ನೀನೂ ಜೋನ್ಸ್ ಕೊಚ್ಚಿನ್‌ನ ಏರ್‌ಪೋರ್ಟ್‌ ತಲುಪುತ್ತಿದ್ದಂತೆ ಅಲ್ಲಿ ಸೇರಿದ್ದ ನೂರಾರು ಜನ ಆಕೆಗೆ 23ನೇ ಜನ್ಮದಿನದ ಶುಭಾಶಯ ಕೋರಿದರು. ನೀನೂ ಧಾರಾಳವಾಗಿ ಮುಗುಳ್ನಗುತ್ತಾ, ಆನಂದಾಶ್ರು ತುಂಬಿಕೊಳ್ಳುತ್ತಾ ಎಲ್ಲರಿಗೂ  ಧನ್ಯವಾದ ಅರ್ಪಿಸಿದಳು. ಕೊನೆಗೂ ಪಾರಾದೆನಲ್ಲ ಎಂಬ ನೆಮ್ಮದಿಯ ನಿಟ್ಟುಸಿರಿಟ್ಟು ತನ್ನ ಕುಟುಂಬದರೊಂದಿಗೆ ಮನೆಯ ದಾರಿ ಹಿಡಿದಳು. ಅಸಲಿಗೆ, ನೀನೂ ವೃತ್ತಿಯಿಂದ ನರ್ಸ್‌, ಈಕೆ ಇರಾಕ್‌ನ ಯುದ್ಧದ ವಾತಾವರಣದಿಂದ ಜರ್ಝರಿತಳಾಗಿದ್ದು, ಕಳೆದ 1 ತಿಂಗಳಿನಿಂದ ಬಂದೀಖಾನೆಯಂಥ ಪರಿಸರದಿಂದ ಪಾರಾಗಿ ಬಂದ 4-6 ದಾದಿಯರಲ್ಲಿ ಒಬ್ಬಳೆನಿಸಿದ್ದಾಳೆ.

ವಿಷಯ ಅತಿ ಗಂಭೀರವಾಗಿದ್ದು, ಇರಾಕ್‌ನ ಮುಸ್ಲಿಂ ಧರ್ಮದ 2 ಸಮುದಾಯಗಳಾದ ಸುನ್ನಿ ಶಿಯಾರ ನಡುವೆ ಸಿಡಿದೆದ್ದ ಆಕ್ರೋಶದಿಂದಾಗಿ, ಭಯೋತ್ಪಾದಕರು ಗುಡ್‌ ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಮತ್ತು ಅಲ್ಶಾಮ್ ನ ಸಾವಿರಾರು ಭಾರತೀಯರನ್ನು ಬಂದಿಗಳನ್ನಾಗಿಸಿದರು. ಈ ಬಂದಿಗಳಲ್ಲಿ ಭಾರತದ ಕೇರಳ ರಾಜ್ಯದ ಹಲವಾರು ಮಂದಿ ನರ್ಸುಗಳಿದ್ದರು. ಈ ಎಲ್ಲಾ ದಾದಿಯರೂ ಇರಾಕ್‌ನ ತಿಕರಿತ್‌ ನಗರದ ಒಂದು ಪ್ರಮುಖ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕೆಲಸ ಮಾಡುತ್ತಿದ್ದರು.

ಭಯೋತ್ಪಾದಕರು ಆಸ್ಪತ್ರೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ, ಈ ನರ್ಸುಗಳು ವಾಪಸ್ಸು ತಮ್ಮ ತಾಯ್ನಾಡಿಗೆ ಹೋಗಬಹುದೆಂಬ ಆಸೆಯನ್ನೇ ತೊರೆದಿದ್ದರು. ಹೀಗಿರುವಾಗ ಇರಾಕ್‌ನಿಂದ ಸುರಕ್ಷಿತರಾಗಿ ವಾಪಸ್ಸು ಮರಳಿದಾಗ ನಿಜಕ್ಕೂ ಅವರು ಸಂತೋಷಪಟ್ಟರು. ಆದರೆ ಈ ಸಂತಸದ ಜೊತೆ ಅವರ ಜೀವನದ ಕಟು ವಾಸ್ತವಿಕತೆ ಸಹ ಎದುರಿಸಬೇಕಾಯಿತು.

Ancy_3

ಅಸಲಿಗೆ, ತಿಕರಿತ್‌ ನಗರದಿಂದ ವಾಪಸ್ಸಾದ ಅನೇಕ ನರ್ಸುಗಳ ತಾಯಿ ತಂದೆ, ಭಾರಿ ಸಾಲ ಪಡೆದು ಇವರಿಗೆ ನರ್ಸಿಂಗ್‌ ಶಿಕ್ಷಣ ಕೊಡಿಸಿದ್ದರು. ನಂತರ ವಿದೇಶಕ್ಕೆ ಕಳುಹಿಸಿಲು, ದಲ್ಲಾಳಿಗಳಿಗೂ ದೊಡ್ಡ ಮೊತ್ತದ ಸಾಲದಿಂದಲೇ ಹಣ ತೆತ್ತಿದ್ದರು. ಅದನ್ನು ಚುಕ್ತಾ ಮಾಡುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿದ್ದಾರೆ.

ಭಾರತದಲ್ಲಿ ಸಾಮಾನ್ಯವಾಗಿ 6-10 ಸಾವಿರ ರೂ. ಸಂಬಳ ಪಡೆಯುವ ಈ ದಾದಿಯರು ಇರಾಕ್‌ನಂಥ ದೇಶದಲ್ಲಿ 40-50 ಸಾವಿರ ಸಂಬಳ ಪಡೆಯುತ್ತಾರೆ. ಇದಂತೂ ಅವರ ಕುಟುಂಬದ ಕನಸುಗಳನ್ನು ನನಸಾಗಿಸುತ್ತದೆ. ಆದರೆ ತಿಕರಿತ್‌ ನಗರದಲ್ಲಿ ಶಿಯಾ ಸುನ್ನಿಗಳ ಸಮರದಿಂದಾಗಿ, ಎಷ್ಟೋ ನರ್ಸುಗಳಿಗೆ ಸಂಬಳವೇ ಸಿಕ್ಕಿಲ್ಲ. ಕೆಲವರಿಗಂತೂ ಕಳೆದ 4-5 ತಿಂಗಳಿನಿಂದ ಸತತ ಕೆಲಸವೇ ಆಗಿದೆಯೇ ಹೊರತು ಸಂಬಳದ ಮುಖ ಕಂಡೇ ಇಲ್ಲ. ಇಷ್ಟೆಲ್ಲ ಆದ್ದರಿಂದ ಈಗ ಈ ನರ್ಸುಗಳ ಪೋಷಕರು ಅವರನ್ನು ವಾಪಸ್ಸು ಅಲ್ಲಿಗೆ ಕೆಲಸಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.

ನೀನೂರ ತಾಯಿ ಎಲಿಕ್‌ ಈ ಕುರಿತಾಗಿ ಹೇಳುತ್ತಾರೆ, ಕೆಲವು ಲಕ್ಷ ರೂ.ಗಳ ಸಂಪಾದನೆಗಾಗಿ ನಾವು ನಮ್ಮ ಮಗಳನ್ನು ಮುಂದೆ ಮೃತ್ಯುಕೂಪಕ್ಕೆ ತಳ್ಳಲು ಬಯಸುವುದಿಲ್ಲ. ನಮಗೆ ನಮ್ಮ ಮಗಳು ಕ್ಷೇಮವಾಗಿ ಸಿಕ್ಕಿದ್ದಾಳೆ, ಅಷ್ಟೇ ಸಾಕು. ನಮಗೆ ಇದಕ್ಕಿಂತ ಇನ್ನೇನು ಬೇಕು?

mareena_M._jose

ನೀನೂ ತರಹವೇ ಅಲಪ್ಪುಳಾದ 24 ವರ್ಷದವಳಾದ ವಿ. ಜಯಲಕ್ಷ್ಮಿ ಸಹ ಭಾರತಕ್ಕೆ ಮರಳಿದ ನರ್ಸುಗಳ ಪೈಕಿ ಒಬ್ಬಳು. ಆಕೆಯ ಪ್ರಕಾರ, ತಿಕರಿತ್‌ ನಗರದ ನರ್ಸಿಂಗ್‌ ಕಾಲೇಜಿನಲ್ಲಿ ಟೀಚಿಂಗ್‌ ಕೆಲಸ ಮಾಡುತ್ತಾ 10 ವರ್ಷಗಳೇ ಆಗಿವೆ. ಅಲ್ಲೀಗ ಆಕೆಗೆ 1.50 ಲಕ್ಷ ರೂ. ಸಂಬಳ ದೊರಕುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ