ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಮತದಾರರಿಗೆ ವಿಶೇಷವಾಗಿ ನಮಸ್ಕಾರ ಸಲ್ಲಿಸಿದರು. ಬ್ರಿಗೇಡ್ ಪ್ಯಾರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ವೇದಿಕೆ ಮೇಲೆಯೇ ನಿಂತು ಬಂಗಾಳ ಜನರಿಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿದರು.

“ಪಶ್ಚಿಮ ಬಂಗಾಳ ಜನರು ಬದಲಾವಣೆಗೆ ಮತ ನೀಡಿ ಬಿಜೆಪಿ ಸರ್ಕಾರವನ್ನು ತಂದಿದ್ದಾರೆ. ಇದಕ್ಕಾಗಿ ನಾನು ರಾಜ್ಯದ ಜನರಿಗೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ” ಎಂದು ಭಾವುಕರಾಗಿ ನುಡಿದರು.“ಇದು ಬಂಗಾಳದಲ್ಲಿ ಹೊಸ ಯುಗದ ಆರಂಭ. 15 ವರ್ಷಗಳ ಟಿಎಂಸಿ ಆಡಳಿತಕ್ಕೆ ಜನರು ಅಂತ್ಯ ಹಾಕಿದ್ದಾರೆ. ಇದು ಜನರ ವಿಜಯ” ಎಂದು ಹೇಳಿದರು.

ಬಿಜೆಪಿ ಈ ಚುನಾವಣೆಯಲ್ಲಿ 207 ಸ್ಥಾನಗಳ ಭರ್ಜರಿ ಬಹುಮತ ಸಾಧಿಸಿದ್ದು, ಸುವೇಂದು ಅಧಿಕಾರಿ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಹೊಸ ಇತಿಹಾಸ ಬರೆದಿದ್ದಾರೆ. ಪ್ರಧಾನಿ ಮೋದಿ ಅವರ ಆಗಮನವು ಸಮಾರಂಭಕ್ಕೆ ಹೆಚ್ಚು ಮೆರುಗು ನೀಡಿತು. ಪ್ರಧಾನಿ ಅವರು ಬಂಗಾಳಿ ಸಂಸ್ಕೃತಿ ಮತ್ತು ಭಾಷೆಯನ್ನು ಪ್ರಶಂಸಿಸಿದರು.

ಬಂಗಾಳದ ಜನರು ಈಗ ಅಭಿವೃದ್ಧಿ, ಉದ್ಯೋಗ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷಿತ ಬಂಗಾಳವನ್ನು ನಿರೀಕ್ಷಿಸುತ್ತಿದ್ದಾರೆ. ನಾವು ಆ ನಿರೀಕ್ಷೆಯನ್ನು ಈಡೇರಿಸುತ್ತೇವೆ” ಎಂದು ಭರವಸೆ ನೀಡಿದರು.

ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಮತ್ತು ರಾಜ್ಯ ನಾಯಕರು ಉಪಸ್ಥಿತರಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ