ಸುಷ್ಮಾ ಸ್ವರಾಜ್ವಿದೇಶಾಂಗ ಸಚಿವೆ

ಅರ್ಹತೆ, ಕರ್ತವ್ಯ ಪ್ರಜ್ಞೆ ಮತ್ತು ಆಡಳಿತ ನಿರ್ವಹಣೆಯ ಜೊತೆಗೆ ಧರ್ಮ ನಿರಪೇಕ್ಷ ಭಾವನೆ ಹೊಂದಿರುವ ಸುಷ್ಮಾ ಸ್ವರಾಜ್‌ ವಿಶಿಷ್ಟ ಕೀರ್ತಿಯೊಂದಕ್ಕೆ ಪಾತ್ರರಾಗಿದ್ದಾರೆ. ವಿದೇಶಾಂಗ ಸಚಿವೆಯಾದ ಭಾರತದ ಪ್ರಥಮ ಮಹಿಳೆ ಎಂಬ ಖ್ಯಾತಿ ಅವರ ಹೆಸರಿನೊಂದಿಗೆ ಸೇರಿಕೊಂಡಿದೆ.

ಫೆಬ್ರವರಿ 1952ರಲ್ಲಿ ಪಂಜಾಬ್‌ನ ಅಂಬಾಲಾದಲ್ಲಿ ಜನಿಸಿದ ಸುಷ್ಮಾ ಅವರು ಪಂಜಾಬ್‌ ವಿ.ವಿ.ಯಿಂದ ಕಾನೂನು ಪದವಿ ಪಡೆದಿದ್ದಾರೆ. ದೀರ್ಘ ಕಾಲದವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಕಾಲತ್ತು ಮಾಡಿದ್ದ ಅವರು ಬಳಿಕ ರಾಜಕೀಯ ಪ್ರೀವೇಶಿಸಿದರು. 1998ರಲ್ಲಿ ಅವರು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಹೊಸದೊಂದು ಕೀರ್ತಿಗೆ ಪಾತ್ರರಾದರು. ಅವರು ಭಾಜಪಾದ ರಾಷ್ಟ್ರೀಯ ಕಾರ್ಯಾಲಯದ ಮೊದಲ ಮಹಿಳೆ ಮತ್ತು ಭಾರತದ `ಅತ್ಯುತ್ತಮ ಸಂಸದೆ ಪ್ರಶಸ್ತಿ' ಪಡೆದ ಪ್ರಥಮ ಮಹಿಳೆ.

ಸುಷ್ಮಾ ಸ್ವರಾಜ್‌ ಆರಂಭದಿಂದಲೇ ತಾವೊಬ್ಬ ಮಾದರಿ ಮಹಿಳೆ ಎಂಬುದ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. 1970ರಲ್ಲಿ ಅವರು ಎಸ್‌.ಡಿ. ಕಾಲೇಜಿನಲ್ಲಿ `ಅತ್ಯುತ್ತಮ ವಿದ್ಯಾರ್ಥಿ' ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಆ ಕಾಲೇಜಿನಲ್ಲಿ 3 ವರ್ಷಗಳ ತನಕ `ಅತ್ಯುತ್ತಮ ಎನ್‌ಸಿಸಿ ಕ್ಯಾಡೆಟ್‌' ಮತ್ತು 3 ವರ್ಷಗಳ ಕಾಲ `ರಾಜ್ಯದ ಶ್ರೇಷ್ಠ ಭಾಷಣಕಾರ್ತಿ' ಬಹುಮಾನಕ್ಕೆ ಪಾತ್ರರಾಗಿದ್ದರು.

ಚೌದರಿ ದೇವಿಲಾಲ್

‌ಸರ್ಕಾರದಲ್ಲಿ 1977ರಿಂದ 79ರ ಅವಧಿಯಲ್ಲಿ ಹರಿಯಾಣದ ಕಾರ್ಮಿಕ ಸಚಿವೆಯಾಗಿದ್ದರು. 25ನೇ ವರ್ಷದಲ್ಲಿ ಸಂಪುಟ ದರ್ಜೆ ಸಚಿವೆಯಾಗಿದ್ದುದು ಅವರ ಮತ್ತೊಂದು ದಾಖಲೆ, 1987 ಮತ್ತು 1996ರಲ್ಲಿ ಅವರು ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಚಾರ ಸಚಿವೆಯಾಗಿ ಎಲ್ಲರೂ ಸೈ ಅನ್ನುವಂತೆ ಕಾರ್ಯನಿರ್ಹಿಸಿದ್ದರು.

1975ರಲ್ಲಿ ಸ್ವರಾಜ್‌ ಕೌಶಲ್ ಜೊತೆ ಅವರ ವಿವಾಹವಾಯಿತು. ಅವರು 6 ವರ್ಷಗಳ ಕಾಲ ರಾಜ್ಯಸಭೆ ಸದಸ್ಯರಾಗಿದ್ದರು. ಬಳಿಕ ಮಿಜೋರಾಂ ರಾಜ್ಯಪಾಲರೂ ಆಗಿದ್ದರು.

ಅತ್ಯಂತ ಕಡಿಮೆ ವಯಸ್ಸಿನಲ್ಲಿ ರಾಜ್ಯಸಭಾ ಸದಸ್ಯರಾದ ಖ್ಯಾತಿಯೂ ಸ್ವರಾಜ್‌ ಕೌಶಲ್ ಹೆಸರಿಗೆ ಇದೆ. ಸುಷ್ಮಾ ಸ್ವರಾಜ್‌ ಹಾಗೂ ಅವರ ಪತಿಯ ಸಾಧನೆ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ ನಲ್ಲಿ ನಮೂದಾಗಿದ್ದು, ಅವರಿಗೆ `ವಿಶೇಷ ದಂಪತಿಗಳು' ಎಂಬ ದರ್ಜೆ ನೀಡಲಾಗಿದೆ.

ಮಧ್ಯಪ್ರದೇಶದ ವಿಧೀಶಾ ಕ್ಷೇತ್ರದಿಂದ 4,10,698 ಮತಗಳಿಂದ ಜಯ ಗಳಿಸಿದ ಸುಷ್ಮಾ ಅವರಿಗೆ ಒಬ್ಬ ಮಗಳಿದ್ದು, ಆಕೆ ಆಕ್ಸ್ ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಈಗ ವಕಾಲತ್ತು ನಡೆಸಿದ್ದಾರೆ.

ಸ್ಮೃತಿ ಇರಾನಿ

Smriti-Irani

ಮಾನವ ಸಂಪನ್ಮೂಲ ಸಚಿವೆ ಮನೇಕಾ ಗಾಂಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉತ್ತರಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ‌ಗಾಂಧಿ ಹಾಗೂ ಆಮ್ ಆದ್ಮಿ ಪಕ್ಷದ ಕುಮಾರ್‌ ವಿಶ್ವಾಸ್‌ ಅವರಿಗೆ ಪ್ರಬಲ ಎದುರಾಳಿ ಎನಿಸಿಕೊಂಡ ಸ್ಮೃತಿ ಇರಾನಿ ಮೋದಿ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಸಚಿವೆ.

1976ರಲ್ಲಿ ದೆಹಲಿಯಲ್ಲಿ ಜನಿಸಿದ ಸ್ಮೃತಿ ಪಾರಂಪರಿಕ ಪಂಜಾಬಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಎಲ್ಲ ಅಡೆತಡೆಗಳು, ನಿರ್ಬಂಧಗಳನ್ನೂ ಬದಿಗೊತ್ತಿ. ಅವರು ಬ್ಯಾಚುಲರ್‌ ಆಫ್‌ ಕಾಮರ್ಸ್‌ ಪಾರ್ಟ್‌ (ಅಂಚೆ ತೆರಪಿನ ಶಿಕ್ಷಣ) ಪಾಸ್‌ ಆಗಿ ಗ್ಲಾಮರ್ ಜಗತ್ತಿಗೆ ಕಾಲಿರಿಸಿದರು. 1998ರಲ್ಲಿ ಅವರು `ಫೇಮಿನಾ ಮಿಸ್‌ ಇಂಡಿಯಾ' ಸೌಂದರ್ಯ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನ ತನಕ ತಲುಪಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ