ಶೀತಲ್ ಶೆಟ್ಟಿ ಅರಳು ಹುರಿದಂತೆ ಮಾತನಾಡುವ ಯುವತಿ. ವಿಶಿಷ್ಟ ಶೈಲಿಯ ಸುದ್ದಿ ವಾಚನ, ಕನ್ನಡದ ಸ್ಪಷ್ಟ ಉಚ್ಚಾರದಿಂದ  ಅವರು ಆರಂಭದಲ್ಲಿಯೇ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದ್ದ `ಜಸ್ಟ್ ಬೆಂಗಳೂರ್‌' ಸುದ್ದಿ ಸಮಯ ಅವರನ್ನು ಮನೆ ಮಾತಾಗುವಂತೆ ಮಾಡಿಬಿಟ್ಟಿತು. ಅವರ ಚುರುಕಿನ ಮಾತಿನ ವೈಖರಿಗೆ ಬೆರಗಾದ ಹಲವು ನಿರ್ಮಾಪಕರು ಆಗಲೇ ಇವರಿಗೆ ಸಿನಿಮಾದಲ್ಲಿ ನಟಿಸಲು ಆಫರ್‌ ಕೊಟ್ಟಿದ್ದರು. ಆದರೆ ಆಗ ಸಿನಿಮಾ ಮೋಹಕ್ಕೆ ಒಳಗಾಗದೆ ಶೀತಲ್ ನಿರೂಪಣೆಯಲ್ಲಿಯೇ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದರು.

ಟಿ.ವಿ ಮಾಧ್ಯಮದಲ್ಲಿ 7 ವರ್ಷಗಳ ನಿರೂಪಣೆ ಆ ರಂಗದಲ್ಲಿ ಅವರು ಮತ್ತಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು. ತಮ್ಮ ವಾಕ್ಚಾತುರ್ಯದಿಂದ ಅವರು ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿದ್ದ ಮುಖ್ಯ ವಾರ್ತೆ ಓದಲು ಅವಕಾಶ ಕೊಡಿ ಎಂದು ಪಟ್ಟುಹಿಡಿದು ಅದರಲ್ಲಿ ಯಶಸ್ವಿಯಾಗಿದ್ದರು. ಈ ಎಲ್ಲ ಕಾರಣಗಳಿಂದ ಅವರ ಜನಪ್ರಿಯತೆ ಹೆಚ್ಚುತ್ತಲೇ ಹೊರಟಿತ್ತು.

ನಿರ್ಮಾಪಕರು ಸಿನಿಮಾದಲ್ಲಿ ನಟಿಸಿ ಎಂದು ಅವರಿಗೆ ದುಂಬಾಲು ಬೀಳುತ್ತಲೇ ಇದ್ದರು.

ರಾಜೀನಾಮೆ ನಿರ್ಧಾರ

ಅದೊಂದು ಸಲ ಅವರಿಗೆ ಎಂತಹದೊಂದು ಆಫರ್‌ ಬಂದಿತ್ತೆಂದರೆ, ಆ ಸಿನಿಮಾದ ಪಾತ್ರ ಟಿ.ವಿ. ರಿಪೋರ್ಟರ್‌ಗಳ ಪಾತ್ರ. ಈ ಸಲ ಶೀತಲ್‌ಗೆ ಆ ಪಾತ್ರವನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ. ತಾನೇ ಆ ಪಾತ್ರವನ್ನು ಮಾಡಲೇಬೇಕು ಎಂದು ಅವರು ನಿರ್ಧರಿಸಿಯೇ ಬಿಟ್ಟರು. ತಾನು ಕೆಲಸ ಮಾಡುತ್ತಿದ್ದ ಟಿ.ವಿ. ಚಾನೆಲ್‌‌ನ ಆಡಳಿತ ಮಂಡಳಿಗೂ 20 ದಿನದ ರಜೆ ಕೋರಿ ಅರ್ಜಿ ಸಲ್ಲಿಸಿದರು. ಆದರೆ ಆಡಳಿತ ಮಂಡಳಿ ಚಲನಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಿ ಆಕೆಯ ಅರ್ಜಿಯನ್ನು ತಿರಸ್ಕರಿಸಿಬಿಟ್ಟಿತು. ಆಗ ಶೀತಲ್ ಉಪಾಯ ಕಾಣದೆ ನಿರೂಪಣೆಯ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದರು.

ಶೀತಲ್ ದಿಢೀರ್‌ ನಿರ್ಧಾರದ ಬಗ್ಗೆ ಬಹಳಷ್ಟು ಜನರು ತಮಾಷೆ ಮಾಡಿ ನಕ್ಕಿದ್ದರು. ಇಂಥ ಒಳ್ಳೆಯ ನಿರೂಪಕಿಯ ಹುದ್ದೆ ಬಿಟ್ಟು ಅಸ್ಥಿರತೆಯ ಸಿನಿಮಾ ರಂಗಕ್ಕೆ ಹೋಗಿದ್ದು ಸರಿಯಲ್ಲ ಎಂದು ಟೀಕಿಸಿದರು. ಆದರೆ ಶೀತಲ್ ಆಯಾ ಮಾತುಗಳಿಗೂ ತಲೆ ಕೆಡಿಸಿಕೊಂಡಿರಲಿಲ್ಲ.

ಶೀತಲ್ ಮನಸ್ಸನ್ನು ಸೆಳೆದಿದ್ದ ಆ ಚಿತ್ರದ ಹೆಸರು `ಉಳಿದವರು ಕಂಡಂತೆ.' ರಕ್ಷಿತ್‌ ಶೆಟ್ಟಿ ನಿರ್ದೇಶನದ ಆ ಚಿತ್ರದಲ್ಲಿ ಶೀತಲ್ ಪತ್ರಕರ್ತೆಯ ಪಾತ್ರ ಮಾಡಿದ್ದರು. ಮೊದಲ ಚಿತ್ರದಲ್ಲಿಯೇ ಶೀತಲ್‌ಗೆ ಒಳ್ಳೆಯ ಹೆಸರು ಬಂತು. ಹತ್ತು ಹಲವು ಕಾರಣಗಳಿಂದ `ಉಳಿದವರು ಕಂಡಂತೆ' ವಿಭಿನ್ನ ಚಿತ್ರವೊಂದು ಮನ್ನಣೆ ಪಡೆಯಿತು.

ಪ್ರಥಮ ಚಿತ್ರದ ಯಶಸ್ಸಿನ ಬಳಿಕ ಅವರ ನಟನಾ ಬದುಕು ಕ್ರಿಯಾಶೀಲವಾಗಿ ಸಾಗಿತು. ನಿರೂಪಣೆಯಿಂದ ನಟನೆಗೆ ಇಳಿದ ಶೀತಲ್ ಶೆಟ್ಟಿಯವರ ಜೀವನದ ಆರಂಭಿಕ ಸಂಘರ್ಷರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣವೇ.....?

20191019_104337

ಆರಂಭಿಕ ಜೀವನ

ಶೀತಲ್ ಶೆಟ್ಟಿಯವರ ಕುಟುಂಬದವರು ಮೂಲತಃ ದಕ್ಷಿಣ ಕನ್ನಡದವರು, ಆದರೆ ವಾಸವಾಗಿದ್ದುದು ಶಿವಮೊಗ್ಗದಲ್ಲಿ. ಶೀತಲ್ ಕಮಲಾ ನೆಹರು ಹಾಸ್ಟೆಲ್‌ನಲ್ಲಿದ್ದುಕೊಂಡು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದರು. ತಂದೆಯ ಸಾವಿನ ಬಳಿಕ ಶೀತಲ್ ಅಜ್ಜಿಯ ಊರು ಬ್ರಹ್ಮಾವರಕ್ಕೆ ಹೋದರು. ಕುಟುಂಬಕ್ಕೆ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ ಶೀತಲ್ ಬೆಂಗಳೂರಿಗೆ ಹೊರಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ