ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ ಎರಡನೇ ಪಂದ್ಯದಲ್ಲಿ ಶೇನ್ ವಾಟ್ಸನ್ ನೇತೃತ್ವದ ಪುಣೆ ಪ್ಯಾಂಥರ್ಸ್ ಮತ್ತು ತಿಸಾರಾ ಪೆರೇರಾ ನೇತೃತ್ವದ ಗುರುಗ್ರಾಮ್ ಥಂಡರ್ಸ್ ತಂಡಗಳು ಮುಖಾಮುಖಿಯಾದವು.

ಜಾಗತಿಕ ತಾರೆಯರು, ಭಾರತೀಯ ಐಕಾನ್‌ಗಳು ಹಾಗೂ ಮಾಜಿ ವಿಶ್ವಕಪ್ ವಿಜೇತರನ್ನು ಒಳಗೊಂಡ ಈ ಹೈ-ಇಂಟೆನ್ಸಿಟಿ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಅವರ ಸ್ಫೋಟಕ ಬ್ಯಾಟಿಂಗ್‌ (28 ಎಸೆತಗಳಲ್ಲಿ 68 ರನ್) ಪುಣೆ ಪ್ಯಾಂಥರ್ಸ್‌ಗೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟಿತು.

ಟೂರ್ನಿಯ ಆರಂಭದಲ್ಲೇ ಪ್ರಬಲ ಸಂದೇಶ ನೀಡಲು ಉತ್ಸುಕವಾಗಿದ್ದ ಗುರುಗ್ರಾಮ್ ಥಂಡರ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಸ್ ಟೇಲರ್ ಅವರ ಸ್ಥಿರ ಹಾಗೂ ಭದ್ರ ಇನ್ನಿಂಗ್ಸ್‌ ಆಧಾರವಾಗಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್‌ಗಳನ್ನು ಗಳಿಸಿತು.

ಗುರಿ ಬೆನ್ನತ್ತಿದ ಪುಣೆ ಪ್ಯಾಂಥರ್ಸ್ ಆರಂಭದಲ್ಲೇ ಶೇನ್ ವಾಟ್ಸನ್ ವಿಕೆಟ್ ಕಳೆದುಕೊಂಡರೂ, ಮಾರ್ಟಿನ್ ಗಪ್ಟಿಲ್ 72 ರನ್‌ಗಳ ಪ್ರಮುಖ ಜೊತೆಯಾಟದ ಮೂಲಕ ತಂಡಕ್ಕೆ ಅಗತ್ಯ ವೇಗ ನೀಡಿದರು.

ಈ ಬಗ್ಗೆ ಮಾತನಾಡಿದ ಗಪ್ಟಿಲ್ 'ಆರಂಭದಲ್ಲೇ ಟೋನ್ ಸೆಟ್ ಮಾಡುವುದು ಮುಖ್ಯವಾಗಿತ್ತು. ವಿಕೆಟ್‌ಗಳು ಬಿದ್ದರೆ ಚೇಸ್ ಕಠಿಣವಾಗಬಹುದು, ಆದರೆ ನಾವು ರನ್‌ರೇಟ್‌ಗಿಂತ ಮುನ್ನಡೆಯಲ್ಲೇ ಇದ್ದೆವು ಹಾಗು ಪರಿಚಿತ ಮುಖಗಳ ವಿರುದ್ಧ ಆಡಿದ್ದು ಖುಷಿ ನೀಡಿತು ಎಂದರು.

ಮಧ್ಯದ ಓವರ್‌ಗಳಲ್ಲಿ ಪುಣೆ ಪ್ಯಾಂಥರ್ಸ್ ಕೆಲ ವಿಕೆಟ್‌ಗಳನ್ನು ಕಳೆದುಕೊಂಡರೂ, ಅಫ್ಘಾನ್ ಆಲ್‌ರೌಂಡರ್ ಸಯ್ಯದ್ ಶಿರ್ಜಾದ್ ಶಿನ್ವಾರಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವಿ ಪ್ರದರ್ಶನ ನೀಡಿದರು. ಮೊದಲಿಗೆ ಬೌಲಿಂಗ್‌ನಲ್ಲಿ ಗುರುಗ್ರಾಮ್‌ನ ಇಬ್ಬರು ಆರಂಭಿಕರನ್ನು ಔಟ್ ಮಾಡಿ ಎರಡು ವಿಕೆಟ್‌ಗಳನ್ನು ಪಡೆದ ಅವರು, ನಂತರ ಬ್ಯಾಟಿಂಗ್‌ನಲ್ಲಿ 10 ಎಸೆತಗಳಲ್ಲಿ ವೇಗದ 21 ರನ್ ಗಳಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು.

ಗಪ್ಟಿಲ್ ಅವರ ಸ್ಫೋಟಕ ಬ್ಯಾಟಿಂಗ್ ಚೇಸ್‌ನ ಚಾಲಕಶಕ್ತಿಯಾಗಿ ಉಳಿದಿದ್ದು, 28 ಎಸೆತಗಳಲ್ಲಿ 68 ರನ್ ಗಳಿಸುವ ಮೂಲಕ ರನ್‌ರೇಟ್‌ನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟರು. ಅವರ ಆಕ್ರಮಣಕಾರಿ ಆಟದ ನೆರವಿನಿಂದ ಪುಣೆ ಪ್ಯಾಂಥರ್ಸ್ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿತು.

ಗುರುಗ್ರಾಮ್ ಥಂಡರ್ಸ್: 159/5 (20 ಓವರ್ಗಳು)

* ರಾಸ್ ಟೇಲರ್ – 41 (36)

* ಮೊಹಮ್ಮದ್ ಫೈಝ್ ಖಾನ್ – 35 (27)

* ಸಾಮಿಯುಲ್ಲಾ ಶಿನ್ವಾರಿ – 3 ಓವರ್‌ಗಳಲ್ಲಿ 42/2

ಪುಣೆ ಪ್ಯಾಂಥರ್ಸ್: 160/6 (17 ಓವರ್ಗಳು)

* ಮಾರ್ಟಿನ್ ಗಪ್ಟಿಲ್ – 68 (28)

* ಸಾಮಿಯುಲ್ಲಾ ಶಿನ್ವಾರಿ – 21 (8)

* ಸ್ಟುವರ್ಟ್ ಬ್ರಾಡ್ – 2 ಓವರ್‌ಗಳಲ್ಲಿ 11/1

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ