1 ರಿಂದ 10 ಮಕ್ಕಳಿಗೆ ಜನ್ಮ ಕೊಡುವುದು, ಮರು ಮತಾಂತರ ಮಾಡಿಸುವುದು, ಪ್ಯಾಂಟ್‌, ಜೀನ್ಸ್ ಧರಿಸದಿರುವುದು, ಧಾರ್ಮಿಕ ಯಾತ್ರೆಗಳಿಗೆ ಹೋಗುವುದು ಇತ್ಯಾದಿ ವಿಷಯಗಳು ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಲ್ಲ. ಆದರೂ ಅದರ ಬಹಳಷ್ಟು ಕಾವಿ ಧರಿಸಿದ ಮತ್ತು ಕಾವಿ ಧರಿಸದ ನಾಯಕರು ಮತ್ತು ಬೆಂಬಲಿಗರು ಆ ವಿಷಯಗಳ ಬಗ್ಗೆ ಢಂಗೂರ ಸಾರಿ ಸಾರಿ ಆಡಳಿತ ನಡೆಸುತ್ತಾ ಮನೆಗಳ ಡ್ರಾಯಿಂಗ್‌ ರೂಮ್ ಗಳು ಹಾಗೂ ಬೆಡ್‌ರೂಮುಗಳಲ್ಲಿ ನುಗ್ಗಲು ಪ್ರಯತ್ನಿಸುತ್ತಿದ್ದಾರೆ. 2014ರ ಮೇ ತಿಂಗಳಿಂದ ಇವರ ಸದ್ದು ಎಷ್ಟು ಹೆಚ್ಚಾಗಿತ್ತೆಂದರೆ ಭಾರತ ವಿಕಸಿತ, ಸ್ವಚ್ಛ, ಭ್ರಷ್ಟಾಚಾರ ಮುಕ್ತ, ಆಧುನಿಕ ಹಾಗೂ ಸ್ಮಾರ್ಟ್‌ ದೇಶ ಆಗಲಿ ಬಿಡಲಿ ಮತಾಂಧವಂತೂ ಖಂಡಿತ ಆಗಿಬಿಡುತ್ತದೆ ಅನ್ನಿಸುತ್ತಿತ್ತು.

ಈ ವಿಷಯಕ್ಕೆ ಬ್ರೇಕ್‌ ಹಾಕಿದ ದೆಹಲಿಯ ಜನತೆಗೆ ಧನ್ಯವಾದಗಳು. ವಿಧಾನಸಭಾ ಚುನಾವಣೆಯಲ್ಲಿ 70ರಲ್ಲಿ ಕೇವಲ 3 ಸೀಟು ಗೆಲ್ಲಿಸಿ ಆ ಪಕ್ಷದ ಬಾಯಿ ಮುಚ್ಚಿಸಿದ್ದಾರೆ. ದೆಹಲಿಯ ಜನತೆಯಂತೂ ಇಂತಹ ಗೆಲುವನ್ನು ಎಂದೂ ಯಾವ ಪಾರ್ಟಿಗೂ ಕೊಟ್ಟಿರಲಿಲ್ಲ. ಸರಿಯಾದ ಪ್ರಜಾಪ್ರಭುತ್ವವಿರುವ ಬೇರೆ ಯಾವ ದೇಶದಲ್ಲೂ ಇಂತಹ ಬೆಂಬಲ ಸಿಗುವುದಿಲ್ಲ. ಈ ಫಲಿತಾಂಶ ಕಮ್ಯೂನಿಸ್ಟ್ ದೇಶಗಳಲ್ಲಿ ಕಂಡುಬರುತ್ತದೆ. ಅಲ್ಲಿ ಸರ್ಕಾರ ಹಾಗೂ ಮನೆ ಎರಡೂ ಸರ್ವಾಧಿಕಾರಿಗಳ ಕಪಿಮುಷ್ಟಿಯಲ್ಲಿರುತ್ತವೆ.

ಈ ಚಮತ್ಕಾರ ಮಾಡಿದ್ದು ಅರವಿಂದ್‌ ಕೇಜ್ರಿವಾಲ್‌ರ ಆಮ್ ಆದ್ಮಿ ಪಾರ್ಟಿ. ಕೇಜ್ರಿವಾಲ್‌ರ ಪತ್ನಿ ಸರ್ಕಾರಿ ಅಧಿಕಾರಿಯಾಗಿದ್ದರಿಂದ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ಪತಿ ಕೇಜ್ರಿವಾಲ್ ಅವರನ್ನು ಧನ್ಯವಾದ ಸಲ್ಲಿಸಲು ಮಾತ್ರ ಜನತೆ ಹಾಗೂ ಕ್ಯಾಮೆರಾಗಳ ಮುಂದೆ ಕರೆತಂದರು.

ಅರವಿಂದ್‌ ಕೇಜ್ರಿವಾಲ್‌ರ ಚುನಾವಣಾ ಪ್ರಣಾಳಿಕೆಯಲ್ಲಿನ ಮನೆಗೆ ಸಂಬಂಧಿಸಿದ ವಿಷಯಗಳು ಗೃಹಿಣಿಯರನ್ನು ಸಂತೋಷಪಡಿಸುವುದಾಗಿತ್ತು. ಕೆರಂಟ್‌ ಬಿಲ್‌ನಲ್ಲಿ ರಿಯಾಯಿತಿ, ನೀರಿನ ಬಿಲ್‌ನಲ್ಲಿ ರಿಯಾಯಿತಿ, ಉಚಿತ ವೈಫೈ ಇತ್ಯಾದಿ ಬಿಟ್ಟಿಯಾಗಿ ಕೊಡಲಾಗುತ್ತಿದೆ ಅನ್ನಿಸಿದರೂ ಅಸಲಿಗೆ ಅವು ಬದುಕಿಗೆ ಸೌಕರ್ಯ ಕೊಡುವಂತಿವೆ. ಈ ಕಾರಣದಿಂದಾಗಿ ಕೇಜ್ರಿವಾಲ್‌ರ ಪಕ್ಷದ ಹಿಂದೆ ಎಲ್ಲ ಧರ್ಮ, ಎಲ್ಲ ಜಾತಿಯ ಜನರೂ ಸಾಗಿ ಆ ಪಕ್ಷಕ್ಕೆ ಶೇ.54ರಷ್ಟು ಅಭೂತಪೂರ್ವ ಬೆಂಬಲ ನೀಡಿದರು.

ಕೇಜ್ರಿವಾಲ್‌ರವರು ಈ ಚುನಾವಣೆಯ ಮೂಲಕ ಪರೋಕ್ಷವಾಗಿ ಸಾಬೀತುಪಡಿಸಿದ್ದೇನೆಂದರೆ, ವ್ಯಕ್ತಿ ಹೇಗೆ ಕಾಣುತ್ತಾನೆ ಎಂಬುದಕ್ಕಿಂತ ಆತ ಏನನ್ನು ಮಾಡಲು ಬಯಸುತ್ತಾನೆ ಅಥವಾ ಏನು ಮಾಡಬಹುದು ಎನ್ನುವುದು ಮುಖ್ಯವಾಗುತ್ತದೆ ಎಂಬುದು. ಅವರು ಕೆಮ್ಮಿನ ಸಮಸ್ಯೆಯಿಂದಾಗಿ ಚಳಿಗಾಲಗಳಲ್ಲಿ ಸದಾ ಮಫ್ಲರ್‌ ಧರಿಸುತ್ತಿದ್ದರು. ಅದರ ಬಗ್ಗೆ ಛೇಡಿಸಲಾಗುತ್ತಿತ್ತು. ಅವರ ಕೆಮ್ಮಿನ ಬಗ್ಗೆ ಗೇಲಿ ಮಾಡಲಾಯಿತು. ಅವರ ಸರಳತೆ, ನಿಷ್ಕಪಟ ಸ್ವಭಾವವನ್ನು ಗುರಿಯಾಗಿಸಿಕೊಳ್ಳಲಾಯಿತು. ಗೃಹಿಣಿಯ ರೀತಿ ಧರಣಿ ಕೂತಿದ್ದ ಬಗ್ಗೆ ನರೇಂದ್ರ ಮೋದಿಯವರ ಪಕ್ಷ ಗಂಟಲು ಹರಿದುಕೊಂಡಿತು. ಆದರೆ ಅರವಿಂದ್‌ ಕೇಜ್ರಿವಾಲ್ ‌ಮತ್ತು ಅವರ ಟೀಮ್ ಜಗ್ಗದೆ ಸ್ಥಿರವಾಗಿ ನಿಂತಿದ್ದರು.

ಸರಿಯಾದ ಸರ್ಕಾರ ಬೇಕಾಗಿದ್ದರೆ ಅದನ್ನು ನಡೆಸಲು ಸರಿಯಾದ ವ್ಯಕ್ತಿ ಬೇಕು. ಅವರು ಬಂಗಲೆ, ವಾಹನ, ಕೆಂಪುದೀಪ, ನೌಕರರ ಗುಂಪಿನೊಂದಿಗೆ ಇರುವವರಾಗಿರದೆ ಒಂದು ಸಾಧಾರಣ ಮನೆಯನ್ನು ಸಂಭಾಳಿಸುವ ಗೃಹಿಣಿಯಂತೆ ಕೆಲಸ ಮಾಡುವವರಾಗಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ