ಇತಿಹಾಸ ಕಳೆದು ಹೋಗದಿರಲೆಂದು : ನಾಟಕ ಅಥವಾ ಅಭಿನಯದಲ್ಲಿ ಯಾವುದೇ ಆಸಕ್ತಿ ಇಲ್ಲದವರಿಗೆ, ಬೀದಿ, ಗಲ್ಲಿಗಳ ಬಳಿ ಪೌರಾಣಿಕ ಕಥಾಹಂದರದ ಲೀಲೆಗಳನ್ನು ಪ್ರದರ್ಶಿಸುವುದರಲ್ಲಿ ಬಲು ಮಜಾ ಎನಿಸುತ್ತದೆ. ಯಾವುದೋ ಒಂದು ಟೆಂಟ್‌ನಲ್ಲಿ ತಮ್ಮನ್ನು ತಾವು ಮೇಕಪ್‌ನಿಂದ ಸಿದ್ಧಪಡಿಸಿಕೊಂಡ ಯುವಕ, ಯುವತಿ, ಮಕ್ಕಳ ಪಾತ್ರಧಾರಿಗಳು ಖುಷಿಯಾಗಿ ಕುಣಿತಕ್ಕೆ ಇಳಿಯುತ್ತಾರೆ. ನಮ್ಮ ದೇಶದ ಪ್ರತಿ ಕಾಲೋನಿ, ವಠಾರ, ಸೊಸೈಟಿಗಳಲ್ಲಿ ಇಂಥ ಸಾಮಾನ್ಯವೆನಿಸಿವೆ.

samachar-2

ದೊಡ್ಡದಾಗುತ್ತಿರುವ ಸಿನಿ ಬಜಾರ್‌ : ಜಪಾನಿನ ಜನಪ್ರಿಯ ನಟಿ ಅಯಾಕಾ ಕೋಮಾತ್ಸು ಇದೀಗ ಹಾಲಿವುಡ್‌ನ್ನೇ ನಡುಗಿಸುತ್ತಿದ್ದಾಳೆ! ಏಕೆಂದರೆ ಜಪಾನಿ, ಚೀನೀ ಚಿತ್ರಗಳ ಮಾರುಕಟ್ಟೆ ಈಗ ಅಮೆರಿಕಾದ ಸಿನಿ ಬಜಾರ್‌ಗಿಂತಲೂ ಎಷ್ಟೋ ಪಾಲು ದೊಡ್ಡದಾಗುತ್ತಾ ಹೊರಟಿದೆ.

samachar-3

ಪರಿಶ್ರಮದ ಒಳ್ಳೆಯ ಪರಿಣಾಮ :  ಈ ಪುಟ್ಟ ಕುಮಾಮೋನ್‌ ಯಾ ದೇವದೇವಿ ಅವತಾರ ಅಲ್ಲ, ಬದಲಿಗೆ ಜಪಾನಿನ ಕುಮಾಮೋಟೋ ಜಿಲ್ಲೆಯ ಒಂದು ಪ್ರತೀಕ ಚಿಹ್ನೆಯಾಗಿದೆ. ಅದನ್ನು ಅಲ್ಲಿನ ಒಬ್ಬ ಅಕ್ಕಸಾಲಿಗ 10 ಕಿಲೋ ತೂಗುವ ಬಂಗಾರದ ಬೊಂಬೆಯನ್ನಾಗಿ ಮಾಡಿದ್ದಾನೆ. ಜಪಾನಿಗೆ ಬರುವ ಪ್ರವಾಸಿಗರು ಅಗತ್ಯ ಈ ಜಿಲ್ಲೆ ಸಂದರ್ಶಿಸಿ, ಇಲ್ಲಿನ ಆತಿಥ್ಯದ ಸವಿಯುಂಡು ಇಂಥ ಅದೃಷ್ಟದ ಗೊಂಬೆಗಳನ್ನು ಕೊಳ್ಳುತ್ತಾರಂತೆ. ಪರಿಶ್ರಮ ಒಳ್ಳೆಯ ಪರಿಣಾಮ ಬೀರಬಲ್ಲದು, ಎಂದು ಆತ ಸಾಬೀತು ಪಡಿಸಿದ್ದಾನಷ್ಟೆ!

394910-01-02

ಈಗ ಕೇವಲ ನೆನಪು ಮಾತ್ರ : 1975-1979 ಅಂದರೆ ಕೇವಲ 45 ವರ್ಷಗಳ ಅವಧಿಯಲ್ಲಿ ಕಾಂಬೋಡಿಯಾದ ಕಂದಾಚಾರಿ ಖಾಮೇರ್‌ ರೂಜ್‌ ಸರ್ಕಾರ ಅಲ್ಲಿನ ಲಕ್ಷಾಂತರ ಮಂದಿಗೆ ನಿಲ್ಲಲು ನೆಲೆ ಇಲ್ಲದಂತೆ ಮಾಡಿತು, ಲಕ್ಷಾಂತರ ಜನರ ಪ್ರಾಣ ತೆಗೆಯಿತು. ಅಂಥ ಅಳಿದವರ ನೆನಪಲ್ಲಿ ಈಗ ಹಲವಾರು ಕಡೆ ಸ್ಮೃತಿ ಚಿಹ್ನೆಗಳು ಉಳಿದಿವೆಯಷ್ಟೆ. ಇಂಥ ಕಡೆ ಅಲ್ಲಿನ ಜನ ತಮ್ಮ ಪ್ರಿಯಬಂಧುಗಳಿಗಾಗಿ ಶ್ರದ್ಧಾಂಜಲಿ ಅರ್ಪಿಸಲು ಬರುತ್ತಾರೆ. ತನ್ನ ಅಂಗ್‌ ಕೋರ್‌ ಶೈಲಿಯ ಮಂದಿರಗಳಿಂದ ಪ್ರಸಿದ್ಧವಾದ ಈ ದೇಶ ಈಗ ಎಷ್ಟೋ ಪರಿಶುಭ್ರಗೊಂಡಿದೆ, ಸುಂದರವಾಗಿದೆ. ನಮ್ಮ ದೇಶದಂತೆ ಕೊಳಕು ಪ್ರದೇಶವಾಗಿಲ್ಲ.

949925-01-02

ಬಾಯಿ ರುಚಿಗಾಗಿ ನನ್ನ ಕೊಲ್ಲದಿರಿ : ಪ್ಯಾಕ್ಡ್ ಮೀನು ಕಿಲೋಗೆ ರೂ.850, ಪ್ಯಾಕ್ಡ್ ಮೇಕೆ ಮಾಂಸ ಕಿಲೋಗೆ ರೂ.900, ಪ್ಯಾಕ್ಡ್ ಮಾನವ ಮಾಂಸ ಕಿಲೋಗೆ ರೂ.200! ಇದೇನಿದು....? ಇಂಥ ಒಂದು ಪದಾರ್ಥ ಇತ್ತೀಚೆಗೆ ಫ್ರಾನ್ಸ್ ನ ಸೂಪರ್‌ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಬಂತು. ಅಲ್ಲಿ ಪ್ರಾಣಿಗಳ ಪರವಾದ ಪಶು ಹಿಂಸಾ ವಿರೋಧಿ ಆಂದೋಳನಕಾರರು, ತಮ್ಮನ್ನು ತಾವು ಹೀಗೆ ಪ್ಯಾಕ್ ಮಾಡಿಸಿಕೊಂಡು, ಮೀಟ್‌ ಕೊಳ್ಳುವವರಿಗೆ ವ್ಯಂಗ್ಯದ ವಾಗ್ಬಾಣ ಎಸೆದಿದ್ದಾರೆ.

ಇದೆಂಥ ಅದ್ಧೂರಿತನ? : ಪ್ರಾಣಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ನಡೆಸಲಾಗುತ್ತಿರುವ ಕ್ರೂರ ವ್ಯವಹಾರ ಇನ್ನೂ ನಿಂತಿಲ್ಲ. ಭಾರೀ ಶ್ರೀಮಂತರು ತೀರ ಅಪರೂಪ ಎನಿಸುವ ಪ್ರಾಣಿಗಳ ಮೂಳೆ, ಎಲುಬಿನ ಗೂಡು, ತಲೆಬುರುಡೆ, ಹಲ್ಲು ಮುಂತಾದುವನ್ನೂ ತಮ್ಮ ಗೃಹಾಲಂಕಾರಕ್ಕಾಗಿ ಬಳಸಿಕೊಳ್ಳಲು ಹಿಂಜರಿಯುತ್ತಿಲ್ಲ.

437405-01-02

ಆಸ್ಟ್ರೇಲಿಯಾದ ಅಬಕಾರಿ ವಿಭಾಗದವರು ಒರುಂಗ್ಟಾನ್‌ ಎಂಬ ಗೋರಿಲ್ಲಾಗಳ ಹಲವು ತಲೆಬುರುಡೆಗಳನ್ನು ಹಿಡಿದುಹಾಕಿದ್ದಾರೆ. ಪ್ರಾಣಿಗಳನ್ನು ಇನ್ನಾದರೂ ಉಳಿಸಿಕೊಳ್ಳಬೇಕೆಂದರೆ, ಶ್ರೀಮಂತರು ತಮ್ಮ ಇಂಥ ಖಯಾಲಿ ಬಿಡಲೇಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ