*ನೀವು ಓದಿದ ಮೇಲೆ ಮುಖ್ಯವಾಗಿ ಮಹಿಳೆಯರ ಗ್ರೂಪ್ ನಲ್ಲಿ ಶೇರ್ ಮಾಡಿ!*
ಇದು ನನ್ನ ಅನುಭವ ಅಲ್ಲ
*ಓರ್ವ ಮಹಿಳೆಯ ಅನುಭವವಿದು!*
*ಕಳೆದ ಭಾನುವಾರ ನಾನು ಸಿಲಿಂಡರ್ ಬದಲಿಸುವಾಗ ಗ್ಯಾಸ್ ವಾಸನೆ ಬಂತು, ಗ್ಯಾಸ್ ಲೀಕ್ ಆಗುತ್ತಿದೆ ಅನ್ನಿಸಿ ಕೂಡಲೇ ರೆಗ್ಯುಲೇಟರ್ ಬಂದ್ ಮಾಡಿ ಗ್ಯಾಸ್ ಏಜೆನ್ಸಿಗೆ ಫೋನ್ ಮಾಡಿದೆ!*
*ಇವತ್ತು ಭಾನುವಾರ, ರಜೆ, ನಾವು ನಾಳೆ ಬರುತ್ತೇವೆ ಎಂಬ ಉತ್ತರ ಎಲ್ಲಾ ಗ್ಯಾಸ್ ಏಜೆನ್ಸಿಗಳಿಂದ... ಇವರಿಗೆ ಭಾನುವಾರ ಅಂತ ಬರದಿದ್ದರೆ ನಾನು ಗಂಡ ಮಕ್ಕಳಿಗೆ ಊಟ ಹಾಕುವುದು ಬೇಡವೇ!? ಅಡಿಗೆ ಮಾಡುವುದು ಬೇಡವೇ?? ಹಾಗಾದರೆ ತುರ್ತು ಸೇವೆ ಬೇಕಾದರೆ ಏನು ಮಾಡಬೇಕು ಅನ್ನುತ್ತಾ...*
*ಗೂಗಲ್ ಸರ್ಚ್ ಮಾಡಿದೆ! ಕೂಡಲೇ ಒಂದು ನಂಬರ್ ಸಿಕ್ಕಿತು... 1906 ಗೇ ಕರೆ ಮಾಡಿ ಅಂತಿತ್ತು! ಕರೆ ಮಾಡಿದೆ ಕೂಡ... ಆ ಕಡೆಯಿಂದ ಮಹಿಳೆಯೊಬ್ಬಳು ಹಿಂದಿಯಲ್ಲಿ ಮಾತನಾಡಿದರು, ಅಡ್ರೆಸ್, ಫೋನ್ ನಂಬರ್ ಎಲ್ಲಾ ಕೇಳಿದರು, ಇನ್ನೊಂದು ಘಂಟೆಯೊಳಗೆ ಓರ್ವ ವ್ಯಕ್ತಿ ನಿಮ್ಮ ಮನೆಗೆ ಭೇಟಿ ಕೊಡುತ್ತಾರೆ ಅಂದರು!*
*ಅವರು ಹೇಳಿದಕ್ಕಿಂತ ಅರ್ಧ ಗಂಟೆ ಮೊದಲೇ ಓರ್ವ ಯುವಕ ಬಂದ, ಸಮಸ್ಯೆ ಏನೆಂದು ಕೇಳಿದ, ಹೇಳಿದೆ.. ವಾಷರ್ ಹಳೆಯದಾಗಿದೆ ಎಂದು ಹೇಳಿ ಹೊಸದು ಹಾಕಿ, ಚಿಕ್ಕ ಕೆಲಸವಿದು ಹಣವೇನು ಬೇಡ ಎಂದು ಹೇಳಿ ಹೊರಟುಹೋದ!*
*ಅವನು ಹೋದ ಅರ್ಧ ಘಂಟೆಯಲ್ಲಿ ಆ ಮಹಿಳೆ ಮತ್ತೇ ಕಾಲ್ ಮಾಡಿ ನಿಮ್ಮ ಸಮಸ್ಯೆ ಬಗೆ ಹರಿಯಿತೇ? ಹುಡುಗ ಹಣವೇನಾದರು ಕೇಳಿದನೇ? ಎಂದು ಕೇಳಿದರು!*
*ಆಶ್ಚರ್ಯ ಮತ್ತು ಅದ್ಭುತ ಕೂಡ!!!*
*ಇದು ಕೇಂದ್ರ ಸರ್ಕಾರ ಗ್ಯಾಸ್ ಅಥವಾ ಇನ್ಯಾವುದೇ ತುರ್ತು ಸೇವೆಗೆ ಸಂಪರ್ಕಿಸಲು ಅನುಷ್ಠಾನಗೊಳಿಸಿರುವ ನಂಬರ್... 1906... ಈ ನಂಬರನ್ನು ನಿಮ್ಮ ಪ್ರತಿಯೊಬ್ಬ ಬಂಧು ಮಿತ್ರರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ!*
*ಫ್ಯಾಕ್ಟ್ ಚೆಕ್ ಮಾಡಲು ಗೂಗಲ್ ಗೇ ಹೋದರೆ ಅದು ನಿಮ್ಮನ್ನು services.india.gov.in ಕರೆದುಕೊಂಡು ಹೋಗುತ್ತದೆ...*
*ಇದು ಎಲ್ಲಾ ಕಂಪೆನಿಗಳ LPG ಬಳಕೆದಾರರಿಗೆ 24x7 ಸೇವೆ ನೀಡುತ್ತದೆ!*
ನಿಮ್ಮ ಗಮನಕ್ಕೆ ಈ ನಂಬ್ರ 1906 ಬರೆದಿಟ್ಟುಕೊಳ್ಳಿ