ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡರ್ ಯಾರು? ಎಂಬ ಪ್ರಶ್ನೆಗೆ, ವಿವಿಧ ಕಾಲಘಟ್ಟಗಳಲ್ಲಿ ಅನೇಕ ದಿಗ್ಗಜರ ಹೆಸರುಗಳು ಕೇಳಿಬರುತ್ತವೆ. ಕಪಿಲ್ ದೇವ್, ಇಮ್ರಾನ್ ಖಾನ್, ಇಯಾನ್ ಬೋಥಮ್, ರಿಚರ್ಡ್ ಹ್ಯಾಡ್ಲಿ, ಜಾಕ್ ಕಾಲಿಸ್, ಬೆನ್ ಸ್ಟೋಕ್ಸ್… ಹೀಗೆ ಹಲವರ ಹೆಸರುಗಳು ಚರ್ಚೆಯಾಗಬಹುದು. ಆದರೆ ಇವರೆಲ್ಲರಿಗಿಂತ ಮೇಲೊಂದು ಹೆಸರು ಇದ್ದು, ಅದುವೇ ಸರ್ ಗರ್‌ಫೀಲ್ಡ್ “ಗ್ಯಾರಿ” ಸೋಬರ್ಸ್. ಅವರು ಕೇವಲ ಒಬ್ಬ ಕ್ರಿಕೆಟಿಗರಾಗಿರಲಿಲ್ಲ. ಕ್ರಿಕೆಟ್ ಎಂಬ ಆಟವೇ ರೂಪಿಸಿದ ಅತ್ಯಂತ ಸಂಪೂರ್ಣ ಆಟಗಾರ. ಒಬ್ಬ ಬ್ಯಾಟ್ಸ್‌ಮನ್, ಮೂರು ರೀತಿಯ ಬೌಲರ್, ಅದ್ಭುತ ಫೀಲ್ಡರ್ ಮತ್ತು ಅತ್ಯುನ್ನತ ನಾಯಕತ್ವ ಗುಣಗಳನ್ನು ಹೊಂದಿದ್ದ ಅಪರೂಪದ ಪ್ರತಿಭೆ. 90ನೇ ಹುಟ್ಟುಹಬ್ಬವನ್ನು ಆಚರಿಸಲು ಕೇವಲ ಹತ್ತು ದಿನಗಳು ಬಾಕಿ ಇರುವಾಗಲೇ ವಿಶ್ವ ಕ್ರಿಕೆಟ್ ತನ್ನ ಮಹಾನ್ ದಂತಕಥೆಯೊಬ್ಬರಿಗೆ ಅಂತಿಮ ವಿದಾಯ ಹೇಳಿದೆ.
ಕ್ರಿಕೆಟ್ ಲೋಕದ ನಿಜವಾದ GOAT

ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸುವುದಕ್ಕೆ ಸುಮಾರು 40 ವರ್ಷಗಳ ಮುಂಚೆಯೇ…
ರವಿಶಾಸ್ತ್ರಿ ಒಂದೇ ಓವರ್‌ನ ಎಲ್ಲಾ ಎಸೆತಗಳನ್ನು ಬೌಂಡರಿ ದಾಟಿಸುವುದಕ್ಕೂ ಸುಮಾರು 17 ವರ್ಷಗಳ ಮುಂಚೆಯೇ…
ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಪ್ರಥಮ ದರ್ಜೆ ಕ್ರಿಕೆಟಿಗ ಎಂಬ ಇತಿಹಾಸವನ್ನು ನಿರ್ಮಿಸಿದ್ದವರು ಸರ್ ಗ್ಯಾರಿ ಸೋಬರ್ಸ್.
ಇದು ಕೇವಲ ದಾಖಲೆ ಅಲ್ಲ. ಅದು ಒಂದು ಯುಗದ ಆರಂಭ.
ಎಲ್ಲವನ್ನೂ ಮಾಡಬಲ್ಲ ದೈತ್ಯ ಕ್ರಿಕೆಟ್ ಪ್ರತಿಭೆ

ಆಲ್‌ರೌಂಡರ್ ಎಂದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಆಟಗಾರ ಎನ್ನುವುದು ಸಾಮಾನ್ಯ ಅರ್ಥ.
ಆದರೆ ಗ್ಯಾರಿ ಸೋಬರ್ಸ್ ವಿಷಯದಲ್ಲಿ ಅದು ಸಾಕಾಗುವುದಿಲ್ಲ.
ಅವರು…
- ಎಡಗೈ ಸ್ಪೋಟಕ ಬ್ಯಾಟ್ಸ್‌ಮನ್
- ಎಡಗೈ ಮಧ್ಯಮ ವೇಗದ ಬೌಲರ್
- ಎಡಗೈ ಆರ್ಥೋಡಾಕ್ಸ್ ಸ್ಪಿನ್ನರ್
- ಎಡಗೈ ಚೈನಾಮನ್ ಹಾಗೂ ಲೆಗ್ ಸ್ಪಿನ್ ಬೌಲರ್
- ಅದ್ಭುತ ಸ್ಲಿಪ್ ಹಾಗೂ ಔಟ್‌ಫೀಲ್ಡ್ ಫೀಲ್ಡರ್
ಒಂದೇ ಆಟಗಾರನಲ್ಲಿ ಇಷ್ಟೆಲ್ಲ ಕೌಶಲ್ಯಗಳು ಸೇರುವುದೇ ಅಪರೂಪ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷಗಳ ಕಾಲ ಯಶಸ್ಸು ಸಾಧಿಸಿರುವುದು ಅವರನ್ನು ಕ್ರಿಕೆಟ್‌ನ “ಸಂಪೂರ್ಣ ಆಟಗಾರ”ನನ್ನಾಗಿ ಮಾಡಿತು.
ದುಃಖದಲ್ಲೇ ಆರಂಭವಾದ ಬದುಕು
1936ರ ಜುಲೈ 28ರಂದು ವೆಸ್ಟ್ ಇಂಡೀಸ್‌ನ ಬಾರ್ಬೆಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಬ್ರಿಡ್ಜ್‌ಟೌನ್‌ನ ಸೇಂಟ್ ಮೈಕೆಲ್‌ನ ಬೇ ಲ್ಯಾಂಡ್‌ನ ವಾಲ್ಕಾಟ್ ಅವೆನ್ಯೂದ ಶಾಮಂಟ್ ಮತ್ತು ಥೆಲ್ಮಾ ಸೋಬರ್ಸ್ ದಂಪತಿಗಳ ಆರು ಮಕ್ಕಳ ಪೈಕಿ ಐದನೆಯವರಾಗಿದ್ದರು ಜನಿಸಿದ ಸೋಬರ್ಸ್ ಸಂಪೂರ್ಣ ಹೆಸರು ಗಾರ್ಫೀಲ್ಡ್ ಸೇಂಟ್ ಆಬ್ರನ್ ಸೋಬರ್ಸ್. ಅವರಿಗೆ ಕೇವಲ ಐದು ವಯಸ್ಸಿರುವಾಗಲೇ, ಅವರ ತಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮೃತಪಟ್ಟರು. ಹಡಗಿನಲ್ಲಿ ವ್ಯಾಪಾರಿ ನಾವಿಕನಾಗಿ ಕೆಲಸ ಮಾಡುತ್ತಿದ್ದ ಅವರ ತಂದೆಯ ಸಾವಿನ ನಂತರ, ಆರು ಮಕ್ಕಳನ್ನು ಸಾಕಿ ಬೆಳೆಸುವ ಸಂಪೂರ್ಣ ಹೊಣೆ ತಾಯಿ ಥೆಲ್ಮಾ ಸೋಬರ್ಸ್ ಅವರ ಮೇಲಿದ್ದ ಪರಿಣಾಮ ಸೋಬರ್ಸ್ ಅವರ ಬಾಲ್ಯ ಸುಖಕರವಾಗಿರಲಿಲ್ಲ. ಕೌಟುಂಬಿಕ ಆರ್ಥಿಕ ಸಂಕಷ್ಟಗಳ ನಡುವೆಯೂ ಮಕ್ಕಳನ್ನು ಬೆಳೆಸಿದ ತಾಯಿಯ ತ್ಯಾಗವೇ ಗ್ಯಾರಿ ಸೋಬರ್ಸ್ ಅವರ ಬದುಕಿನ ದೊಡ್ಡ ಶಕ್ತಿಯಾಗಿತ್ತು.
ಆರು ಬೆರಳುಗಳೊಂದಿಗೆ ಜನಿಸಿದ್ದ ಅಪರೂಪದ ಬಾಲಕ
ಹಲವರಿಗೆ ಗೊತ್ತಿಲ್ಲದ ಒಂದು ಕುತೂಹಲಕಾರಿ ಸಂಗತಿಯೆಂದರೆ… ಗ್ಯಾರಿ ಸೋಬರ್ಸ್ ಅವರು ಎರಡೂ ಕೈಗಳಲ್ಲಿ ಆರು ಬೆರಳುಗಳೊಂದಿಗೆ ಜನಿಸಿದ್ದರು. ಅಂದಿನ ಕಾಲದಲ್ಲಿ ಈಗಿನಂತೆ ಶಸ್ತ್ರಚಿಕಿತ್ಸೆ ಅಷ್ಟೇನೂ ಪ್ರಾಮುಖ್ಯತೆ ಪಡೆಯದಿದ್ದಂತಹ ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಕ್ಯಾಟ್‌ಗಟ್ ಮತ್ತು ಚೂಪಾದ ಚಾಕುಗಳ ಸಹಾಯದಿಂದ ಎರಡೂ ಕೈಗಳಲ್ಲಿದ್ದ ಆರನೇ ಬೆರಳುಗಳನ್ನು ತೆಗೆದುಹಾಕಲಾಯಿತು. ವೆಸ್ಟ್ ಇಂಡೀಸ್ ದ್ವೀಪದ ಎಲ್ಲರಂತೆಯೇ ಸೋಬರ್ಸ್ ಕೂಡಾ ಬಾಲ್ಯದಿಂದಲೇ ಕ್ರಿಕೆಟ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಆಟಗಳನ್ನು ಅಡುತ್ತಲೇ ಆರಂಭವಾದ ಅವರ ಬಾಲ್ಯ, ತಮ್ಮ ಅತ್ಯಂತ ಉತ್ಸಾಹ ಮತ್ತು ತಮ್ಮ ನೈಸರ್ಗಿಕ ಸಾಮರ್ಥ್ಯಗಳಿಂದಲೇ ಈ ಎಲ್ಲಾ ಈ ಎಲ್ಲಾ ಆಟಗಳಲ್ಲಿಯೂ ಪ್ರಬುದ್ಧರಾದರೂ, ಅಂತಿಮವಾಗಿ ಅವರು ಒಲವು ತೋರಿಸಿದ್ದು ಕ್ರಿಕೆಟ್ ಆಟದತ್ತವೇ. ಬಾರ್ಬೆಡೋಸ್‌ನ ಕಡಲತೀ





