ದೇಹ ನನ್ನದು ಹಕ್ಕು ನನ್ನದು!

ಮಹಿಳೆಯ ದೇಹ ಅವಳದೇ ಆಸ್ತಿ. ಅದನ್ನು ಅವಳು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಈ ನೈಸರ್ಗಿಕ ನಿಯಮವನ್ನು ಧರ್ಮ ಬಹಳ ಮೊದಲಿನಿಂದಲೇ ನಿರಾಕರಿಸುತ್ತ ಬಂದಿದೆ. ಅದು ರಾಜರಿಗೆ ಹಾಗೂ ಪ್ರಜಾಪ್ರಭುತ್ವದ ಸರ್ಕಾರಗಳಿಗೆ ಎಷ್ಟು ಸಾಧ್ಯವೋ ಅಷ್ಟು ನಿರ್ಬಂಧಗಳನ್ನು ಹೇರಲು ಆದೇಶಿಸಿತು.

ಹಲವು ಸಮಾಜಗಳಲ್ಲಿ ಮದುವೆಯಿಲ್ಲದೆ ದೈಹಿಕ ಸಂಬಂಧ ಮಹಿಳೆಯರಿಗೆ ಅಪರಾಧವೆಂದೇ ಪರಿಗಣಿಸಲ್ಪಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಾನೂನನ್ನು ಪಾಲಿಸುವುದು ಕಡಿಮೆಯಾಗಿದೆ. ಬಹಳಷ್ಟು ದೇಶಗಳ ಕಾನೂನಿನ ಪುಸ್ತಕದಲ್ಲಿ ಈ ಕಾನೂನು ಒಂದು ಮೂಲೆಯಲ್ಲಿ ಬಿದ್ದುಕೊಂಡಿರುವುದು ಕಂಡುಬರುತ್ತದೆ.

ಗರ್ಭಪಾತದ ಕಾನೂನಿನ ಸ್ಥಿತಿಯೂ ಹೀಗೆಯೇ ಆಗಿದೆ. ಹೆಚ್ಚಿನ ದೇಶಗಳು ಗರ್ಭಪಾತವನ್ನು ಮಹಿಳೆಯ ಮೌಲಿಕ ಹಾಗೂ ನೈಸರ್ಗಿಕ ಹಕ್ಕು ಎಂದು ಪರಿಗಣಿಸುವುದೇ ಇಲ್ಲ. ಏಕೆಂದರೆ ಧರ್ಮ ಗರ್ಭಪಾತವನ್ನು ವಿರೋಧಿಸುತ್ತದೆ. ಧರ್ಮಕ್ಕೆ ದೇವರ ಭಕ್ತಿ ಹಾಗೂ ನೈವೇದ್ಯ ಬೇಕು. ಆದರೂ ಅದು ಅನಗತ್ಯ, ವಿವಾಹಪೂರ್ವ, ವಿವಾಹ ಬಳಿಕದ ಗಂಡ ಅಥವಾ ಬೇರೆ ಪುರುಷರ ಲೈಂಗಿಕ ಸಂಬಂಧವನ್ನು ತಡೆಯಲು ಗರ್ಭಪಾತವನ್ನು ಕಾನೂನು ಬಾಹಿರ ಅಥವಾ ಅದನ್ನು ನಿಯಂತ್ರಿಸಲು ಏಕೆ ಪ್ರಯತ್ನಿಸುತ್ತದೆ? ಆದರೆ ಬಹಳಷ್ಟು ಸರ್ಕಾರಗಳು ಧರ್ಮದ ಮುಂದೆ ಮಂಡಿ ಊರುತ್ತಿವೆ.

ಇತ್ತೀಚೆಗೆ ಮುಂಬೈನ ಓರ್ವ ಮಹಿಳೆಗೆ 25ನೇ ವಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಗರ್ಭಪಾತಕ್ಕೆ ಅವಕಾಶ ದೊರೆಯಿತು. ಈ ಅನುಮತಿಯ ಒಂದು ವಿಶೇಷತೆಯೆಂದರೆ ಆಕೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಅವಳಿ ಭ್ರೂಣಗಳಲ್ಲಿ ಒಂದನ್ನು ಗರ್ಭಪಾತ ಮಾಡಿಸಿಕೊಂಡಳು. ಅದಕ್ಕೆ ಬಹುಶಃ  ಡೌನ್‌ ಸಿಂಡ್ರೋಮ್ ಇತ್ತು. ವಾಸ್ತವದಲ್ಲಿ ಈ ನಿರ್ಧಾರವನ್ನು ವೈದ್ಯರೇ ತೆಗೆದುಕೊಳ್ಳಬಹುದಾಗಿತ್ತು. ಅದರ ಮೇಲೆ ಸರ್ಕಾರದ್ದಾಗಲಿ, ಕಾನೂನಿದ್ದಾಗಲಿ, ಧರ್ಮದ್ದಾಗಲಿ, ಪೂಜಾರಿ ಪುರೋಹಿತರದ್ದಾಗಲಿ, ಅತ್ತೆಯದ್ದಾಗಲಿ, ಗಂಡನದ್ದಾಗಲಿ ಯಾವುದೇ ಹಕ್ಕು ಇಲ್ಲ. ದೇಹ ಯಾರದ್ದಾಗಿದೆ ಆ ಮಹಿಳೆ ಹಾಗೂ ಗರ್ಭಪಾತ ಮಾಡುವ ವೈದ್ಯ ಇದರ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಬೇಕು.

`ಮೆಡಿಕಲ್ ಟರ್ಮಿನೇಶನ್‌ ಆಫ್‌ ಪ್ರೆಗ್ನೆನ್ಸಿ ಆ್ಯಕ್ಟ್ 1971'ರ ಪ್ರಕಾರ ಕೂಡ ಈ ಸ್ವಾತಂತ್ರ್ಯ ಮಹಿಳೆಗಿಲ್ಲ. ಆ ಅಧಿಕಾರ ವೈದ್ಯರಿಗೆ ಇದೆ. ಅವರು ಗರ್ಭಪಾತ ಮಾಡಬಹುದು. ಈ ಕಾನೂನಿನ ವಿಧಿ 3ರಲ್ಲಿ ಎಷ್ಟೊಂದು ಷರತ್ತುಗಳು ಇವೆಯೆಂದರೆ, ಜನರು ಅನುಮತಿಗಾಗಿ ಹೈಕೋರ್ಟ್‌ ಇಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಗುತ್ತದೆ.

18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹುಡುಗಿಗೆ ತಂದೆ ಅಥವಾ ತಾಯಿಯ ಅನುಮತಿ ಪಡೆಯಬೇಕಾಗುತ್ತದೆ. ಗರ್ಭ ನಿಲ್ಲಲು ಯಾರದೇ ಅನುಮತಿ ಬೇಕಿಲ್ಲ ಅಂದಾಗ ಗರ್ಭ ತೆಗೆದುಹಾಕಲು ಅನುಮತಿ ಏಕೆ ಬೇಕು?

ರೋಗಗ್ರಸ್ತ ಭ್ರೂಣದಿಂದ ಗರ್ಭಿಣಿಗೆ ಸಮಸ್ಯೆ ಆಗುತ್ತದೆ ಎಂದಾದರೆ ಅದನ್ನು ತೆಗೆದು ಹಾಕಬಹುದು ಎನ್ನುವುದು ಈ ಕಾನೂನಿನ ಭಾವನೆಯಾಗಿದೆ. ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಗರ್ಭಪಾತ ಮಾಡಲು ಇಚ್ಛಿಸಿದರೆ ಅವರಿಗೆ ಸುಳ್ಳು ಹೇಳಬೇಕಾಗಿ ಬರುತ್ತದೆ.

ಇದು ತಪ್ಪು. ಧರ್ಮಶಾಸ್ತ್ರಗಳ ಆದೇಶವನ್ನು ಈಗಲೂ ಒಪ್ಪಲಾಗುತ್ತದೆ. ಧರ್ಮದ ಗುತ್ತಿಗೆದಾರರು ಮಹಿಳೆಯ ಲೈಂಗಿಕಾಂಗದ ಮೇಲೆ ತಮ್ಮ ಹಕ್ಕು ಹೊಂದಲು ಇಚ್ಛಿಸುತ್ತಾರೆ. ಅವರು ಬಗೆಬಗೆಯ ನಿಯಮಗಳನ್ನು ರೂಪಿಸಲು ಇಚ್ಛಿಸುತ್ತಾರೆ. ಒಂದೆಡೆ ಅವಳ ಪೂಜೆ ಮಾಡುತ್ತಾರೆ. ಅವಳ ಶುದ್ಧತೆಗೆ ಚಾರಿತ್ರ್ಯದ ಪ್ರಮಾಣವೆಂದು ಭಾವಿಸುತ್ತಾರೆ. ಪುರುಷನ ಹೊರತಾಗಿ ಒಪ್ಪಿಗೆ ಅಥವಾ ಒಪ್ಪಿಗೆಯಿಲ್ಲದೆ ಸಂಬಂಧ ಹೊಂದಿದಾಗ ಯಾವ ಗೊಂದಲ ಗಲಾಟೆ ಎಬ್ಬಿಸಲಾಗುತ್ತದೋ ಅದನ್ನು ಪುರುಷನ ಮೇಲೆ ಏಕೆ ಅನ್ವಯಿಸಲಾಗುವುದಿಲ್ಲ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ