ಝೂ ಅಥವಾ ಮೃಗಾಲಯ ಎಂದಾಗ ನೆನಪಾಗುವುದು ಮೈಸೂರಿನ ಮೃಗಾಲಯ. ಮೈಸೂರಿಗೆ ಹೋದಾಗ ಝೂಗೆ ಭೇಟಿ ನೀಡದೆ ಬರುವುದಂಟೆ? ನಾವು ಚಿಕ್ಕವರಿದ್ದಾಗ, ಇಲ್ಲ ಮಕ್ಕಳು ಚಿಕ್ಕವರಿರುವಾಗ ಮುಂದೆ ಮೊಮ್ಮಕ್ಕಳ ಕಾಲಕ್ಕೆ ಒಟ್ಟಿನಲ್ಲಿ ಝೂನ ಭೇಟಿಯಂತೂ ಖಾಯಂ ಇದ್ದದ್ದೇ.

ಆದರೆ ಸಿಂಗಪೂರದ ಝೂನ ಪರಿಕಲ್ಪನೆಯೇ ವಿಭಿನ್ನವಾಗಿದೆ. ಇಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳಿಗೆ ಅರಣ್ಯದಲ್ಲಿ ಇರುವಂತಹುದೇ ಪರಿಸರ ಸೃಷ್ಟಿ ಮಾಡಿರುವ ರೀತಿ ನಿಜಕ್ಕೂ ಮೆಚ್ಚಬೇಕಾದದ್ದೇ. ಬಹಳ ವಿಶಾಲವಾದ ತಾಣವದು. ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವ ಶಟಲ್‌ಗಳಿರುತ್ತವೆ. ನೀವು ಇಳಿದ ತಾಣವನ್ನು ನಿಧಾನವಾಗಿ ನೋಡಿಕೊಂಡು ಮತ್ತೆ ಬರುವ ಶಟಲ್‌ಹತ್ತಬಹುದು. ನಿರಂತರಾಗಿ ಶಟಲ್‌ಗಳು ಓಡಾಡುತ್ತಲೇ ಇರುತ್ತವೆ. ಜೊತೆಗೆ ವೀಕ್ಷಕರಿಗಾಗಿ ಪ್ರಾಣಿಗಳಿಂದ ಮನರಂಜನೆಯ ಶೋಗಳು. ಝೂ ಎಂದರೆ ಬೋನಿನಲ್ಲಿರುವ ಪ್ರಾಣಿ ಪಕ್ಷಿಗಳೆನ್ನುವ ಪರಿಕಲ್ಪನೆಯನ್ನು ಬದಲಿಸಿ ಸುಂದರವಾಗಿ ರೂಪಿಸಲಾಗಿದೆ. ನಾವು ಝೂಗೆ ಹೋದಾಗ ತುಂತುರು ಮಳೆ ಹನಿಯುತ್ತಿತ್ತು. ಮಳೆ ಮತ್ತು ಚಳಿಯನ್ನು ತಡೆಯಲಾಗದೆ ಅಲ್ಲಿಯೇ ದೊರಕುತ್ತಿದ್ದ ರೈನ್‌ ಕೋಟ್‌ ಕೊಂಡುಕೊಂಡೆವು. ಆದರೆ ಸ್ವಲ್ಪ ಹೊತ್ತಿಗೆ ಮಳೆ ನಿಂತು ಸೂರ್ಯ ತನ್ನ ತಾಪವನ್ನು ತೋರಿಸಿಯೇ ಬಿಟ್ಟ. ಸಿಂಗಪೂರದ ಹವಾಮಾನವೇ ಹಾಗೆ. ಎಷ್ಟೇ ಜೋರಾಗಿ ಮಳೆ ಬಂದರೂ ಅದು ಒಂದೆರಡು ಘಂಟೆಯಷ್ಟೆ. ನಂತರ ನಿಂತೇ ಹೋಗುತ್ತದೆ. ಅನಿರೀಕ್ಷಿತ ಮಳೆ ಅಲ್ಲಿ ಅಪರೂಪವೇನಲ್ಲ.

ಸಿಂಗಾಪೂರದ ಝೂವನ್ನು 68 ಎಕರೆಯಷ್ಟು ವಿಶಾಲವಾದ ತಾಣದಲ್ಲಿ 1973ರಲ್ಲಿ ಸಾರ್ವಜನಿಕರಿಗಾಗಿ ತೆರೆಯಲಾಯಿತು. 315 ಜಾತಿಯ ಪ್ರಾಣಿಗಳನ್ನು ಹೊಂದಿದ್ದು ಅದರಲ್ಲಿ ಶೇ.6ರಷ್ಟು ಅಪಾಯಕಾರಿ ಎಂದು ಭಾವಿಸಲಾಗಿರುವ ಈ ಮೃಗಾಲಯಕ್ಕೆ  ದಿನವೊಂದರಲ್ಲಿ 1.6 ಮಿಲಿಯನ್‌ ಜನರು ಭೇಟಿ ನೀಡುತ್ತಾರೆ. ನೈಸರ್ಗಿಕವಾಗಿ ತೆರೆದ ತಾಣಗಳಲ್ಲಿ ಪ್ರಾಣಿಗಳನ್ನಿರಿಸುವ ಆಧುನಿಕ ರೀತಿಯನ್ನು ಅವಳಡಿಸಿಕೊಳ್ಳಲಾಗಿದೆ. ಹಿಂದಿನ ಝೂಗಳಂತೆ ಪಂಜರ ಅಥವಾ ಬೋನಿನೊಳಗೆ ಪ್ರಾಣಿಗಳನ್ನು ಕೂಡಿ ಹಾಕುವ ರೀತಿಯಿಂದಲ್ಲ. ನೋಡುಗರಿಗೂ ಮತ್ತು ಮೃಗಗಳ ಮಧ್ಯೆ  ಕಣ್ಣಿಗೆ ಕಾಣದಂತಹ ತಡೆಗಳನ್ನು ಅಂದರೆ ಸುತ್ತಲೂ ವಿಶಾಲವಾದ ಕಂದಕಗಳನ್ನು ನಿರ್ಮಿಸಿ, ಕೆಲವೆಡೆ ಅದರಲ್ಲಿ ನೀರಿರುವಂತೆಯೇ ಕೃತಕ ಕೊಳಗಳನ್ನು ಮೂಡಿಸಲಾಗಿದೆ.

ಕೆಲವು ಬರಿಯ ಹಸಿರು ಗಿಡ ಮರಗಳನ್ನು ಹೊಂದಿದ್ದರೆ ಇನ್ನಿತರೆಡೆಗಳಲ್ಲಿ ಜಲಸಂಪನ್ಮೂಲವನ್ನು ಮೂಡಿಸಲಾಗಿದೆ. ಎಲ್ಲ ಕೃತಕವೇ ಆದರೂ ನೈಸರ್ಗಿಕತೆಯನ್ನು ಮೂಡಿಸಲಾಗಿದೆ ಮತ್ತು ಅಪಾಯಕಾರಿ ಮೃಗಗಳನ್ನು ಗಾಜಿನ ತಡೆಗಳೊಳಗಿರಿಸಲಾಗಿದೆ. ಈ ಮೃಗಾಲಯಕ್ಕಾಗಿ 28 ಹೆಕ್ಟೇರ್‌ಗಳನ್ನು ಮೀಸಲಾಗಿಟ್ಟರೆ ಜೊತೆಗೆ ಮತ್ತೆ 40 ಹೆಕ್ಟೇರ್‌ಗಳಷ್ಟು ವಿಶಾಲವಾದ ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಅದನ್ನು ನೈಟ್‌ ಸಫಾರಿಗಾಗಿ ಬಳಸಲಾಗಿದೆ. ಅಲ್ಲಿ ಓಡಾಡಲು ಟ್ರಾಮ್, ಶಟಲ್ಸ್, ಕುದುರೆ ಗಾಡಿ, ಕುದುರೆ ಸವಾರಿ, ವಿದ್ಯುತ್‌ ಸ್ಕೂಟರ್‌ ಮತ್ತು ಓಡಾಡಲಾಗದಿದ್ದವರಿಗೆ ವೀಲ್‌ಚೇರ್‌ ಸಹ ಲಭ್ಯ.

ಬರಿಯ ಪ್ರಾಣಿಗಳನ್ನು ನೋಡುವುದಷ್ಟೇ ಅಲ್ಲ ಅವುಗಳ ಮನರಂಜನಾ ಕೂಟಗಳನ್ನೂ ನೋಡಬಹುದು. ಮುಂಜಾನೆ  ಒರಾಂಗಟೋಗಳೊಡನೆ ಉಪಾಹಾರ, ಅವುಗಳಿಗೆ ಆಹಾರ ನೀಡುವುದನ್ನು ತೋರಿಸಲಾಗುತ್ತದೆ. ಅಲ್ಲಿ ನೋಡುಗರನ್ನೂ ಎಲ್ಲ ವಿಷಯಗಳನ್ನೂ ಸೇರಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಶೋನಲ್ಲೂ ವಿವರಣೆ ನೀಡುವ ನಿರೂಪಕರು, ನೋಡುಗರು ಕೂರಲು ಆ್ಯಂಫಿ ಥಿಯೇಟರ್‌, ಆಸನಗಳು ಬಹಳ ವ್ಯವಸ್ಥಿತವಾಗಿ ರೂಪಿಸಲಾಗಿರುತ್ತದೆ. ಪ್ರತಿಯೊಂದು ಶೋನಲ್ಲೂ ನಿರೂಪಕರು ಬಹಳ ಸ್ವಾರಸ್ಯವಾಗಿ ಮಾಡುತ್ತಾರೆ. ದೊಡ್ಡ ದೊಡ್ಡ ಹೆಬ್ಬಾವುಗಳನ್ನು ಮೈ ಮೇಲೆ ಹಾಕಿಕೊಂಡು ಮತ್ತು ನೋಡುಗರಿಗೂ ಅದನ್ನು ಮುಟ್ಟಿಸಿಬಿಡುತ್ತಾರೆ. ನಿಬ್ಬೆರಗಾಗಿ ನೋಡುವುದಷ್ಟೇ ನಮ್ಮ ಕೆಲಸವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ