ನಿರಮಯ ಫೌಂಡೇಶನ್, ಸ್ವಚಂದ ಗುಂಪು ಮತ್ತು ಸುರಕ್ಷಾ ಫೌಂಡೇಶನ್ ಸಹಯೋಗದಲ್ಲಿ ಬ್ಲೈಂಡ್ ಗರ್ಲ್ಸ್ ಕ್ರಿಕೆಟ್ ಟೂರ್ನಮೆಂಟ್ ಎರಡನೇ ಆವೃತ್ತಿ ಮೈಸೂರಿನಲ್ಲಿ ನಡೆಯಲಿದೆ.
ಮೈಸೂರಿನ ನಿರಮಯ ಫೌಂಡೇಶನ್, ಸ್ವಚಂದ ಗುಂಪು ಮತ್ತು ಸುರಕ್ಷಾ ಫೌಂಡೇಶನ್ ಅವರ ಸಹಯೋಗದಲ್ಲಿ ಬ್ಲೈಂಡ್ ಗರ್ಲ್ಸ್ ಕ್ರಿಕೆಟ್ ಟೂರ್ನಮೆಂಟ್ ಎರಡನೇ ಆವೃತ್ತಿ ನಡೆಯಲಿದ್ದು, ಹೆರಿಟೇಜ್ ಕಪ್ 2025 ಕ್ರಿಕೆಟ್ ಪಂದ್ಯಾವಳಿ ಇದೇ 13 ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಮನಸಾ ಗಂಗೋತ್ರಿ, ಎಸ್‌ಜೆಸಿಇ ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ ಎಂದು ನಿರಮಯ ಫೌಂಡೇಶನ್ ಸಂಸ್ಥಾಪಕರಾದ ರಕ್ಷಿತಾ ತಿಳಿಸಿದ್ದಾರೆ.

ಈ ಟೂರ್ನಮೆಂಟಿನ ಉದ್ದೇಶ ದೃಷ್ಟಿಹೀನ ಹುಡುಗಿಯರ ಕ್ರಿಕೆಟ್ ಕ್ಷೇತ್ರದಲ್ಲಿನ ಪ್ರತಿಭೆ ಮತ್ತು ದೃಢನಿಶ್ಚಯವನ್ನು ಉತ್ತೇಜಿಸುವುದಾಗಿದ್ದು, ಇದೊಂದು ಪ್ರತಿಭೆ, ಸಮಾವೇಶ ಮತ್ತು ಕ್ರಿಕೆಟ್ ಪ್ರೀತಿಯ ಹಬ್ಬವಾಗಿದೆ ಎಂದು ಹೇಳಿದರು.
ಕ್ರೀಡೆಗಳು ಅಡೆತಡೆಗಳನ್ನು ಮೀರಿ ಏಕತೆ ಮತ್ತು ಸ್ನೇಹದ ಭಾವನೆಯನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿವೆ. ಬ್ಲೈಂಡ್ ಗರ್ಲ್ಸ್ ಕ್ರಿಕೆಟ್ ಟೂರ್ನಮೆಂಟ್ ಈ ಯುವ ಅಥ್ಲೀಟ್ಸ್‌ಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಇತರರನ್ನು ಪ್ರೇರೇಪಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಅಧ್ಯಕ್ಷರಾದ ಗುರುಪ್ರಿತ್ ತಿಳಿಸಿದರು.

ಮೈಸೂರು ನಗರದಿಂದ ಶಾಸಕ ಶ್ರೀವತ್ಸ, ಪ್ರಮತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಜೀವ್ ಹೆಚ್.ವಿ ಆಗಮಿಸಲಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಈ ವಿಶೇಷ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿ ಪ್ರತಿಭಾವಂತರನ್ನು ಪ್ರೇರೇಪಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬ್ಲೈಂಡ್ ಕ್ರಿಕೆಟ್ ಆಟಗಾರ ಲೋಕೇಶ್, ಸ್ವಚ್ಛಂದ ತಂಡದ ಸಂದೀಪ್ ಉಪಸ್ಥಿತರಿದ್ದರು.




 
  
         
    




 
                
                
                
                
                
                
               