ಮಳೆಗಾಲದ ದಿನಗಳಲ್ಲಿ ಮನೆಯಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ, ಬಜ್ಜಿ ಪಕೋಡ ಸವಿಯುತ್ತಾ, ಪುಸ್ತಕ ಓದಿ ಟೈಂಪಾಸ್‌ ಮಾಡುವುದು ಎಷ್ಟು ಆನಂದದಾಯಕಿವೋ, ಹೊರಗೆ ಹೋಗಿ ನೀರಲ್ಲಿ ನೆನೆದು ಬಟ್ಟೆಗಳನ್ನು ಗಲೀಜು ಮಾಡಿಕೊಳ್ಳುವುದು ಅಷ್ಟೇ ಬೇಜಾರಿನ ವಿಷಯವಾಗಿದೆ. ಮಳೆಯಲ್ಲಿ ನೆನೆದು ಹೋಗುತ್ತೇವಲ್ಲ ಎಂದು ಒಳ್ಳೆಯ ಬಟ್ಟೆ ಧರಿಸಲು ಮನಸ್ಸೇ ಬರುವುದಿಲ್ಲ. ತಮ್ಮ ಮೆಚ್ಚಿನ ದುಬಾರಿ ಉಡುಗೆ ಧರಿಸಲಾಗದು ಎಂದು ಬಹಳಷ್ಟು ಜನ ದೂರುತ್ತಾರೆ. ಆದರೆ ಈ ಸೀಸನ್‌ನಲ್ಲಿ ಕೆಲವು ಎಚ್ಚರಿಕೆ ಕ್ರಮಗಳನ್ನು ಕೈಗೊಂಡು, ಎಚ್ಚರಿಕೆಯಿಂದ ಡ್ರೆಸ್‌ ಆರಿಸಿದರೆ, ಇಂಥ ದೂರುಗಳಿಗೆ ಅವಕಾಶ ಇರುವುದಿಲ್ಲ. ಮಳೆಗಾಲಕ್ಕಾಗಿಯೇ ಉಪಯುಕ್ತ ಎನಿಸುವ ಡ್ರೆಸ್‌ಗಳ ಶಾಪಿಂಗ್‌ ಮಾಡುವುದು ಲೇಸು. ಬೇಗ ಮುದುಡುವ, ಬಣ್ಣ ಹರಡಿಕೊಳ್ಳುವಂಥ ಬಟ್ಟೆಗಳನ್ನು ಈ ಸೀಸನ್‌ನಲ್ಲಿ ಧರಿಸಬೇಡಿ. ಕೆಲವಾರು ತಿಂಗಳುಗಳಿಂದ ವಾರ್ಡ್‌ ರೋಬ್‌ನಲ್ಲೇ ಬಿದ್ದಿರುವ, ಹೆಚ್ಚು ಬಳಕೆ ಆಗದ ಉಡುಗೆಗಳನ್ನು ಹೊರತೆಗೆಯಲು ಇದು ಸಕಾಲ.

shor tempered.qxd

ಫ್ಲೋರ್‌ ಪ್ರಿಂಟ್‌ನ ಟೀಶರ್ಟ್‌, ಕೇಪ್ರಿ, ಜೀನ್ಸ್ ಮುಂತಾದ ಈ ದಿನಗಳಿಗೆ ಸೂಕ್ತ. ನೀವು ಸಿಲ್ಕ್ ಕಾಟನ್‌ಗೆ ಬದಲಾಗಿ ಪಾಲಿಯೆಸ್ಟರ್, ಟೆರಿಕಾಟ್‌, ನೈಲಾನ್‌ ಡ್ರೆಸೆಸ್‌ ಧರಿಬಹುದು. ಈ ಉಡುಗೆಗಳು ರಿಂಕಲ್ ಫ್ರೀ ಆಗಿರುವುದರ ಜೊತೆ, ಒಣಗಿದ ತಕ್ಷಣ ಹಿಂದೆ ಇದ್ದಂಥ ಸ್ಥಿತಿಗೇ ಬೇಗ ಮರಳುತ್ತವೆ. ಇದರಹೊರತಾಗಿ ಮಳೆಗಾಲದಲ್ಲಿ ಬಿಳಿ ಬಟ್ಟೆಗಳನ್ನು ಧರಿಸಲು ಹೋಗಲೇಬೇಡಿ. ಆದ್ದರಿಂದ ಈ ಸೀಸನ್‌ನಲ್ಲಿ ಬ್ರೈಟ್‌ ಕಲರ್ಸ್‌ ಸರಿ ಎನಿಸುತ್ತದೆ. ಗ್ರೀನ್‌, ಪಿಂಕ್‌, ಬ್ಲೂ, ಆರೆಂಜ್‌ ಇಂಪ್ರೆಸಿವ್ ಎನಿಸುತ್ತವೆ. ಜೊತೆಗೆ ಭಾರಿ ಎನಿಸುವ ಸಲ್ವಾರ್‌ ಕಮೀಜ್‌, ದುಪಟ್ಟಾ, ಕಾಟನ್‌ ಸೀರೆಗಳು ಇತ್ಯಾದಿಗಳನ್ನು ಮಳೆಗಾಲದಲ್ಲಿ ಧರಿಸದೇ ಇರುವುದೇ ಒಳ್ಳೆಯದು. ಡ್ರೆಸ್‌ ಜೊತೆಗೆ ಪರ್ಸ್‌, ಬೆಲ್ಟ್, ಸ್ಯಾಂಡಲ್ ಇತ್ಯಾದಿ ವಾಟರ್‌ ಪ್ರೂಫ್‌ ಆಗಿರಬೇಕು. ಈ ಕಾಲದಲ್ಲಿ ನಿಮ್ಮ ಪಾದ, ಚಪ್ಪಲಿಗಳ ಕಡೆ ಹೆಚ್ಚಿನ ಗಮನ ಕೊಡಬೇಕು. ಆಫೀಸ್‌ ತಲುಪಿದಾಗ ಅಥವಾ ಮನೆಗೆ ಮರಳಿದ ತಕ್ಷಣ ಒದ್ದೆ ಚಪ್ಪಲಿಗಳನ್ನು ಬದಲಾಯಿಸಿ. ಆದ್ದರಿಂದ ಎರಡೂ ಕಡೆ ಒಂದು ಜೊತೆ ಹೆಚ್ಚುವರಿ ಶೂ, ಚಪ್ಪಲಿಗಳು ಇರಲಿ. ಮನೆ ತಲುಪಿದ ಮೇಲೆ ಬೆಚ್ಚಗಿನ ನೀರಿನಿಂದ ಕಾಲು ತೊಳೆಯಿರಿ. ಸೋಪು ಬಳಸಬಹುದು, 5 ನಿಮಿಷ ಮಸಾಜ್‌ ಮಾಡಿದರೆ ಇನ್ನೂ ಒಳ್ಳೆಯದು. ಪಾದಗಳು ಅಥವಾ ಚಪ್ಪಲಿ ಶೂಗಳು ಒದ್ದೆಯಾಗಿದ್ದರೆ, ಫಂಗಲ್ ಇನ್‌ಫೆಕ್ಷನ್‌ ತಪ್ಪದು. ಒದ್ದೆ ಬಟ್ಟೆಗಳ ಒಗೆಯುವಿಕೆ ಹಾಗೂ ಅದನ್ನು ಒಣಗಿಸುವುದು ಈ ಕಾಲದ ಕಷ್ಟದ ಕೆಲಸ. ಈ ಕಾಲದಲ್ಲಿ ಬಟ್ಟೆಗಳ ಸರಿಯಾದ ಸಂರಕ್ಷಣೆ ಮಾಡದಿದ್ದರೆ, ಉಡುಪು ಮಾತ್ರವಲ್ಲ, ನಿಮ್ಮ ಆರೋಗ್ಯ ಕೆಡುತ್ತದೆ. ಕೇವಲ ಮಳೆಗಾಲದ ಮೇಲೆ ದೋಷ ಹೊರಿಸಿಸುವುದಾದರೆ ಲಾಭವಿಲ್ಲ, ಒಮ್ಮೊಮ್ಮೆ ನಾವು ಆರಿಸಿದ ಉಡುಗೆಗಳೂ ಸೂಕ್ತ ಆಗಿರುವುದಿಲ್ಲ.

ಬಟ್ಟೆಗಳಿಗೆ ಕೆಸರಿನ ಕಲೆ ಮೆತ್ತಿಕೊಳ್ಳುವುದು ಈ ಮಳೆಗಾಲದ ದೊಡ್ಡ ಸಮಸ್ಯೆ. ಇದರಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ನೆನಪಿಡಿ :

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ