ವೇದಾಂತ ಕಂಪನಿಯ ಸಂಸ್ಥಾಪಕ ಅನಿಲ್ ಅಗರ್ವಾಲ್ ಅವರ ಮಗ ಅಗ್ನಿವೇಶ್ ಅಮೆರಿಕದ ನ್ಯೂಯಾರ್ಕ್​ನಲ್ಲಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ವೇದಾಂತದ ಅಂಗಸಂಸ್ಥೆಯಾದ ತಲ್ವಾಂಡಿ ಸಾಬೊ ಪವರ್​ನ ಛೇರ್ಮನ್ ಆಗಿದ್ದ ಅಗ್ನಿವೇಶ್ ಅಗರ್ವಾಲ್​ (49) ನಿಧನಕ್ಕೆ ತಂದೆ ಅನಿಲ್ ಅಗರ್ವಾಲ್  ಕಂಬನಿ ಮಿಡಿದಿದ್ದಾರೆ.

ತಂದೆ ಅನಿಲ್ ಅಗರ್ವಾಲ್, ತಾಯಿ ಕಿರಣ್ ಅಗರ್ವಾಲ್ ಮತ್ತು ಸಹೋದರಿ ಪ್ರಿಯಾ ಅಗರ್ವಾಲ್ ಹೆಬ್ಬಾರ್ ಅವರನ್ನು ಅಗ್ನಿವೇಶ್​ ಅಗಲಿದ್ದಾರೆ.

ವೇದಾಂತ ಗ್ರೂಪ್​ನ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಗ್ನಿವೇಶ್ ಅಗರ್ವಾಲ್ , ಸ್ಕೈಯಿಂಗ್ ಆಡುವಾಗ ಅಪಘಾತಗೊಂಡು ಗಾಯಗೊಂಡಿದ್ದರು. ನ್ಯೂಯಾರ್ಕ್​ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿದ್ದರು. ಆದರೆ, ಇದೀಗ ದಿಢೀರ್ ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನರಾಗಿದ್ದಾರೆ. ತಮ್ಮ ಮಗನ ಮರಣವು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ತಂದೆ ಅನಿಲ್ ಅಗರ್ವಾಲ್ ಹೇಳಿದ್ದಾರೆ.

ಮಗನಿಗೆ ಕೊಟ್ಟ ಮಾತು“ನನ್ನ ಪ್ರೀತಿಯ ಮಗ ಅಗ್ನಿವೇಶ್ ಬಹಳ ಬೇಗ ನಮ್ಮನ್ನು ಅಗಲಿದ್ದಾನೆ. ಅವನಿಗೆ ವಯಸ್ಸು ಕೇವಲ 49 ವರ್ಷ. ಉತ್ತಮ ಆರೋಗ್ಯ, ಪೂರ್ಣ ಕನಸುಗಳನ್ನು ಹೊಂದಿದ್ದ ವ್ಯಕ್ತಿ. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ. ಕಷ್ಟಗಳು ಕಳೆದವು ಎಂದು ಭಾವಿಸಿದ್ದೆವು. ಆದರೆ, ವಿಧಿಯಾಟ ಬೇರೆಯೇ ಇತ್ತು” ಎಂದು ಅನಿಲ್ ಅಗರ್ವಾಲ್ ನೋವು ತೋಡಿಕೊಂಡಿದ್ದಾರೆ.“ನನಗೆ ಆತ ಕೇವಲ ಮಗ ಮಾತ್ರವಲ್ಲ, ಸ್ನೇಹಿತ, ಹೆಮ್ಮೆ, ಜಗತ್ತು ಎಲ್ಲವೂ ಆಗಿದ್ದ. ಸ್ವಾವಂಬನೆಯ ಭಾರತ ನಿರ್ಮಾಣವಾಗಬೇಕೆಂಬುದು ಅಗ್ನಿಯ ಕನಸಾಗಿತ್ತು. ಒಂದು ದೇಶವಾಗಿ ನಮಗೇನೂ ಕೊರತೆ ಇಲ್ಲ, ಯಾಕೆ ನಾವು ಹಿಂದುಳಿಯಬೇಕು ಎಂದು ಆಗಾಗ್ಗೆ ಹೇಳುತ್ತಿದ್ದ. ನಾವು ಗಳಿಸುವ ಹಣದಲ್ಲಿ ಶೇ. 75ಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ಮರಳಿಸುವುದಾಗಿ ಅಗ್ನಿಗೆ ಆಶ್ವಾಸನೆ ಕೊಟ್ಟಿದ್ದೆ. ಇವತ್ತು ಆ ಭರವಸೆಯನ್ನು ಪುನರುಚ್ಚರಿಸುತ್ತೇನೆ. ಇನ್ನಷ್ಟು ಸರಳ ಜೀವನ ನಡೆಸುವ ನಿರ್ಧಾರ ಮಾಡುತ್ತೇನೆ” ಎಂದು ಅನಿಲ್ ಅಗರ್ವಾಲ್  ಟ್ವಿಟ್​ನಲ್ಲಿ ತಿಳಿಸಿದ್ದಾರೆ.

ಮಗನ ಸಾವಿನ ನೋವಿನ ನಡುವೆಯೂ ತಮ್ಮ ಸಂಪತ್ತಿನ ಶೇ.75ರಷ್ಟನ್ನು ಸಮಾಜ ಸೇವೆಗೆ ಮುಡಿಪಾಗಿಸುವ ವಾಗ್ದಾನವನ್ನು ಅನಿಲ್ ಅಗರ್ವಾಲ್ ಮಾಡಿದ್ದಾರೆ. ಪೋರ್ಬ್ಸ್ ಪ್ರಕಾರ ಅನಿಲ್ ಅಗರ್ವಾಲ್ 3 ದಶಲಕ್ಷ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪ್ರಧಾನಿ ಸಂತಾಪ: 1976ರಲ್ಲಿ ಜನಿಸಿದ ಅಗ್ನಿವೇಶ್ ಅಗರ್ವಾಲ್ ಅವರು ವೇದಾಂತದ ಅಂಗಸಂಸ್ಥೆಯಾದ ತಲ್ವಾಂಡಿ ಸಾಬೊ ಪವರ್​ನ ಛೇರ್ಮನ್ ಆಗಿದ್ದರು. ಅಗ್ನಿವೇಶ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಅನಿಲ್ ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳು. ಅಗ್ನಿವೇಶ್ ಹಾಗು ಪ್ರಿಯಾ. ಆಕರ್ಷ್ ಹೆಬ್ಬಾರ್ ಎಂಬುವರನ್ನು ವಿವಾಹವಾಗಿರುವ ಪ್ರಿಯಾ ಅಗರ್ವಾಲ್ ಅವರು ವೇದಾಂತ ಗ್ರೂಪ್​ನ ಬ್ಯುಸಿನೆಸ್​ಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಲ್ ಅಗರ್ವಾಲ್ ಅವರ ಇಬ್ಬರು ತಮ್ಮಂದಿರು ಹಾಗೂ ಅವರ ಕುಟುಂಬ ಸದಸ್ಯರು ಗ್ರೂಪ್​ನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ವೇದಾಂತ ಸಂಸ್ಥೆಯು ಜಿಂಕ್, ಕಾಪರ್ ಇತ್ಯಾದಿ ಮೈನಿಂಗ್ ನಡೆಸುವ ಕಂಪನಿಗಳನ್ನು ಹೊಂದಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೂ ಅದು ಕೈ ಹಾಕಿದೆ. ತಮ್ಮ ಹೆಚ್ಚಿನ ಆದಾಯವನ್ನು ದಾನ ಮಾಡಲು ನಿರ್ಧರಿಸಿದ ಉದ್ಯಮಗಳಲ್ಲಿ ಅನಿಲ್ ಅಗರ್ವಾಲ್ ಕೂಡ ಒಬ್ಬರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ