ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿ ಏಕೆ? : ಸ್ವತಂತ್ರ ಪತ್ರಕರ್ತರ ಮೇಲೆ ಸತತ ಹಲ್ಲೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಸ್ಮೃತಿ ಇರಾನಿ ಪತ್ರಕರ್ತರ ಕತ್ತು ಹಿಸುಕುವಂಥ ಪ್ರಯತ್ನ ನಡೆಸಿದ್ದರು, ಆದರೆ ಅದು ಗಂಭೀರ ತಿರುವು ಪಡೆದಾಗ ಸುಮ್ಮನಾದರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲೂ ನಿರ್ಭೀತ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ನಿರ್ದಯವಾಗಿ ಅವರ ಮನೆ ಮುಂದೆಯೇ ಹತ್ಯೆ ಮಾಡಲಾಯಿತು. ಪ್ರಜಾಪ್ರಭುತ್ವಕ್ಕೆ ಇದೇ ತರಹ ಅಡ್ಡಿಪಡಿಸುತ್ತಿದ್ದರೆ, ದೇಶ ಮತ್ತೆ ಪರದೆ ಹಿಂದಿನ ಕತ್ತಲೆಗೆ ಸರಿಯುವುದರಲ್ಲಿ ಸಂದೇಹವಿಲ್ಲ.
ಕೇಳುವುದೋ.... ನೋಡುವುದೋ? : ಅಂತಾರಾಷ್ಟ್ರೀಯ ಖ್ಯಾತಿವೆತ್ತ ಡೇಮೀ ಸಿಂಗರ್ ಮಾತ್ರ ಅಲ್ಲ, ಲಿರಿಸ್ಟ್ ಹಾಗೂ ಆ್ಯಕ್ಟ್ರೆಸ್‌ಕೂಡ.... ಇವಳ ಆಲ್ಬಂಗಳಿಗೆ ಡಿಮ್ಯಾಂಡೋ ಡಿಮ್ಯಾಂಡು! ಈ ಪಾಪ್ ಪಾಪ್ ರಾಕ್ ಆರ್ಟಿಸ್ಟ್ ಘಟಾನುಘಟಿ ರಾಕ್ ಹಾರ್ಟ್ ಅಂದ್ರೆ ಕಲ್ಲು ಹೃದಯಗಳನ್ನೂ ಕರಗಿಸಬಲ್ಲದು.... ಇಲ್ಲಿ ಇವಳ ಗೆಟಪ್ ನೋಡಿದರೆ ಗೊತ್ತಾಗುತ್ತದಲ್ಲವೇ?
ಫ್ಯಾಷನ್ನಿನ ಈ ಪರಿ : ಕುತ್ತಿಗೆಯಲ್ಲಿ ಸ್ಕಾರ್ಫ್, ಮುಖದಲ್ಲಿ ಮಂದಹಾಸ, ಕಂಗಳಲ್ಲಿ ಆಕರ್ಷಣೆ ತುಂಬಿರಲು ಈಕೆ ಬೊಂಬಾಟ್ ಬ್ಯೂಟಿ ಎನಿಸಲು ಇನ್ನಿದಕ್ಕಿಂತ ಬೇಕೇ? ಇವಳು ಸಾದಾ ಸೀದಾ, ಎಲ್ಲರಿಗೂ ಸಿಗುವಂಥ ಹುಡುಗಿ ಅಲ್ಲ ಬಿಡಿ. ಇವಳೋ ಪ್ಯಾರಿಸ್ ಬಾಲೆ, ಅಲ್ಲಿನ ಫ್ಯಾಷನ್ ಶೋನಲ್ಲಿ ಹೀಗೆ ಪೋಸ್ ನೀಡಿದ್ದಾಳೆ.
ಉತ್ತಮ ಆರಂಭ : ಈ ಫ್ಯಾಷನ್ ಶೋದ ವೈಶಿಷ್ಟ್ಯ ಎಂದರೆ, ಇದು ಇರಾಕ್‌ನ ನಗರ ಬಸರಾದಲ್ಲಿ ನಡೆದದ್ದು ಎಂಬುದು. ಅಲ್ಲಿನ ಕಂದಾಚಾರದ ನಡುವೆ. ಇದು ನಡೆದದ್ದು ಹೆಚ್ಚುಗಾರಿಕೆಯೇ ಸರಿ. ಈಗಿನ ಹೊಸ ಸರ್ಕಾರಗಳು ಪಟ್ಟು ಸಡಿಲಿಸಿರುವುದರಿಂದ, ಹೆಂಗಸರು ಬೇಕಾದ್ದನ್ನು ಧರಿಸಿ ಹೀಗೆ ಪ್ರದರ್ಶನಕ್ಕೆ ಒಡ್ಡಿಕೊಳ್ಳಲು ಅವಕಾಶವಾಗಿದೆ.
ಚಪ್ಪಾಳೆ ತಟ್ಟಲು ಸಿದ್ಧತೆ : ಅವಾರ್ಡ್ ನೈಟ್‌ನಲ್ಲಿ ಗ್ಲಾಮರಸ್ ಪರ್ಫಾರ್ಮೆನ್ಸ್ ಇಲ್ಲದ್ದಿದರೆ ಹೇಗೆ? ಈ ಫೋಟೋ ಅಂತೂ ರಿಹರ್ಸಲ್‌ನದು ಬಿಡಿ, ಆದರೆ ಸಿದ್ಧತೆ ನೋಡಿದರೆ ಇದೆಷ್ಟು ಜನಪ್ರಿಯ ಆಗಬಲ್ಲದೋ ತಿಳಿಯುತ್ತದೆ.
ನಮ್ಮ ದನಿ ಆಲಿಸಿ : ಮುಗ್ಧ, ನಿರ್ದೋಷಿ, ಅಮಾಯಕ ಹುಡುಗಿಯರ ಮೇಲಿನ ಹತ್ಯಾಕಾಂಡಗಳು ಭಾರತಕ್ಕಷ್ಟೇ ಸೀಮಿತವಲ್ಲ. ಅತ್ಯಾಚಾರಿಗಳ ಈ ಮರಣ ಮೃದಂಗ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಹೆಣ್ಣುಮಕ್ಕಳು ಹೊರಗೆ ಓಡಾಡಬಾರದು, ಅಂತಿಂಥದ್ದನ್ನು ಧರಿಸಬಾರದು ಎಂದು ಮೂಗು ಮುರಿಯದಿರಿ. ಗಂಡಸರು ಸೈರಣೆ ತಂದುಕೊಳ್ಳಬೇಕಷ್ಟೆ. ಶ್ರೀಲಂಕಾದ ಈ ಕನ್ಯಾಮಣಿಗಳು ಇದರ ವಿರುದ್ಧ ಹೀಗೆ ಸಿಡಿದೆದ್ದಿದ್ದಾರೆ.
TAGS : ವಾಕ್ ಸ್ವಾತಂತ್ರ್ಯ, ಕೇಳುವುದೋ ನೋಡುವುದೋ, ಫ್ಯಾಷನ್ನಿನ ಪರಿ, ಉತ್ತಮ ಆರಂಭ, ಚಪ್ಪಾಳೆ ತಟ್ಟಿರಿ, ನಮ್ಮ ದನಿ ಆಲಿಸಿ,