರೂಢಿಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ