ನಾವು ಇಪ್ಪತ್ತು ವರ್ಷಗಳ ಹಿಂದೆ ಸಿಂಗಪೂರಿನ ಆಕರ್ಷಕ ತಾಣವೆನಿಸಿಕೊಂಡಿದ್ದ ಸಂತೋಸಾ ದ್ವೀಪಕ್ಕೆ ಹೋದಾಗ ಅಲ್ಲಿ ಮ್ಯೂಸಿಕಲ್ ಫೌಂಟೆನ್‌ ಮತ್ತು ಒಂದಷ್ಟು ರೈಡ್‌ಗಳನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ಈಗ ಅಲ್ಲಿಯೇ ಯೂನಿವರ್ಸಲ್ ಸ್ಟುಡಿಯೋ ನಿರ್ಮಿಸಲಾಗಿದೆ. 49 ಎಕರೆ ವಿಸ್ತೀರ್ಣವುಳ್ಳ, ಈ ವಿಶಾಲ ತಾಣ ಈಶಾನ್ಯ ಏಷ್ಯಾ ಅಂದರೆ ದಕ್ಷಿಣ ಪೂರ್ವ ಏಷ್ಯಾದಲ್ಲಿನ ಮೊದಲ ಸ್ಟುಡಿಯೋ ಎಂಬ ಹೆಗ್ಗಳಿಕೆಯನ್ನು ಹೊಂದಿರುವುದೇ ಅಲ್ಲದೆ, ಮುಂದಿನ 30 ವರ್ಷಗಳ ತನಕ ಇದಕ್ಕೆ ಸಮನವಾದ ಮತ್ತೊಂದು ಸ್ಟುಡಿಯೋ ನಿರ್ಮಾಣವಾಗಲು ಸಾಧ್ಯವಿಲ್ಲ ಎನ್ನುವುದು ಅವರ ಅಂಬೋಣ.

ಈ ಸುಂದರ ತಾಣದ ನಿರ್ಮಾಣ 2003ರ ಏಪ್ರಿಲ್‌ನಲ್ಲಿ ಪ್ರಾರಂಭವಾಗಿ, 2009ರ ಅಕ್ಟೋಬರ್‌ನಲ್ಲಿ ಸಾರ್ಜನಿಕರಿಗಾಗಿ ತೆರೆಯಲಾಯಿತು. ನಾವು ಯೂನಿವರ್ಸಲ್ ಸ್ಟುಡಿಯೋವನ್ನು ಲಾಸ್‌ ಏಂಜಲೀಸ್‌, ಅರ್ಲ್ಯಾಂಡೋ ಮತ್ತು ಪ್ಯಾರಿಸ್‌ (ಪ್ಯಾರಿಸ್‌ನ ಡಿಸ್ನಿ ಲ್ಯಾಂಡ್‌ನ ಸಣ್ಣ ಭಾಗ)ನಲ್ಲಿ ನೋಡಿದ್ದು, ಈಗ ಸಿಂಗಪೂರ್‌ನಲ್ಲಿ ನೋಡಿದೆ. ಆದರೆ ಎಷ್ಟು ಬಾರಿ ನೋಡಿದರೂ ಬೇಸರವಾಗುವುದಿಲ್ಲ. ಮನುಷ್ಯನ ಮನಸ್ಸನ್ನು ಜಯಿಸುವ ಶಕ್ತಿ ಇಲ್ಲಿದೆ. ಅವರವರ ವಯಸ್ಸಿಗನುಗುಣವಾಗಿ, ಎಲ್ಲರಿಗೂ ಮನರಂಜನೆ, ಥ್ರಿಲ್ ‌ಬೆರಗುಗೊಳಿಸುವ ತಾಣವೆನ್ನಬಹುದು.

ಸಂತೋಸಾ ದ್ವೀಪದ ಪಶ್ಚಿಮದ ತೀರಕ್ಕಿರುವ ಯೂನಿವರ್ಸಲ್ ಸ್ಟುಡಿಯೋದಲ್ಲಿ ಒಟ್ಟು 24 ಆಕರ್ಷಣೆಗಳಿವೆ. ಅವುಗಳಲ್ಲಿ ಹದಿನೆಂಟನ್ನು ಪಾರ್ಕಿಗೆಂದೇ ರೂಪಿಸಲಾಗಿದೆ. ನೀರಿನಿಂದ ಸುತ್ತುವರೆದ ಏಳು ವಿಭಾಗಗಳಿವೆ. ಪ್ರತಿಯೊಂದನ್ನೂ ಒಂದು ನಿರ್ದಿಷ್ಟ ಉದ್ದೇಶ ಅರ್ಥಾತ್‌ ಥೀಮ್ ನ್ನು ಅವಲಂಬಿಸಿ ವಿಭಾಗಿಸಲಾಗಿದೆ. ಜಗತ್ತಿನಲ್ಲೇ ಅತಿ ಎತ್ತರದ ಎರಡು ಟ್ರಾಕ್‌ಗಳ ರೋಲರ್ ಕೋಸ್ಟರ್‌ನ್ನು ಹೊಂದಿರುವ ಹೆಗ್ಗಳಿಕೆಯನ್ನು ಪಡೆದಿದೆ. 30 ರೆಸ್ಟೋರೆಂಟ್‌ಗಳು ಮತ್ತು ಫುಡ್‌ ಕೋರ್ಟ್‌ಗಳನ್ನು ಹೊಂದಿದ್ದು ಅಲ್ಲೇ ಎಡತಾಕಿದರೆ ಅವು ಸಿಗುತ್ತವೆ. ಆದರೆ ಹೆಚ್ಚಿನವುಗಳು ಮಾಂಸಾಹಾರಿಯಾದ್ದರಿಂದ ನಮಗೆ ಮಾತ್ರ ಏನೂ ತಿನ್ನಲಾಗಲಿಲ್ಲ. ಒಂದೆರಡು ಗಾರ್ಲಿಕ್‌ ಬ್ರೆಡ್‌ ಮತ್ತು ಜೂಸ್‌ ಕುಡಿದೆ. ಎಲ್ಲ ದುಬಾರಿಯೇ.

ಹಾಲಿವುಡ್‌ ಯೂನಿವರ್ಸಲ್ ಸ್ಟುಡಿಯೋ ಪ್ರವೇಶ ಮಾಡಿದ ತಕ್ಷಣ ನಿಮ್ಮನ್ನು ಎದುರುಗೊಳ್ಳುವುದು ಹಾಲಿವುಡ್‌ ತಾಣ. ಲಾಸ್ ಏಂಜಲೀಸ್‌ನ ವಾಕ್‌ ಅಪ್‌ ಫ್ರೇಮ್ ನ ತದ್ರೂಪ. ಹಾಲಿವುಡ್‌ನ ಪ್ರಸಿದ್ಧ ತಾರೆಯರ ಹೆಸರಿನ ನಕ್ಷತ್ರಗಳನ್ನು ಸುಂದರವಾಗಿ ನೆಲದ ಮೇಲೆ ರೂಪಿಸಲಾಗಿದೆ ಮತ್ತು ವಿವಿಧ ಚಲನಚಿತ್ರಗಳ ವೇಷಗಳನ್ನು ಧರಿಸಿದ ವೇಷಧಾರಿಗಳು, ಆ ವೇಷಾಧಾರಿಗಳ ಜೊತೆ ಎಲ್ಲರೂ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ. ಆ ಫೋಟೋಗಳನ್ನು ನಾವೇ ತೆಗೆಯಬಹುದು. ಅಲ್ಲಿ ಒಬ್ಬ ಫೋಟೋಗ್ರಾಫರ್‌ ಇರುತ್ತಾರೆ. ಇಷ್ಟವಿದ್ದರೆ ಅವರು ತೆಗೆದ ಫೋಟೋಗಳನ್ನು ಖರೀದಿಸಬಹುದು. ಹಸಿರಿನ ಮಂತ್ರನ್ನುಣಿಸುವ ಉದ್ದಕ್ಕೂ ಬೆಳೆದು ನಿಂತ ಪಾಮ್ ಮರಗಳು, 1500 ಆಸನಗಳಿಂದ ಸುಸಜ್ಜಿತ ಬ್ರಾಡ್‌ ವೇ ಥಿಯೇಟರ್‌, ಅಲ್ಲಿ ಒಂದಲ್ಲಾ ಒಂದು ಶೋಗಳು ನಡೆಯುತ್ತಲೇ ಇರುತ್ತವೆ. ಉದ್ದಕ್ಕೂ ಹಾಲಿವುಡ್‌ಗೆ ಸಂಬಂಧಿಸಿದ ಸ್ಟೋರ್‌ಗಳು, ಅಲ್ಲಿ ಆಟಿಕೆಗಳು, ಸೋವಿನೂರ್‌ಗಳು, ತಿಂಡಿ ತಿನಿಸುಗಳು, ಪುಸ್ತಕಗಳು, ಕ್ಯಾಮೆರಾಗೆ ಸಂಬಂಧಿತ ಪರಿಕರಗಳು, ಬ್ರಾಡ್‌ ವೇ ಥಿಯೇಟರ್‌ನ ಮುಂದೆ ಪ್ರಸಿದ್ಧ ಗಾಯಕರಿಂದ ನೃತ್ಯ ಮತ್ತು ಹಾಡುಗಾರಿಕೆ ನಡೆಯುತ್ತಲೇ ಇರುತ್ತದೆ. ವೀಕ್ಷಕರನ್ನೂ ಅವರೊಂದಿಗೆ ಸೇರಿಸಿಕೊಳ್ಳುತ್ತಾರೆ. ನನ್ನ ಮಗಳು ಅವರೊಂದಿಗೆ ಸೇರಿ ನರ್ತಿಸಿದಳು, ಅವಳ ದೆಸೆಯಿಂದ ನಮ್ಮ ಭಾರತದ ನಮಸ್ತೆ ಎಲ್ಲರಿಗೂ ದೊರೆಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ