- ಜಾಸ್ತಿ ಆಗ್ತಿದೆ ಸ್ಕೂಲ್ ಫೀಸ್.. ಎಷ್ಟು ಅನ್ನೋದನ್ನೇ ಹೇಳ್ತಿಲ್ಲ..ಯಾಕೆ..?
- ಶಿಕ್ಷಣ ಇಲಾಖೆ ಆದೇಶಕ್ಕೂ..ಶಾಲೆಗಳು ಡೋಂಟ್ ಕೇರ್.. ಯಾಕೆ..?
- ಮಕ್ಕಳನ್ನು ಓದಿಸೋದು..ಇಷ್ಟೊಂದು ದುಬಾರಿನಾ..?
ರಾಜ್ಯದಲ್ಲಿ ಬೆಲೆ ಏರಿಕೆಗಳ ನಡುವೆ, ಮಕ್ಕಳ ಶಿಕ್ಷಣವೂ ದುಬಾರಿಯಾಗ್ತಾ ಇದೆ. ಅತ್ತ ಪೆಟ್ರೋಲ್, ಡೀಸೆಲ್, ಹಾಲು, ನೀರು, ಕರೆಂಟು, ಕಸ, ಬಸ್ಸು, ಮೆಟ್ರೋ, ಹಣ್ಣು, ತರಕಾರಿ, ಅಕ್ಕಿ, ಬೇಳೆ, ಅಡುಗೆ ಎಣ್ಣೆ.. ಎಲ್ಲವೂ ದುಬಾರಿಯಾಗಿರುವ ಹೊತ್ತಿನಲ್ಲೇ, ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ದರ ಕನಿಷ್ಠ 500 ರೂ. ಹೆಚ್ಚಾಗಿದೆ. ಈ ನಡುವೆಯೇ ಮಕ್ಕಳನ್ನು ಸ್ಕೂಲಿಗೆ ಸೇರಿಸುವ ಟೈಮಿನಲ್ಲಿ ಸ್ಕೂಲ್ ಫೀಸ್, ಡೊನೇಷನ್ ಕೂಡಾ ಹೆಚ್ಚಾಗುತ್ತಿದೆ.
ಖಾಸಗಿ ಶಾಲೆ ಶಿಕ್ಷಣ ಶುಲ್ಕ ಶೇ.15ರಿಂದ ಶೇ.20ರಷ್ಟು ದುಬಾರಿ
ಇದು ಸದ್ಯದ ಆತಂಕ. ಕಡಿಮೆ ಅಂತಾ ಲೆಕ್ಕ ಹಾಕ್ಕೊಂಡ್ರೂ. 50 ಸಾವಿರ ರೂ. ಇದೆ. ಅದು 15ರಿಂದ 20 ಪರ್ಸೆಂಟ್ ಜಾಸ್ತಿ ಅದ್ರೆ, ಕನಿಷ್ಠ ಏಳೆಂಟು ಸಾವಿರ ರೂ. ಜಾಸ್ತಿ ಆಗುತ್ತೆ. ಒಂದು ಲಕ್ಷ ಸ್ಕೂಲ್ ಫೀಸ್ ಇದ್ರೆ, ಡೌಟೇ ಇಲ್ಲ 15ರಿಂದ 20 ಸಾವಿರ ರೂ. ಜಾಸ್ತಿ ಆಗುತ್ತೆ. ಆದರೆ, ಈ ಸ್ಕೂಲ್ ಫೀಸ್ ಎಷ್ಟು ಜಾಸ್ತಿ ಆಗ್ತಿದೆ ಅನ್ನೋದ್ರ ಡೀಟೈಲ್ಸ್ ಕೂಡಾ ಪೋಷಕರಿಗೆ ಸಿಗ್ತಾ ಇಲ್ಲ.
ಶಿಕ್ಷಣ ಸಂಸ್ಥೆ ರೂಲ್ಸ್ ಪ್ರಕಾರ ಶಾಲೆ ಫೀ ವಿವರವನ್ನು ಶಾಲೆಗಳಲ್ಲಿ ಅಧಿಕೃತವಾಗಿ ಪ್ರಕಟಿಸಬೇಕು. ಶುಲ್ಕದ ವಿವರವನ್ನ STATSನಲ್ಲಿ ಅಪ್ಲೋಡ್ ಮಾಡಬೇಕು. ಫೀಸ್, ಡೊನೇಷನ್ ವಿವರ ಘೋಷಣೆ ಕಡ್ಡಾಯ. ಆದರೆ, ಬಹುತೇಕ ಶಾಲೆಗಳು ವಿವರ ಕೊಡ್ತಾ ಇಲ್ಲ..!
ಇದು ಸಮಸ್ಯೆ. ಇದಕ್ಕೆ ಕಾರಣ ಏನು..?
ರಾಜ್ಯದಲ್ಲಿ ಸ್ಕೂಲ್ ಫೀಸ್ ಎಷ್ಟು ಇರಬೇಕು..? ವಾರ್ಷಿವಾಗಿ ಎಷ್ಟು ಹೆಚ್ಚಿಸಬೇಕು.. ಎಂಬ ಬಗ್ಗೆ ಒಂದು ರೆಗ್ಯುಲೇಟರಿ ಬೋರ್ಡೂ ಇಲ್ಲ, ಸಿಸ್ಟಮ್ಮೂ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆಯ ಆದೇಶಕ್ಕೆ ಕ್ಯಾರೇ ಎನ್ನೋದಿಲ್ಲ.
ಶಿಕ್ಷಣ ಸಂಸ್ಥೆಗಳ ವಾದವೇನು..?
ರಾಜ್ಯದಲ್ಲಿ ಡಿಸೇಲ್, ಪೆಟ್ರೋಲ್ ಹಾಗೂ ವಿದ್ಯುತ್ ದರ ಏರಿಕೆ ಆಗಿದೆ. ಎಲ್ಲದರ ಬೆಲೆಯೂ ಜಾಸ್ತಿ ಆಗಿದೆ. ಹೀಗಾಗಿ ನಾವೂ ಕೂಡ ಶುಲ್ಕ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಇದೆ. ಕಾನೂನಿನಲ್ಲೇ ಶೇಕಡಾ 15ರಷ್ಟು ಶುಲ್ಕ ಹೆಚ್ಚಳ ಮಾಡಲು ಅವಕಾಶ ಇದೆ. ಹೀಗಾಗಿ ಶಾಲಾ ವಾಹನ ಶುಲ್ಕ ಕೂಡ ಹೆಚ್ಚಳವಾಗಲಿದೆ. ಶಿಕ್ಷಕರಿಗೆ ಸಂಬಳ ಹೆಚ್ಚಿಸಬೇಕು. ಕಟ್ಟಡದ ತೆರಿಗೆ ಹೆಚ್ಚಾಗಿದೆ. ಹೀಗಾಗಿ ಶುಲ್ಕ ಏರಿಕೆ ಅನಿವಾರ್ಯ.
ಲೋಕೇಶ್ ತಾಳಿಕಟ್ಟೆ, ಕೃಪಾ ಅಧ್ಯಕ್ಷ
ಯಾವ ಶಾಲೆಗಳು ಶುಲ್ಕದ ವಿವರವನ್ನು SATS PORT ವೆಬ್ ಸೈಟ್ ಹಾಗೂ ಶಾಲೆಯಲ್ಲಿ ಅಳವಡಿಸುವುದಿಲ್ಲವೋ ಆ ಶಾಲೆಗಳ RR ನವೀಕರಣ ಮಾಡಬಾರದು ಎನ್ನುವ ಆದೇಶ ರಾಜ್ಯದ ಎಲ್ಲ BEO ಹಾಗೂ DDPI ಗಳಿಗೆ ಇದೆ. ಆದರೆ, ಯಾವುದೇ ಖಾಸಗಿ ಶಾಲೆಗಳು ಅದಕ್ಕೆ ಹೆದರುವುದಿಲ್ಲ. ಇದು ಹೊಸದೇನಲ್ಲ. ಪ್ರತಿ ವರ್ಷದ ಸಮಸ್ಯೆ. ಈ ರೀತಿ ರೂಲ್ಸ್ ಬ್ರೇಕ್ ಮಾಡಿದ ಶಾಲೆಗಳು, ಅದು ಹೇಗೋ ಆರ್ ಆರ್ ನವೀಕರಣ ಮಾಡಿಕೊಂಡುಬಿಡ್ತವೆ. ಅದು ಹೇಗೆ ಎನ್ನುವುದು ಎಲ್ಲರಿಗೂ ಗೊತ್ತಿರುವ ನಿಗೂಢ ರಹಸ್ಯ.