ಅದು ಅಮ್ಮನ ಕನಸು. ಅದನ್ನು ಸಾಕಾರಗೊಳಿಸಿಕೊಳ್ಳಲೇಬೇಕೆಂಬ ಉದ್ದೇಶದಿಂದ ಮಗಳನ್ನು ಬಾಲ್ಯದಲ್ಲೇ ಭರತನಾಟ್ಯಂ ನೃತ್ಯಾಭ್ಯಾಸದಲ್ಲಿ ತೊಡಗಿಸಿದ್ದರು. ಆ ಮಗು ಬೆಳೆಯುತ್ತಾ ನಾಟ್ಯವನ್ನೇ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಇಂದು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾಳೆ. ಆಕೆಯೇ ನಾಟ್ಯಮಯೂರಿ ಸಿಂಧೂ!

ಕಳೆದ ಹದಿನೈದು ವರ್ಷಗಳಿಂದ ಅಮ್ಮನ ಕನಸನ್ನು ಸಾಕಾರಗೊಳಿಸಲು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಲಲಿತ ಕಲಾ ಕಾಲೇಜಿನಲ್ಲಿ ಭರತನಾಟ್ಯಂ ಪದವಿ ಪಡೆದು, ತಾನು ಒಂದು ಹಂತಕ್ಕೆ ಕಲಿಕೆಯಲ್ಲಿ ಪೂರ್ಣಗೊಂಡಿದ್ದೇನೆ ಎನ್ನುನ ಕಾನ್ಛಿಡೆನ್ಸ್ ಬೆಳೆಸಿಕೊಂಡು, 2013ರ ಡಿಸೆಂಬರ್‌ ತಿಂಗಳಲ್ಲಿ ಜಗನ್ಮೋಹನ ಅರಮನೆಯ ಮೂಲಕ ರಂಗಪ್ರವೇಶ ಮಾಡಿದ  ಸಿಂಧೂ ಅಮ್ಮನ ಕನಸಿಗೆ ಜೀವ ತುಂಬಿದ್ದಾರೆ. ಅರಂಗೇಟ್ರಂ ನಂತರ ತನ್ನ ಶಿಷ್ಯ ಪರಂಪರೆಗೆ ತಾನು ಗುರುಗಳಿಂದ ಕಲಿತದ್ದನ್ನೇ ಕಲಿಸದೆ, ಹೊಸ ಪ್ರಯೋಗಗಳನ್ನು ಮಾಡುವ ಅಭಿಲಾಷೆ ಹೊಂದಿರುವ ಸಿಂಧೂ, ಪ್ಯೂಷನ್‌ ಮ್ಯೂಸಿಕ್‌ಗೂ ಭರತನಾಟ್ಯಂ ನೃತ್ಯ ಕಲೆಯನ್ನು ಅಳವಡಿಸಬಹುದು ಎನ್ನುತ್ತಾರೆ.

ತಮ್ಮ ಕುಟುಂಬದಲ್ಲೇ ಮೊದಲ ಬಾರಿಗೆ ಈಕೆ ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ, ಇದು ತನ್ನ ತಾತನ ಬಳುವಳಿ ಎನ್ನುವುದನ್ನು ಮರೆಯುವುದಿಲ್ಲ. ಅವರು ಹರಿಕಥೆ ಮಾಡುತ್ತಿದ್ದರಂತೆ. ತಾಯಿಯ ಆಸೆಯಂತೆ ಒಂದನೇ ತರಗತಿಯಿಂದಲೇ ಭರತನಾಟ್ಯಂ ಅಭ್ಯಾಸ ಆರಂಭಿಸಿದ ಸಿಂಧೂ ಪ್ರಾಥಮಿಕ ಶಿಕ್ಷಣ ಮುಗಿಸುವವರೆಗೂ ಗಾಯತ್ರಿ ಎಂಬುವವರ ಬಳಿ ಭರತನಾಟ್ಯಂ ತರಬೇತಿ ಪಡೆದಿದ್ದರು.

ಅಷ್ಟರಲ್ಲಾಗಲೇ ಭರತನಾಟ್ಯಂ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಾನು ಇನ್ನೂ ಇದರಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕೆಂದು ತೀರ್ಮಾನಿಸಿಕೊಂಡಿದ್ದಾರೆ. ಪ್ರೌಢಶಾಲಾ ಶಿಕ್ಷಣದ ಸಂದರ್ಭದಲ್ಲಿ ವಿದೂಷಿ ಪ್ರಸನ್ನಲಕ್ಷ್ಮಿ ಎಂಬುರ ಬಳಿ ಕೂಚ್ಚುಪುಡಿ ಹಾಗೂ ಭರತನಾಟ್ಯಂ ಅಭ್ಯಾಸ ಮಾಡಿದ್ದಾರೆ. ನೃತ್ಯದ ಬಗ್ಗೆಯೇ ಶಿಕ್ಷಣ ಮುಂದುವರಿಸಬೇಕೆಂಬ ಆಸಕ್ತಿ ಬೆಳೆಸಿಕೊಂಡು ಲಲಿತಕಲಾ ಕಾಲೇಜಿನಲ್ಲಿ ಬಿಪಿಎ ಪದವಿ ಪಡೆದರು. ಈ ಸಂದರ್ಭದಲ್ಲಿ ಡಾ. ಶೀಲಾ ಶ್ರೀಧರ್‌ ಅವರ ಶಿಷ್ಯೆಯಾಗಿ ತನ್ನ ನೃತ್ಯಾಭ್ಯಾಸ ಮುಂದುವರಿಸಿ ರಂಗಪ್ರವೇಶ (ಅರಂಗೇಟ್ರಂ) ಮಾಡಿದ್ದಾರೆ. ಭರತನಾಟ್ಯಂಗೆ ಸಂಗೀತದ ಜೊತೆಗೆ ಸಾಹಿತ್ಯ ಬಹಳ ಮುಖ್ಯವಾಗಿದ್ದು, ಸಾಹಿತ್ಯಕ್ಕೆ ತಕ್ಕಂತೆ ನರ್ತಿಸುವ ಕಲೆಗಾರಿಕೆ ರೂಢಿಸಿಕೊಂಡಿದ್ದಾರೆ. ಶಾಸ್ತ್ರೀಯ ಚೌಕಟ್ಟಿನಲ್ಲೇ ಏನೇನು ಮಾಡಬೇಕೋ ಅವುಗಳ ಜೊತೆಗೆ ತನ್ನದೇನಾದರೂ ವಿಶೇಷ ಕೊಡುಗೆ ನೀಡಬೇಕೆಂಬ ಅಭಿಲಾಷೆ ಹೊಂದಿದ್ದಾರೆ.

SINDHU-GK

ಮೈಸೂರು ದಸರಾ ಸಂದರ್ಭದಲ್ಲಿ ಯುವ ದಸರಾ ಕಾರ್ಯಕ್ರಮಗಳಲ್ಲಿ ಪ್ರತೀ ವರ್ಷ ಕಾರ್ಯಕ್ರಮ ನೀಡಿದ್ದಾರೆ. ಹಂಪಿ ಉತ್ಸವ, ಜಲಪಾತೋತ್ಸವ ಹಾಗೂ ದೆಹಲಿಯಲ್ಲಿ ತೆಲುಗು ಸಾಂಸ್ಕೃತಿಕ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ.

ಕಳೆದ 5 ವರ್ಷಗಳಿಂದ `ಸಂಸ್ಕೃತಿ' ಎಂಬ ನೃತ್ಯ ಶಾಲೆಯನ್ನು ಮಳವಳ್ಳಿಯಲ್ಲಿ ಆರಂಭಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲೂ ತರಗತಿಗಳನ್ನು ನಡೆಸುತ್ತಿದ್ದಾರೆ.

``ಪೋಷಕರು ತಮ್ಮ ಮಕ್ಕಳು ದಿನಬೆಳಗಾಗುವುದರಲ್ಲಿ ಕಲಾವಿದರಾಗಬೇಕೆಂದು ಬಯಸುತ್ತಾರೆ. ಆ ಭಾವನೆ ಅವರು ಬಿಡಬೇಕು. ಕಲೆಯನ್ನು ಕರಗತ ಮಾಡಿಕೊಳ್ಳಲು ಶ್ರಮಪಡಬೇಕು. ಟಿವಿ ಕಾರ್ಯಕ್ರಮಗಳ ಯಾವುದೋ ಒಂದೆರಡು ಹಾಡುಗಳಿಗೆ ನೃತ್ಯಾಭ್ಯಾಸ ಮಾಡಿಬಿಟ್ಟರೆ ಕಲಾವಿದರಾಗುವುದಿಲ್ಲ,'' ಎಂದು ಸಿಂಧೂ ಅಭಿಪ್ರಾಯಪಡುತ್ತಾರೆ.

``ನಾನು ಸಿನಿಮಾದಲ್ಲಾಗಲಿ ಅಥವಾ ಕಿರುತೆರೆಯಲ್ಲಾಗಲಿ ಕಾರ್ಯಕ್ರಮ ನೀಡಲು ಆಸಕ್ತಳಾಗಿಲ್ಲ,'' ಎನ್ನುವ ಸಿಂಧೂ, ``ಭರತನಾಟ್ಯಂನಲ್ಲಿ ಇನ್ನೂ ಹೊಸತನ ಬರಬೇಕಿದೆ. ಪಂಚಾಯದ ಪಾಣಿಪಿಳ್ಳೈ ಹಾಗೂ ಶ್ರೀನಿವಾಸನ್‌ ಅವರುಗಳು ಸಂಯೋಜಿಸಿದ ರಾಗಗಳ ಮೇಲೆ ಇನ್ನೂ ಪ್ರಯೋಗಳು ನಡೆಯಬೇಕು. ಅಪರೂಪ ಎನ್ನುವ ಕೃತಿಗಳ ಬಗ್ಗೆ ಕೆಲಸಗಳು ನಡೆಯಬೇಕಿದೆ,'' ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ