ಮಹಾಭಾರತವನ್ನು ವ್ಯಾಸರು ಹೇಳುತ್ತಾ ಹೋದಂತೆ ಗಣೇಶನು ನಿರಂತರವಾಗಿ ಬರೆಯಲು ಒಪ್ಪಿಕೊಂಡು ಭಾದ್ರಪದ ಶುಕ್ಲ ಚತುರ್ಥಿಯಿಂದ ಆರಂಭಿಸಿದ ಬರವಣಿಗೆ ನಿರಂತರವಾಗಿ ಹತ್ತು ದಿನಗಳ ಮುಂದುವರೆದು ಅದು ಮುಗಿಯುವಷ್ಟರಲ್ಲಿ, ಗಣೇಶನ ದೇಹದ ಉಷ್ಣತೆ ಹೆಚ್ಚಾಗಿದ್ದನ್ನು ಕಂಡ ವ್ಯಾಸರು ಅವನನ್ನು ಸರಸ್ವತಿ ನದಿಯ ಬಳಿಗೆ ಕರೆದುಕೊಂಡು ನದಿಯಲ್ಲಿ ಮುಳುಗಿಸಿ ಸ್ನಾನ ಮಾಡಿಸುತ್ತಿದ್ದಾಗ, ಮೂರನೇ ಬಾರಿ ಮುಳುಗಿಸಿದಾಗ, ವ್ಯಾಸರ ಕೈ ಬಿಡಿಸಿಕೊಂಡ ಗಣೇಶ ತಾನು ಬಂದ ಕಾರ್ಯ ಮುಗಿದೆ ಎಂದು ಜಲಮಾರ್ಗದ ಮೂಲಕ ಕೈಲಾಸ ಸೇರಿಕೊಳ್ಳುತ್ತಾನೆ ಎಂಬ ಕಥೆ ಇರುವ ಕಾರಣ, ಚತುರ್ಥಿಯಂದು ಪ್ರತಿಷ್ಠಾಪನೆ ಮಾಡಿದ ಗಣೇಶನನ್ನು ಹತ್ತು ದಿನಗಳ ಕಾಲ ಪೂಜಿಸಿ, 11ನೇದಿನ ಅನಂತ ಚತುರ್ದಶಿಯಂದು ವಿಸರ್ಜಿಸುವ ಆಚರಣೆ ರೂಢಿಗೆ ಬಂದಿದೆ ಎನ್ನಲಾಗುತ್ತದೆ. ಆದರೆ ದೇಶದ ಎಲ್ಲ ಭಾಗಗಳಲ್ಲೂ ಇದೇ ಪದ್ದತಿ ರೂಢಿಯಲ್ಲಿಲ್ಲದೇ ಕೆಲವೆಡೆ ಒಂದು ದಿನದಿಂದ 3, 5, 7, 10 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ.

ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಮನೆತನದಲ್ಲಿ ಗಣೇಶೋತ್ಸವದ ಪರಂಪರೆ ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಗಣಪತಿಯನ್ನು ಬೆಳಿಗ್ಗೆ ಪ್ರತಿಷ್ಠಾಪಿಸಿ, ಅದೇ ದಿನ ಮಧ್ಯಾಹ್ನದೊಳಗೆ ವಿಸರ್ಜಿಸಲಾಗುತ್ತದೆ. ಅಂದರೆ, ಅರ್ಧ ದಿನ ಮಾತ್ರ ಗಣೇಶೋತ್ಸವ ! ಇದು ಕೇವಲ ವಿಭಿನ್ನ ಧಾರ್ಮಿಕ ಆಚರಣೆಯಲ್ಲ. ಮನೆತನದ ಹಿರಿಯರ ಪ್ರಕಾರ, ಇದರ ಹಿಂದೆ ಬ್ರಿಟಿಷರ ಕಾಲದ ಬರಗಾಲ, ಕಂದಾಯ ವಿವಾದ, ವಾಡೆಯ ಮೇಲಿನ ದಾಳಿ, ಸ್ವಾತಂತ್ರ್ಯ ಚಳವಳಿಯ ಪ್ರಭಾವ ಮತ್ತು ದೇಶಭಕ್ತಿಯೊಂದಿಗೆ ಬೆಸೆದುಕೊಂಡಿರುವ ಒಂದು ಐತಿಹಾಸಿಕ ನೆನಪು ಇದೆ.

ಸಾಮಾನ್ಯ ಗಣೇಶೋತ್ಸವಕ್ಕಿಂತ ಭಿನ್ನವಾದ ಪರಂಪರೆ

ಭೋಗೇನಾಗರಕೊಪ್ಪದ ದೇಶಕುಲಕರ್ಣಿ ಅಥವಾ ದೇಸಾಯಿ ಮನೆತನದಲ್ಲಿ ಗಣೇಶ ಚತುರ್ಥಿಯಂದು ಬೆಳಿಗ್ಗೆ ಗಣಪತಿಯ ಪ್ರತಿಷ್ಠಾಪನೆ ನಡೆಯುತ್ತದೆ. ಪೂಜೆ, ವಿಶೇಷ ನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿತರಣೆ ಮುಗಿದ ಬಳಿಕ ಮಧ್ಯಾಹ್ನದ ಊಟಕ್ಕೂ ಮುನ್ನವೇ ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ. ಇಂದು ನೋಡಿದರೆ ಇದು ಅಚ್ಚರಿಯ ಸಂಗತಿ.

ಇಷ್ಟು ಬೇಗ ಏಕೆ ವಿಸರ್ಜನೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಕುಟುಂಬದ ಪರಂಪರೆಯ ಪ್ರಕಾರ, ಈ ಅರ್ಧ ದಿನದ ಗಣೇಶೋತ್ಸವದ ಹಿಂದೆ ಸುಮಾರು ಒಂದು ಶತಮಾನಕ್ಕೂ ಹಿಂದಿನ ಬ್ರಿಟಿಷ್ ವಿರೋಧಿ ಹೋರಾಟದ ನೆನಪು ಅಡಗಿದೆ.

ಬರಗಾಲ, ಕಂದಾಯ ಮತ್ತು ದೇಸಾಯಿಗಳ ನಡುವಿನ ಸಂಘರ್ಷ

ಸ್ಥಳೀಯ ಪರಂಪರೆಯ ಪ್ರಕಾರ, ದೇಶಕುಲಕರ್ಣಿ ಅಥವಾ ದೇಸಾಯಿ ಮನೆತನವು ಐದು ಗ್ರಾಮಗಳ ಆಡಳಿತ ಮತ್ತು ಕಂದಾಯ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿತ್ತು. ಕುಟುಂಬದ ಐತಿಹ್ಯದ ಪ್ರಕಾರ, ಹಿಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಂದ ಐದು ಹಳ್ಳಿಗಳ ಇನಾಮು ದೊರೆತಿತ್ತು ಮತ್ತು ದೇಸಾಯಿ ಮನೆತನವು ಆ ಪ್ರದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಕಲಘಟಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಬರಗಾಲ ಎದುರಾಗಿತ್ತು. ಮಳೆ ಕೈ ಕೊಟ್ಟಿದ್ದರಿಂದ ಜನಜೀವನ ಸಂಕಷ್ಟದಲ್ಲಿತ್ತು. ಕೃಷಿ ಕುಂಠಿತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಬ್ರಿಟಿಷ್ ಆಡಳಿತದ ಕಂದಾಯ ವ್ಯವಸ್ಥೆ ಜನರ ಮೇಲೆ ಒತ್ತಡ ಹೇರುತ್ತಿತ್ತು ದೇಸಾಯಿ ಆಡಳಿತದಲ್ಲಿದ್ದ ಐದು ಗ್ರಾಮಗಳ ಜನರು ಕಂದಾಯ ಪಾವತಿಸದಿರುವುದು ಬ್ರಿಟಿಷ್ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಕಾರಣವಾಯಿತು ಎಂದು ಕುಟುಂಬದ ಪರಂಪರೆ ತಿಳಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ