ಭಾರತೀಯ ಟೆನ್ನಿಸ್ ಪ್ರತಿಭೆಯನ್ನು ಪೋಷಿಸುವ ಬದ್ಧತೆಯನ್ನು ಮರುಸ್ಥಾಪಿಸಿರುವ ಡಿ.ಸಿ.ಎಂ ಶ್ರೀರಾಮ್ ಲಿಮಿಟೆಡ್, 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನ್ನಿಸ್ ಚಾಂಪಿಯನ್‌ಶಿಪ್ ಅನ್ನು ಸೆಪ್ಟೆಂಬರ್ 29ರಿಂದ ದೆಹಲಿಯ ಡಿ.ಎಲ್.ಟಿ.ಎ ಕ್ರೀಡಾಂಗಣದಲ್ಲಿ ಪ್ರಾರಂಭಿಸುತ್ತಿದೆ.
ಡಿ.ಸಿ.ಎಂ ಶ್ರೀರಾಮ್ ಲಿಮಿಟೆಡ್ ಬೆಂಬಲಿತವಾಗಿ, ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಶನ್ (AITA) ಮತ್ತು ದೆಹಲಿ ಲಾನ್ ಟೆನ್ನಿಸ್ ಅಸೋಸಿಯೇಶನ್ (DLTA) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್, ಭಾರತದ ಅತಿ ದೊಡ್ಡ ದೇಶೀಯ ಟೆನ್ನಿಸ್ ಚಾಂಪಿಯನ್‌ಶಿಪ್ ಆಗಿದ್ದು, ದೇಶದ ಮೂಲೆಮೂಲೆಗಳಿಂದ ಶ್ರೇಷ್ಠ ಆಟಗಾರರನ್ನು ಆಕರ್ಷಿಸುತ್ತದೆ.
ಪುರುಷರು, ಮಹಿಳೆಯರು, ಹಾಗೂ ಯು–18/ಯು–16/ಯು–14 (ಹುಡುಗರು ಮತ್ತು ಹುಡುಗಿಯರು) ವಿಭಾಗಗಳನ್ನು ಒಳಗೊಂಡ ಏಕೈಕ ಸಮಗ್ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿರುವ ಫೆನೆಸ್ಟಾ ಓಪನ್, ವರ್ಷಗಳಿಂದ ರೋಹನ್ ಬೋಪಣ್ಣ, ಸೊಮದೇವ್ ದೇವ್ವರ್ಮನ್, ಯುಕಿ ಭಾಂಬ್ರಿ, ಸಾನಿಯಾ ಮಿರ್ಜಾ, ರುತುಜಾ ಭೋಸಲೆ ಮೊದಲಾದ ಭಾರತೀಯರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ.
ಡಿ.ಸಿ.ಎಂ ಶ್ರೀರಾಮ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಹಿರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಜಯ್ ಎಸ್ ಶ್ರೀರಾಮ್ ಹಾಗೂ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಕ್ರಂ ಶ್ರೀರಾಮ್ ಮಾತನಾಡಿ 'ಫೆನೆಸ್ಟಾ ಓಪನ್ ನ್ಯಾಷನಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನ 30ನೇ ಆವೃತ್ತಿಯನ್ನು ಆಚರಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಭಾರತೀಯ ಟೆನ್ನಿಸ್‌ಗೆ ಇದು ಶಾಶ್ವತ ವೇದಿಕೆ. ನಾವು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಅವಕಾಶವನ್ನು ಒದಗಿಸಿ, ರಾಷ್ಟ್ರೀಯ ಪ್ರದರ್ಶನದಿಂದ ಜಾಗತಿಕ ಆಕಾಂಕ್ಷೆಯವರೆಗೆ ಅವರ ಪಯಣವನ್ನು ಬೆಂಬಲಿಸಿದ್ದೇವೆ ಎಂದರು.
ಕಾರ್ಯಕ್ರಮದ ವಿವರ: ಪುರುಷರು, ಮಹಿಳೆಯರು ಹಾಗೂ ಯು–18 ವಿಭಾಗಗಳ ಅರ್ಹತಾ ಪಂದ್ಯಗಳು- 27 ಸೆಪ್ಟೆಂಬರ್ 2025
ಪುರುಷರು, ಮಹಿಳೆಯರು ಹಾಗೂ ಯು–18 (ಸಿಂಗಲ್ಸ್ ಮತ್ತು ಡಬಲ್ಸ್) ಮುಖ್ಯ ಡ್ರಾ: 29 ಸೆಪ್ಟೆಂಬರ್ – 4 ಅಕ್ಟೋಬರ್ 2025
ಯು–16 ಮತ್ತು ಯು–14 (ಹುಡುಗರು ಮತ್ತು ಹುಡುಗಿಯರು): 5 – 11 ಅಕ್ಟೋಬರ್ 2025





