ತೆರಿಗೆಗೆ ಸಂಬಂಧಿಸಿದ ಕಾನೂನುಗಳನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟಕರ. ಸರಿಯಾದ ತೆರಿಗೆ ನಿಯೋಜನೆಯ ಮೂಲಕ ವ್ಯಕ್ತಿಯು ತೆರಿಗೆ ಪಾವತಿಯ ಮೊತ್ತವನ್ನು ಕಡಿಮೆಗೊಳಿಸಬಹುದಲ್ಲದೆ, ಬೇರೆ ಬೇರೆ ರೀತಿಗಳಿಂದ ಉಳಿತಾಯವನ್ನೂ ಮಾಡಬಹುದು.

ಟ್ಯಾಕ್ಸ್ ಪ್ಲಾನಿಂಗ್‌ ಅಂದರೇನು ಮತ್ತು ಅದರ ಅವಶ್ಯಕತೆ ಏನು ಎಂಬುದನ್ನು ತಿಳಿಯೋಣ ಬನ್ನಿ :

ಟ್ಯಾಕ್ಸ್ ಎಂದರೇನು?

ಪ್ರತಿ ಹಣಕಾಸು ವರ್ಷದ ಪ್ರಾರಂಭದಲ್ಲಿ ಪ್ರತಿಯೊಬ್ಬ ಉದ್ಯೋಗಸ್ಥ ವ್ಯಕ್ತಿಯೂ ತನ್ನ ಎಂಪ್ಲಾಯರ್‌ಗೆ ತನ್ನ ವಿಮಾ ಪಾಲಿಸಿ ಪ್ರೀಮಿಯಂ, ಈಕ್ವಿಟಿ ಲಿಂಕ್ಡ್ ಸೇವಿಂಗ್‌ ಸ್ಕೀಮ್, ಮನೆ ಬಾಡಿಗೆ, ಮಕ್ಕಳ ಸ್ಕೂಲ್‌ ಫೀಸ್‌, ಹೋಮ್ ಲೋನ್‌, ಎಜುಕೇಶನ್‌ ಲೋನ್‌ ಮುಂತಾದ ತನ್ನ ಖರ್ಚು ವೆಚ್ಚಗಳ ವಿವರವನ್ನು ನೀಡಬೇಕಾಗುತ್ತದೆ. ಈ ವಿವರಗಳ ಆಧಾರದ ಮೇಲೆ ಆತನ ಆ್ಯನ್ಯುಯೆಲ್‌ ಟ್ಯಾಕ್ಸ್ ಲಯೆಬಿಲಿಟಿ ಅಂದರೆ ವಾರ್ಷಿಕ  ತೆರಿಗೆ ಪಾವತಿ ಎಷ್ಟೆಂಬುದು ನಿರ್ಧರಿತವಾಗುತ್ತದೆ ಮತ್ತು ಆತನ ವೇತನದಿಂದ ಎಷ್ಟು ಟಿಡಿಎಸ್‌ (ಟ್ಯಾಕ್ಸ್ ಡಿಡಕ್ಟೆಡ್‌ ಅಟ್‌ಸೋರ್ಸ್‌) ಹಿಡಿಯಲಾಗುವುದೆಂದು ತಿಳಿಯಲ್ಪಡುತ್ತದೆ.

ಟ್ಯಾಕ್ಸ್ ಪ್ಲಾನಿಂಗ್‌ ಯಾವುದೇ ರೀತಿಯ ತೆರಿಗೆ ಕಳುವಲ್ಲ. ಇದರಲ್ಲಿ ನೀವು ನೇರವಾಗಿ ನಿಮ್ಮ ಮೂಲ ಆದಾಯ ಮತ್ತು ಉಳಿತಾಯಗಳ ಬಗ್ಗೆ ಪ್ಲಾನಿಂಗ್‌ ಮಾಡುವಿರಿ. ತೆರಿಗೆಯ ಉಳಿತಾಯವೆಂದರೆ ನೀವು ಕಣ್ಣುಮುಚ್ಚಿ ಕಲಂ 80ಸಿಗೆ ಅನ್ವಯವಾಗುವ ಯೋಜನೆಗಳಲ್ಲಿ ಹಣ ತೊಡಗಿಸುವಿರಿ ಎಂದಲ್ಲ. ಟ್ಯಾಕ್ಸ್ ಪ್ಲಾನಿಂಗ್‌ ಕಷ್ಟವೇನಲ್ಲ, ಅದು ಸುಲಭವಾದುದು.

ಟ್ಯಾಕ್ಸ್ ಪ್ಲಾನಿಂಗ್‌ನ ಅವಶ್ಯಕತೆ

ಒಂದು ಉತ್ತಮ ಟ್ಯಾಕ್ಸ್ ಪ್ಲಾನಿಂಗ್‌ ನಿಮಗೆ ಕಡಿಮೆ ಮೊತ್ತದ ತೆರಿಗೆ ಪಾವತಿಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನ ಸಂಗಾತಿಯ ಭವಿಷ್ಯದ ಸುರಕ್ಷತೆಗಾಗಿ ಜೀವವಿಮೆಯ ಅಗತ್ಯವಿರುತ್ತದೆ. ನೀವು ಮನೆ ಕಟ್ಟಿಸಬೇಕೆಂದರೆ ಹೋಮ್ ಲೋ‌ನ್‌ನ ಅವಶ್ಯಕತೆ ಬೀಳುತ್ತದೆ.

ಎಂಡೊಮೆಂಟ್‌, ಯೂಲಿಪ್‌, ಲೈಫ್‌ ಇನ್ಶೂರೆನ್ಸ್ ಕಂಪನಿಗಳ ಪೆನ್ಶನ್‌ ಯೋಜನೆಗಳಲ್ಲಿ ಹಣ ಹೂಡುವುದರ ಮೂಲಕ ನಿಮ್ಮ ತೆರಿಗೆಯಲ್ಲಿ ಉಳಿತಾಯ ಮಾಡಬಹುದು. ಕಲಂ 80ಸಿ ನಿಯಮದನ್ವಯ ಜೀವವಿಮೆಯ ಪ್ರೀಮಿಯಮ್ ಪಾವತಿಯ ಮೇಲೂ ನೀವು ರಿಯಾಯಿತಿ ಪಡೆಯಬಹುದಾಗಿದೆ.

ಇದಲ್ಲದೆ ಜೀವವಿಮಾ ಯೋಜನೆಯ ಮೆಚೂರಿಟಿಯಿಂದ ಪಡೆದ ಮೊತ್ತ ಕಲಂ 10 (10ಡಿ) ನಿಯಮದನ್ವಯ ಟ್ಯಾಕ್ಸ್ ಫ್ರೀ ಆಗಿರುತ್ತದೆ. ಲಾಂಗ್‌ ಟರ್ಮ್ ಯೂಲಿಪ್‌ ಪ್ಲಾನ್‌ ನಿಮಗೆ ಉತ್ತಮ ರಿಟರ್ನ್‌ ನೀಡುತ್ತದೆ. ಇದು ಹೇಗೆಂದರೆ, ಇದನ್ನು ಶೇರ್‌ ಮಾರ್ಕೆಟ್‌ನಲ್ಲಿ ಹೂಡಲಾಗುವುದರಿಂದ ಲಾಂಗ್‌ ಟರ್ಮ್ ಈಕ್ವಿಟಿಯ ಯೋಜನೆಯಿಂದ ದೊರೆಯುವ ರಿಟರ್ನ್ಸ್ ಯಾವಾಗಲೂ ಉತ್ತಮವಾಗಿರುತ್ತದೆ. ಶೇರ್‌ ಮಾರ್ಕೆಟ್‌ನ ಅಪಾಯ ಬೇಡ ಎನಿಸಿದರೆ, ನೀವು ಟ್ಯಾಕ್ಸ್ ಸೇವಿಂಗ್‌ ಜೊತೆ ಜೊತೆಗೆ ಎಂಡೊಮೆಂಟ್‌ ಪಾಲಿಸಿಯನ್ನೂ ತೆಗೆದುಕೊಳ್ಳಬಹುದು.

ಕುಟುಂಬ ಸದಸ್ಯರ ಮೂಲಕ ಟ್ಯಾಕ್ಸ್

- ಇದಕ್ಕಾಗಿ ನೀವು ಸ್ವತಃ ಆದಾಯ ತೆರಿಗೆಯ ರಿಟರ್ನ್‌ ಫೈಲ್‌ ಮಾಡುವುದರೊಂದಿಗೆ ನಿಮ್ಮ ಕುಟುಂಬ ಸದಸ್ಯರಿಗಾಗಿಯೂ ರಿಟರ್ನ್‌ ಫೈಲ್ ಮಾಡಿ.

- ನಿಮ್ಮ ವಯಸ್ಕ ಮಕ್ಕಳಿಗಾಗಿ ಟ್ಯಾಕ್ಸ್ ಪ್ಲಾನಿಂಗ್‌ ಮಾಡಿ

- ಉಯಿಲಿನ ಮೂಲಕ ನಿಮ್ಮ ಸಂಪತ್ತನ್ನು ಹಂಚುವಾಗ, ಉತ್ತರಾಧಿಕಾರಿಗಳ ಮೇಲೆ ತೆರಿಗೆ ಕಡಿಮೆ ಬೀಳುವಂತೆ ನೋಡಿಕೊಳ್ಳಿ.

- ತೆರಿಗೆಯ ಮೊತ್ತ ಹೆಚ್ಚಾಗುವುದೆಂದು ಕಂಡುಬಂದರೆ, ನಿಮ್ಮ ಆದಾಯನ್ನು ನಿಮ್ಮ ಸಂಬಂಧಿಗಳಿಗೆ ವರ್ಗಾಯಿಸಿ, ತೆರಿಗೆ ಪಾವತಿ ಕಡಿಮೆಯಾಗುವಂತೆ ಟ್ಯಾಕ್ಸ್ ಪ್ಲಾನಿಂಗ್‌ ಮಾಡಿ. ಆದರೆ ಹೀಗೆ ಮಾಡುವಾಗ ಈ ಕೆಲವು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ