ಉತ್ತರ ಗೋವಾದ ಅರ್ಪೋರದಲ್ಲಿರುವ “ಬಿರ್ಚ್​ ಬೈ ರೊಮಿಯೊ ಲೇನ್​” ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಟ್ಟು 25 ಮಂದಿ ಮೃತಪಟ್ಟು, ಆರು ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಣಜಿ ಸಮೀಪ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್‌) ದಾಖಲಿಸಲಾಗಿದೆ.

ಮಧ್ಯರಾತ್ರಿಯ ನಂತರ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘದ ನಂತರ 14 ಸಿಬ್ಬಂದಿ ಸದಸ್ಯರು ಮತ್ತು ನಾಲ್ವರು ಪ್ರವಾಸಿಗರು ಸೇರಿದಂತೆ 25 ಜನರು ಸಾವನ್ನಪ್ಪಿದ್ದಾರೆ.

ಕಳೆದ ವರ್ಷ ಪ್ರಾರಂಭವಾದ ಈ ಕ್ಲಬ್, ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿದ್ದು, ಇದು ಜನಪ್ರಿಯ ಪಾರ್ಟಿ ಸ್ಥಳವಾಗಿದ್ದು ವೀಕೆಂಡ್ ಬರುತ್ತಲೇ ಸಾವಿರಾರು ಜನರು ಈ ಕ್ಲಬ್ ಧಾವಿಸುತ್ತಾರೆ.

ಎಲ್ಲವೂ ಭಸ್ಮ: ಗೋವಾದ 'ಬಿರ್ಚ್ ಬೈ ರೋಮಿಯೋ ಲೇನ್' ನಲ್ಲಿ ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದಾಗ, ಸುಮಾರು 100 ಪ್ರವಾಸಿಗರಿಗೂ ಹೆಚ್ಚು ಮಂದಿ 'ಬಾಲಿವುಡ್ ಬ್ಯಾಂಗರ್ ನೈಟ್' ಶೋವನ್ನು ಆನಂದಿಸುತ್ತಿದ್ದರು.ಈ ಸಂದರ್ಭ ಛಾವಣಿಯಲ್ಲಿ ಲೈಟ್ ಸಮೀಪ ಸಣ್ಣದಾಗಿ ಆರಂಭವಾದ ಬೆಂಕಿ ಬಳಿಕ ನೋಡ ನೋಡುತ್ತಲೇ ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡ ಆವರಿಸಿಕೊಂಡಿದೆ. ಕೇವಲ 40 ಸೆಕೆಂಡ್ ನಲ್ಲಿ ಬೆಂಕಿ ಇಡೀ ವೇದಿಕೆಗೆ ವ್ಯಾಪಿಸಿದ್ದು,  ವೇದಿಕೆ ಮೇಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಈ ದುರಂತ ಸಂಭವಿಸುವಾಗ ಶೋಲೆಯ ಚಾರ್ಟ್‌ಬಸ್ಟರ್ 'ಮೆಹಬೂಬಾ ಓ ಮೆಹಬೂಬಾ' ಹಾಡಿನ ತಾಳಕ್ಕೆ ನರ್ತಕಿ ಡಾನ್ಸ್​ ಮಾಡುತ್ತಿದ್ದರು. ಆಕೆಯನ್ನು ಸಂಗೀತಗಾರರು ಸುತ್ತುವರೆದಿರುವುದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಇದೇ ಸಂದರ್ಭ ನೈಟ್ ಕ್ಲಬ್ ನ ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿಯೇ ಕೀಬೋರ್ಡ್ ಬಳಿ ಇದ್ದ ಲ್ಯಾಪ್ ಟಾಪ್ ಮೇಲೆ ಬೆಂಕಿಯ ಕಿಡಿಗಳು ಬಿದ್ದಿವೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ.  ಅಷ್ಟು ಹೊತ್ತಿಗಾಗಲೇ ಬೆಂಕಿ ಇಡೀ ಛಾವಣಿ ಆವರಿಸಿಕೊಂಡು ನೈಟ್ ಕ್ಲಬ್ ತುಂಬಾ ಹೊಗೆ ತುಂಬಿಕೊಂಡಿದೆ. ಸಿಬ್ಬಂದಿ, ಕ್ಲಬ್ ನಲ್ಲಿದ್ದವರೆಲ್ಲರನ್ನೂ ಹೊರಗೆ ಕಳುಹಿಸುವ ಕಾರ್ಯ ಮಾಡಿದ್ದಾರೆ. ಸಂಗೀತಗಾರರು ತಮ್ಮ ವಾದ್ಯಗಳನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಓಡಿದ್ದಾರೆ.

ಪ್ರಾಣ ಉಳಿಸಿಕೊಳ್ಳಲು ಪರದಾಟ: ಪ್ರತ್ಯಕ್ಷದರ್ಶಿಗಳು ಮತ್ತು ಅಗ್ನಿಶಾಮಕ ದಳದವರ ಪ್ರಕಾರ, ಬೆಂಕಿ ಹೊತ್ತಿಕೊಂಡ ನಂತರ ಕಿರಿದಾದ ಪ್ರವೇಶ-ನಿರ್ಗಮನ ದ್ವಾರವು ಗೊಂದಲ ಹೆಚ್ಚಿಸಿತು. ಅನೇಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಕೆಲವು ಪ್ರವಾಸಿಗರು ಕೆಳಮಹಡಿಯ ಅಡುಗೆಮನೆಗೆ ಓಡಿಹೋಗಿ ಸಿಬ್ಬಂದಿಯೊಂದಿಗೆ ಅಲ್ಲಿ ಸಿಕ್ಕಿಹಾಕಿಕೊಂಡರು.

ಕಿರಿದಾದ ಪ್ರವೇಶದ್ವಾರವು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚು ಸವಾಲಿನದ್ದಾಗಿ ಮಾಡಿತು. ನೈಟ್‌ಕ್ಲಬ್‌ಗೆ ಹೋಗುವ ಮಾರ್ಗಗಳು ಅಗ್ನಿಶಾಮಕ ವಾಹನಗಳು ಹಾದುಹೋಗುವಷ್ಟು ಅಗಲವಾಗಿರಲಿಲ್ಲ ಎಂದು ಅಗ್ನಿಶಾಮಕ ದಳದವರು ಹೇಳಿದ್ದಾರೆ. ಅಗ್ನಿಶಾಮಕ ವಾಹನಗಳನ್ನು ಸುಮಾರು 400 ಮೀಟರ್ ದೂರದಲ್ಲಿ ನಿಲ್ಲಿಸಲಾಗಿತ್ತು. ಇದು ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿತ್ತು. ದುರಂತದಲ್ಲಿ ಅನೇಕರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರೆ, ಇತರರು ಗಂಭೀರ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ