ಕಾಲೇಜು ವಿದ್ಯಾರ್ಥಿನಿಯಾದ ರೀಟಾ ಬಹಳ ಬೇಸರದಲ್ಲಿದ್ದಳು. ಅವಳ ಮನಸ್ಸಿನಲ್ಲಿ ಅನೇಕ ಬಗೆಯ ಅನುಮಾನಗಳು ಮೂಡುತ್ತಿದ್ದವು. ತನ್ನ ಅರಿವಿಲ್ಲದೆಯೇ ತಾನು ಯಾವುದೋ ರಹಸ್ಯ ಕೈಚಳಕಕ್ಕೆ ಬಲಿಯಾಗಿದ್ದೇನೆಂದೂ, ಅದರಿಂದ ತನ್ನ ಬಾಳು ಹಾಳಾಗಬಹುದಿತ್ತೆಂದೂ ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು. ಆದರೆ ಸಮಾಧಾನದ ವಿಷಯವೆಂದರೆ ಆ ಕೃತ್ಯವನ್ನು ಎಸಗುತ್ತಿದ್ದವನು ಸಿಕ್ಕಿಬಿದ್ದಿದ್ದ.

ರೀಟಾಳಿಗೆ ಶಾಪಿಂಗ್‌ನಲ್ಲಿ ಬಲು ಆಸಕ್ತಿ. ಹೀಗಾಗಿ ಅವಳು ಆಗಾಗ ಬಟ್ಟೆಗಳನ್ನು ಕೊಳ್ಳಲು ಆ ಶೋರೂಮಿಗೆ ಹೋಗುತ್ತಿದ್ದಳು. ಅದೇ ಶೋರೂಮ್ ನ ಟ್ರಯಲ್ ರೂಮಿನಲ್ಲಿ ಹಿಡೆನ್‌ ಕ್ಯಾಮೆರಾ ಇದ್ದದ್ದು ಪತ್ತೆಯಾಗಿತ್ತು. ಇನ್ನು ಮುಂದೆ ಇಂತಹ ಅವಮಾನಕರ ಘಟನೆಗೆ ಬೇರೆ ಯಾರೂ ಸಿಲುಕಲಾರರು ಎನ್ನುವ ಭರವಸೆಯಿಂದ ಅವಳು ಕೊಂಚ ನಿರಾಳಳಾಗಿದ್ದಳು.

ಹಿಡೆನ್‌ ಕ್ಯಾಮೆರಾದ ತಂತ್ರಕ್ಕೆ ಬಲಿಯಾಗಿರುವವಳು ರೀಟಾ ಒಬ್ಬಳೇ ಅಲ್ಲ. ಇನ್ನೆಷ್ಟು ಯುವತಿಯರು ಅಥವಾ ಮಹಿಳೆಯರಿಗೆ ಹೀಗಾಗಿದೆಯೋ ತಿಳಿದಿಲ್ಲ. ಒಂದೆರಡು ವರ್ಷಗಳ ಹಿಂದೆ ದೆಹಲಿಯ ಸೆಂಟ್ರಲ್ ಮಾರ್ಕೆಟ್‌ನ ಬ್ರಾಂಡೆಡ್‌ಉಡುಪುಗಳ ಶೋರೂಮ್ ಒಂದರಲ್ಲಿ ಬೆಚ್ಚಿ ಬೀಳಿಸುವಂತಹ ಸುದ್ದಿ ಹೊರಬಂದಿತು. ಮಲ್ಟಿನ್ಯಾಷನಲ್ ಕಂಪನಿಯೊಂದರ ಉದ್ಯೋಗಿ ರೂಬಿ ಆ ಶೋರೂಮ್ ಗೆ ಹೋಗಿದ್ದಳು. ಟ್ರಯಲ್ ರೂಮಿನಲ್ಲಿ ಒಂದು ಗ್ಯಾಪ್‌ನ ಹಿಂದೆ ಕ್ಯಾಮೆರಾ ಲೆನ್ಸ್ ಇರುವುದು ಅವಳಿಗೆ ಕಾಣಿಸಿತು.  ಹೊರಗೆ ಬಂದು ಚೆಕ್‌ ಮಾಡಿದಾಗ ವಿಡಿಯೋ ಮೋಡ್‌ನಲ್ಲಿ ಮೊಬೈಲ್ ‌ಒಂದನ್ನು ಇರಿಸಿರುವುದು ಕಾಣಿಸಿತು. ಗಲಾಟೆ ಮಾಡಿದಾಗ ಪೊಲೀಸರು ಬಂದರು. ಶೋರೂಮ್ ನವರೇ ಇಂತಹ ಲಜ್ಜೆಗೇಡಿ ಕೆಲಸದಲ್ಲಿ ತೊಡಗಿದ್ದುದು ತಿಳಿದು ಬಂದಿತು. ಪೊಲೀಸರು ಅವರ ವಿರುದ್ಧ ಸೆಕ್ಷನ್‌ 354, 354(ಸಿ) ರಂತೆ ಕೇಸು ದಾಖಲಿಸಿ ಜೈಲಿಗೆ ಕಳಿಸಿದರು.

ಸಾರ್ವಜನಿಕ ಸಮಸ್ಯೆ

ರಾಜಧಾನಿಯ ಒಂದು ಗರ್ಲ್ಸ್ ಹಾಸ್ಟೆಲ್‌ನ ಬಾತ್‌ರೂಮ್ ನಲ್ಲಿ ಕ್ಯಾಮೆರಾ ಇದ್ದುದ್ದು ಪತ್ತೆಯಾಯಿತು. ಪರೀಕ್ಷೆ ಮಾಡಿದಾಗ ಒಟ್ಟು 3 ಹಿಡೆನ್‌ ಕ್ಯಾಮೆರಾ ದೊರಕಿದವು. ಮತ್ತೊಂದೆಡೆ ಯುವತಿಯೊಬ್ಬಳು ಹೊಸ ಡ್ರೆಸ್‌ ಕೊಳ್ಳಲೆಂದು ಒಂದು ಶೋ ರೂಮಿಗೆ ಹೋದಳು. ಚೇಂಜಿಂಗ್‌ ರೂಮಿನಲ್ಲಿ ಅವಳು 3 ಟಾಪ್‌ಗಳನ್ನು ಬದಲಿಸಿ ನೋಡಿದಳು. ಇದ್ದಕ್ಕಿದ್ದಂತೆ ಅವಳ ದೃಷ್ಟಿ ಸೀಲಿಂಗ್‌ನಲ್ಲಿ ಅಡಗಿಸಿ ಇರಿಸಿದ್ದ ಕ್ಯಾಮೆರಾ ಮೇಲೆ ಬಿತ್ತು. ಅವಳಿಗೆ ಬವಳಿ ಬೀಳುವಂತಾಯಿತು. ನಂತರ ಪೊಲೀಸ್‌ ಬಂದು ವಿಚಾರಣೆ ನಡೆಸಿದರು.

ಕಳೆದ ವರ್ಷ ಗೋವಾದ ಶೋರೂಮ್‌ ಒಂದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೋಗಿದ್ದರು. ಟ್ರಯಲ್ ರೂಮ್ ಗೆ ಹೋದಾಗ ಅವರಿಗೆ ಹಿಡೆನ್‌ ಕ್ಯಾಮೆರಾದ ಸುಳಿವು ಸಿಕ್ಕಿತು. ಕಂಪ್ಯೂಟರ್‌ ಹಾರ್ಡ್‌ ಡಿಸ್ಕನ್ನು ಪರೀಕ್ಷಿಸಿದಾಗ ಟ್ರಯಲ್ ರೂಮಿನಲ್ಲಿದ್ದ ಮಹಿಳೆಯರ ಸೊಂಟದಿಂದ ಮೇಲ್ಭಾಗದ ಚಿತ್ರಗಳೆಲ್ಲ ರೆಕಾರ್ಡಿಂಗ್‌ ಆಗುತ್ತಿದ್ದುದು ಪತ್ತೆಯಾಯಿತು. ಕೇಂದ್ರ ಮಂತ್ರಿಯೊಬ್ಬರು ಇಂತಹ ಚೌರ್ಯಕ್ಕೆ ಬಲಿಯಾದ ಸುದ್ದಿ ಸಾಕಷ್ಟು ಪ್ರಚಾರ ಪಡೆಯಿತು. ಜನರಲ್ಲಿ ಜಾಗೃತಿ ಮೂಡಿಸಿತು.

ಟ್ರಯಲ್ ರೂಮ್, ಬಾತ್‌ ರೂಮ್, ಸಾರ್ವಜನಿಕ ಶೌಚಾಲಯ, ಗರ್ಲ್ಸ್ ಹಾಸ್ಟೆಲ್‌, ಹೋಟೆಲ್ ‌ರೂಮುಗಳಲ್ಲಿ ಗುಪ್ತವಾಗಿ ಅಳವಡಿಸಲಾಗಿರುವ ಓಪನ್‌ ಕ್ಯಾಮೆರಾಗಳು ಯಾರನ್ನಾದರೂ ಬಲಿಯಾಗಿಸಿಕೊಳ್ಳಬಲ್ಲವು. ಆದ್ದರಿಂದ ಯುವತಿಯರು ಮತ್ತು ಮಹಿಳೆಯರು ಇಂತಹ ಸ್ಥಳಗಳನ್ನು ಪ್ರವೇಶಿಸಿದಾಗ, ಚೆನ್ನಾಗಿ ಪರೀಕ್ಷೆ ಮಾಡಬೇಕಾಗುತ್ತದೆ. ಎಚ್ಚರದಿಂದ ಇಲ್ಲದ್ದಿದರೆ ಅವರ ಫೋಟೋ ಮತ್ತು ವೀಡಿಯೋಗಳನ್ನು ಪೋರ್ನ್‌ ವೆಬ್‌ಸೈಟ್‌ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕ ಮಾಡಬಹುದು. ಇದರಿಂದ ಅವರು ಭವಿಷ್ಯದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ