ಸ್ವಾತಿ ಭಾಟಿಯಾ ಆರ್ಕಿಟೆಕ್ಟ್
ಸಮಾಜ ಸೇವೆಗಾಗಿ ಯಾವುದಾದರೂ ಸ್ವಯಂ ಸೇವಾ ಸಂಸ್ಥೆಯನ್ನು ಆರಂಭಿಸಿ ದೊಡ್ಡ ಸಹಾಯ ಪಡೆಯುವ ಅಗತ್ಯವಿಲ್ಲ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಅಲ್ಲಿಂದಲೇ ಸಮಾಜಕ್ಕೆ ಏನಾದರೂ ಮಾಡುವ ಯೋಜನೆ ಹಾಕಿಕೊಂಡು ಅದರಂತೆ ಕೆಲಸ ಮಾಡಿದರೆ ತಮ್ಮ ಅಭಿವೃದ್ಧಿಯ ಜೊತೆಜೊತೆಗೆ ಸಮಾಜದ ಅಭಿವೃದ್ಧಿಯೂ ಆಗುತ್ತದೆ.
ಲಖ್ನೋದಲ್ಲಿರುವ ಆರ್ಕಿಟೆಕ್ಟ್ ಸ್ವಾತಿ ಭಾಟಿಯಾ ಅಂತಹವರಲ್ಲಿ ಒಬ್ಬರು. `ಸ್ಪೇಸ್ ಡಿಸೈನರ್ಸ್' ಎಂಬ ಆರ್ಕಿಟೆಕ್ಚರ್ ಫರ್ಮ್ ನಡೆಸುತ್ತಿರುವ ಸ್ವಾತಿ ಭಾಟಿಯಾರ ಆರಂಭದ ಶಿಕ್ಷಣ ಉತ್ತರ ಪ್ರದೇಶದ ಔದ್ಯೋಗಿಕ ನಗರಿ ಕಾನ್ಪುರದ ಸೇಂಟ್ ಮೇರಿ ಸ್ಕೂಲ್ ನಲ್ಲಿ ನಡೆಯಿತು. ಅವರ ಕುಟುಂಬದವರೆಲ್ಲರೂ ಬಿಸ್‌ನೆಸ್ ಮಾಡುತ್ತಾರೆ.
ಪರಿಶ್ರಮದಿಂದ ಮನ್ನಣೆ
ಕಾಲೇಜಿನಲ್ಲಿ ಓದುವಾಗಲೇ ಸ್ವಾತಿಗೆ ಜಿತೇಂದ್ರ ಭಾಟಿಯಾರ ಸಂಪರ್ಕ ಸಿಕ್ಕಿತು. ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದರು. ಅದು ಮೊದಲು ಪ್ರೀತಿ, ನಂತರ ಮದುವೆಯಲ್ಲಿ ಬದಲಾಯಿತು. ರುಢಕಿಯಲ್ಲಿ ಇದ್ದ ಜಿತೇಂದ್ರ ಭಾಟಿಯಾರ ಮನೆಯವರೆಲ್ಲರೂ ಸರ್ಕಾರಿ ನೌರಿಯಲ್ಲಿದ್ದರು. ಆದರೆ ಸ್ವಾತಿ ಮತ್ತು ಜಿತೇಂದ್ರ ಒಟ್ಟಿಗೆ ಬಿಸ್‌ನೆಸ್ ಶುರು ಮಾಡಲು ಯೋಜನೆ ಹಾಕಿಕೊಂಡರು. ಅಷ್ಟರಲ್ಲಿ ಅವರಿಗೆ ಒಬ್ಬ ಮಗ ಕವಿತ್ ಭಾಟಿಯಾ ಕೂಡ ಹುಟ್ಟಿದ್ದ.
ಸ್ವಾತಿಗೆ ಮೊದಲು ಮಿರ್ಜಾಪುರ್‌ನಲ್ಲಿ ಒಂದು ಶಾಲೆಯ ಡಿಸೈನ್ ಮಾಡುವ ಕೆಲಸ ಸಿಕ್ಕಿತು. ಪರಿಶ್ರಮ ಮತ್ತು ನಿಷ್ಠೆಯಿಂದ ಸ್ವಾತಿ ಸ್ಕೂಲಿಗಾಗಿ ಮಾಡಿದ ಡಿಸೈನ್ ಕಂಡು ಎಲ್ಲರೂ ಸಂತೋಷಗೊಂಡರು. ನಂತರ ಅವರ ಯಶಸ್ಸಿನ ದಾರಿ ತೆರೆಯಿತು. ಮಿರ್ಜಾಪುರ್, ಭದೋಹಿ, ವಾರಾಣಸಿಯಲ್ಲದೆ ಸೀತಾಪುರ್ ಮತ್ತು ಲಖ್ನೋದಲ್ಲೂ ಸಹ ಅವರಿಗೆ ಅನೇಕ ಪ್ರಾಜೆಕ್ಟ್ ಗಳು ಸಿಕ್ಕವು. ಆಗ ನಗರ ಮಹಾನಗರವಾಗುವ ದಾರಿಯಲ್ಲಿತ್ತು. ಲಖ್ನೋದಲ್ಲಿ ಅಪಾರ್ಟ್‌ಮೆಂಟ್, ಫ್ಲ್ಯಾಟ್ ಮತ್ತು ಬಂಗಲೆಗಳು ನಿರ್ಮಾಣಗೊಳ್ಳುತ್ತಿದ್ದವು.
ಈಗ ಜನ ಮನೆಗಳಲ್ಲಿ ಬೇಸ್‌ಮೆಂಟ್ ಮತ್ತು ಕೊಂಚ ಖಾಲಿ ಸ್ಪೇಸ್‌ಗಳ್ನು ಅಗತ್ಯವಾಗಿ ಮಾಡಿಸಲು ಬಯಸುತ್ತಿದ್ದರು. ಏಕೆಂದರೆ ಅಲ್ಲಿ 20-30 ಜನರ ಗೆಟ್ ಟು ಗೆದರ್ ಮಾಡಬಹುದು. ಆಗ ಆರ್ಕಿಟೆಕ್ಚರ್ ಕೆಲಸ ಹೆಚ್ಚಾಯಿತು. ಕಡಿಮೆ ಜಾಗದಲ್ಲಿ ಒಳ್ಳೆಯ ಮನೆ ನಿರ್ಮಿಸುವ ಕೆಲಸ ಎಲ್ಲರಿಗಿಂತ ಹೆಚ್ಚಾಗಿ ಆರ್ಕಿಟೆಕ್ಟ್ ಮಾಡಬೇಕು.
``ಆರಂಭದಲ್ಲಿ ಒಂದೇ ಪ್ರಾಜೆಕ್ಟ್ ನಲ್ಲಿ ನಾವಿಬ್ಬರೂ ಒಟ್ಟಿಗೇ ಕೆಲಸ ಮಾಡುತ್ತಿದ್ದಾಗ ಜನ ನನ್ನ ಬದಲು ಜಿತೇಂದ್ರರವರೇ ಕೆಲಸದ ಫೈನ್ ಮಾಡಲಿ ಎಂದು ಬಯಸುತ್ತಿದ್ದರು. ಅವರಿಗೆ ನನ್ನ ಮೇಲೆ ಅಷ್ಟು ಭರವಸೆ ಇರಲಿಲ್ಲ. ಇದು ಟೆಕ್ನಿಕಲ್ ವರ್ಕ್. ಗಂಡಸರಲ್ಲಿ ಹೆಚ್ಚು ಭರವಸೆ ಇಡಬಹುದು ಎಂದುಕೊಂಡಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಜನಕ್ಕೆ ನನ್ನ ಕೆಲಸದ ಬಗ್ಗೆ ನಂಬಿಕೆ ಬಂತು.
``ನಂತರ ಅವರು ನನ್ನ ಮೇಲೆ ಸಂಪೂರ್ಣ ಭರವಸೆ ಇಟ್ಟರು. ನಾವು ಡಿಸೈನ್‌ಗಳ ಮೂಲಕ ಅವರ ಕನಸಿನ ಮನೆ ಹೇಗಿರುತ್ತದೆಂದು ತಿಳಿಸಲು ಪ್ರಯತ್ನಿಸುತ್ತೇವೆ ಮತ್ತು ಕೆಲಸದ ಸಂಬಂಧವಾಗಿ ಅವರೊಂದಿಗಿರುತ್ತೇವೆ. ಹೀಗಾಗಿ ಡಿಸೈನ್‌ನಲ್ಲಿ ಏನಾದರೂ ಬದಲಾವಣೆ ಆದರೆ ಅದನ್ನು ಸಹಜವಾಗಿ ತೆಗೆದುಕೊಳ್ಳುತ್ತಾರೆ,'' ಎಂದು ಸ್ವಾತಿ ಹೇಳುತ್ತಾರೆ.
ಸ್ವಾತಿ ಲಖ್ನೋದಲ್ಲಿಯೇ ಬಾಬು ಬನಾರಸಿ ದಾಸ್ ವಿಶ್ವ ವಿದ್ಯಾಲಯದಲ್ಲಿ ಎಂ. ಆರ್ಕ್ ಶಿಕ್ಷಣ ಪಡೆಯುತ್ತಿದ್ದಾರೆ. ಓದಿನ ಜೊತೆಜೊತೆಗೆ ಅವರೂ ತಮ್ಮ ಕೆಲಸವನ್ನೂ ನೋಡಿಕೊಳ್ಳುತ್ತಿದ್ದಾರೆ. ಅದಲ್ಲದೆ ತಮ್ಮ ಮಗ ಕವಿತ್‌ನ ಓದಿನಲ್ಲೂ ಸಹಾಯ ಮಾಡುತ್ತಾರೆ. ಕವಿತ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾನೆ.